Sridevi Birthday: ಬಾಲಿವುಡ್ ಐಕಾನ್ ಶ್ರೀದೇವಿ 60 ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ

ಭಾರತೀಯ ಚಿತ್ರರಂಗದ ಮೊದಲ ಲೇಡಿ ಸೂಪರ್ ಸ್ಟಾರ್ ಎಂಬ ಪಟ್ಟ ಪಡೆದ ನಟಿ ಶ್ರೀದೇವಿ. ದಕ್ಷಿಣ ಭಾರತದ ನಟಿಯೊಬ್ಬರು ಬಾಲಿವುಡ್‌ನಲ್ಲಿ ನೆಲೆಕಂಡುಕೊಂಡು ಸ್ಟಾರ್ ಪಟ್ಟಕ್ಕೇರಿದ್ದರು. ಭಾನುವಾರ (ಆಗಸ್ಟ್ 13) ರಂದು ಅವರ ಹುಟ್ಟುಹಬ್ಬ. ಅವರ ಅಕಾಲಿಕ ಮರಣ ನಮ್ಮಿಂದ ಅವರನ್ನು ದೂರ ಮಾಡಿದೆ. ಇಲ್ಲದಿದ್ದರೇ ಈ ಸುಂದರಿ ನಮ್ಮೊಡನೆ ಇಂದು ತಮ್ಮ 60 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು.

ಬಾಲಿವುಡ್‌ನ ದಿವಂಗತ ನಟಿ ಶ್ರೀದೇವಿ ಅವರ 60ನೇ ಜನ್ಮದಿನಕ್ಕೆ ಗೂಗಲ್ ವಿಶೇಷ ಡೂಡಲ್ ಗೌರವ ಸಲ್ಲಿಸಿದೆ. 1963 ರಲ್ಲಿ ತಮಿಳುನಾಡಿನಲ್ಲಿ ಜನಿಸಿದ ಶ್ರೀದೇವಿ ತಮ್ಮ ವೃತ್ತಿಜೀವನದ ನಾಲ್ಕು ದಶಕಗಳ ಅವಧಿಯಲ್ಲಿ ಸುಮಾರು ಮುನ್ನೂರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಭಾರಿ ಕೊಡುಗೆ ಸಲ್ಲಿಸಿದ್ದಾರೆ. ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರನ್ನು ವರಿಸಿದ್ದ ಈ ಚೆಲುವೆಗೆ ಜಾನ್ವಿ ಮತ್ತು ಖುಷಿ ಕಪೂರ್ ಎಂಬ ಮುದ್ದು ಹೆಣ್ಣುಮಕ್ಕಳಿದ್ದಾರೆ.

Google Doodle Honors Sridevis 60th Birthday: A Tribute to the Legendary Actress

ಗೂಗಲ್ ಡೂಡಲ್ ಗೌರವ

ಮುಂಬೈ ಮೂಲದ ಕಲಾವಿದೆ ಭೂಮಿಕಾ ಮುಖರ್ಜಿ ರಚಿಸಿರುವ ಶ್ರಿದೇವಿ ಅವರ ಚಿತ್ರ ಅವರ ನೃತ್ಯಗಳನ್ನು ನೆನಪಿಸುತ್ತದೆ. ಜೊತೆಗೆ ಅತಿಲೋಕ ಸುಂದರಿಯ ಬಗ್ಗೆ ಡೂಡಲ್ ನೀಡುವ ವಿವರಗಳು ಹೀಗಿದೆ. "ಶ್ರೀದೇವಿ 1963 ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು. ಅವರು ಬಾಲ್ಯದಿಂದಲೂ ಸಿನಿಮಾ ಮೇಲೆ ಹೆಚ್ಚು ಒಲವಿತ್ತು. ಶ್ರೀದೇವಿಯವರು ನಾಲ್ಕು ವರ್ಷಗಳ ವಯಸ್ಸಿನಲ್ಲಿ ನಟನಾ ಕ್ಷೇತ್ರಕ್ಕೆ ಕಾಲಿರಿಸಿದರು, ಅವರ ಮೊದಲ ಚಿತ್ರ 1967 ರಲ್ಲಿ ಬಿಡುಗಡೆಯಾದ ತಮಿಳು ಚಲನಚಿತ್ರ ಕಂದನ್ ಕರುಣೈ. ಅನೇಕ ದಕ್ಷಿಣ ಭಾರತದ ಭಾಷೆಗಳನ್ನು ಮಾತನಾಡಲು ಕಲಿತರು, ಇದು ಭಾರತದ ಇತರ ಭಾಷೆಯ ಚಲನಚಿತ್ರಗಳಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟಿತು".

"1976ರಲ್ಲಿ ಕೆ.ಬಾಲಚಂದರ್ ಅವರ ಮೂಂಡ್ರು ಮುಡಿಚು ಚಿತ್ರದಲ್ಲಿ ನಾಯಕಿಯಾಗಿ ಶ್ರೀದೇವಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು. ಚಿತ್ರದ ಯಶಸ್ಸಿನ ನಂತರ, ಅವರು ಮತ್ತು ಅವರ ಸಹ-ನಟರು ಗುರು ಮತ್ತು ಶಂಕರ್‌ಲಾಲ್‌ನಂತಹ ಹಿಟ್ ಚಿತ್ರಗಳ ಸರಣಿಯೊಂದಿಗೆ ಇನ್ನಷ್ಟು ಪ್ರಸಿದ್ಧಿ ಪಡೆದರು. ಆ ಸಮಯದಲ್ಲಿ ತಮಿಳು ಚಿತ್ರರಂಗದ ಸ್ಟಾರ್ ನಟಿಯಾಗಿದ್ದ ಅವರ ಮೇಲೆ ಬಾಲಿವುಡ್ ನಿರ್ದೇಶಕರು ಮತ್ತು ನಿರ್ಮಾಪಕರ ಕಣ್ಣು ಬಿತ್ತು. 1983 ರಲ್ಲಿ 'ಹಿಮ್ಮತ್‌ವಾಲಾ'ದಲ್ಲಿ ನಟಿಸಿದ ಅವರು ಮತ್ತೆ ಹಿಂದಿಯಲ್ಲಿಯೂ ಸ್ಟಾರ್ ನಟಿಯ ಪಟ್ಟಕ್ಕೆ ಏರಿದರು" ಎಂದಿದೆ.

ಆಕೆಯ ಹಿಟ್ ಚಿತ್ರಗಳಲ್ಲಿ ಸದ್ಮಾ, ಚಾಲ್‌ಬಾಜ್, ಮಿಸ್ಟರ್ ಇಂಡಿಯಾ, ನಗೀನಾ, ಚಾಂದಿನಿ, ಲಮ್ಹೆ ಮತ್ತು ಇನ್ನೂ ಹಲವು ಸೇರಿಕೊಂಡಿವೆ. "ಸಾಂಪ್ರದಾಯಿಕವಾಗಿ ಪುರುಷ ಪ್ರಾಬಲ್ಯ ಹೊಂದಿದ್ದ ಚಿತ್ರೋದ್ಯಮದಲ್ಲಿ ನಾಯಕ ನಟನಿಲ್ಲದೆ ಬ್ಲಾಕ್‌ಬಸ್ಟರ್ ಚಲನಚಿತ್ರಗಳನ್ನು ನೀಡುವ ಏಕೈಕ ಬಾಲಿವುಡ್ ನಟಿ ಶ್ರೀದೇವಿಯಾಗಿದ್ದರು" ಎಂದು ಗೂಗಲ್ ಹೇಳಿದೆ.

Google Doodle Honors Sridevis 60th Birthday: A Tribute to the Legendary Actress

2000 ರ ದಶಕದ ಆರಂಭದಲ್ಲಿ, ನಟನೆಯಿಂದ ಬ್ರೇಕ್ ತೆಗೆದುಕೊಂಡ ಅವರು 2012 ರ ಇಂಗ್ಲಿಷ್ ವಿಂಗ್ಲಿಷ್ ಚಲನಚಿತ್ರದೊಂದಿಗೆ ಸಕತ್ ಕಂಬ್ಯಾಕ್ ಮಾಡಿದರು. ಅವರು 2004 ರಲ್ಲಿ ಮಾಲಿನಿ ಅಯ್ಯರ್ ಮತ್ತು ಕಬೂಮ್‌ನಂತಹ ದೂರದರ್ಶನ ಕಾರ್ಯಕ್ರಮಗಳಲ್ಲಿ ನಟಿಸಿದ್ದರು. 2013 ರಲ್ಲಿ, ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ನಂತರ 2017 ರಲ್ಲಿ ಬಂದ ಅವರ ಕ್ರೈಮ್ ಥ್ರಿಲ್ಲರ್ 'ಮಾಮ್' ನಟನೆಗಾಗಿ ಅತ್ಯುತ್ತಮ ನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು.

"ಭಾರತೀಯ ಚಿತ್ರರಂಗದಲ್ಲಿ ಪ್ರಮುಖ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ನಟಿಯರಿಗೆ ಹೊಸ ಮಾರ್ಗಗಳನ್ನು ರೂಪಿಸುವ ಮೂಲಕ ಶ್ರೀದೇವಿ ಚಿತ್ರರಂಗದಲ್ಲಿ ಶಾಶ್ವತವಾಗಿ ತಮ್ಮ ಛಾಪು ಮೂಡಿಸಿದ್ದಾರೆ. ಅವರು ತಮ್ಮ ಕಾಲದ ಶ್ರೇಷ್ಠ ಭಾರತೀಯ ಕಲಾವಿದರಲ್ಲಿ ಒಬ್ಬರು" ಎಂದು ಗೂಗಲ್ ಹೇಳಿದೆ.

2018 ರಲ್ಲಿ ಭಾರತೀಯ ಚಿತ್ರರಂಗವೇ ಆಘಾತಕ್ಕೆ ಈಡಾಗುವಂತಹ ಸುದ್ದಿ ಬಂದಿತ್ತು. ಅತಿಲೋಕ ಸುಂದರಿ, ಬಾಲಿವುಡ್ ಐಕಾನ್ ಆಗಿದ್ದ ನಟಿ ಹೋಟೆಲ್ ಬಾತ್‌ಟಬ್‌ನಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ದುಬೈ ಸರ್ಕಾರ ತಿಳಿಸಿತ್ತು. ಶ್ರೀದೇವಿ ಅವರ ಹಠಾತ್ ಸಾವು ಕೋಟ್ಯಾಂತರ ಅಭಿಮಾನಿಗಳು ಮತ್ತು ಚಿತ್ರರಂಗಕ್ಕೆ ಅರಗಿಸಿಕೊಳ್ಳಲಾಗದ ನೋವು ನೀಡಿತ್ತು. ಫೆಬ್ರವರಿ 28 ರಂದು ಶ್ರೀದೇವಿ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು.

More from Filmibeat

English summary
Google Doodle Honors Sridevi's 60th Birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X