For Quick Alerts
  ALLOW NOTIFICATIONS  
  For Daily Alerts

  ದಿಗ್ಗಜ ನಿರ್ದೇಶಕ ಶಾಂತರಾಮ್ ಸಾಧನೆಗೆ ಗೂಗಲ್ ಗೌರವ

  By Naveen
  |

  ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ವಿ.ಶಾಂತರಾಮ್ ಹುಟ್ಟುಹಬ್ಬಕ್ಕೆ ಗೂಗಲ್ ಶುಭಾಶಯ ಕೋರಿದೆ. ಗೂಗಲ್ ತನ್ನ ಸರ್ಚ್ ಇಂಜಿನ್ ನ ಮುಖಪುಟದಲ್ಲಿ ವಿಶೇಷ ಡೂಡಲ್ ಹಾಕುವ ಮೂಲಕ ನಿರ್ದೇಶಕ ಶಾಂತರಾಮ್ ಅವರಿಗೆ ಗೌರವ ಸಮರ್ಪಿಸಿದೆ.

  ಇಂಡಿಯನ್ ಸಿನಿಮಾದ ಶ್ರೇಷ್ಠ ನಿರ್ದೇಶಕರಲ್ಲಿ ನಿರ್ದೇಶಕ ಶಾಂತರಾಮ್ ಕೂಡ ಒಬ್ಬರು. ಭಾರತೀಯ ಸಿನಿಮಾಗಳಲ್ಲಿ ಬಣ್ಣ ಮತ್ತು ಧ್ವನಿಯಲ್ಲಿ ಪರಿಚಯಿಸುವಲ್ಲಿ ಇವರು ಪ್ರಮುಖ ಪಾತ್ರವಹಿಸಿದರು. ಇನ್ನು 1987ರಲ್ಲಿ ನಿಧನರಾಗಿದ್ದ ಶಾಂತರಾಮ್ ಅವರನ್ನು ಇಂದಿಗೂ ಸಿನಿಮಾಭಿಮಾನಿಗಳು ಮರೆತಿಲ್ಲ.

  1901ರ ನವೆಂಬರ್ 18ರಲ್ಲಿ ಜನಿಸಿದ ಶಾಂತರಾಮ್ ರಂಗಭೂಮಿಯ ಮೂಲಕ ತಮ್ಮ ಕೆರಿಯರ್ ಶುರು ಮಾಡಿದರು. ತಮ್ಮ 18ನೇ ವಯಸ್ಸಿನಲ್ಲಿ ಮಹಾರಾಷ್ಟ್ರ ಫಿಲ್ಮ್ ಕಂಪನಿ ಸೇರಿಕೊಂಡರು. ಬಳಿಕ ಮರಾಠಿಯಲ್ಲಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿದರು. ನಿರ್ದೇಶಕ, ನಿರ್ಮಾಪಕ ಮತ್ತು ನಟನೆ ಮೂರು ವಿಭಾಗದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿದರು.

  'ಅಯೋಧ್ಯ ಕಾ ರಾಜ', 'ಕುಂಕು', 'ಅಮರ್ ಭೂಪಲಿ' ಸೇರಿದಂತೆ ಅನೇಕ ಯಶಸ್ವಿ ಮತ್ತು ವಿಭಿನ್ನ ಚಿತ್ರಗಳನ್ನು ನೀಡಿ ದೊಡ್ಡ ಸಾಧನೆಯನ್ನು ಶಾಂತರಾಮ್ ಮಾಡಿದ್ದಾರೆ. 1985ರಲ್ಲಿ ದಾದಾ ಸಾಹೇಬ್ ಪಾಲ್ಕೆ, 1992ರಲ್ಲಿ ಪದ್ಮ ವಿಭೂಷಣ ಒಳಗೊಂಡಂತೆ ಅನೇಕ ಪ್ರಶಸ್ತಿಗಳು ಇವರ ಹೆಸರಿನಲ್ಲಿದೆ.

  English summary
  Google Doodle pays tribute to veteran Indian filmmaker V. Shantaram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X