ಬಿಕಿನಿಯಲ್ಲಿ ಪಡ್ಡೆ ಹೈಕಳ ಹೃದಯಕ್ಕೆ 'ಗೂಗ್ಲಿ' ಬಿಟ್ಟ ಕೃತಿ ಕರಬಂಧ
ಅಂದ, ಅಭಿನಯ ಎರಡೂ ಸ್ವಂತವಾಗಿದ್ದರೂ ಆರಕ್ಕೇರದ, ಮೂರಕ್ಕಿಳಿಯದ ನಟಿ ಕೃತಿ ಕರಬಂಧ. ಈ ದೆಹಲಿ ಬೆಡಗಿ ಕನ್ನಡ ಸಿನಿಮಾಗಳಲ್ಲೂ ಮಿಂಚಿದ್ದಾರೆ. ಕನ್ನಡದ ಸೂಪರ್ ಹಿಟ್ 'ಗೂಗ್ಲಿ' ಚಿತ್ರದಲ್ಲಿ ಕೃತಿ ನಾಯಕಿಯಾಗಿ ಕನ್ನಡ ಸಿನಿರಸಿಕರ ಮನಗೆದ್ದಿದ್ದರು. ಸದ್ಯ ಈ ಬಿಂದಾಸ್ ಬೆಡಗಿಯ ಬಿಕಿನಿ ಫೋಟೊಗಳೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್‌ಸ್ಟಾಗ್ರಾಂನಲ್ಲಿ "80 ಲಕ್ಷ ಜನ ಫಾಲೋವರ್ಸ್, ಖುಷಿಯಾಗುತ್ತಿದೆ" ಎಂದು ಬರೆದು ಫೋಟೊಗಳನ್ನು ಶೇರ್ ಮಾಡಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟಿಯ ಹಾಟ್ ಅವತಾರ ನೋಡಿ ಫಿದಾ ಆಗಿದ್ದಾರೆ. ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. 4 ದಿನ ಮುನ್ನ ಬಿಕಿನಿ ತೊಟ್ಟು ಬೀಚ್‌ನಲ್ಲಿ ಆಡುತ್ತಿರುವ ವಿಡಿಯೋವನ್ನು ಕೂಡ 'ಗೂಗ್ಲಿ' ಬೆಡಗಿ ತೇಲಿ ಬಿಟ್ಟಿದ್ದರು. ಇಂತದ್ದೇ ಹಾಟ್ ಹಾಟ್ ಫೋಟೊಶೂಟ್‌ಗಳ ಮೂಲಕ ನಟಿ ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರ್ತಾರೆ.

ಕಳೆದ ವರ್ಷ ನಟಿ ಸಾರಾ ಅಲಿ ಖಾನ್ ಸೇಮ್ ಇಂತದ್ದೇ ಬಿಕಿನಿ ತೊಟ್ಟು ಬೀಚ್‌ನಲ್ಲಿ ದರ್ಶನ ಕೊಟ್ಟಿದ್ದರು. ಇದನ್ನು ನೋಡಿ ಕೃತಿ, ಸಾರಾನ ಕಾಪಿ ಮಾಡಿದ್ದಾಳೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಮಲ್ಟಿ ಕಲರ್ ಬಿಕಿನಿಯಲ್ಲಿ ಬಳಕುವ ತಮ್ಮ ಮೈಮಾಟವನ್ನು ಪ್ರದರ್ಶಿಸಿ ಕೃತಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಫೋಟೊಗಳನ್ನ ನೋಡಿ ಪರ್ಫೆಕ್ಟ್ ಬಿಕಿನಿ ಬಾಡಿ ಎಂದು ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ದೆಹಲಿಯಲ್ಲಿ ಹುಟ್ಟಿದ್ರು ಕೃತಿ ಕರಬಂಧ ಓದಿ ಬೆಳೆದಿದ್ದು ಬೆಂಗಳೂರಿನಲ್ಲಿ. 2009ರಲ್ಲಿ ತೆಲುಗಿನ 'ಬೋಣಿ' ಸಿನಿಮಾ ಮೂಲಕ ಚಿತ್ರರಂಗದಲ್ಲಿ ಬೋಣಿ ಮಾಡಿದರು. ಮರುವರ್ಷವೇ ಚಿರಂಜೀವಿ ಸರ್ಜಾ ನಟನೆಯ ಕನ್ನಡದ 'ಚಿರು' ಚಿತ್ರದಲ್ಲಿ ಮಿಂಚಿದರು. 2013ರಲ್ಲಿ ಬಂದ 'ಗೂಗ್ಲಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಜೋಡಿಯಾಗಿ ರಂಗೇರಿಸಿದ್ದರು. ಶರತ್ ಹಾಗೂ ಡಾ. ಸ್ವಾತಿ ಲವ್ ಸ್ಟೋರಿ ಸಿನಿರಸಿಕರಿಗೆ ಇಷ್ಟವಾಗಿತ್ತು.

'ತಿರುಪತಿ ಎಕ್ಸ್‌ಪ್ರೆಸ್', 'ಸೂಪರ್ ರಂಗಾ', 'ಬೆಳ್ಳಿ' ಸೇರಿದಂತೆ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ಕೃತಿ ಬಣ್ಣ ಹಚ್ಚಿದರು. ಆದರೆ ದೊಡ್ಡ ಬ್ರೇಕ್ ಮಾತ್ರ ಸಿಗಲಿಲ್ಲ. 'ರಾಝ್: ದಿ ರೀಬುಟ್' ಸಿನಿಮಾದಲ್ಲಿ ನಟಿಸಿ ಬಾಲಿವುಡ್ ಪ್ರವೇಶಿಸಿದರು. ಕಳೆದೆರಡು ವರ್ಷಗಳಿಂದ ಕೃತಿ ಯಾವುದೇ ಸಿನಿಮಾದಲ್ಲಿ ನಟಿಸ್ತಿಲ್ಲ. 'ಚಿರು' ಸಿನಿಮಾ ಬೆಡಗಿ ಬಾಲಿವುಡ್ ನಟ ಪುಲ್ಕಿತ್ ಸಮರ್ಥ್ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇಬ್ಬರೂ ಪ್ರಣಯ ಪಕ್ಷಿಗಳಾಗಿ ಸುತ್ತಾಡುತ್ತಿದ್ದಾರೆ. ಶೀಘ್ರದಲ್ಲೇ ಮದುವೆ ಸುದ್ದಿ ಕೊಡಲಿದ್ದಾರೆ.


Click it and Unblock the Notifications











