twitter
    For Quick Alerts
    ALLOW NOTIFICATIONS  
    For Daily Alerts

    ಚಲನಚಿತ್ರ ಮಾಧ್ಯಮ ಘಟಕಗಳ ವಿಲೀನಕ್ಕೆ ಕೇಂದ್ರ ಸಂಪುಟದ ಅನುಮೋದನೆ

    |

    ನಾಲ್ಕು ಚಲನಚಿತ್ರ ಮಾಧ್ಯಮ ಘಟಕಗಳನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದೊಂದಿಗೆ ವಿಲೀನ ಮಾಡಲು ಅನುಮೋದನೆ ನೀಡಿದೆ.

    ಚಲನಚಿತ್ರ ವಿಭಾಗ, ಚಲನಚಿತ್ರೋತ್ವವಗಳ ನಿರ್ದೇಶನಾಲಯ, ನ್ಯಾಷನಲ್ ಫಿಲ್ಮ್ ಆರ್ಕೈವ್ಸ್ ಆಫ್ ಇಂಡಿಯಾ ಮತ್ತು ಮಕ್ಕಳ ಚಲನಚಿತ್ರ ಸೊಸೈಟಿ. ಇವುಗಳನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದೊಂದಿಗೆ (ಎನ್ ಎಫ್ ಡಿ ಸಿ) ವಿಲೀನಗೊಳಿಸಲಾಗುವುದು.

    ಒಂದೇ ನಿಗಮದಡಿಯಲ್ಲಿ ಚಲನಚಿತ್ರ ಮಾಧ್ಯಮ ಘಟಕಗಳ ವಿಲೀನವು ಅವುಗಳ ಚಟುವಟಿಕೆಗಳು ಮತ್ತು ಸಂಪನ್ಮೂಲಗಳ ಸಂಯೋಜನೆ ಮತ್ತು ಉತ್ತಮ ಸಮನ್ವಯ ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

    Government Run Four Film Media Units Merged Into NFDC

    ಈ ಮಾಧ್ಯಮ ಘಟಕಗಳ ವಿಲೀನವನ್ನು ಅನುಮೋದಿಸಿದ ಕೇಂದ್ರ ಸಚಿವ ಸಂಪುಟವು, ಆಸ್ತಿ ಮತ್ತು ನೌಕರರ ವರ್ಗಾವಣೆಯ ಬಗ್ಗೆ ಸಲಹೆ ನೀಡಲು ಮತ್ತು ವಿಲೀನದ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಲು ನಿರ್ವಹಣಾ ಸಲಹೆಗಾರ ಮತ್ತು ಕಾನೂನು ಸಲಹೆಗಾರರ ನೇಮಕವನ್ನೂ ಅನುಮೋದಿಸಿದೆ.

    Recommended Video

    ಒಟ್ಟಿಗೆ ಕಾಣಿಸಿಕೊಂಡ ಶಿವಣ್ಣ, ಸುದೀಪ್, ಸಿಂಪಲ್ ಸುನಿ | Filmibeat Kannada

    ಚಲನಚಿತ್ರ ಮಾಧ್ಯಮ ಘಟಕಗಳ ವಿಲೀನದ ಪರಿಣಾಮವಾಗಿ, ಎನ್‌ಎಫ್‌ಡಿಸಿಯು, ಚಲನಚಿತ್ರದ ಪ್ರಚಾರ, ತಯಾರಿಕೆ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ ಒಂದೇ ಸಂಸ್ಥೆಯಾಗಿರುತ್ತದೆ. ಎಲ್ಲವೂ ಒಂದೇ ನಿರ್ವಹಣೆಯಲ್ಲಿರುತ್ತವೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳ ಚಲನಚಿತ್ರಗಳು / ವಿಷಯ, ಮಕ್ಕಳ ವಿಷಯ, ಅನಿಮೇಷನ್, ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳು ಸೇರಿದಂತೆ ಎಲ್ಲಾ ಪ್ರಕಾರದ-ಚಲನಚಿತ್ರಗಳಲ್ಲಿ ಭಾರತೀಯ ಸಿನೆಮಾದ ಸಮತೋಲಿತ ಮತ್ತು ಕೇಂದ್ರೀಕೃತ ಅಭಿವೃದ್ಧಿಯನ್ನು ಖಚಿತಪಡಿಸುವುದು ಹೊಸ ಘಟಕದ ಉದ್ದೇಶವಾಗಿದೆ.

    English summary
    Cabinet approved to merge government run four film and media units into NFDC for better usage of resources.
    Thursday, December 24, 2020, 12:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X