6 ವರ್ಷಗಳಿಂದ ನನ್ನ ಗಂಡ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇದ್ದಾನೆ, ಕಣ್ಣೀರಾದ ಸ್ಟಾರ್‌ ನಟನ ಪತ್ನಿ !

ವರ್ಷವೊಂದಕ್ಕೆ ಒಂದು ಚಿತ್ರ ಮಾಡಲು ನಮ್ಮಲ್ಲಿನ ಅನೇಕ ಸ್ಟಾರ್‌ಗಳು ಕವಡೆ ಹಾಕುತ್ತಾರೆ. ಆದರೆ ಇದಕ್ಕೆ ತದ್ವಿರುದ್ದವೆನ್ನುವಂತೆ ಆ ಕಾಲದಲ್ಲಿ ದಿನವೊಂದಕ್ಕೆ ನಾಲ್ಕೈದು ಚಿತ್ರಗಳ ಚಿತ್ರೀಕರಣದಲ್ಲಿ ಏಕಕಾಲಕ್ಕೆ ಅನೇಕರು ಭಾಗಿಯಾಗುತ್ತಿದ್ದರು. ಇವರು ಅಭಿನಯಿಸಿದ ಹಲವು ಚಿತ್ರಗಳು ಕೇವಲ ಒಂದೇ ವರ್ಷದಲ್ಲಿ ತೆರೆಗೆ ಬರುತ್ತಿದ್ದವು. ಬಾಕ್ಸಾಫೀಸ್‌ನಲ್ಲಿ ಕೂಡ ಸದ್ದು ಮಾಡುತ್ತಿದ್ದವು. ಪ್ರೇಕ್ಷಕರ ಹೃದಯವನ್ನು ಕೂಡ ಗೆಲ್ಲುತ್ತಿದ್ದವು. ಒಂದೇ ವರ್ಷದಲ್ಲಿ

ಇವರ ಮುಖವನ್ನು ಮೂರು ನಾಲ್ಕು ಬಾರಿ ಬೆಳ್ಳಿತೆರೆಯಲ್ಲಿ ನೋಡಿದರೂ ಕೂಡ ಯಾರಿಗೂ ಬೋರ್ ಆಗುತ್ತಿರಲಿಲ್ಲ. ಆ ಪೈಕಿ ಅಂದಕಾಲತ್ತಿಲ್‌ನ ಬಾಲಿವುಡ್‌ನ ಹೀರೋ ನಂಬರ್ ಓನ್ ಗೋವಿಂದ ಕೂಡ ಒಬ್ಬರು. 90ರ ದಶಕದ ಆಸು ಪಾಸು ಭಾರತದ ಅತ್ಯಂತ ಬೇಡಿಕೆಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಗೋವಿಂದ ಏಕಕಾಲಕ್ಕೆ 75 ಚಿತ್ರಗಳನ್ನು ಒಪ್ಪಿಕೊಂಡು ದಾಖಲೆಯನ್ನು ಬರೆದಿದ್ದರು. ಬಾಲಿವುಡ್‌ನಲ್ಲಿ ಅನೇಕರ ಹುಬ್ಬೇರಿಸಿದ್ದರು.

Govinda at home doing nothing Anil Suniel shine on says Sunita Ahuja

ಆದರೆ ಇದೇ ಗೋವಿಂದ ಆ ನಂತರ ತಮ್ಮ 'ನಡಾವಳಿ' ಹಾಗೂ 'ದುರಂಹಕಾರ'ಗಳಿಂದ ತಮ್ಮ 'ಕಾಲ' ಮೇಲೆ ತಾವೇ 'ಚಪ್ಪಡಿ ಕಲ್ಲು' ಎಳೆದುಕೊಂಡರು. 'ಸೂಪರ್ ಸ್ಟಾರ್' ಪಟ್ಟವನ್ನ ಅಲಂಕರಿಸಿ ಆ ನಂತರ ಹೇಳ ಹೆಸರಿಲ್ಲದಂತೆ 'ಬಾಲಿವುಡ್' ನಿಂದ 'ಕಣ್ಮರೆ' ಕೂಡ ಆದರು.

ಇಂಥಾ ಗೋವಿಂದಗೆ ಸದ್ಯಕ್ಕೆ ಮಾಡಲು ಕೆಲಸ ಇಲ್ಲ. ಕರೆದು ಇವರಿಗೆ ಅವಕಾಶವನ್ನು ಕೊಡುವರು ಕೂಡ ಬಾಲಿವುಡ್‌ನಲ್ಲಿ ಯಾರು ಇಲ್ಲ. ಯಾಕೆಂದರೆ ಕೆಳಗೆ ಬಿದ್ದರೂ ಕೂಡ ಮೀಸೆ ಮಣ್ಣಾಗಲಿಲ್ಲ ಎಂಬ ವ್ಯಕ್ತಿತ್ವ ಇವರದ್ದು.

ಹೀಗಾಗಿಯೇ ಹಿಂದಿ ಚಿತ್ರರಂಗದಲ್ಲಿ ಅನೇಕರು ಇವರಿಂದ ಅಂತರವನ್ನು ಕಾಪಾಡಿಕೊಂಡಿದ್ದಾರೆ. ತಾವಾಗಿಯೇ ಹೋಗಿ ಅವಕಾಶ ಕೇಳಿದರೆ ತಮ್ಮ ಮರ್ಯಾದೆ ಕಡಿಮೆಯಾಗುತ್ತೆ ಎಂದುಕೊಂಡು ಗೋವಿಂದ ಸದ್ಯ ಮನೆಯಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ.

ಇನ್ನು ಯಾವುದೇ ವ್ಯಕ್ತಿಯಾದರು ಕೆಲಸ ಕಾರ್ಯ ಎಂದು ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಸುಮ್ಮನೆ ಕೂತಷ್ಟು ಮನಸಿಗೆ ಜ್ವರ ಬಂದಂತಾಗಿ ಮಾನಸಿಕ ಖಿನ್ನತೆ ಆವರಿಸಿಕೊಳ್ಳುತ್ತೆ. ಮನೆಯವರಿಗೆ ಕೂಡ ಕಿರಿಕಿರಿಯಾಗುತ್ತೆ. ಗೋವಿಂದ ವಿಚಾರದಲ್ಲಿ ಕೂಡ ಇದೇ ಆಗಿದೆ.

ಇದಕ್ಕೆ ಕೈಗನ್ನಡಿ ಎನ್ನುವಂತೆ ಸದಾ ಕಾಲ ಮನೆಯಲ್ಲಿಯೇ ಕುಳಿತುಕೊಳ್ಳುವ ಗೋವಿಂದ ವಿರುದ್ಧ ಅವರ ಪತ್ನಿ ಸುನೀತಾ ಅವರೇ ಕೆಂಡ ಕಾರಿದ್ದಾರೆ. ಜೂಮ್‌ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಗೋವಿಂದ ಪತ್ನಿ ಸುನಿತಾ ನನ್ನ ಗಂಡ ಕೆಲಸಕ್ಕೆ ಹೋಗದೇ ಆರು ವರ್ಷಗಳಾದವು ಎಂದು ಹೇಳಿದ್ದಾರೆ.

ನನ್ನ ಗಂಡನ ವಯಸ್ಸಿನವರಾದ ಅನಿಲ್ ಕಪೂರ್, ಸುನೀಲ್ ಶೆಟ್ಟಿ, ಜಾಕಿ ಶ್ರಾಫ್ ಸೇರಿದಂತೆ ಅನೇಕರು ಈಗಲೂ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ, ಕೆಲಸ ಮಾಡುತ್ತಿದ್ದಾರೆ, ಆದರೆ ನನ್ನ ಗಂಡ ಮಾತ್ರ ಮನೆಯಿಂದ ಆಚೆ ಹೋಗುತ್ತಿಲ್ಲ ಎಂದು ಹೇಳಿರುವ ಸುನೀತಾ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಹಲವಾರು ಬಾರಿ ನನ್ನ ಪತಿಯ ಜೊತೆ ಮಾತನಾಡಿದ್ದೇನೆ, ನಿನ್ನೆಷ್ಟು ಒಳ್ಳೆಯ ಕಲಾವಿದ ಮನೆಯಲ್ಲಿ ಯಾಕೆ ಕುಳಿತುಕೊಂಡಿದ್ದೀಯಾ ಎಂದು ನಾನು ಕೇಳಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ನನ್ನ ಗಂಡನ ಪರಿಸ್ಥಿತಿಗೆ ಅವರ ಸುತ್ತ ಮುತ್ತ ಇರುವ ಸ್ನೇಹಿತರೇ ಕಾರಣ ಎಂದಿರುವ ಸುನೀತಾ ಹಣದಾಸೆಗೆ ಅವರು ತೂಕ ಇಳಸಿಕೊಳ್ಳುವಂತೆ ನನ್ನ ಗಂಡನಿಗೆ ಯಾವತ್ತು ಹೇಳಲೇ ಇಲ್ಲ, ಕೆಲಸಕ್ಕೆ ಹೋಗುವಂತೆ ಹೇಳಲೇ ಇಲ್ಲ, ಸುಂದರವಾಗಿ ಕಾಣಲು ಡಯಟ್ ಮಾಡುವ ಸಲಹೆಯನ್ನು ಕೂಡ ನೀಡಲಿಲ್ಲ ಎಂದು ಹೇಳಿದ್ದಾರೆ. 90ರ ದಶಕದ ಕಥೆಯ ಚಿತ್ರಗಳನ್ನು ಈಗ ಯಾರು ನೋಡುವುದಿಲ್ಲ ಎಂದು ಬುದ್ದಿವಾದವನ್ನು ಕೂಡ ಯಾರು ನನ್ನ ಗಂಡನಿಗೆ ಹೇಳಲಿಲ್ಲ ಎಂದು ಹೇಳಿದ್ಧಾರೆ.

ಗೋವಿಂದಾ ಪತ್ನಿಯ ಈ ಮಾತು ಸದ್ಯ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿರುವುದು ಖಚಿತವೆನ್ನುವ ಅಭಿಪ್ರಾಯ ಕೂಡ ಮಾಯಾನಗರಿ ಮುಂಬೈನಲ್ಲಿ ಕೇಳಿ ಬರುತ್ತಿದೆ.

More from Filmibeat

English summary
Sunita Ahuja criticized Govinda for staying idle at home, saying he’s wasting his life, while praising Anil Kapoor and Suniel Shetty for staying active and working consistently.
Read more about: govinda film industry
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X