For Quick Alerts
  ALLOW NOTIFICATIONS  
  For Daily Alerts

  ನಟ ಗೋವಿಂದ ಮಗನ ಕಾರು ಅಪಘಾತ: ಅಪಾಯದಿಂದ ಪಾರು

  |

  ನಟ ಗೋವಿಂದ ಅವರ ಮಗ ಯಶವರ್ಧನ್ ಅಹುಜಾ ಪ್ರಯಾಣಿಸುತ್ತಿದ್ದ ಕಾರು ಬುಧವಾರ ರಾತ್ರಿ ಅಪಘಾತಕ್ಕೀಡಾಗಿದ್ದು, ಸಣ್ಣಪುಟ್ಟ ಗಾಯಗಳಿಂದ ಅವರು ಪಾರಾಗಿದ್ದಾರೆ. ಮುಂಬೈನ ಜುಹು ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ.

  Recommended Video

  ಸೋನುನಿಗಮ್ ವಿರುದ್ಧ ಕಿಡಿಕಾರಿದ ದಿವ್ಯ ಖೊಸ್ಲೇ. | T Series | Sonu Nigam | Divya Khosla Kumar

  ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಗೋವಿಂದ, ತಮ್ಮ ಮಗ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ. 'ನನ್ನ ಮಗ ಯಶವರ್ಧನ್ ಕಾರು ಚಲಾಯಿಸುತ್ತಿದ್ದಾಗ ಎದುರಿನಿಂದ ಮತ್ತೊಂದು ಕಾರು ಇದ್ದಕ್ಕಿದ್ದಂತೆ ಬಂದು ಡಿಕ್ಕಿ ಹೊಡೆದಿದೆ. ಆದರೆ ನನ್ನ ಮಗನಿಗೆ ಏನೂ ಆಗಿಲ್ಲ. ಕೈಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಿಂತೆ ಪಡುವಂತಹದ್ದು ಏನೂ ಇಲ್ಲ. ಕಾರಿಗೆ ಸ್ವಲ್ಪ ಹೊಡೆದ ಬಿದ್ದಿದೆ' ಎಂದು ಹೇಳಿದ್ದಾರೆ.

  ಜನಪ್ರಿಯ ಟಿಕ್ ಟಾಕ್ ಸ್ಟಾರ್ ಸಿಯಾ ಕಕ್ಕರ್ ಆತ್ಮಹತ್ಯೆಜನಪ್ರಿಯ ಟಿಕ್ ಟಾಕ್ ಸ್ಟಾರ್ ಸಿಯಾ ಕಕ್ಕರ್ ಆತ್ಮಹತ್ಯೆ

  ಈ ಬಗ್ಗೆ ಅವರು ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ. ಈ ಅಪಘಾತದಲ್ಲಿ ಯಾರೂ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಗೋವಿಂದ ಹೇಳಿದ್ದಾರೆ.

  'ನಾವು ಪೊಲೀಸರಿಗೆ ದೂರು ನೀಡಲು ಹೋಗಿಲ್ಲ. ಏಕೆಂದರೆ ಆ ಚಾಲಕ ನಮ್ಮ ಕ್ಷಮೆ ಕೋರಿದ್ದಾನೆ. ಅದು ಯಶ್ ರಾಜ್ ಅವರಿಗೆ ಸೇರಿದ ಕಾರು. ಅವರೊಂದಿಗೆ ನಮ್ಮದು ಹಳೆಯ ಸಂಬಂಧ. ಅವರ ಚಾಲಕ ಕಾರು ಚಲಾಯಿಸುತ್ತಿದ್ದು, ಅವರೂ ಸುರಕ್ಷಿತವಾಗಿದ್ದಾರೆ' ಎಂದಿದ್ದಾರೆ.

  ಸ್ವಜನಪಕ್ಷಪಾತದ ಆರೋಪ: ಟೀಕಾಕಾರರಿಗೆ ಆಲಿಯಾ ಭಟ್ ತಾಯಿ ತಿರುಗೇಟುಸ್ವಜನಪಕ್ಷಪಾತದ ಆರೋಪ: ಟೀಕಾಕಾರರಿಗೆ ಆಲಿಯಾ ಭಟ್ ತಾಯಿ ತಿರುಗೇಟು

  ಗೋವಿಂದ ಅವರಂತೆಯೇ ಬಾಲಿವುಡ್‌ನಲ್ಲಿ ವೃತ್ತಿ ಕಟ್ಟಿಕೊಳ್ಳಲು ಬಯಸಿರುವುದಾಗಿ ಯಶವರ್ಧನ್ ಹೇಳಿಕೊಂಡಿದ್ದರು. ನಿರ್ದೇಶಕನಾಗಲು ಬಯಸಿದ್ದರೂ ನಟನೆ ಹೆಚ್ಚು ಸೆಳೆಯುತ್ತಿದೆ. ಇದಕ್ಕೆ ತಂದೆ ಸಹಾಯ ಮಾಡುತ್ತಿದ್ದಾರೆ ಎಂದು ತಿಳಿಸಿದ್ದರು.

  English summary
  Bollywood actor Govinda's son Yashvardhan Ahuja suffered minor injuries after his car met with an accident.
  Friday, June 26, 2020, 9:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X