For Quick Alerts
  ALLOW NOTIFICATIONS  
  For Daily Alerts

  ''ಅವಳು ಬಹಳ ಕೆಟ್ಟ ಸೊಸೆ'': ಬೀದಿಗೆ ಬಂತು ನಟನ ಮನೆ ಜಗಳ

  |

  ಹಿಂದಿಯ ಸ್ಟಾರ್ ನಟ ಗೋವಿಂದ ಮನೆ ಜಗಳ ಈಗ ಬೀದಿಗೆ ಬಂದಿದೆ. ನಟ ಗೋವಿಂದಾರ ಸೋದರಿಯ ಪುತ್ರ ಕೃಷ್ಣ ಅಭಿಷೇಕ್ ಸಹ ಒಳ್ಳೆಯ ನಟ ಹಾಗೂ ಕಮಿಡಿಯನ್ ಆಗಿದ್ದು, ಗೋವಿಂದ ಹಾಗೂ ಕೃಷ್ಣರ ನಡುವೆ ಒಳ್ಳೆಯ ಬಾಂದವ್ಯ ಇತ್ತು.

  ಆದರೆ ಈ ಬಾಂದವ್ಯ ಈಗ ಹದಗೆಟ್ಟಿದೆ. ಕೃಷ್ಣ ಹಾಗೂ ಗೋವಿಂದಾ ನಡುವೆ ವೈಮನಸ್ಯ ಉಂಟಾಗಿದ್ದು, ಗೋವಿಂದಾರ ಪತ್ನಿ ಬಹಿರಂಗವಾಗಿಯೇ ಕೃಷ್ಣ ಹಾಗೂ ಕೃಷ್ಣರ ಪತ್ನಿ ಕಶ್ಮೇರಾ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾರೆ.

  ಗೋವಿಂದಾ ಪತ್ನಿ ಸುನಿತಾ ಅಹುಜಾ, ಕೃಷ್ಣ ಪತ್ನಿ ಕಾಶ್ಮೇರಾ ಅತ್ಯಂತ ಕೆಟ್ಟ ಸೊಸೆ ಎಂದು ಕರೆದಿದ್ದಾರೆ. ಅಲ್ಲದೆ ತಮ್ಮ ಅಳಿಯ ಕೃಷ್ಣನ ಮುಖವನ್ನು ನೋಡಲು ನನಗೆ ಇಷ್ಟವಿಲ್ಲ, ನಾನು ಬದುಕಿರುವವರೆಗೆ ನಮ್ಮ ಕುಟುಂಬಗಳು ಒಂದಾಗುವುದಿಲ್ಲ. ಅವು ಒಡೆದು ಹೋಗಿವೆ ಎಂದಿದ್ದಾರೆ.

  ಕೆಲವು ದಿನಗಳ ಹಿಂದೆ ಗೋವಿಂದಾ ಹಾಗೂ ಸುನಿತಾ ಅಹುಜಾ 'ದಿ ಕಪಿಲ್ ಶರ್ಮಾ ಶೋ'ನಲ್ಲಿ ಭಾಗವಹಿಸಿದ್ದರು. ಆ ಶೋನ ಭಾಗವಾಗಿರುವ ಕೃಷ್ಣ ಅಭಿಷೇಕ್ ಅಂದು ಬೇಕೆಂದೇ ಶೋಗೆ ಗೈರಾಗಿದ್ದರು. ಆಗ ಈ ಇಬ್ಬರು ಕುಟುಂಬದ ವೈಮನ್ಯ ಹೆಚ್ಚಾಗಿರುವುದು ಜಗಜ್ಜಾಹೀರಾಯಿತು. ನಂತರ ಸುನಿತಾ ಅಹುಜಾ ನೀಡಿದ ಸಂದರ್ಶನದಲ್ಲಿ ಅವರು ನೇರವಾಗಿಯೇ ಕೃಷ್ಣ, ಕಾಶ್ಮೇರ ಮೇಲೆ ವಾಗ್ದಾಳಿ ನಡೆಸಿದರು.

  ನಾನು ಸಾಮಾನ್ಯವಾಗಿ ಕೆಟ್ಟ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ತಾಯಿಯಾಗಿ ನಾನು ಅವರ ಕಾಳಜಿ ವಹಿಸಿದರೂ ಸಹ ಅವರು ಹೀಗೆ ನಡೆದುಕೊಳ್ಳುತ್ತಿದ್ದಾರೆ. ಮನೆಗೆ ಒಬ್ಬ ಕೆಟ್ಟ ಸೊಸೆಯನ್ನು ತಂದಾಗ ಹೀಗೆಲ್ಲಾ ಸಮಸ್ಯೆಗಳಾಗುತ್ತವೆ. ನನಗೆ ಮಾಡಲು ಬಹಳ ಕೆಲಸವಿದೆ. ನಾನು ಗೋವಿಂದರ ಕೆಲಗಳನ್ನು ಸಹ ನಿಭಾಯಿಸಬೇಕು'' ಎಂದಿದ್ದಾರೆ ಸುನಿತಾ. ಕೃಷ್ಣ ಪತ್ನಿ ಕಾಶ್ಮೇರಾ, 'ಸುನಿತಾ ಅಹುಜಾ ಯಾರು?' ಎಂದು ಮಾಧ್ಯಮದ ಮುಂದೆ ಪ್ರಶ್ನೆ ಮಾಡಿದ್ದರು.

  ''ಸಾರ್ವಜನಿಕ ಜೀವನದಲ್ಲಿ ಖಾಸಗಿ ಜೀವನವನ್ನು ತರಬಾರದು ಎಂದು ಗೋವಿಂದ ಎಚ್ಚರಿಕೆ ನೀಡಿದ್ದರೂ ಕೃಷ್ಣ ಅದನ್ನು ಉಲ್ಲಂಘಿಸಿದ. ಏನು ಮಾಡುವುದು ಕೆಲವರಿಗೆ ಪ್ರಚಾರ ಬೇಕು, ಕೃಷ್ಣನಿಂದ ಈ ಸಮಸ್ಯೆಗಳು ಆದವು. ನನಗೆ ಪ್ರಚಾರ ಬೇಕಿಲ್ಲ, ಪ್ರಚಾರ ಬೇಕಿರುವವರು ಹಾಗೆ ಮಾಡುತ್ತಾರೆ. ಸಾವಿರ ಬಾರಿ ಕ್ಷಮಿಸಿ ಎಂದಾಗಲೂ ನಾನು ಅವರನ್ನು ಕ್ಷಮಿಸಿದ್ದೇನೆ. ಪದೇ-ಪದೇ ಅದೇ ಕೆಟ್ಟ ವರ್ತನೆ ತೋರಿಸುತ್ತಿದ್ದರೆ ಅವರನ್ನು ಕ್ಷಮಿಸಲಾಗುವುದಿಲ್ಲ. ನಮಗೂ ಸ್ವ-ಗೌರವವಿದೆ'' ಎಂದಿದ್ದಾರೆ ಸುನಿತಾ.

  ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟ ಕೃಷ್ಣ, ''ನಾನು ಆಗ ಒಂದು ಶೋ ನಡೆಸುತ್ತಿದ್ದೆ ಆದರೆ ಆ ಶೋಗೆ ಗೋವಿಂದ ಹಾಗೂ ಸುನೀತಾ ಬಂದಿರಲಿಲ್ಲ. ಆದರೆ ಅವರು ಕಪಿಲ್ ಶರ್ಮಾನ ಶೋಕ್ಕೆ ಹೋಗಿದ್ದರು. ಆಗ ನಾನು ಬಲವಂತ ಮಾಡಿ ಅವರನ್ನು ಶೋಗೆ ಕರೆತಂದೆ. ಆ ಶೋ ಮುಗಿದ ಬಳಿಕ ನನ್ನ ಪತ್ನಿ ಕಾಶ್ಮೇರಾ ನನ್ನ ಸಹೋದರಿ ಕುರಿತಾಗಿ ಟ್ವೀಟ್ ಒಂದನ್ನು ಮಾಡಿದಳು. ಆದರೆ ಆ ಟ್ವೀಟ್ ತಮಗಾಗಿಯೇ ಮಾಡಿದ್ದಾರೆ ಎಂದು ನನ್ನ ಮಾಮ (ಗೋವಿಂದಾ) ಮತ್ತು ಮಾಮಿ (ಸುನಿತಾ) ಅಂದುಕೊಂಡರು. ನಾನು ಅವರಿಗೆ ಸ್ಪಷ್ಟನೆ ನೀಡಲು ಯತ್ನಿಸಿದೆನಾದರೂ ಅವರು ಒಪ್ಪಿಕೊಳ್ಳಲಿಲ್ಲ. ನಂತರ ನನ್ನ ಮಕ್ಕಳ ಹುಟ್ಟುಹಬ್ಬಕ್ಕೆ ಕರೆದಾಗ ಅವರು ಬರಲಿಲ್ಲ ಆಗ ನನಗೆ ಬಹಳ ಬೇಸರವಾಯ್ತು'' ಎಂದಿದ್ದಾರೆ ಕೃಷ್ಣ.

  ನಟ ಗೋವಿಂದ ಈಗ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಹಿಂದಿ ರಿಯಾಲಿಟಿ ಶೋ ಒಂದರಲ್ಲಿ ಡಾ.ರಾಜ್‌ಕುಮಾರ್ ಅವರ ಎಂದೆಂದೂ ನಿನ್ನನು ಮರೆತು ಹಾಡು ಹಾಡಿ ಗಮನ ಸೆಳೆದಿದ್ದ ಗೋವಿಂದ ಈಗ ಕನ್ನಡದ ಸಿನಿಮಾವೊಂದರಲ್ಲಿ ನಟಿಸಲಿದ್ದು ಆ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಪ್ರಜ್ವಲ್ ದೇವರಾಜ್ ಈ ಸಿನಿಮಾದ ನಾಯಕ ನಟರಾಗಿದ್ದಾರೆ.

  English summary
  Actor Govinda's wife Sunitha Ahuja lambasted on Krishna Abhishekh and his wife Kashmera. She said Kashmera is a bad daughter in law.
  Wednesday, September 22, 2021, 9:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X