ಬಾಲಿವುಡ್ ಸೂಪರ್ ಸ್ಟಾರ್ ಜೊತೆ 'ರಾ ರಾ ಸಾಮಿ' ಎಂದು ರಶ್ಮಿಕಾ ಮಂದಣ್ಣ ಸ್ಟೆಪ್ಸ್!

ರಶ್ಮಿಕಾ ಮಂದಣ್ಣ ನಟನೆಯ ಬಾಲಿವುಡ್ ಸಿನಿಮಾ 'ಗುಡ್‌ಬೈ' ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದಲ್ಲಿ ಬಿಗ್‌ಬಿ ಅಮಿತಾಭ್ ಬಚ್ಚನ್ ಮಗಳ ಪಾತ್ರದಲ್ಲಿ ರೋಶ್ ಮಿಂಚಿದ್ತು, ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. 'DID ಸೂಪರ್ ಮಾಮ್ಸ್' ಸೀಸನ್ 3ರ ಈ ವಾರದ ಎಪಿಸೋಡ್‌ಗೆ ಅತಿಥಿಯಾಗಿ ಹೋಗಿದ್ದ ರಶ್ಮಿಕಾ ಹಂಗಾಮಾ ಜೋರಾಗಿತ್ತು.

ಬಾಲಿವುಡ್, ಕಾಲಿವುಡ್, ಟಾಲಿವುಡ್ ಎಲ್ಲೆಲ್ಲೂ ರಶ್ಮಿಕಾ ಮಂದಣ್ಣ ಹೆಸರು ಜೋರಾಗಿ ಕೇಳಿಬರ್ತಿದೆ. ಬಾಲಿವುಡ್‌ನ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಕೊಡಗಿನ ಚೆಲುವೆ ನಟಿಸ್ತಿದ್ದಾರೆ. ಇನ್ನು ಟಾಲಿವುಡ್‌ನಲ್ಲಿ ಆಕೆಯ ಕ್ರೇಜ್ ಬಗ್ಗೆ ಬಿಡಿಸಿ ಹೇಳುವುದೇ ಬೇಕಾಗಿಲ್ಲ. ತಮಿಳಿನಲ್ಲೂ ಈಗಾಗಲೇ ಖಾತೆ ತೆರೆದಿರುವ ರೋಶ್ ಸದ್ಯ ದಳಪತಿ ವಿಜಯ್ ಜೋಡಿಯಾಗಿ ನಟಿಸ್ತಿದ್ದಾರೆ. ಮತ್ತೊಂದ್ಕಡೆ 'ಗುಡ್‌ಬೈ' ಸಿನಿಮಾ ಪ್ರಮೋಷನ್‌ನಲ್ಲೂ ಭಾಗಿ ಆಗ್ತಿದ್ದಾರೆ. ಅಕ್ಟೋಬರ್ 7ಕ್ಕೆ ಈ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರ್ತಿದೆ.

ರಶ್ಮಿಕಾ ಮಂದಣ್ಣ 'ಮಿಷನ್ ಮಜ್ನು' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ಆದರೆ ಅದಕ್ಕಿಂತ ಮೊದಲು 'ಗುಡ್‌ಬೈ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದನ್ನೆಲ್ಲಾ ನೋಡ್ತಿದ್ರೆ, ಕೊಡಗಿನ ಬೆಡಗಿ ಬಾಲಿವುಡ್‌ನಲ್ಲಿ ಭದ್ರವಾಗಿ ನೆಲೆ ಕಂಡುಕೊಳ್ಳುವ ಸುಳಿವು ಸಿಕ್ತಿದೆ.

ಗೋವಿಂದ ಜೊತೆ ರಾರಾ ಸಾಮಿ ಸ್ಟೆಪ್ಸ್

ಗೋವಿಂದ ಜೊತೆ ರಾರಾ ಸಾಮಿ ಸ್ಟೆಪ್ಸ್

ಹಿಂದಿ ಕಿರುತೆರೆಯಲ್ಲಿ 'ಡ್ಯಾನ್ ಇಂಡಿಯಾ ಡ್ಯಾನ್ಸ್ ಸೂಪರ್ ಮಾಮ್ಸ್' ಸೀಸನ್ 3 ಸಕ್ಸಸ್ ಕಂಡಿದೆ. ಈ ವಾರ ಗ್ರ್ಯಾಂಡ್‌ ಫಿನಾಲೆ ನಡೆದಿದೆ. ಶೋಗೆ ಅತಿಥಿಗಳಾಗಿ ರಶ್ಮಿಕಾ ಮಂದಣ್ಣ ಹಾಗೂ ಖ್ಯಾತ ನಟ ಗೋವಿಂದ ಭಾಗಿಯಾಗಿದ್ದಾರೆ. ಇಬ್ಬರು ಸೇರಿ 'ಪುಷ್ಪ' ಚಿತ್ರದ 'ರಾ ರಾ ಸಾಮಿ' ಹಾಡಿಗೆ ಬಿಂದಾಸ್ ಆಗಿ ಕುಣಿದಿದ್ದಾರೆ. ಇದರ ಸಣ್ಣ ಪ್ರೋಮೊ ರಿಲೀಸ್ ಆಗಿ ವೈರಲ್ ಆಗಿದೆ. ಥೇಟ್ ಶ್ರೀವಲ್ಲಿ ತರ ಗೋವಿಂದ ಕೂಡ ಸ್ಟೆಪ್ಸ್ ಹಾಕಿ ಗಮನ ಸೆಳೆದಿದ್ದಾರೆ. ರಾತ್ರಿ 9 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ.

'ರಾ ರಾ ಸಾಮಿ' ಸಾಂಗ್ ಸೂಪರ್ ಹಿಟ್

'ರಾ ರಾ ಸಾಮಿ' ಸಾಂಗ್ ಸೂಪರ್ ಹಿಟ್

ಸುಕುಮಾರ್ ನಿರ್ದೇಶನದ 'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್ ಜೋಡಿಯಾಗಿ ರಶ್ಮಿಕಾ ಮಂದಣ್ಣ ಮಿಂಚಿದ್ದಾರೆ. ಪುಷ್ಪರಾಜ್ ಪ್ರೇಯಸಿ ಶ್ರೀವಲ್ಲಿಯಾಗಿ ಡೀಗ್ಲಾಮರಸ್ ರೋಲ್‌ನಲ್ಲಿ ಗಮನ ಸೆಳೆದಿದ್ದರು. ಲಂಗಾ ದಾವಣಿಯಲ್ಲಿ 'ರಾ ರಾ ಸಾಮಿ' ಎಂದು ಕುಣಿದು ರಂಗೇರಿಸಿದ್ದರು. ದೇವಿಶ್ರೀ ಪ್ರಸಾದ್ ಮ್ಯೂಸಿಕ್‌ನಲ್ಲಿ ಸಾಂಗ್ ಸೂಪರ್ ಹಿಟ್ ಆಗಿತ್ತು. ಸಿನಿಮಾ ಹಿಂದಿಗೂ ಡಬ್ ಆಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಹಾಗಾಗಿ ಉತ್ತರ ಭಾರತದಲ್ಲೂ ಈ ಸಾಂಗ್‌ಗೆ ಭಾರೀ ಕ್ರೇಜ್ ಇದೆ. ರಶ್ಮಿಕಾ ಎಲ್ಲೋ ಹೋದ್ರು, ಎಲ್ಲೇ ಬಂದ್ರು ಇದೇ ಸಾಂಗ್‌ಗೆ ಡ್ಯಾನ್ಸ್ ಮಾಡ್ತಿದ್ದಾರೆ.

ಅಮಿತಾಭ್ ಮಗಳಾಗಿ ರಶ್ಮಿಕಾ ನಟನೆ

ಅಮಿತಾಭ್ ಮಗಳಾಗಿ ರಶ್ಮಿಕಾ ನಟನೆ

ವಿಕಾಸ್ ಬೆಹ್ಲ್ ನಿರ್ದೇಶನದ 'ಗುಡ್‌ಬೈ' ಚಿತ್ರದಲ್ಲಿ ಅಮಿತಾಭ್ ಹಾಗೂ ರಶ್ಮಿಕಾ ತಂದೆ ಮಗಳ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೊಂದು ಕಾಮಿಡಿ ಎಂಟರ್‌ಟೈನರ್ ಸಿನಿಮಾ ಆಗಿದ್ದು, ಕೊಂಚ ಎಮೋಷನಲ್ ಸನ್ನಿವೇಶಗಳು ಇದೆ. ಸದಾ ಜಗಳ ಮಾಡುವ ತಂದೆ-ಮಗಳು. ದಿಢೀರನೇ ತಾಯಿ ಕೊನೆಯುಸಿರೆಳೆಯುತ್ತಾರೆ. ಮುಂದೇನಾಗುತ್ತೆ? ತಂದೆ, ಮಗಳ ಗಲಾಟೆ ನಿಲ್ಲುತ್ತಾ? ಅನ್ನುವುದನ್ನು ತೆರೆಮೇಲೆ ನೋಡಬೇಕು. ಈಗಾಗಲೇ 'ಗುಡ್‌ಬೈ' ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ.

ರಶ್ಮಿಕಾ ಮೊಣಕಾಲು ನೋವಿಗೆ ಚಿಕಿತ್ಸೆ

ರಶ್ಮಿಕಾ ಮೊಣಕಾಲು ನೋವಿಗೆ ಚಿಕಿತ್ಸೆ

ರಶ್ಮಿಕಾ ಇತ್ತೀಚೆಗೆ ಮೊಣಕಾಲಿನ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಹೈದಾಬಾದ್‍ನ ಪ್ರಮುಖ ಆರ್ಥೋ ಸ್ಪೆಷಲಿಸ್ಟ್ ಗುರುವಾ ರೆಡ್ಡಿ ಫೇಸ್‍ಬುಕ್‍ನಲ್ಲಿ ಫೋಟೋ ಸಮೇತ ಮಾಹಿತಿ ಹಂಚಿಕೊಂಡಿದ್ದರು. ಸತತ ಚಿತ್ರೀಕರಣಲ್ಲಿರುವ ರಶ್ಮಿಕಾ ಮೊಣಕಾಲಿನ ಸಮಸ್ಯೆಗೆ ಒಳಗಾಗಿದ್ದಾರೆ. ಆರ್ಥೋ ಸ್ಪೆಷಲಿಸ್ಟ್ ಗುರುವಾ ರೆಡ್ಡಿ ನಟಿಗೆ ಚಿಕಿತ್ಸೆ ನೀಡಿದ್ದಾರೆ. 'ಸಾಮಿ..ಸಾಮಿ.. ಎಂದು ಮೊಣಕಾಲಿನ ಮೇಲೆ ಭಾರ ಹಾಕಿ ಡ್ಯಾನ್ಸ್ ಮಾಡುತ್ತಿದ್ದೀರಿ.. ಈಗ ನೋವು ಬಂದಿದೆ! ಮೊಣಕಾಲು ನೋವಿನಿಂದ ನನ್ನ ಬಳಿಗೆ ಬಂದಿದ್ದೀರಿ ಅಂತಾ ಶ್ರೀವಲ್ಲಿಗೆ ನಾನು ಹೇಳಿದೆ' ಎಂದು ತಮಾಷೆಯಾಗಿ ವೈದ್ಯರು ಪೋಸ್ಟ್ ಮಾಡಿದ್ದರು.

More from Filmibeat

English summary
Govinda shakes a leg with Rashmika Mandanna To Saamy saamy song. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X