For Quick Alerts
  ALLOW NOTIFICATIONS  
  For Daily Alerts

  ನಟ ಗೋವಿಂದ ಮಗನಿಗೆ ಅಪಘಾತ: ಗುದ್ದಿದ ಕಾರು ಬಾಲಿವುಡ್‌ ಖ್ಯಾತ ನಾಮರದ್ದು!

  |

  ಬಾಲಿವುಡ್‌ನ ಹಿರಿಯ ಮತ್ತು ಖ್ಯಾತ ನಟ ಗೋವಿಂದ ಪುತ್ರನಿಗೆ ಅಪಘಾತವಾಗಿದ್ದು, ಬಾಲಿವುಡ್‌ ಖ್ಯಾತನಾಮರ ಕಾರೊಂದು ಗೋವಿಂದ ಪುತ್ರನಿದ್ದ ಕಾರಿಗೆ ಬಂದು ಗುದ್ದಿದೆ.

  ಗೋವಿಂದ ಪುತ್ರ ಯಶ್‌ವರ್ಧನ್‌ಗಾಗಲಿ ಮತ್ತೊಂದು ಕಾರಿನಲ್ಲಿದ್ದವರಿಗಾಗಲೇ ಹೆಚ್ಚಿನ ಅಪಾಯವಾಗಿಲ್ಲ ಆದರೆ ಯಶ್‌ವರ್ಧನ್ ಇದ್ದ ಕಾರಿಗೆ ಸಾಕಷ್ಟು ಹಾನಿಯಾಗಿದೆ. ಪೊಲೀಸ್ ಪ್ರಕರಣ ಸಹ ಆಗಿದೆ.

  ಪ್ರಕರಣದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಗೋವಿಂದ, ನನ್ನ ಮಗನಿಗೆ ಗುದ್ದಿದ ಕಾರು, ಯಶ್‌ ರಾಜ್ ಫಿಲಮ್ಸ್ ಸಂಸ್ಥಾಪಕ ಯಶ್ ಚೋಪ್ರಾ ಅವರ ಪತ್ನಿಯದ್ದು, ಅಪಘಾತವಾದಾಗಿನಿಂದಲೂ ಈವರೆಗೆ ನನಗಾಗಲಿ, ಮಗನಿಗಾಗಲಿ ಕರೆ ಮಾಡಿಲ್ಲ ಎಂದಿದ್ದಾರೆ.

  ಪಮೇಲಾ ಚೋಪ್ರಾ ಹೆಸರಿನಲ್ಲಿದ್ದ ಕಾರು

  ಪಮೇಲಾ ಚೋಪ್ರಾ ಹೆಸರಿನಲ್ಲಿದ್ದ ಕಾರು

  ಯಶ್ ಚೋಪ್ರಾ ಅವರ ಪತ್ನಿ ಪಮೇಲಾ ಚೋಪ್ರಾ ಅವರ ಹೆಸರಿನಲ್ಲಿದ್ದ ಕಾರು ಗೋವಿಂದ ಪುತ್ರನಿದ್ದ ಕಾರಿಗೆ ಗುದ್ದಿದೆಯಂತೆ. ಆದರೆ ಅಪಘಾತ ನಡೆದ ವೇಳೆ ಯಶ್ ರಾಜ್ ಪತ್ನಿ ಕಾರಿನಲ್ಲಿರಲಿಲ್ಲ, ಬದಲಿಗೆ ಯಶ್ ರಾಜ್ ಫಿಲಮ್ಸ್‌ನ ಇಬ್ಬರು ಪ್ರಮುಖ ಸಿಬ್ಬಂದಿ ಇದ್ದರಂತೆ.

  'ಸಿಬ್ಬಂದಿ ಕ್ಷಮೆ ಕೋರಿದರು, ನಾನು ಕ್ಷಮಿಸಿದೆ'

  'ಸಿಬ್ಬಂದಿ ಕ್ಷಮೆ ಕೋರಿದರು, ನಾನು ಕ್ಷಮಿಸಿದೆ'

  'ಘಟನೆ ನಡೆದಾಗ ಪೊಲೀಸ್ ಸ್ಟೇಶನ್‌ನಲ್ಲಿ ಯಶ್ ರಾಜ್ ಫಿಲಮ್ಸ್‌ನ ವ್ಯವಸ್ಥಾಪಕ ರಿಶಬ್ ಚೋಪ್ರಾ ಮತ್ತು ಅಕ್ಷಯ್ ಇದ್ದರು, ಅಲ್ಲಿ ಅವರು ನನ್ನ ಕ್ಷಮಾಪಣೆ ಕೋರಿದರು, ನಾನು ಅವರನ್ನು ಕ್ಷಮಿಸಿದ್ದೇನೆ' ಎಂದು ಗೋವಿಂದ ಖಾಸಗಿ ಟಿವಿಗೆ ಹೇಳಿದ್ದಾರೆ.

  ಯಾರೂ ನನಗೆ ಕರೆ ಮಾಡಿಲ್ಲ: ಗೋವಿಂದ

  ಯಾರೂ ನನಗೆ ಕರೆ ಮಾಡಿಲ್ಲ: ಗೋವಿಂದ

  'ಆದರೆ ಯಶ್‌ ರಾಜ್ ಫಿಲಮ್ಸ್‌ನಿಂದ ಯಾರೂ ನನಗೆ ಕರೆ ಮಾಡಿ ಮಾತನಾಡಲಿಲ್ಲ ಅಥವಾ ನನ್ನ ಮಗನಿಗೂ ಕರೆ ಮಾಡಿ ಮಾತನಾಡಲಿಲ್ಲ. ಬಹುಷಃ ಮುಂದೆ ಮಾಡಬಹುದೇನೋ ನನಗೆ ಗೊತ್ತಿಲ್ಲ' ಎಂದು ಅಸಮಾಧಾನದಿಂದಲೇ ಹೇಳಿದ್ದಾರೆ ಗೋವಿಂದ

  ಅಮಿತಾಬ್ ಬಚ್ಚನ್ ಮನೆಯ ಬಳಿ ಅಪಘಾತ

  ಅಮಿತಾಬ್ ಬಚ್ಚನ್ ಮನೆಯ ಬಳಿ ಅಪಘಾತ

  ಅಪಘಾತವು ಜೂನ್ 24 ರಂದು ರಾತ್ರಿ 8 ಗಂಟೆ ಸುಮಾರಿಗೆ ಮುಂಬೈನಲ್ಲಿ ಅಮಿತಾಬ್ ಬಚ್ಚನ್ ಮನೆಯ ಸಮೀಪ ನಡೆದಿದೆ. ಘಟನೆಯಲ್ಲಿ ಯಾರಿಗೂ ಹೆಚ್ಚಿನ ಪೆಟ್ಟಾಗಿಲ್ಲ ಆದರೆ ಗೋವಿಂದ ಪುತ್ರ ಯಶವರ್ಧನ್ ಕಾರಿಗೆ ಸಾಕಷ್ಟು ಹಾನಿಯಾಗಿದೆ.

  English summary
  Actor Govinda son's car hit by Yash raj movies car. Govinda said no one called me from Yash raj movies.
  Wednesday, July 1, 2020, 10:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X