ಮಹಿಳೆಯರ ಆಯ್ಕೆಯಲ್ಲೂ ಇವ್ರದ್ದು ಅದ್ಭುತ ಟೇಸ್ಟ್ ; ಆಮಿರ್ ಖಾನ್ ಕಾಲೆಳೆದ ಕಾಜೋಲ್
ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ .. ಪ್ರೀತಿ ಅಂದರೆ ಬದುಕು, ಭವಿಷ್ಯ, ಭಾಷೆ, ಕನಸು, ನಗು, ಇನ್ನೂ ಏನೆಲ್ಲಾ ! ಇಂಥಾ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮಸೆಲೆಯಾಗಿ ಬೆಳೆಸುವ -ಉಳಿಸುವ ವ್ರತವೇ ದಾಂಪತ್ಯ. ಆದರೆ ಈಗೀಗ ಪ್ರೀತಿ ಮತ್ತು ದಾಂಪತ್ಯದ ಅರ್ಥ ಎರಡು ಬದಲಾಗಿದೆ. ಅದರಲ್ಲಿಯೂ ರಂಗೀನ್ ಲೋಕದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ.
ಇಲ್ಲಿ ದಿನ ಬೆಳಗಾದರೆ ಅನೇಕರು ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳುತ್ತಾರೆ. ಮದುವೆಯ ಬಂಧನದಿಂದ ಹೊರ ಬರುತ್ತಾರೆ. ವಿಚ್ಛೇದನ ಪಡೆಯುತ್ತಾರೆ. ವಿಶೇಷ ಅಂದರೆ ವಿಚ್ಛೇದನ ಪಡೆದ ಮೇಲೆ ಕೂಡ ಇಲ್ಲಿ ಅನೇಕರು ದಿಕ್ಕು ಬದಲಿಸುವುದಿಲ್ಲ.

ಬದಲಿಗೆ ನಾವು ಈಗ ಗಂಡ-ಹೆಂಡ್ತಿಯಲ್ಲ ಬದಲಿಗೆ ಸ್ನೇಹಿತರು ಮಾತ್ರ ಎಂದು ಹೇಳುತ್ತಲೇ ಜೊತೆ ಜೊತೆಯಾಗಿ ಓಡಾಡುತ್ತಾರೆ. ಮಾಜಿ ಗಂಡ ಅಥವಾ ಹೆಂಡ್ತಿಯ ಎದುರೇ ಮತ್ತೊಬ್ಬರನ್ನು ಪ್ರೀತಿಸಲು ಶುರು ಮಾಡುತ್ತಾರೆ.
ಹಳೆಯ ಸಂಗಾತಿಗೆ ತಮ್ಮ ಹೊಸ ಗೆಳೆಯ ಅಥವಾ ಗೆಳತಿಯ ಪರಿಚಯವನ್ನು ಮಾಡಿಸಿ ನೆಮ್ಮದಿಯಾಗಿ ಬದುಕುತ್ತಾರೆ. ಇದಕ್ಕೆ ಉದಾಹರಣೆಯಂತೆ ಇರುವ ಆಮಿರ್ ಖಾನ್ ಸದ್ಯ ಮೂರನೇ ಬಾರಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಬೆಂಗಳೂರು ಮೂಲದ ಗೌರಿ ಜೊತೆ ಪ್ರೇಮ ಗೀತೆ ಹಾಡುತ್ತಾ ನೆಮ್ಮದಿಯಾಗಿದ್ದಾರೆ.
ಇನ್ನೇನು ಇದೇ ಜುಲೈ 5ರಂದು ಮೂರನೇ ಬಾರಿ ಮದುವೆ ಕೂಡ ಆಗಲಿದ್ಧಾರೆ. ಈ ಮದುವೆ ಸಮಾರಂಭದಲ್ಲಿ ಕೆಲವೇ ಕೆಲ ಆಪ್ತರು ಭಾಗಿಯಾಗಲಿದ್ಧಾರೆ ಎಂದು ಹೇಳಲಾಗುತ್ತಿದೆಯಾದರೂ ಸದ್ಯ ಆಮಿರ್ ಖಾನ್ ಅವರ ಈ ಮೂರನೇ ಮದುವೆಯ ಕುರಿತು ಕಾಜೋಲ್ ಮಾಡಿದ ತಮಾಷೆಯ ಕಾಮೆಂಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಸಖತ್ ವೈರಲ್ ಆಗುತ್ತಿದೆ.
ಹೌದು, ಅಸಲಿಗೆ ಆಮಿರ್ ಖಾನ್ ವೃತ್ತಿ ಬದುಕಿನ ಕಳಶ ಪ್ರಾಯ ''ಲಗಾನ್'' ತೆರೆಗೆ ಬಂದು 25 ವರ್ಷಗಳಾಗಿವೆ. ಆಮಿರ್ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದು ಇದೇ ಚಿತ್ರದ ಮೂಲಕ. ಹೀಗಾಗಿ ಮುಂಬೈನಲ್ಲಿ ಆಮಿರ್ ಖಾನ್ ಅದ್ದೂರಿಯಾದ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ತಮ್ಮ ಈ ಬೆಳ್ಳಿ ಹಬ್ಬಕ್ಕೆ ''ಲಗಾನ್'' ತಂಡ ಮಾತ್ರವಲ್ಲದೇ ಚಿತ್ರರಂಗದ ಎಲ್ಲರನ್ನೂ ಕೂಡ ಕರೆದಿದ್ದರು. ಈ ಹಿನ್ನೆಲೆ ಸಲ್ಮಾನ್ ಖಾನ್, ಕರೀನಾ ಕಪೂರ್, ಸೇರಿ ಹಲವರು ಬಂದಿದ್ದರು. ಇದೇ ಸಮಯದಲ್ಲಿ ಕಾಜೋಲ್ ಮತ್ತು ಜೂಹಿ ಚಾವ್ಲಾ ಸಿಕ್ಕಿದ್ದೇ ಚಾನ್ಸ್ ಎಂಬಂತೆ ಆಮಿರ್ ಖಾನ್ ಕಾಲೆಳೆದಿದ್ಧಾರೆ. ಎಲ್ಲರನ್ನು ನಗೆಗಡಲಿನಲ್ಲಿ ತೇಲಿಸಿದ್ದಾರೆ. ಕಾಜೋಲ್ ಮಾಡಿದ ತಮಾಷೆಯ ಕಾಮೆಂಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಹೌದು, ಕಾರ್ಯಕ್ರಮದಲ್ಲಿ ತಮ್ಮ ಕುರಿತು ಮಾತನಾಡಲು ಕಾಜೋಲ್ ಮತ್ತು ಜೂಹಿ ಚಾವ್ಲಾ ಅವರನ್ನು ಆಮಿರ್ ಖಾನ್ ವೇದಿಕೆಗೆ ಕರೆದಿದ್ದರು. ಈ ಸಮಯದಲ್ಲಿ ಮಾತು ಶುರು ಮಾಡಿದ ಕಾಜೋಲ್, ಆರಂಭದಲ್ಲಿ ಆಮಿರ್ ಅವರ ನಿರ್ಮಾಣ ಸಂಸ್ಥೆ ಉತ್ತಮ ಸಿನಿಮಾಗಳನ್ನು ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆರಂಭದಲ್ಲಿ ನಾನೇನು ಹೇಳಲಿ.? ಎಂದು ಮಾತು ಶುರು ಮಾಡಿದ ಕಾಜೋಲ್, ಆ ನಂತರ ಚಿತ್ರಗಳ ವಿಚಾರದಲ್ಲಿ ಆಮಿರ್ ಖಾನ್ ಅವರಿಗೆ ಅದ್ಭುತ ಅಭಿರುಚಿ ಇದೆ ಎಂದು ಹೇಳಿದ್ದಾರೆ. ಆ ನಂತರ ''ಲಗಾನ್'' ಚಿತ್ರದ ಮೂಲಕ ನಿರ್ಮಾಪಕರಾದ ಆಮಿರ್ ಅವರ ಯಶಸ್ವಿ ಕಥೆ ಇಲ್ಲಿಯವರೆಗೆ ಮುಂದುವರೆದಿದೆ ಎಂದು ಹೇಳಿದ ಕಾಜೋಲ್ ಸುಮ್ಮನೆ ಇರದೇ ಸಿನಿಮಾಗಳಷ್ಟೇ ಅಲ್ಲ, ಮಹಿಳೆಯರ ಆಯ್ಕೆಯಲ್ಲೂ ಅವರಿಗೆ ಉತ್ತಮ ಅಭಿರುಚಿ ಇದೆ ಎಂದು ಹೇಳಿದ್ದಾರೆ. ಈ ಮೂಲಕ ಆಮಿರ್ ಖಾನ್ ಕಾಲೆಳೆದಿದ್ದಾರೆ.
ಕಾಜೋಲ್ ಅವರಾಡಿದ ಈ ಮಾತಿಗೆ ಅಲ್ಲಿದ್ದ ಎಲ್ಲರೂ ನಕ್ಕಿದ್ದಾರೆ. ಆದರೆ ಆಮಿರ್ ಖಾನ್ ಮುಜುಗರದಿಂದ ನಗುತ್ತ ಸುಮ್ಮನಾಗಿದ್ದಾರೆ. ನಾಚಿ ನೀರಾಗಿದ್ದಾರೆ. ಇನ್ನು ಕಾಜೋಲ್ ಅವರ ಈ ಹಾಸ್ಯ ಚಟಾಕಿಯನ್ನು ಆಮಿರ್ ಖಾನ್ ಅರಗಿಸಿಕೊಂಡಿರಲಿಲ್ಲ. ಅಷ್ಟರಲ್ಲೇ ಮಾತು ಶುರು ಮಾಡಿದ ಜೂಹಿ ಚಾವ್ಲಾ, ಆಮಿರ್ ಬಗ್ಗೆ ಹೇಳಲು ನನ್ನ ಹತ್ತಿರ ಕೇವಲ ಒಂದು ಪದವಿಲ್ಲ, ಇಡೀ ಪುಸ್ತಕವೇ ಇದೆ ಎಂದಿದ್ದಾರೆ. ನಾನು ಮಾತನಾಡಲು ಶುರು ಮಾಡಿದರೆ ಇಡೀ ಸಂಜೆ ಮಾತನಾಡುತ್ತೇನೆ ಎಂದ ಜೂಹಿ ಚಾವ್ಲಾ ಆಮಿರ್ ಖಾನ್ ಪ್ರೊಡಕ್ಷನ್ಸ್ ಆರಂಭಿಸುವುದಕ್ಕೂ ಮುನ್ನ ಅವರು ಬರೀ 'ಎಕೆ' ಆಗಿದ್ದರು ಆದರೆ ನಾವು ಒಟ್ಟಿಗೆ ಕೆಲಸ ಮಾಡಿದ ಮೇಲೆ ಅವರು ಜೀವನದಲ್ಲಿ ಇಂದು ಎಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಎಂದು ತಮ್ಮದೇ ಶೈಲಿಯಲ್ಲಿ ಆಮಿರ್ ಖಾನ್ ಅವರ ಕಾಲೆಳೆದಿದ್ದಾರೆ.
ಸದ್ಯ ಕಾಜೋಲ್ ಮತ್ತು ಜೂಹಿ ಚಾವ್ಲಾ ಅವರ ಈ ತಮಾಷೆಯ ಮಾತುಗಳು ಅಭಿಮಾನಿಗಳ ಗಮನ ಸೆಳೆದಿವೆ. ಅಂದ್ಹಾಗೇ ಕಾಜೋಲ್ ಮತ್ತು ಜೂಹಿ ಚಾವ್ಲಾ ಇಬ್ಬರು ಆಮಿರ್ ಖಾನ್ ಜೊತೆ ''ಇಷ್ಕ್'' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ''ಫನಾ'' ಇವರ ಮತ್ತೊಂದು ಜನಪ್ರಿಯ ಚಿತ್ರ. ಇನ್ನು ಜೂಹಿ ಚಾವ್ಲಾ ''ಕಯಾಮತ್ ಸೇ ಕಯಾಮತ್'' ಚಿತ್ರದಿಂದ ಹಿಡಿದು ''ಆತಂಕ್ ಹೀ ಆತಂಕ್''ವರೆಗೆ ಹಲವು ಸಿನಿಮಾಗಳನ್ನು ಮಾಡಿದ್ದಾರೆ.


Click it and Unblock the Notifications