ಈ ಫೋಟೊದಲ್ಲಿರುವ ಪುಟಾಣಿ ಯಾರು? ಈಗ ಟಾಪ್ ಹೀರೊಯಿನ್
ಸಿನಿಮಾ ತಾರೆಯರ ಬಾಲ್ಯದ ಫೋಟೊಗಳು ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಅಭಿಮಾನಿಗಳಂತೂ ನೆಚ್ಚಿನ ನಟ-ನಟಿಯರ ಚಿಕ್ಕಂದಿನ ಫೋಟೊಗಳನ್ನು ನೋಡಿ ಖುಷಿ ಆಗುತ್ತಾರೆ. ಈಗಾಗಲೇ ಶಾರುಖ್ ಖಾನ್, ದೀಪಿಕಾ ಪಡುಕೋಡೆ, ಸಾಯಿ ಪಲ್ಲವಿ ಹೀಗೆ ಹಲವರ ಬಾಲ್ಯದ ಫೋಟೊಗಳು ಪದೇ ಪದೇ ಸದ್ದು ಮಾಡುತ್ತವೆ.
ಕೆಲ ತಾರೆಯರ ಬಾಲ್ಯದ ಫೋಟೊಗಳನ್ನು ನೋಡಿ ಅದು ಯಾರು ಎನ್ನುವುದನ್ನು ಸುಲಭವಾಗಿ ಗುರ್ತಿಸಿಬಿಡಬಹುದು. ಅಷ್ಟರಮಟ್ಟಿಗೆ ಹೋಲಿಕೆ ಇರುತ್ತದೆ. ಅಂತಹ ಭಾರೀ ಬದಲಾವಣೆ ಕಾಣಿಸಲ್ಲ. ಆದರೆ ಕೆಲವರ ಬಾಲ್ಯದ ಫೋಟೊಗಳನ್ನು ನೋಡಿ ಯಾರು ಎಂದು ಹೇಳುವುದೇ ಕಷ್ಟ. ಸದ್ಯ ಈ ಫೋಟೊಗಳನ್ನು ನೋಡಿ. ಹೀಗೆ ಅಮ್ಮನ ಪಕ್ಕ ಮುಖ ಊದಿಸಿಕೊಂಡು ಕುಳಿತ್ತಿರುವ ಪುಟಾಣಿ ಯಾರು ಎಂದು ಗೊತ್ತಾಯ್ತಾ?

ಈಕೆ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಆದರೆ ಸಕ್ಸಸ್ ಕಂಡಿದ್ದು ಮಾತ್ರ ಸೌತ್ ಸಿನಿಮಾಗಳಲ್ಲಿ. ಕನ್ನಡ ಸಿನಿಮಾ ಗೀತೆಗಳಿಗೂ ಹೆಜ್ಜೆ ಹಾಕಿ ಮೋಡಿ ಮಾಡಿದ್ದಾರೆ. ಸ್ಟಾರ್ ನಟಿಯಾಗಿ ಮಾತ್ರವಲ್ಲದೇ ಇತ್ತೀಚೆಗೆ ಸ್ಪೆಷಲ್ ಸಾಂಗ್‌ಗಳಿಗೆ ಹೆಜ್ಜೆ ಹಾಕಿ ಕಮಾಲ್ ಮಾಡುತ್ತಿರುವ ಚೆಲುವೆ ಈಕೆ. ಪಡ್ಡೆ ಹುಡುಗರ ಎದೆಗೆ ಕಿಚ್ಚು ಹಚ್ಚುವ ಮಾದಕ ಚೆಲುವೆ.
ಮ್ಯೂಸಿಕ್ ಆಲ್ಬಮ್‌ನಲ್ಲಿ ಮಿಂಚುವ ಮೂಲಕ ಬಣ್ಣದ ಲೋಕಕ್ಕೆ ಬಂದ ಈ ಚೆಲುವೆ ಬಳಿಕ ಹಿಂದಿ ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ಮೊದಲ ಸಿನಿಮಾ ಗೆಲ್ಲಲಿಲ್ಲ. ಅದೇ ವರ್ಷ ತೆಲುಗು ಚಿತ್ರದಲ್ಲಿ ನಟಿಸಿದರು. ಆರಂಭದಲ್ಲಿ ನಟಿಸಿದ ಒಂದಷ್ಟು ಸಿನಿಮಾಗಳಲ್ಲಿ ಗ್ಲಾಮರ್ ಗೊಂಬೆಯಾಗಿ ಈ ಮಿಲ್ಕಿಬ್ಯೂಟಿ ಮಿಂಚಿದ್ದು ಬಿಟ್ಟರೆ ಬೇರೆ ಪ್ರಯೋಜನವಾಗಲಿಲ್ಲ. ಬಳಿಕ ನಿಧಾನವಾಗಿ ಗೆಲುವಿನ ನಗೆ ಬೀರಿದರು.
ತಮಿಳಿನ 'ಪಯ್ಯಾ' ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ಅಲ್ಲಿಂದ ಮುಂದೆ ತೆಲುಗು, ತಮಿಳಿನ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಳ್ಳುತ್ತಾ ಹೋದರು. ಈಗಾಗಲೇ ಆಕೆ ಯಾರು ಎನ್ನುವುದು ನಿಮಗೆ ಗೊತ್ತಾಗಿರಬೇಕು. ಈ ಫೋಟೊದಲ್ಲಿರುವ ಪುಟಾಣಿ ಮತ್ಯಾರು ಅಲ್ಲ, ನಟಿ ತಮನ್ನಾ ಭಾಟಿಯಾ. ಇತ್ತೀಚೆಗೆ ಸ್ವತಃ ಮಿಲ್ಕಿಬ್ಯೂಟಿ ತಮ್ಮ ಬಾಲ್ಯದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
"1989ರಿಂದ ಮೂಡ್ ಹಿಂಗೆ" ಎಂದು ಕ್ಯಾಪ್ಷನ್ ಕೊಟ್ಟು ತಮನ್ನಾ ಈ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಮಿಲ್ಕಿಬ್ಯೂಟಿ ಬಾಲ್ಯದ ಫೋಟೊಗಳಿಗೆ ಲೈಕ್ಸ್, ಕಾಮೆಂಟ್ಸ್ ಮೂಲಕ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ರಾಶಿ ಖನ್ನಾ, ವೇದಿಕಾ ಸೇರಿದಂತೆ ತಾರೆಯರು ಕಾಮೆಂಟ್ ಮಾಡಿದ್ದಾರೆ. ಆಗಲೂ ಬೊಂಬೆ ಈಗ ಕೂಡ ಬೊಂಬೆ ಎಂದು ಕೆಲವರು ಕೊಂಡಾಡಿದ್ದಾರೆ.
ತೆಲುಗಿನ '100% ಲವ್' ಚಿತ್ರದಿಂದ ತಮನ್ನಾ ಕ್ರೇಜ್ ಹೆಚ್ಚಾಗಿತ್ತು. ಮುಂದೆ ಬಿಡುವಿಲ್ಲದೇ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಬಣ್ಣ ಹಚ್ಚಿ ನಟಿಸುವುದಕ್ಕಿಂತ ಬಿಂದಾಸ್ ಸಾಂಗ್ಸ್‌ಗೆ ಹೆಜ್ಜೆ ಹಾಕುವುದರಲ್ಲಿ ಮಿಲ್ಕಿಬ್ಯೂಟಿ ಬ್ಯುಸಿಯಾಗಿಬಿಟ್ಟಿದ್ದಾರೆ. ಸದ್ಯ ಬಾಕ್ಸಾಫೀಸ್ ಶೇಕ್ ಮಾಡುತ್ತಿರುವ 'ಸ್ತ್ರೀ-2' ಚಿತ್ರದಲ್ಲೂ ಬಿಂದಾಸ್ ಬೆಡಗಿಯ ಸ್ಪೆಷಲ್ ಸಾಂಗ್ ಸದ್ದು ಮಾಡ್ತಿದೆ.
'ಸ್ತ್ರೀ-2' ಮಾತ್ರವಲ್ಲ 'ವೇದ', 'ಅರಣ್ಮನೆ-4' ಚಿತ್ರಗಳಲ್ಲೂ ಮಾದಕವಾಗಿ ಹೆಜ್ಜೆ ಹಾಕಿ ಹುಬ್ಬೇರಿಸಿದ್ದಾರೆ. ಕಳೆದ ವರ್ಷ 'ಜೈಲರ್' ಚಿತ್ರದಲ್ಲಿ 'ಕಾವಾಲಯ್ಯ' ಎಂದು ಮಿಲ್ಕಿಬ್ಯೂಟಿ ಕುಣಿದಿದ್ದನ್ನು ಪಡ್ಡೆಹುಡುಗರು ಇನ್ನು ಮರೆತ್ತಿಲ್ಲ. ಸದ್ಯ 'ಒದೆಲಾ-2' ಎನ್ನುವ ಸಿನಿಮಾದಲ್ಲಿ ಮುಂಬೈ ಬೆಡಗಿ ನಟಿಸುತ್ತಿದ್ದಾರೆ.
ಕನ್ನಡದ 'ಜಾಗ್ವಾರ್' ಹಾಗೂ 'ಕೆಜಿಎಫ್-1' ಸಿನಿಮಾಗಳಲ್ಲಿ ತಮನ್ನಾ ಸ್ಪೆಷಲ್ ಸಾಂಗ್‌ಗಳಿಗೆ ಹೆಜ್ಜೆ ಹಾಕಿದ್ದರು. ನಟ ವಿಜಯ್ ವರ್ಮಾ ಜೊತೆ ಆಕೆ ಡೇಟಿಂಗ್‌ನಲ್ಲಿ ಇದ್ದಾರೆ. ಮುಂದೆ ಇಬ್ಬರು ಮದುವೆ ಆಗಲು ಸಿದ್ಧತೆ ನಡೆಸಿದ್ದಾರೆ.


Click it and Unblock the Notifications











