ಈ ಫೋಟೋದಲ್ಲಿರುವ ಬಾಲಕಿ ಈಗ ವರ್ಲ್ಡ್ ಫೇಮಸ್ ನಟಿ
Recommended Video

ಯಶಸ್ಸಿನ ಉತ್ತುಂಗದಲ್ಲಿರುವ ನಟ-ನಟಿಯರು ತಾವು ಬಂದ ಹಾದಿಯನ್ನ ಯಾವತ್ತು ಮರೆಯುವುದಿಲ್ಲ. ತಮ್ಮ ಹಿಂದಿನ ನೆನಪುಗಳನ್ನ, ಬಾಲ್ಯದ ಮಧುರ ಕ್ಷಣಗಳನ್ನ ಒಂದಲ್ಲ ಒಂದು ರೀತಿಯಲ್ಲಿ ಹಿಡಿದಿಟ್ಟುಕೊಂಡಿರುತ್ತಾರೆ.
ಈಗ ಅಂತಹದ್ದೇ ಒಬ್ಬ ನಟಿಯ ಬಗ್ಗೆ ನಾವು ಹೇಳಲು ಹೊರಟ್ಟಿದ್ದೇವೆ. ಈ ಕೆಳಗೆ ನೀಡಿರುವ ಫೋಟೋದಲ್ಲಿ ಒಂದು ಒಬ್ಬರನ್ನ ಗುರುತಿಸಲಾಗಿದೆ. ಈ ಫೋಟೋದಲ್ಲಿರುವ ಆ ಬಾಲಕಿ ಈಗ ಜಗತ್ತಿನ ಖ್ಯಾತ ನಟಿ. ಫೋಟೋ ನೋಡಿ ಯಾರಿರಬಹುದು ಎಂದು ಗುರುತಿಸಲು ಪ್ರಯತ್ನ ಪಡಿ.
ಈ ಬಾಲಕಿ ಯಾರು ಎಂಬುದು ಗೊತ್ತಿಲ್ಲದವರು ಜಾಸ್ತಿ ಯೋಚನೆ ಮಾಡಬೇಡಿ. ಅದು ಕರ್ನಾಟಕ ಮೂಲದ ಬಾಲಿವುಡ್ ನ ಸೂಪರ್ ಸ್ಟಾರ್ ನಟಿ. ಅದು ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬಚ್ಚನ್.

ಐಶ್ವರ್ಯ ರೈ ಇತ್ತೀಚಿಗಷ್ಟೆ ಇನ್ಸ್ಟಾಗ್ರಾಮ್ ಗೆ ಎಂಟ್ರಿಕೊಟ್ಟಿದ್ದರು. ಹೀಗಾಗಿ, ತಮ್ಮ ಬಾಲ್ಯದ ಕೆಲವು ಫೋಟೋಗಳನ್ನ ಇಲ್ಲಿ ಹಂಚಿಕೊಂಡಿದ್ದಾರೆ.
ಎಲ್ ಕೆಜಿ ಓದುವ ಸಂದರ್ಭದಲ್ಲಿ ಐಶ್ವರ್ಯ ಹೇಗಿದ್ದರು ಮತ್ತು ಒಂದನೇ ತರಗತಿಯಲ್ಲಿ ಓದುವಾಗ ಹೇಗಿದ್ದರು ಎಂಬ ಫೋಟೋಗಳನ್ನ ಶೇರ್ ಮಾಡಿದ್ದಾರೆ.

ಸದ್ಯ, ಐಶ್ವರ್ಯ ರೈ ಮತ್ತು ಅನಿಲ್ ಕಪೂರ್ ಅಭಿನಯದ 'ಫೆನ್ನಿ ಖಾನ್' ಚಿತ್ರ ಶೂಟಿಂಗ್ ನಡೆಯುತ್ತಿದ್ದು, ಬಿಡುಗಡೆಯಾಗಬೇಕಿದೆ. ಅದಾದ ಬಳಿಕ ಅಭಿಷೇಕ್ ಬಚ್ಚನ್ ಜೊತೆಯಲ್ಲಿ ಒಂದು ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ.


Click it and Unblock the Notifications











