ಮದುವೆಗೆ ಬರುವ ಅತಿಥಿಗಳಿಗೆ ದೀಪಿಕಾ-ರಣ್ವೀರ್ ಕಡೆಯಿಂದ ಹೀಗೊಂದು ಮನವಿ.!
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ಆನಂದ್ ಅಹುಜಾ-ಸೋನಂ ಕಪೂರ್ ವಿವಾಹವಾದ ಬಳಿಕ ಇಡೀ ಬಾಲಿವುಡ್ ಇಂಡಸ್ಟ್ರಿ ರಣ್ವೀರ್ ಸಿಂಗ್-ದೀಪಿಕಾ ಪಡುಕೋಣೆ ಮದುವೆಯತ್ತ ಎದುರು ನೋಡುತ್ತಿದೆ.
ಈವರೆಗೂ ತಮ್ಮ ಪ್ರೀತಿ-ಪ್ರೇಮದ ಬಗ್ಗೆ ಆಗಲಿ, ಮದುವೆ ಬಗ್ಗೆ ಆಗಲಿ ನಟ ರಣ್ವೀರ್ ಸಿಂಗ್ ಹಾಗೂ ದೀಪಿಕಾ ತುಟಿ ಎರಡು ಮಾಡಿಲ್ಲ. ಆದರೂ, ಇವರಿಬ್ಬರ ಮದುವೆ ಬಗ್ಗೆ ಬಿಟೌನ್ ನಲ್ಲಿ ದಿನಕ್ಕೊಂದು ಸುದ್ದಿ ಆಗುತ್ತಿದೆ.
ವರದಿಗಳ ಪ್ರಕಾರ, ನವೆಂಬರ್ 20 ರಂದು ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ವಿವಾಹ ಮಹೋತ್ಸವ ನಡೆಯಲಿದೆ. ಇಟಲಿಯ Lake Como ದಲ್ಲಿ ಮದುವೆ ನೆರವೇರಲಿದ್ದು, ಕೇವಲ 30 ಮಂದಿ ಅತಿಥಿಗಳಿಗೆ ಮಾತ್ರ ಆಹ್ವಾನ ನೀಡಲಾಗಿದ್ಯಂತೆ.

ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಮಾತ್ರ ಮದುವೆ ಆಗಲು ರಣ್ವೀರ್-ದೀಪಿಕಾ ನಿರ್ಧರಿಸಿದ್ದಾರಂತೆ. ಹೀಗಾಗಿ, ಪತ್ರಿಕೆ ಹಾಗೂ ಮಾಧ್ಯಮ ಮಿತ್ರರಿಗೆ ಆಹ್ವಾನ ನೀಡಲಾಗಿಲ್ಲ. ಅಷ್ಟೇ ಅಲ್ಲ, ಮದುವೆಗೆ ಬರುವ ಅತಿಥಿಗಳಿಗೆ ದೀಪಿಕಾ ಹಾಗೂ ರಣ್ವೀರ್ ಸಿಂಗ್ ಒಂದು ಮನವಿ ಮಾಡಿಕೊಂಡಿದ್ದಾರಂತೆ.
ಅದೇನಪ್ಪಾ ಅಂದ್ರೆ, ಮದುವೆಗೆ ಬರುವಾಗ ಯಾವುದೇ ಕಾರಣಕ್ಕೂ ಅತಿಥಿಗಳು ಮೊಬೈಲ್ ಫೋನ್ ಗಳನ್ನ ತರುವಂತಿಲ್ಲ. ಮೊಬೈಲ್ ಫೋನ್ ಗಳಲ್ಲಿ ಮದುವೆಯ ವಿಡಿಯೋಗಳು ರೆಕಾರ್ಡ್ ಆಗಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ದೀಪಿಕಾ-ರಣ್ವೀರ್ ಗೆ ಇಷ್ಟ ಇಲ್ಲ. ಹೀಗಾಗಿ, ಮೊಬೈಲ್ ಫೋನ್ ಗಳನ್ನ ಬಿಟ್ಟು ಮದುವೆಗೆ ಹಾಜರ್ ಆಗುವಂತೆ ಅತಿಥಿಗಳ ಬಳಿ ಜೋಡಿ ಬೇಡಿಕೊಂಡಿದೆಯಂತೆ.
ಕೈಯಲ್ಲಿ ಫೋನ್ ಇಲ್ಲದೆ, ಹೊರಗೆ ಹೋಗದ ಈಗಿನ ಕಾಲದಲ್ಲಿ ದೀಪಿಕಾ-ರಣ್ವೀರ್ ಮದುವೆಗೆ ಅತಿಥಿಗಳು ಮೊಬೈಲ್ ಬಿಟ್ಟು ಹೋಗ್ತಾರಾ.? ಕಾದು ನೋಡಬೇಕು.


Click it and Unblock the Notifications











