For Quick Alerts
  ALLOW NOTIFICATIONS  
  For Daily Alerts

  'ಆರ್‌ಆರ್‌ಆರ್‌' ಅನ್ನು ಹಿಂದಿಕ್ಕಿದ 'ಚಲ್ಲೊ ಶೋ' ಸಿನಿಮಾ ಆಸ್ಕರ್‌ಗೆ ಆಯ್ಕೆಯಾಗಿದ್ದು ಹೇಗೆ..? ಏನಿದರ ವಿಶೇಷತೆ..?

  |

  95ನೇ ಆಸ್ಕರ್‌ ಪ್ರಶಸ್ತಿಗೆ ಭಾರತ ಚಿತ್ರರಂಗದಿಂದ ಯಾವ ಚಿತ್ರ ಆಯ್ಕೆಯಾಗಬಹುದು ಎನ್ನುವ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್‌' ಚಿತ್ರ ಸಿನಿಮಾ ರಂಗದ ಅತ್ಯುನ್ನತ ಗೌರವ ಆಸ್ಕರ್‌ಗೆ ಪ್ರವೇಶ ಪಡೆಯುವ ಬಹು ನಿರೀಕ್ಷೆಯಿತ್ತು. ಈ ಬಗ್ಗೆ ಭಾರಿ ಚರ್ಚೆಗಳು ಕೂಡ ನಡೆದಿದ್ದು, ಜೂ.ಎನ್‌ಟಿಆರ್‌ ಹಾಗೂ ರಾಮ್‌ ಚರಣ್‌ ತೇಜ್‌ ಅಭಿಮಾನಿಗಳು 'ಆರ್‌ಆರ್‌ಆರ್‌' ಆಸ್ಕರ್‌ಗೆ ಪ್ರವೇಶ ಪಡೆಯುವ ನಿರೀಕ್ಷೆಯಲ್ಲಿದ್ದರು. ಜೊತೆಗೆ ಈ ವರ್ಷ ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಸದ್ದು ಮಾಡಿದ್ದ 'ದಿ ಕಾಶ್ಮೀರಿ ಫೈಲ್ಸ್‌' ಚಿತ್ರ ಕೂಡ ಆಸ್ಕರ್‌ಗೆ ಪ್ರವೇಶ ಪಡೆಯಬಹುದಾದ ಚಿತ್ರಗಳ ರೇಸ್‌ನಲ್ಲಿತ್ತು.

  'ಆರ್‌ಆರ್‌ಆರ್‌' ಹಾಗೂ 'ದಿ ಕಾಶ್ಮೀರಿ ಫೈಲ್ಸ್‌' ಚಿತ್ರಗಳ ನಡುವೆ ತೀವ್ರ ಪೈಪೋಟಿ ನಡೆದಿದ್ದು, ಯಾವುದು ಆಸ್ಕರ್‌ಗೆ ಪ್ರವೇಶ ಪಡೆಯಬೇಕು ಎನ್ನುವುದರ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಕೂಡ ಭಾರಿ ಚರ್ಚೆ ನಡೆದಿತ್ತು. ಜೂ.ಎನ್‌ಟಿಆರ್‌ ಹಾಗೂ ರಾಮ್‌ ಚರಣ್‌ ತೇಜ್‌ ಅಭಿನಯದ 'ಆರ್‌ಆರ್‌ಆರ್‌' ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ 1150 ರಿಂದ 1200 ಕೋಟಿ ರೂ ಬಾಚಿಕೊಂಡಿತ್ತು. ಹೀಗಾಗಿ 'ಆರ್‌ಆರ್‌ಆರ್‌' ಆಸ್ಕರ್‌ಗೆ ನಾಮ ನಿರ್ದೇಶನಗೊಳ್ಳಬಹುದು ಎಂದು ಅನೇಕರು ಊಹಿಸಿದ್ದರು. ಆದರೆ ರಾಜಮೌಳಿ ಹಾಗೂ ವಿವೇಕ್‌ ಅಗ್ನಿಹೋತ್ರಿ ಸಿನಿಮಾಗಳನ್ನು ಹಿಂದಿಕ್ಕಿ ಸದ್ದಿಲ್ಲದೆ ಗುಜರಾತಿ ಚಿತ್ರ ಆಸ್ಕರ್‌ಗೆ ಪ್ರವೇಶ ಪಡೆದುಕೊಂಡಿದೆ. ಇದರಿಂದ ಕೇವಲ ತೆಲುಗು ಸಿನಿ ಪ್ರಿಯರಿಗಷ್ಟೇ ಅಲ್ಲದೆ ಭಾರತೀಯ ಚಿತ್ರರಂಗದ ಪ್ರೇಕ್ಷಕರಿಗೆ ಭಾರಿ ನಿರಾಸೆಯಾಗಿದೆ.

  'RRR' ಬದಲು ರೀಮೇಕ್ ಸಿನಿಮಾವನ್ನು ಆಸ್ಕರ್‌ಗೆ ಆರಿಸಿತೇ ಎಫ್‌ಎಫ್‌ಐ?'RRR' ಬದಲು ರೀಮೇಕ್ ಸಿನಿಮಾವನ್ನು ಆಸ್ಕರ್‌ಗೆ ಆರಿಸಿತೇ ಎಫ್‌ಎಫ್‌ಐ?

  ಈ ಬಾರಿ ಆಸ್ಕರ್‌ ಪ್ರಶಸ್ತಿಗೆ ಭಾರತ ಚಿತ್ರರಂಗದಿಂದ ಗುಜರಾತಿನ 'ಚಲ್ಲೊ ಶೋ' ಸಿನಿಮಾ ಅಧಿಕೃತವಾಗಿ ಪ್ರವೇಶ ಪಡೆದುಕೊಂಡಿದೆ. 'ಚಲೋ ಶೋ' ಸಿನಿಮಾ ಭಾರತದ ಪರವಾಗಿ ಆಸ್ಕರ್‌ಗೆ ನಾಮ ನಿರ್ದೇಶನಗೊಂಡಿದೆ ಎಂದು ಭಾರತೀಯ ಫಿಲ್ಮಂ ಫೆಡರೇಶನ್ ತಿಳಿಸಿದೆ. ಭಾರತದಲ್ಲಿ ಇನ್ನೂ ತೆರೆಕಾರಣದ 'ಚಲ್ಲೊ ಶೋ' ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಸಾವಿರಾರು ಕೋಟಿ ಗಳಿಸಿದ್ದ ಹಾಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದ 'ಆರ್‌ಆರ್‌ಆರ್‌' ಸಿನಿಮಾವನ್ನು ಹೇಗೆ ಹಿಂದಿಕ್ಕಿತ್ತು ಎನ್ನುವ ಕುತೂಹಲ ಎಲ್ಲರಲ್ಲಿದೆ.

  ಗುಜರಾತಿನ 'ಚಲ್ಲೊ ಶೋ' ಸಿನಿಮಾ ಭಾರತ ಹೊರತುಪಡಿಸಿ ವಿಶ್ವದಾದ್ಯಂತ ಒಟ್ಟು 30 ದೇಶಗಳಲ್ಲಿ ತೆರೆಕಂಡಿದ್ದು, ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಪಾನ್ ನಲಿನ್‌ ನಿರ್ದೇಶನದ 'ಚಲ್ಲೊ ಶೋ'ಸಿನಿಮಾ, ಗ್ರಾಮೀಣ ಪ್ರದೇಶದ ಒಂದು ಬಾಲಕ ಹಾಗೂ ಆತನ ಸ್ನೇಹಿತರ ಸಿನಿಮಾ ಪ್ರೀತಿಯೇ ಚಿತ್ರದ ಕಥಾ ವಸ್ತುವಾಗಿದ್ದು, ಆತನ ಸುತ್ತವೇ ಚಿತ್ರದ ಕಥೆ ಸುತ್ತಲಿದೆ. ಆಸ್ಕರ್‌ಗೆ ಆಯ್ಕೆಯಾಗಿರುವ ಈ ಚಿತ್ರ ಭಾರತದಲ್ಲೂ ಈಗ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದು, ಗುಜರಾತಿನ ಕೆಲ ಚಿತ್ರಮಂದಿರಗಳಲ್ಲಿ 'ಚಲ್ಲೊ ಶೋ' ಅಕ್ಟೋಬರ್‌ 14ರಂದು ತೆರೆ ಕಾಣಲಿದೆ ಎಂದು ವರದಿಯಾಗಿದೆ.

  ಗುಜರಾತಿ ಸಿನಿಮಾ 'ಚೆಲ್ಲೋ ಶೋ' ಭಾರತದಿಂದ ಅಧಿಕೃತ ಆಸ್ಕರ್ ಎಂಟ್ರಿ:RRR, ಕಾಶ್ಮೀರ್ ಫೈಲ್ಸ್ ಗತಿಯೇನು?ಗುಜರಾತಿ ಸಿನಿಮಾ 'ಚೆಲ್ಲೋ ಶೋ' ಭಾರತದಿಂದ ಅಧಿಕೃತ ಆಸ್ಕರ್ ಎಂಟ್ರಿ:RRR, ಕಾಶ್ಮೀರ್ ಫೈಲ್ಸ್ ಗತಿಯೇನು?

  'ಚಲ್ಲೊ ಶೋ' ಸಿನಿಮಾ ಈ ಹಿಂದೆ ಕೂಡ ಸದ್ದಿಲ್ಲದೆ ಅನೇಕ ಅಂತರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿದೆ. ಸ್ಪೇನ್‌ನಲ್ಲಿ ನಡೆದ 66 ನೇ ವಲ್ಲಾಡೋಲಿಡ್ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಸ್ಪೈಕ್ ಪ್ರಶಸ್ತಿ ಪಡೆದುಕೊಂಡಿದ್ದ 'ಚಲ್ಲೊ ಶೋ', ರಾಬರ್ಟ್ ಡಿ ನಿರೋ ಅವರ ಟ್ರಿಬೆಕಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸಹ ಪ್ರದರ್ಶನಗೊಂಡಿದೆ.

  ಗುಜರಾತಿ ಭಾಷೆಯಲ್ಲಿರುವ 'ಚಲ್ಲೊ ಶೋ' ಸಿನಿಮಾವನ್ನು ಪಾನ್ ನಲಿನ್ ನಿರ್ದೇಶಿಸಿದ್ದು, ರಿಚಾ ಮೀನಾ, ದೀಪೆನ್ ರಾವಲ್,

  ಈವರೆಗೆ ಆಸ್ಕರ್ ಪ್ರಶಸ್ತಿ ಪಡೆದ ಭಾರತೀಯರು ಯಾರ್ಯಾರು?ಈವರೆಗೆ ಆಸ್ಕರ್ ಪ್ರಶಸ್ತಿ ಪಡೆದ ಭಾರತೀಯರು ಯಾರ್ಯಾರು?

  ಭವ್ರಿ ರಾಬ್ರಿ, ಭವೇಶ್ ಶ್ರೀಮಾಲಿ ಮತ್ತು ಪರೇಶ್ ಮೆಹ್ತಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು 2023ರ ಆಸ್ಕರ್‌ ಚಿತ್ರಕ್ಕೆ ಆಯ್ಕೆ 'ಚಲ್ಲೋ ಶೋ' ಚಿತ್ರಕ್ಕೂ ಹಾಗೂ ಕರ್ನಾಟಕಕ್ಕೂ ನಂಟಿದೆ. ಕರ್ನಾಟಕದ ದಕ್ಷಿಣ ಕನ್ನಡ ಮೂಲದ ಶ್ರೇಯಸ್ ಬೆಳ್ತಂಗಡಿ ಹಾಗೂ ಪವನ್ ಭಟ್ 'ಚಲ್ಲೋ ಶೋ' ಸಿನಿಮಾದ ಸಂಕಲನ ಕೆಲಸ ಮಾಡಿದ್ದಾರೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ.

  English summary
  Gujarati film Chhello Show beats RRR and The Kashmir Files to become India's official entry to Oscars 2023. Know more about the movie.
  Thursday, September 22, 2022, 14:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X