twitter
    For Quick Alerts
    ALLOW NOTIFICATIONS  
    For Daily Alerts

    ಗುಜರಾತಿ ಸಿನಿಮಾ 'ಚೆಲ್ಲೋ ಶೋ' ಭಾರತದಿಂದ ಅಧಿಕೃತ ಆಸ್ಕರ್ ಎಂಟ್ರಿ:RRR, ಕಾಶ್ಮೀರ್ ಫೈಲ್ಸ್ ಗತಿಯೇನು?

    |

    ಗುಜರಾತಿ ಸಿನಿಮಾ 'ಚೆಲ್ಲೋ ಶೋ' ಭಾರತದಿಂದ ಅಧಿಕೃತವಾಗಿ ಆಸ್ಕರ್‌ಗೆ ಎಂಟ್ರಿ ಕೊಡುತ್ತಿರುವ ಸಿನಿಮಾ ಎಂದು ಅನೌನ್ಸ್ ಆಗಿದೆ. ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ 95ನೇ ಆಸ್ಕರ್ ಪ್ರಶಸ್ತಿ ಕಾಂಪಿಟೇಷನ್‌ಗೆ ಎಂಟ್ರಿ ಕೊಡುತ್ತಿರುವ ಸಿನಿಮಾ 'ಚೆಲ್ಲೋ ಶೋ' ಎಂದು ಘೋಷಿಸಿದೆ.

    ಇಂಗ್ಲಿಷ್‌ನಲ್ಲಿ ಈ ಸಿನಿಮಾವನ್ನು 'ಲಾಸ್ಟ್ ಫಿಲ್ಮ್ ಶೋ' ಎಂದು ಕರೆಯಲಾಗುತ್ತಿದ್ದು, ಪಾನ್ ನಲಿನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ದೇಶಾದ್ಯಂತ ಅಕ್ಟೋಬರ್ 14 ರಂದು ರಿಲೀಸ್ ಆಗಲಿದೆ.

    ಆಸ್ಕರ್‌ಗೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಕಳಿಸಿ: ಟ್ವಿಟರ್‌ನಲ್ಲಿ ಗಂಭೀರ ಚರ್ಚೆ!ಆಸ್ಕರ್‌ಗೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಕಳಿಸಿ: ಟ್ವಿಟರ್‌ನಲ್ಲಿ ಗಂಭೀರ ಚರ್ಚೆ!

    ರಿಯಲ್ ಎಕ್ಸ್‌ಪಿರೀಯನ್ಸ್ ಸಿನಿಮಾ

    'ಚೆಲ್ಲೋ ಶೋ' ಭಾರತದಿಂದ ಆಸ್ಕರ್‌ಗೆ ಹೊರಟ ಅಧಿಕೃತ ಸಿನಿಮಾ ಅಂತ ಅನೌನ್ಸ್ ಆಗುತ್ತಿದ್ದಂತೆ ಈ ಸಿನಿಮಾ ಬಗ್ಗೆ ಹುಡುಕುವವರ ಸಂಖ್ಯೆ ಹೆಚ್ಚಾಗಿದೆ. ಇದು ನಿರ್ದೇಶಕ ಪಾನ್ ನಲಿನ್ ಅವರ ಸ್ವಂತ ನೆನಪುಗಳನ್ನು ತೆರೆಮೇಲೆ ತರಲಾಗಿದೆ. ಗುಜರಾತಿನ ಗ್ರಾಮೀಣ ಪ್ರದೇಶದ ಮಗುವಿನ ಸಿನಿಮಾ ಮೇಲಿನ ಪ್ರೀತಿಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.

    Gujarati Movie Chhello Show Is Indias Official Entry For The 95th Oscar Awards

    ಸೌರಾಷ್ಟ್ರದ ಕುಗ್ರಾಮದಲ್ಲಿ ಈ ಸಿನಿಮಾದ ಕಥೆ ಸೆಟ್ಟೇರುತ್ತೆ. 9 ವರ್ಷದ ಹುಡುಗ ಜೀನದುದ್ದಕ್ಕೂ ಸಿನಿಮಾವನ್ನು ಪ್ರೀತಿ ಮಾಡುತ್ತಾನೆ. ಈ ಚಿಕ್ಕ ಹುಡುಗ ಪ್ರೊಜೆಕ್ಷನ್ ಭೂತ್‌ನಲ್ಲಿ ಸಿನಿಮಾಗಳನ್ನು ನೋಡುತ್ತಾ ಹೇಗೆ ಬೇಸಿಗೆ ಕಳೆಯುತ್ತಾನೆ ಎನ್ನುವುದೇ ಸಿನಿಮಾದ ಕಥೆ.

    'ಚೆಲ್ಲೋ ಶೋ'ನಲ್ಲಿರೋ ತಾರೆಯರು ಯಾರು?

    'ಚೆಲ್ಲೋ ಶೋ' ಸಿನಿಮಾದಲ್ಲಿ ಭಾವಿನ್ ರಾಬರಿ, ಭವೇಶ್ ಶ್ರೀಮಲಿ, ರಿಚಾ ಮೀನಾ, ದಿಪೇನ್ ರಾವಲ್ ಮತ್ತು ಪರೇಶ್ ಮೆಹ್ತಾ ಸೇರಿದಂತೆ ನಟಿಸಿದ್ದಾರೆ. ಇತ್ತೀಚೆಗೆ ಟ್ರಿಬೆಕಾ ಫಿಲ್ಮ್ ಫೇಸ್ಟಿವಲ್‌ನಲ್ಲಿ ಸಿನಿಮಾ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿದೆ.

    ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಈಗಾಗಲೇ 'ಚೆಲ್ಲೋ ಶೋ' ಪ್ರದರ್ಶನ ಕಂಡು ಹಲವು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದೆ. ಸ್ಪೇನ್‌ನಲ್ಲಿ ನಡೆದ 66ನೇ ವಲ್ಲಡೊಲಿಡ್ ಫಿಲ್ಮ್ ಫೆಸ್ಟಿವಲ್‌ ಗೋಲ್ಡನ್ ಸ್ಪೈಕ್ ಪ್ರಶಸ್ತಿಯನ್ನು ಗೆದ್ದಿದೆ.

    Gujarati Movie Chhello Show Is Indias Official Entry For The 95th Oscar Awards

    ಕಳೆದ ವರ್ಷ ತಮಿಳು ಸಿನಿಮಾ 'ಕೋಳಂಗಲ್' ಸಿನಿಮಾ ಆಸ್ಕರ್‌ಗೆ ಎಂಟ್ರಿ ಕೊಟ್ಟಿತ್ತು. ಈ ಸಿನಿಮಾವನ್ನು ವಿನೋದ್ ರಾಜ್ ಪಿಎಸ್ ನಿರ್ದೇಶನ ಮಾಡಿದ್ದರು. ಆದರೆ, ಈ ಸಿನಿಮಾ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ.

    ಟಾಪ್ 5 ಪಟ್ಟಿಯಲ್ಲಿ ಕಂಡ ಸಿನಿಮಾಗಳಿವು

    ಕಳೆದ 21 ವರ್ಷಗಳಿಂದ ಭಾರತದ ಯಾವುದೇ ಸಿನಿಮಾ ಟಾಪ್ 5 ಲಿಸ್ಟ್ ಸೇರಿರಲಿಲ್ಲ. 2001ರಲ್ಲಿ ತೆರೆಕಂಡಿದ್ದ ಆಮಿರ್ ಖಾನ್ ಸಿನಿಮಾ 'ಲಗಾನ್' ಟಾಪ್ 5 ಲಿಸ್ಟ್ ಸೇರಿದ್ದೇ ಕೊನೆ. ಅದು ಬಿಟ್ಟರೆ, 1958ರಲ್ಲಿ ತೆರೆಕಂಡಿದ್ದ ಮದರ್ ಇಂಡಿಯಾ ಹಾಗೂ 1989ರ 'ಸಲಾಮ್ ಬಾಂಬೆ' ಸಿನಿಮಾ ಟಾಪ್ 5 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದವು.

    95ನೇ ಆಸ್ಕರ್ ಪ್ರಶಸ್ತಿ ಸಮಾರಂಭ ಮಾರ್ಚ್ 12. 2023ರಂದು ಅಮೆರಿಕದ ಲಾಸ್ ಎಂಜಲೀಸ್‌ನಲ್ಲಿ ನಡೆಯಲಿದೆ. ಈ ಬಾರಿಯಾದರೂ ಭಾರತದ ಸಿನಿಮಾಗೆ ಆಸ್ಕರ್ ಬರುತ್ತಾ ಅನ್ನೋ ಕುತೂಹಲವಿದೆ. ಈ ಮೂಲಕ ಆಸ್ಕರ್ ಪ್ರವೇಶ ಮಾಡಬಹುದಾದ ಭಾರತದ ನೆಚ್ಚಿನ ಸಿನಿಮಾಗಳ ಪಟ್ಟಿಯಲ್ಲಿದ್ದ RRR ಹಾಗೂ 'ದಿ ಕಾಶ್ಮೀರ್ ಫೈಲ್ಸ್' ಅನ್ನು ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಪರಿಗಣನೆಗೆ ತೆಗೆದುಕೊಂಡಿಲ್ಲ.

    English summary
    Gujarati Movie Chhello Show Is India's Official Entry For The 95th Oscar Awards, Know More.
    Wednesday, September 21, 2022, 8:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X