ವೈರಲ್ ವಿಡಿಯೋ : 'ಮಹಾವತಾರ್ ನರಸಿಂಹ' ಶೋ ವೇಳೆ ಸೀಲಿಂಗ್ ಕುಸಿತ, ಬೆಚ್ಚಿ ಬಿದ್ದ ಪ್ರೇಕ್ಷಕರು ; ಮೂವರಿಗೆ ಗಾಯ

ಚಿತ್ರಮಂದಿರದ ಬಾಗಿಲುಗಳು ಒಂದೊಂದಾಗಿಯೇ ಮುಚ್ಚುತ್ತಿವೆ. ಸ್ನೇಹಿತರ ಜೊತೆ ಅಥವಾ ಮನೆ ಮಂದಿಯ ಜೊತೆ ಚಿತ್ರವನ್ನು ನೋಡಲು ಇರುವ ಕೆಲ ಚಿತ್ರಮಂದಿರಕ್ಕೆ ಹೋದರೆ ಆ ಚಿತ್ರಮಂದಿರಗಳಲ್ಲಿ ಶೇಕಡಾ 10-20% ಚಿತ್ರಮಂದಿರಗಳು ಅವ್ಯವಸ್ಥೆಯ ಆಗರವಾಗಿವೆ. ಅವಸಾನದ ಅಂಚಿಗೆ ಶಿಥಿಲಾವಸ್ಥೆಗೆ ತಲುಪಿವೆ.ಇನ್ನು ಮಲ್ಟಿಪ್ಲೆಕ್ಸ್‌ನಲ್ಲಿ ಚಿತ್ರ ನೋಡಲು ಹೋದರೆ ಜೇಬಿಗೆ ಕತ್ತರಿ ಬೀಳುವುದು ಪಕ್ಕಾ. ಆದರೂ ಕೂಡ ಬೇರೆ ದಾರಿಯಿಲ್ಲದೇ ಮಲ್ಟಿಪ್ಲೆಕ್ಸ್‌ನಲ್ಲಿಯೇ ಚಿತ್ರ ನೋಡುವ ಅನಿವಾರ್ಯತೆ ಎದುರಾಗಿದೆ.

ಆದರೆ ಈಗೀಗ ಈ ಮಲ್ಟಿಪ್ಲೆಕ್ಸ್‌ಗಳು ಕೂಡ ಸುರಕ್ಷಿತವಲ್ಲ ಎಂಬಂತಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ''ಮಹಾವತಾರ್ ನರಸಿಂಹ'' ಚಿತ್ರವನ್ನು ನೋಡುವ ಸಮಯದಲ್ಲಿ ಸೀಲಿಂಗ್‌ನ ಒಂದು ಭಾಗ ಏಕಾಏಕಿ ಕುಸಿದು ಬಿದ್ದಿದೆ.

Guwahati Mahavatar Narsimha Show Ends in Chaos as Ceiling Collapses Sparking Safety Fears

ಅಸ್ಸಾಂನ ಗುವಾಹಟಿಯಲ್ಲಿರುವ ''ಪಿವಿಆರ್‌''ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಸೀಲಿಂಗ್‌ನ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಮಕ್ಕಳು ಸೇರಿ ಮೂವರು ಗಾಯಗೊಂಡಿದ್ದಾರೆ. ಸೀಲಿಂಗ್ ಕುಸಿತದಿಂದ ಪ್ರೇಕ್ಷಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಚಿತ್ರ ಪ್ರದರ್ಶನವನ್ನು ನಿಲ್ಲಿಸಲಾಗಿದೆ. ಸುರಕ್ಷಿತವಾಗಿ ಪ್ರೇಕ್ಷಕರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ.

ಛಾವಣಿ ಕುಸಿದು ಬೀಳುವುದಕ್ಕೆ ಕಾರಣವೇನು ಎಂದು ಪತ್ತೆ ಹಚ್ಚಲು ತನಿಖೆಯನ್ನು ಪ್ರಾರಂಭ ಮಾಡಲಾಗಿದ್ದು ''ಪಿವಿಆರ್‌''ನ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆ ಎದ್ದಿದೆ. ಮಲ್ಟಿಪ್ಲೆಕ್ಸ್‌ನಲ್ಲಿ ಕೂಡ ಚಿತ್ರ ನೋಡಿದರೂ ಸುರಕ್ಷತೆ ಇಲ್ಲದಂತಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು ವ್ಯಾಪಕ ಚರ್ಚೆಗೆ ಕೂಡ ಕಾರಣವಾಗಿದೆ. ಈ ಘಟನೆಯ ಕುರಿತು ಪಿವಿಆರ್‌ ಸಿನಿಮಾಸ್ ಆಗಲಿ ಅಥವಾ ಮಾಲ್‌ನ ಆಡಳಿತ ಮಂಡಳಿಯಾಗಲಿ ಯಾವುದೇ ಅಧಿಕೃತವಾದ ಹೇಳಿಕೆಯನ್ನು ಇನ್ನು ನೀಡಿಲ್ಲ. ಇದು ಕೂಡ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನುಳಿದಂತೆ ''ಅಶ್ವಿನ್ ಕುಮಾರ್'' ನಿರ್ದೇಶನದ ''ಮಹಾವತಾರ್ ನರಸಿಂಹ'' ಚಿತ್ರ ಬಾಕ್ಸಾಫೀಸ್‌ನಲ್ಲಿ ಕೋಟ್ಯಂತರ ಹಣವನ್ನು ದೋಚುತ್ತಿದೆ. ಕನ್ನಡ ನಿರ್ಮಾಣ ಸಂಸ್ಥೆ ಹೊಂಬಾಳೆಯ ಸಹ ನಿರ್ಮಾಣದಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲಿ ಡಿಮ್ಯಾಂಡ್ ಇದ್ದು ಹಿಂದಿ ಚಿತ್ರಗಳನ್ನೆಲ್ಲ ಕಡೆಗಣಿಸಿ ಅಲ್ಲಿನ ಪ್ರೇಕ್ಷಕರು ಈ ಚಿತ್ರವನ್ನು ನೋಡುತ್ತಿದ್ದಾರೆ. ಬೆಳ್ಳಿ ತೆರೆಯಲ್ಲಿ ''ನರಸಿಂಹ''ನ ದರ್ಶನ ಮಾಡಿ ಪುನೀತರಾಗುತ್ತಿದ್ದಾರೆ.

More from Filmibeat

English summary
Chaos erupts at a Guwahati Narsimha show after a ceiling suddenly collapses, injuring multiple people. Read more about the terrifying incident and the growing calls for stricter venue safety checks.
Read more about: theatre multiplex
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X