For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಕಾರಣಕ್ಕೆ ರಾಣಾ ದಗ್ಗುಬಾಟಿ ಸಿನಿಮಾ ಬಿಡುಗಡೆ ಮುಂದೂಡಿಕೆ

  |

  ಕೊರೊನಾ ಎರಡನೇ ಅಲೆ ಮತ್ತೆ ಆತಂಕ ತಂದಿದೆ. ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳು ಭಾಗಷಃ ಲಾಕ್‌ಡೌನ್ ಘೋಷಣೆ ಮಾಡಿವೆ. ಚಿತ್ರಮಂದಿರಗಳು, ಮಾಲ್‌ಗಳು ಇನ್ನಿತರೆ ಸಾರ್ವಜನಿಕರು ಸೇರುವ ಸ್ಥಳಗಳ ಮೇಳೆ ನಿರ್ಭಂದ ವಿಧಿಸಿವೆ.

  ಕೊರೊನಾ ಮತ್ತೆ ಹೆಚ್ಚಾಗುತ್ತಿರುವ ಕಾರಣ ಈಗಾಗಲೇ ಬಿಡುಗಡೆ ದಿನಾಂಕ ನಿಗದಿ ಆಗಿದ್ದ ರಾಣಾ ದಗ್ಗುಬಾಟಿ ನಟನೆಯ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ.

  ರಾಣಾ ದಗ್ಗುಬಾಟಿ ನಟನೆಯ 'ಹಾಥಿ ಮೇರೆ ಸಾಥಿ' ಸಿನಿಮಾವು ಮಾರ್ಚ್ 26 ರಂದು ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಉತ್ತರ ಭಾತದ ಕೆಲವು ರಾಜ್ಯಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗಿ ಭಾಗಷಃ ಲಾಕ್‌ಡೌನ್‌ ಘೋಷಣೆ ಆದ ಕಾರಣ ಸಿನಿಮಾದ ಹಿಂದಿ ಅವತರಣಿಕೆ 'ಹಾಥಿ ಮೇರೆ ಸಾಥಿ' ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ.

  ಈ ಬಗ್ಗೆ ಎರೋಸ್ ಇಂಟರ್ನ್ಯಾಷನಲ್ ಸಂಸ್ಥೆಯು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, 'ಹಾಥಿ ಮೇರೆ ಸಾಥಿ' ಸಿನಿಮಾದ ತೆಲುಗು ಹಾಗೂ ತಮಿಳು ಅವತರಣಿಕೆಗಳಾದ 'ಅರಣ್ಯ', 'ಕಾಡನ್' ಸಿನಿಮಾಗಳು ನಿಗದಿಯಂತೆ ಮಾರ್ಚ್ 26 ರಂದೇ ಬಿಡುಗಡೆ ಆಗಲಿವೆ. ಆದರೆ ಹಿಂದಿ ಸಿನಿಮಾ ಬಿಡುಗಡೆಗೆ ಮಾತ್ರ ಮುಂದೂಡಲಾಗಿದೆ.

  'ಹಾಥಿ ಮೇರೆ ಸಾಥಿ' ಸಿನಿಮಾವು ಆನೆಗಳನ್ನು ಪ್ರಧಾನವಾಗಿಟ್ಟುಕೊಂಡು ಮಾನವ-ಅರಣ್ಯ ಸಂಬಂಧ. ಮಾನವನಿಂದಾಗುತ್ತಿರುವ ಅರಣ್ಯ ನಾಶ. ಅರಣ್ಯದ ಅವಶ್ಯಕತೆ, ಕಾಡು ಪ್ರಾಣಿಗಳ ಹಕ್ಕುಗಳು ಇನ್ನಿತರೆ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಿದೆ.

  Asha Bhat ರಾಬರ್ಟ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು ಹೇಗೆ?? | Filmibeat Kannada

  ಸಿನಿಮಾದಲ್ಲಿ ರಾಣಾ ದಗ್ಗುಬಾಟಿ, ಶ್ರಿಯಾ ಪಿಲ್ಗಾಂಕರ್, ಪುಲ್ಕಿತ್ ಸಮರ್ಥ್, ವಿಷ್ಣು ವಿಶಾಲ್, ಪರಸ್ ಅರೋರ ಮುಂತಾದವರು ನಟಿಸಿದ್ದಾರೆ. ಸಿನಿಮಾವನ್ನು ಪ್ರಭು ಸೋಲೊಮನ್ ನಿರ್ದೇಶನ ಮಾಡಿದ್ದರೆ.

  English summary
  Rana Daggubati starer 'Haathi Mere Saathi' movie release postponed due to COVID 19. But same movie's Telugu and Tamil version will release on March 26.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X