Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
#MeToo: ಅಮಿತಾಬ್ ಬಚ್ಚನ್ ಟಾರ್ಗೆಟ್ ಮಾಡಿದ ಕೇಶ ವಿನ್ಯಾಸಕಿ ಸ್ವಪ್ನಾ
Recommended Video
#MeToo ಅಭಿಯಾನದಲ್ಲಿ ಬಾಲಿವುಡ್ ದಿಗ್ಗಜ ನಟ, ನಿರ್ದೇಶಕ, ನಿರ್ಮಾಪಕರ ಹೆಸರುಗಳು ಸಿಕ್ಕಿಹಾಕಿಕೊಂಡಿದೆ. ನಾನಾ ಪಾಟೇಕರ್, ವಿವೇಕ್ ಅಗ್ನಿಹೋತ್ರಿ, ವಿಕಾಸ್ ಭಾಲ್, ಸಾಜಿದ್ ಖಾನ್, ಅಲೋಕ್ ನಾಥ್, ಸುಭಾಷ್ ಘಾಯ್ ಅಂತಹ ಖ್ಯಾತನಾಮರ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ.
ಈಗ ಬಿಟೌನ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹೆಸರು ಮೀಟೂ ಅಭಿಯಾನದಲ್ಲಿ ಸಿಲುಕಿಕೊಂಡಿದೆ. ಹಿಂದಿ ಚಿತ್ರರಂಗದಲ್ಲಿ ಸರಳ ವ್ಯಕ್ತಿತ್ವದಿಂದಲೇ ಗುರುತಿಸಿಕೊಂಡಿರುವ ಲೀವಿಂಗ್ ಲೆಂಜೆಂಡ್ ಬಿಗ್ ಬಿ ಹೆಸರು ಈಗ ಟಾರ್ಗೆಟ್ ಆಗಿದೆ.
ಸಾಜಿದ್ ಖಾನ್ ವಿರುದ್ಧ ಆರೋಪಗಳನ್ನು ಕೇಳಿ ಸಹೋದರಿ ಫರಾ ಖಾನ್ ಹೃದಯ ಛಿದ್ರ.!
ಹೌದು, ಇತ್ತೀಚಿಗಷ್ಟೆ ಅಮಿತಾಬ್ ಬಚ್ಚನ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆ ವೇಳೆ ಮಾತನಾಡಿದ್ದ ಬಿಗ್ ಬಿ ಮಹಿಳೆಯ ಪರ ಬೆಂಬಲ ಸೂಚಿಸಿದ್ದರು. ಆದ್ರೀಗ, ಬಾಲಿವುಡ್ ಖ್ಯಾತ ಹೇರ್ ಸ್ಟೈಲಿಸ್ಟ್ ಸ್ವಪ್ನಾ ಭವಾನಿ ಅಮಿತಾಬ್ ಹೆಸರನ್ನ ಪ್ರಸ್ತಾಪಿಸಿ ಅಚ್ಚರಿ ನೀಡಿದ್ದಾರೆ. ಅಷ್ಟಕ್ಕೂ, ಅಮಿತಾಬ್ ಹೆಸರು ಯಾಕೆ ಬಂತು.? ಬಚ್ಚನ್ ಮೇಲೆ ಬಂದಿರುವ ಆರೋಪವೇನು.? ಮುಂದೆ ಓದಿ......
ಬಚ್ಚನ್ ಮುಖವಾಡ ಕಳಚಿ ಬೀಳಲಿದೆಯಂತೆ
ಬಾಲಿವುಡ್ ಇಂಡಸ್ಟ್ರಿಯ ಸೆಲೆಬ್ರಿಟಿ ಕೇಶವಿನ್ಯಾಸಕಿ ಸ್ವಪ್ನಾ ಭವಾನಿ ಮೀಟೂ ಅಭಿಯಾನಕ್ಕೆ ಕುರಿತಂತೆ ಬಿಗ್ ಬಿ ಅಮಿತಾಬ್ ಬಚ್ಚನ್ ಬಗ್ಗೆ ಆಘಾತಕಾರಿ ವಿಷ್ಯ ಪ್ರಸ್ತಾಪಿಸಿದ್ದಾರೆ. ಸರ್ ಬಚ್ಚನ್ ಅವರ ಕರಾಳಮುಖ ಸದ್ಯದಲ್ಲೇ ಬಯಲಾಗಿದೆ ಕಾದು ನೋಡಿ ಎಂದು ಸುಳಿವು ನೀಡಿದ್ದಾರೆ. ಅಷ್ಟೇ ಅಲ್ಲದೇ ಅಮಿತಾಬ್ ಗೆ ನೇರವಾಗಿ ಟಾಂಗ್ ಕೊಟ್ಟಿದ್ದಾರೆ.
ಆಡಿಷನ್ ಅಂತ ಮನೆಗೆ ಕರೆದು ನಟಿಗೆ ಬಟ್ಟೆ ಕಳಚಲು ಹೇಳಿದ್ನಂತೆ ಸಾಜಿದ್ ಖಾನ್.!
|
ಕಾಯಿತ್ತೀರಿ ಬಚ್ಚನ್ ಸರ್
''ನಿಮ್ಮ ಪಿಂಕ್ ಸಿನಿಮಾ ಬಿಡುಗಡೆಯಾಗಿ ಹೋಗಿದೆ. ನೀವೊಬ್ಬ ಒಳ್ಳೆಯ ವ್ಯಕ್ತಿ ಎನಿಸಿಕೊಂಡಿದ್ದು, ಸದ್ಯದಲ್ಲೇ ಆ ಇಮೇಜ್ ಕೂಡ ಹೋಗಲಿದೆ. ನಿಮ್ಮ ಬಗೆಗಿನ ಸತ್ಯ ಶೀಘ್ರದಲ್ಲೇ ಹೊರಬರಲಿದೆ. ಆಗ ನೀವು ನಿಮ್ಮ ಉಗುರು ಕಚ್ಚಿಕೊಳ್ಳುತ್ತೀರಿ, ಯಾಕೆಂದರೆ ಕಚ್ಚಲು ಉಗುರು ಸಾಕಾಗುವುದಿಲ್ಲ'' ಎಂದು ಟ್ವೀಟ್ ಮಾಡಿದ್ದಾರೆ.
ನಿರ್ದೇಶಕ ಸಾಜಿದ್ ಖಾನ್ 'ಕಾಮಪುರಾಣ' ಬಿಚ್ಚಿಟ್ಟ ನಟಿ ಮತ್ತು ಪತ್ರಕರ್ತೆ
|
ಬಿಗ್ ಬಿ ಕೂಡ ಕಿರುಕುಳ ನೀಡಿದ್ದಾರಂತೆ.!
ಇನ್ನು ಬಚ್ಚನ್ ಬಗ್ಗೆ ಆರೋಪ ಮಾಡಿದ್ದಕ್ಕೆ ಅಭಿಮಾನಿಗಳು ಕಿಡಿಕಾರಿದರು. ನೀವು ಪ್ರಚಾರಕ್ಕಾಗಿ ಹೀಗೆ ಆರೋಪ ಮಾಡ್ತಿದ್ದಾರೆ ಎಂದು ಕಾಮೆಂಟ್ ಮಾಡಿದರು. ಇದಕ್ಕೆ ಪ್ರತಿಕ್ರಯಿಸಿದ ಸ್ವಪ್ನಾ ''ಅಮಿತಾಬ್ ಬಚ್ಚನ್ ಅವರ ಲೈಂಗಿಕ ದೌರ್ಜನ್ಯದ ಕತೆಗಳನ್ನು ನಾನು ಕೇಳಿದ್ದೇನೆ. ಆ ಮಹಿಳೆಯರು ಅದನ್ನೆಲ್ಲ #MeToo ಚಳವಳಿಯಡಿ ಹೇಳುತ್ತಾರೆ ಎಂಬ ನಂಬಿಕೆಯಿದೆ. ಅವರ ಕಪಟತನ ಹೊರಬರಲಿದೆ'' ಎಂದು ಇನ್ನೊಂದು ಟ್ವೀಟ್ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಕಡೆಗೂ ಕಠಿಣ ನಿರ್ಧಾರ ಕೈಗೊಂಡ ಅಕ್ಷಯ್.! ಬಾಲಿವುಡ್ ನಲ್ಲೀಗ ಒಳ್ಳೆ ಬೆಳವಣಿಗೆ.!
#MeToo ಬಗ್ಗೆ ಅಮಿತಾಬ್ ಹೇಳಿದ್ದೇನು.?
ನಾನಾ ಪಾಟೇಕರ್ ಸೇರಿ 10 ಜನರ ವಿರುದ್ಧ ದೂರು ನೀಡಿದ ತನುಶ್ರೀ ದತ್ತಾ
ಬಚ್ಚನ್ ಹೆಸರು ಹೇಳ್ತಾರಾ.?
#MeToo ಅಭಿಯಾನದಲ್ಲಿ ಘಟಾನುಘಟಿ ವ್ಯಕ್ತಿಗಳ ಹೆಸರು ಬಯಲಾಗಿದೆ. ಆದ್ರೆ, ಯಾವುದಕ್ಕೂ ಸಾಕ್ಷಿ ಇಲ್ಲ. ಬಟ್, ನಾನಾ ಪಾಟೇಕರ್ ವಿರುದ್ಧದ ಆರೋಪಕ್ಕೆ ಮಾತ್ರ ತನುಶ್ರೀ ದತ್ತಾ ದೂರು ನೀಡಿದ್ದಾರೆ. ಇನ್ನುಳಿದಂತೆ ಎಲ್ಲವೂ ಆರೋಪವಾಗಿದೆ. ಈಗ ಅಮಿತಾಬ್ ಬಚ್ಚನ್ ಅಂತಹ ನಟನ ಮೇಲೆ ಆರೋಪ ಬಂದ್ರೆ ನಿಜಕ್ಕೂ ಈ ಅಭಿಯಾನದ ಸ್ವರೂಪವೇ ಬದಲಾಗಬಹುದು. ಮತ್ತಷ್ಟು ದೊಡ್ಡ ಚರ್ಚೆಯಾಗಬಹುದು. ಆದ್ರೆ, ಬಿಗ್ ಬಿ ಹೆಸರನ್ನ ಯಾರ್ ಹೇಳ್ತಾರೆ.? ಗೊತ್ತಿಲ್ಲ.