ವೆಬ್ ಸಿರೀಸ್ ಆಗಿ ಬಿಡುಗಡೆಯಾಲಿದೆ ಹನ್ಸಿಕಾ ಮೊಟ್ವಾನಿ ವಿವಾಹ!

ಪುನೀತ್ ರಾಜ್‌ಕುಮಾರ್ ನಟನೆಯ ಬಿಂದಾಸ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಹನ್ಸಿಕಾ ಮೊಟ್ವಾನಿ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ. ಹೀಗೆ ಕಾಲಿವುಡ್ ಹಾಗೂ ಟಾಲಿವುಡ್ ನಟಿ ಎಂದೇ ಗುರುತಿಸಿಕೊಂಡ ಹನ್ಸಿಕಾ ಮೊಟ್ವಾನಿ ಕಳೆದ ವರ್ಷ ತನ್ನ ಗೆಳೆಯ ಸೊಹೈಲ್ ಕಥುರಿಯಾ ಎಂಬುವವರನ್ನು ವಿವಾಹವಾಗುವ ಮೂಲಕ ಸುದ್ದಿಗೀಡಾಗಿದ್ದರು.

ತನ್ನ ಆಪ್ತ ಗೆಳತಿಯ ಮಾಜಿ ಪತಿಯನ್ನೇ ವರಿಸಿದ ಹನ್ಸಿಕಾ ಮೊಟ್ವಾನಿ ಚರ್ಚೆಗೂ ಒಳಗಾಗಿದ್ದರು. ಇನ್ನು ವೃತ್ತಿಯಲ್ಲಿ ಉದ್ಯಮಿಯಾಗಿರುವ ಸೊಹೈಲ್ ಕಥುರಿಯಾ ಹನ್ಸಿಕಾ ಮೊಟ್ವಾನಿ ಒಡೆತನದ ಉದ್ಯಮದಲ್ಲಿ ಪಾಲುದಾರನೂ ಸಹ ಆಗಿದ್ದರು. ಹೀಗೆ ಬಹುದಿನಗಳಿಂದ ಸ್ನೇಹಿತರಾಗಿದ್ದ ಈ ಜೋಡಿ ಪ್ರೀತಿಗೆ ಬಿದ್ದಿತ್ತು. ಬಳಿಕ ವೈವಾಹಿಕ ಜೀವನಕ್ಕೂ ಸಹ ಕಾಲಿಟ್ಟಿತು.

Hansika marriage web series Hansikas love shadi drama releasing on Feb 10

ಹೀಗೆ ವಿಭಿನ್ನ ಲವ್ ಸ್ಟೋರಿಯನ್ನು ಹೊಂದಿದ್ದ ಈ ಜೋಡಿ ಕಳೆದ ಡಿಸೆಂಬರ್‌ನಲ್ಲಿ ವಿವಾಹವಾಗಿತ್ತು. ಈ ಜೋಡಿಯ ವಿವಾಹದ ವಿಡಿಯೊವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದೂ ಸಹ ಸುದ್ದಿಯಾಗಿತ್ತು. ಆದರೆ ನಂತರದ ದಿನಗಳಲ್ಲಿ ಈ ಕುರಿತ ಹೆಚ್ಚೇನೂ ಮಾಹಿತಿ ಹೊರಬಿದ್ದಿರಲಿಲ್ಲ. ಇದೀಗ ಈ ಕುರಿತು ದೊಡ್ಡ ಸುದ್ದಿಯೇ ಹೊರಬಿದ್ದಿದ್ದು, ಹನ್ಸಿಕಾ ಹಾಗೂ ಸೊಹೈಲ್ ವಿವಾಹವನ್ನು ವೆಬ್ ಸರಣಿಯಾಗಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಇದಕ್ಕೆ ಮುಂಚಿತವಾಗಿ ಇದರ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಈ ಟೀಸರ್‌ನಲ್ಲಿ ಮದುವೆಗೂ ಮುಂಚೆ ಏನೆಲ್ಲಾ ಸನ್ನಿವೇಶಗಳು ಎದುರಾದವು, ಮದುವೆಯನ್ನು ಯಾವ ರೀತಿ ನಿಶ್ಚಯಿಸಲಾಯಿತು ಎಂಬುದನ್ನು ತೋರಿಸಲಾಗಿದೆ. ಸದ್ಯ ಈ ಟೀಸರ್ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೆಲವರು ಇದೊಂದು ಒಳ್ಳೆಯ ಪ್ರಯತ್ನ ಎಂದಿದ್ದರೆ, ಇನ್ನೂ ಕೆಲವರು ಇದು ಸತ್ಯಕ್ಕೆ ದೂರವಾದಂತಿದೆ, ಮದುವೆಯಲ್ಲೂ ನಟನೆ ಯಾಕೆ ಎಂದಿದ್ದಾರೆ. ಇನ್ನು ಹನ್ಸಿಕಾ ಹಾಗೂ ಸೊಹೈಲ್ ಮದುವೆಯ ವೆಬ್ ಸರಣಿಗೆ 'ಹನ್ಸಿಕಾಸ್ ಲವ್ ಶಾದಿ ಡ್ರಾಮಾ' ಎಂದು ಶೀರ್ಷಿಕೆಯನ್ನು ಇಡಲಾಗಿದ್ದು, ಫೆಬ್ರವರಿ 10ರಿಂದ ಹಾಟ್‌ಸ್ಟಾರ್‌ನಲ್ಲಿ ಇದು ಸ್ಟ್ರೀಮ್ ಆಗಲಿದೆ.

More from Filmibeat

English summary
Hansika marriage web series 'Hansika's love shadi drama' releasing on Feb 10. Read on
Read more about: actress ನಟಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X