ಹನ್ಸಿಕಾ ಬೇಗ ಮೈಕೈ ತುಂಬಿಕೊಂಡು ಬೆಳೆಯಲು ತಾಯಿ ಇಂಜೆಕ್ಷನ್ ಕೊಟ್ಟಿದ್ರಾ? ಕೊನೆಗೂ ಮೌನ ಮುರಿದ ತಾಯಿ-ಮಗಳು

By ಫಿಲ್ಮಿಬೀಟ್ ಡೆಸ್ಕ್

ದಶಕದ ಹಿಂದೆ ಹೀಗೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಬಾಲ ನಟಿಯಾಗಿ ಚಿತ್ರರಂಗ ಪ್ರವೇಶಿಸಿ ಹನ್ಸಿಕಾ ಮೊಟ್ವಾನಿ ಬಹಳ ಬೇಗ ನಾಯಕಿಯಾಗಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಇದೇ ಸಮಯದಲ್ಲಿ ಪಂಜಾಬಿ ಬೆಡಗಿ ಮೈಕೈ ತುಂಬಿಕೊಂಡು ಸುಂದರವಾಗಿ ಕಾಣಲು ಸ್ವತಃ ತಾಯಿಯೇ ಹಾರ್ಮೋನ್ ಇಂಜೆಕ್ಷನ್ ಕೊಟ್ಟಿದ್ದರು ಎಂದು ಗುಲ್ಲಾಗಿತ್ತು.

Hansika Motwani and her mother breaks silence on allegations of taking hormonal injections

ತೆಲುಗಿನ 'ದೇಶಮುದುರು' ಸಿನಿಮಾ ಮೂಲಕ ಹನ್ಸಿಕಾ ನಾಯಕಿಯಾಗಿ ಚಿತ್ರರಂಗಕ್ಕೆ ಬಂದರು. ತಮ್ಮ ಸಪೂರ ದೇಹ ಮಾದಕ ಮೈಮಾಟದಿಂದ ಪಡ್ಡೆ ಹುಡುಗರ ನಿದ್ದೆ ಕದ್ದರು. ಹಾಗಾಗಿ ಹನ್ಸಿಕಾ ಸೌಂದರ್ಯ ಹೆಚ್ಚಿಸಿಕೊಳ್ಳಲು ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿ ಹಬ್ಬಿಸಿದ್ದರು. ಹನ್ಸಿಕಾ ಮೊಟ್ವಾನಿ ತಾಯಿ ಮೋನಾ ಮೊಟ್ವಾನಿ ವೃತ್ತಿಯಲ್ಲಿ ವೈದ್ಯರು. ಹಾಗಾಗಿ ಇಂತಾದೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಚರ್ಚೆ ಹುಟ್ಟಾಕಿತ್ತು. ಬಹಳ ಜನ ಇದು ನಿಜ ಎಂದೇ ನಂಬಿಕೊಂಡಿದ್ದಾರೆ.

Hansika Motwani and her mother breaks silence on allegations of taking hormonal injections

ಬಹಳ ವರ್ಷಗಳ ನಂತರ ಈ ವಿಚಾರವಾಗಿ ಹನ್ಸಿಕಾ ಹಾಗೂ ತಾಯಿ ಮೋನಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ನೇರವಾಗಿ ಎದುರಾದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. "ನನಗೆ ಆಗ 21 ವರ್ಷ. ಬಹಳ ಜನ ಏನೇನೋ ಕೆಟ್ಟದಾಗಿ ಮಾತನಾಡಿದರು. ನಾನು ಬೇಗ ಬೆಳೆಯಲು ಇಂಜೆಕ್ಷನ್ ತಗೊಂಡಿದ್ದೆ ಎಂದು ಕೆಟ್ಟ ಕೆಟ್ಟದಾಗಿ ನನ್ನ ಕುರಿತು ಬರೆದರು. ನಾನು 8 ವರ್ಷಕ್ಕೆ ನಟಿಸಲು ಆರಂಭಿಸಿದೆ. ಅದಕ್ಕಾಗಿ ನನ್ನ ತಾಯಿ ನನಗೆ ಹಾರ್ಮೋನ್ ಇಂಜೆಕ್ಷನ್ ಕೊಟ್ಟು ಬೇಗ ದೊಡ್ಡವಳಾಗುವಂತೆ ಮಾಡಿದರು ಎಂದರು. ಅದನ್ನು ನಿಜ ಎಂದು ಹೇಗೆ ಅಂದುಕೊಳ್ಳುತ್ತಾರೆ? ಎಂದು ಹನ್ಸಿಕಾ ಬೇಸರ ವ್ಯಕ್ತಪಡಿಸಿದ್ದಾರೆ.

Hansika Motwani and her mother breaks silence on allegations of taking hormonal injections

ಇದೇ ವಿಚಾರವಾಗಿ ಆಕೆಯ ತಾಯಿ ಮೋನ ಮಾತನಾಡಿ "ಒಂದು ವೇಳೆ ಇದು ನಿಜವೇ ಆಗಿದ್ದರೆ ನಾನು ಟಾಟಾ ಬಿರ್ಲಾಗಿಂತ ಶ್ರೀಮಂತೆ ಆಗಿ ಇರುತ್ತಿದ್ದೆ. ನೀವು ಕೂಡ ನನ್ನ ಬಳಿ ಬೇಗ ದೊಡ್ಡವರಾಗಲು ಸಲಹೆ ಕೇಳಲು ಕ್ಯೂ ನಿಲ್ಲುತ್ತಿದ್ದಿರಿ. ಆದರೂ ಆ ರೀತಿಯಲ್ಲಾ ಬರೆಯಲು ಕಾಮನ್‌ ಸೆನ್ಸ್ ಬೇಡ್ವಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಪಂಜಾಬಿಗಳು. ನಮ್ಮ ಮನೆಯ ಹೆಣ್ಣುಮಕ್ಕಳು 12ರಿಂದ 16 ವರ್ಷಕ್ಕೆ ದೊಡ್ಡವರಾಗುತ್ತಾರೆ" ಎಂದಿದ್ದಾರೆ. ಇತ್ತೀಚೆಗೆ ನಟಿ ಹನ್ಸಿಕಾ, ಸೋಹೇಲ್ ಕಥುರಿಯಾ ಕೈ ಹಿಡಿದಿದ್ದರು. ತಮ್ಮ ಮದುವೆಯ ವಿಡಿಯೋ ಪ್ರಸಾರ ಹಕ್ಕನ್ನು ಓಟಿಟಿಗೆ ನೀಡಿದ್ದಾರೆ. ಈ ಎಪಿಸೋಡ್‌ಗಳಲ್ಲಿ ತಮ್ಮ ಲೈಫ್‌ ಬಗ್ಗೆಯೂ ಮಾತನಾಡುತ್ತಿದ್ದಾರೆ. 2ನೇ ಎಪಿಸೋಡ್‌ನಲ್ಲಿ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

More from Filmibeat

English summary
Hansika Motwani and her mother breaks silence on allegations of taking hormonal injections. Hansika Motwani, in her web series Hansika's Love Shaadi Dram has addressed the age-old rumours. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X