Don't Miss!
- News
ಇಂದಿರಾ, ರಾಜೀವ್ ಗಾಂಧಿ ಹತ್ಯೆ ಆಕಸ್ಮಿಕ: ಉತ್ತರಖಂಡ ಸಚಿವ ವಿವಾದ
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Sports
ಕೌಂಟಿ ಚಾಂಪಿಯನ್ಶಿಪ್: ಲೂಸಿಸ್ಟರ್ಶೈರ್ ಪರ ಆಡಲಿದ್ದಾರೆ ಅಜಿಂಕ್ಯಾ ರಹಾನೆ
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹನ್ಸಿಕಾ- ಸೊಹೈಲ್ ಮದುವೆ ಸಂಭ್ರಮ: ಸಂಗೀತ್, ಮೆಹಂದಿ ಪಾರ್ಟಿ ಜೋರು
ಜೈಪುರದಲ್ಲಿ ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಮದುವೆ ಸಂಭ್ರಮ ಕಳೆಕಟ್ಟಿದೆ. ಇಂದು ಸಂಜೆ ಪ್ರಿಯಕರ ಸೊಹೈಲ್ ಕಥುರಿಯಾ ಜೊತೆ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಕಳೆದ 4 ದಿನಗಳಿಂದ ಮದುವೆ ಪೂರ್ವ ಶಾಸ್ತ್ರಗಳು, ಕಾರ್ಯಕ್ರಮಗಳು ಶುರುವಾಗಿದೆ.
ಗುರುವಾರವೇ ನಟಿ ಹನ್ಸಿಕಾ ಫ್ಯಾಮಿಲಿ ಜೊತೆ ಜೈಪುರದ ಫ್ಲೈಟ್ ಏರಿದ್ದರು. ಅಂದು ಸಂಜೆಯಿಂದಲೇ ವಿವಿಧ ಕಾರ್ಯಕ್ರಮಗಳು ಆರಂಭವಾಯಿತು. ಇದಕ್ಕೂ ಮುನ್ನ ವಿದೇಶದಲ್ಲಿ ಹನ್ಸಿಕಾ ತಮ್ಮ ಸ್ನೇಹಿತೆಯರ ಜೊತೆ ಬ್ಯಾಚುಲರೇಟ್ ಪಾರ್ಟಿ ಮಾಡಿ ಎಂಜಾಯ್ ಮಾಡಿದ್ದರು. ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಹನ್ಸಿಕಾ ತೆಲುಗಿನ 'ದೇಶಮುದುರು' ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಮಿಂಚಿದರು. ಕನ್ನಡದ 'ಬಿಂದಾಸ್' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೋಡಿಯಾಗಿ ನಟಿಸಿದ್ದರು.
ಯುವ
ರಾಜ್‌ಕುಮಾರ್
-
ಸಂತೋಷ್
ಅನಂದ್‌ರಾಮ್
ಚಿತ್ರದಲ್ಲಿ
ನಟಿಸುವ
ಅವಕಾಶ
ಇಲ್ಲಿದೆ
ಮುಂಬೈನಲ್ಲಿ ಮಾತಾ ಕಿ ಚೌಕಿ ಮೂಲಕ ಹನ್ಸಿಕಾ ಹಾಗೂ ಸೊಹೈಲ್ ಕಥುರಿಯಾ ಮದುವೆ ಶಾಸ್ತ್ರಗಳಿಗೆ ಚಾಲನೆ ಸಿಕ್ಕಿತ್ತು. ರಾಜಸ್ಥಾನದ ಜೈಪುರದಲ್ಲಿ ಮಂದೋಟ ಕೋಟೆಯಲ್ಲಿ ಹನ್ಸಿಕಾ ಮದುವೆ ನಡೀತಿದೆ. ಕುಟುಂಬ ಸದಸ್ಯರು ಹಾಗೂ ಆತ್ಮೀಯರು ಮಾತ್ರ ಮದುವೆ ಸಮಾರಂಭಕ್ಕೆ ಸಾಕ್ಷಿ ಆಗುತ್ತಿದ್ದಾರೆ.

ಸಂಗೀತ್ ಪಾರ್ಟಿಯಲ್ಲಿ ಕುಣಿದ ಜೋಡಿ
ಮುಂಬೈ ಮೂಲದ ಉದ್ಯಮಿ ಸೊಹೈಲ್ ಕಥುರಿಯಾ ಜೊತೆ ಹನ್ಸಿಕಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಶನಿವಾರ ರಾತ್ರಿ ನಡೆದ ಸಂಗೀತ್ ಪಾರ್ಟಿಯಲ್ಲಿ ಜೋಡಿ ಬಿಂದಾಸ್ ಆಗಿ ಹೆಜ್ಜೆ ಹಾಕಿದೆ. ಈ ಕಲರ್‌ಫುಲ್ ಕಾರ್ಯಕ್ರಮದ ಫೋಟೊಗಳು, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಂಗೀತ್ ಪಾರ್ಟಿಯಲ್ಲಿ ಪಿಂಕ್ ಕಲರ್ ಗೌನ್‌ನಲ್ಲಿ ಹನ್ಸಿಕಾ ಮುಂಚಿದ್ರೆ, ಬ್ಲ್ಯಾಕ್ ಕಲರ್ ಶೆರ್ವಾನಿಯಲ್ಲಿ ಸೊಹೈಲ್ ಮಿಂಚಿದ್ದಾರೆ. ಇದಕ್ಕೂ ಮುನ್ನ ಮೆಹೆಂದಿ ಫಂಕ್ಷನ್ ಕೂಡ ನಡೆದಿದೆ.

ಹಳದಿ, ಸೂಫಿ, ಕಾಕ್‌ಟೇಲ್ ಪಾರ್ಟಿ
ಶುಕ್ರವಾರ ರಾತ್ರಿ ಸೂಫಿ ನೈಟ್ ಏರ್ಪಡಿಸಲಾಗಿತ್ತು. ಹಳದಿ ಅರಶಿನ ಶಾಸ್ತ್ರದಲ್ಲಿ ಜೋಡಿ ಬಿಳಿ ಬಣ್ಣದ ಉಡುಗೆಯಲ್ಲಿ ಮಿಂಚಿದರು. ಶನಿವಾರ ಮಧ್ಯಾಹ್ನ ಅತಿಥಿಗಳಿಗಾಗಿ ಸ್ಪೆಷಲ್ ಕಾಕ್‌ಟೇಲ್ ಪಾರ್ಟಿ ಕೂಡ ಏರ್ಪಡಿಸಲಾಗಿತ್ತು. ಈ ವೇಳೆ ಹನ್ಸಿಕಾ- ಸೊಹೈಲ್ ಬಿಳಿ ಬಣ್ಣದ ಕಾಸ್ಟ್ಯೂಮ್ಸ್‌ನಲ್ಲಿ ಕಂಗೊಳಿಸಿದ್ದರು. 450 ವರ್ಷಗಳಷ್ಟು ಹಳೆಯ ಕೋಟೆಯಲ್ಲಿ ಜೋಡಿಯ ಮದುವೆ ಸಮಾರಂಭ ನಡೀತಿದೆ.

ಬಾಲ್ಯದ ಗೆಳೆಯನ ಜೊತೆ ಮದುವೆ
ಹನ್ಸಿಕಾ ಹಾಗೂ ಸೊಹೈಲ್ ಇಬ್ಬರು ಬಾಲ್ಯ ಸ್ನೇಹಿತರು. ಆದರೆ ಈ ಹಿಂದೆ ಸುಹೈಲ್‌ಗೆ ಮದುವೆ ಆಗಿದೆ. ತಮ್ಮ ಆಪ್ತ ಸ್ನೇಹಿತರ ಬಳಗದಲ್ಲೇ ಇದ್ದ ರಿಂಕಿ ಜೊತೆ ಹಸೆಮಣೆ ಏರಿದ್ದರು. ಬಹಳ ಅದ್ಧೂರಿಯಾಗಿ ನಡೆದಿದ್ದ ಈ ಕಲ್ಯಾಣೋತ್ಸವದಲ್ಲಿ ಸ್ವತಃ ಹನ್ಸಿಕಾ ಕೂಡ ಭಾಗಿ ಆಗಿ ಎಂಜಾಯ್ ಮಾಡಿದ್ದಾರೆ. ಆದರೆ ನಂತರ ರಿಂಕಿ ಹಾಗೂ ಸೊಹೈಲ್ ದೂರಾಗಿದ್ದರು. ಸೊಹೈಲ್‌ಗೆ ಹನ್ಸಿಕಾ ಹತ್ತಿರವಾಗಿದ್ದರು. ಹಾಗಾಗಿ ಇಬ್ಬರು ಈಗ ಮದುವೆ ಮುಂದಾಗಿದ್ದಾರೆ.

ಕೆಲವೇ ನಿಮಿಷಗಳಲ್ಲಿ ಹನ್ಸಿಕಾ ಕಲ್ಯಾಣ
ನವೆಂಬರ್ ಆರಂಭದಲ್ಲಿ ಪ್ಯಾರಿಸ್‌ನಲ್ಲಿ ಹನ್ಸಿಕಾ ಹಾಗೂ ಸೊಹೈಲ್ ಎಂಗೇಜ್‌ಮೆಂಟ್ ನಡೆದಿತ್ತು. ಐಫಿಲ್ ಟವರ್ ಎದುದು ಸೊಹೈಲ್ ಪ್ರಪೋಸ್ ಮಾಡಿದ್ದ ಫೋಟೊಗಳನ್ನು ಶೇರ್ ಮಾಡಿ ಹನ್ಸಿಕಾ ತಮ್ಮ ಮದುವೆ ಬಗ್ಗೆ ಸುಳಿವು ನೀಡಿದ್ದರು. ಇನ್ನು ಕೆಲವೇ ಕ್ಷಣಗಳಲ್ಲಿ ಹನ್ಸಿಕಾ ಹಾಗೂ ಸೊಹೈಲ್ ಮದುವೆ ನೆರವೇರಲಿದೆ. ಮದುವೆ ವಿಡಿಯೋ ಪ್ರಸಾರದ ಹಕ್ಕನ್ನು ಓಟಿಟಿಗೆ ಸಂಸ್ಥೆಗೆ ನೀಡಿದ್ದಾರಂತೆ.