"ಸೌತ್ ನಟಿ ಎನ್ನುವ ಕಾರಣಕ್ಕೆ ನನಗೆ ಕಾಸ್ಟ್ಯೂಮ್ಸ್ ಕೊಡ್ತಿರಲಿಲ್ಲ.. ಆದ್ರೆ ಈಗ ಸೀನ್ ರಿವರ್ಸ್ ಆಗಿದೆ"
ಇತ್ತೀಚೆಗೆ ನಟಿ ಹನ್ಸಿಕಾ ಮೊಟ್ವಾನಿ ಪ್ರಿಯಕರನ ಜೊತೆ ಹಸೆಮಣೆ ಏರಿದ್ದರು. ಆಕೆಯ ಮದುವೆ ವಿಚಾರ ಬಾಲಿವುಡ್‌ನಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಸದ್ಯ ತೆಲುಗು, ತಮಿಳಿನ ಆರೇಳು ಸಿನಿಮಾಗಳಲ್ಲಿ ಮುಂಬೈ ಬೆಡಗಿ ಬಣ್ಣ ಹಚ್ಚಿದ್ದಾರೆ. ಕರಿಯರ್ ಆರಂಭದಲ್ಲಿ ತಾನು ಸೌತ್ ಸಿನಿಮಾಗಳಲ್ಲಿ ನಟಿಸ್ತಿದ್ದೆ ಎನ್ನುವ ಕಾರಣಕ್ಕೆ ಅವಮಾನ ಎದುರಿಸಿದ್ದಾಗಿ ಹನ್ಸಿಕಾ ಮೊಟ್ವಾನಿ ಹೇಳಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಹನ್ಸಿಕಾ "ಸೌತ್ ಹೀರೋಯಿನ್ ಎನ್ನವ ಕಾರಣಕ್ಕೆ ಕಾಸ್ಟ್ಯೂಮ್ಸ್ ಕೊಡದೇ ಡಿಸೈನರ್‌ಗಳು ಅವಮಾನಿಸಿರುವುದಾಗಿ ಹೇಳಿದ್ದಾರೆ. ಬಾಲಿವುಡ್ ಡಿಸೈನರ್‌ಗಳಿಗೆ ಸೌತ್ ನಟ, ನಟಿಯರು ಅಂದರೆ ತಾತ್ಸಾರ ಅಂತೆ. ನಿಮಗೆ ಕಾಸ್ಟ್ಯೂಮ್ ಕೊಡಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದರು ಎಂದು ಹನ್ಸಿಕಾ ನೆನಪಿಸಿಕೊಂಡಿದ್ದಾರೆ.

ನಾನು ಅವರನ್ನು ದ್ವೇಷಿಸಲಿಲ್ಲ
"ಆದರೆ ಈಗ ಸೀನ್ ರಿವರ್ಸ್ ಆಗಿದೆ. ಅವರೇ ತಮ್ಮ ವಿನ್ಯಾಸದ ಬಟ್ಟೆಗಳನ್ನು ಧರಿಸಲು ಬೇಡಿಕೊಳ್ಳುತ್ತಿದ್ದಾರೆ. ಒಂದು ಸಮಯದಲ್ಲಿ ಅವಮಾನಿಸಿದವರು ಈಗ ಬಂದು ಬೇಡಿಕೊಳ್ಳುತ್ತಿದ್ದರೆ ಆ ಫೀಲಿಂಗ್ ಚೆನ್ನಾಗಿದೆ ಎಂದು ಹನ್ಸಿಕಾ ವಿವರಿಸಿದ್ದಾರೆ. ಅವರು ಆಗ ನನಗೆ ಕಾಸ್ಟ್ಯೂಮ್ ಕೊಡಲಿಲ್ಲ ಎನ್ನುವ ಕಾರಣಕ್ಕೆ ನಾನು ದ್ವೇಷಿಸಲಿಲ್ಲ. ನನ್ನ ಪ್ರತಿಭೆಯಿಂದಲೇ ಅವರು ನನ್ನ ಬಳಿ ಬರುವಂತೆ ಮಾಡಬೇಕು ಎಂದುಕೊಂಡಿದ್ದೆ" ಎಂದು ತಿಳಿಸಿದ್ದಾರೆ.
"ಅಂದು ಆ ರೀತಿ ಹೇಳಿದ ಅದೇ ಡಿಸೈನರ್‌ಗಳು ಬಂದು ಕಾರ್ಯಕ್ರಮಗಳಿಗೆ ತಾವು ಡಿಸೈನ್ ಮಾಡಿರುವ ಕಾಸ್ಟ್ಯೂಮ್ ಧರಿಸುವಂತೆ ಕೇಳುತ್ತಾರೆ. ಅಯ್ಯೋ ಈಗ ನೀವು ನನ್ನನ್ನು ಕಾರ್ಯಕ್ರಮಕ್ಕೆ ಸಿದ್ಧಪಡಿಸುತ್ತಿದ್ದೀರಾ ಎಂದು ಒಂದು ಕ್ಷಣ ಯೋಚಿಸಿ, ಸರಿ ಎನ್ನುತ್ತೇನೆ" ಎಂದು ಹೇಳಿದ್ಧಾರೆ. ಇನ್ನು ಕರಿಯರ್ ಆರಂಭದಲ್ಲಿ ತೆಲುಗು ನಟನೊಬ್ಬ ತನ್ನೊಂದಿಗೆ ಡೇಟಿಂಗ್ ಮಾಡುವಂತೆ ಒತ್ತಡ ಹೇರಿದ್ದಾಗಿ ಇತ್ರೀಚೆಗೆ ಹನ್ಸಿಕಾ ಹೇಳಿಕೊಂಡಿದ್ದರು. ಆ ವಿಚಾರ ಭಾರೀ ಸದ್ದು ಮಾಡಿತ್ತು.
ಸೊಹೈಲ್ ಜೊತೆ ಹನ್ಸಿಕಾ ಮದುವೆ
ಕಳೆದ ಡಿಸೆಂಬರ್‌ನಲ್ಲಿ ಹನ್ಸಿಕಾ ಮೊಟ್ವಾನಿ ತಮ್ಮ ಬಾಲ್ಯದ ಗೆಳೆಯ ಸೊಹೈಲ್ ಕತೂರಿಯಾ ಕೈ ಹಿಡಿದರು. ಬಹಳ ಅದ್ಧೂರಿಯಾಗಿ ಜೋಡಿಯ ವಿವಾಹ ಮಹೋತ್ಸವ ನೆರವೇರಿತ್ತು. ಅದಕ್ಕೂ ಮುನ್ನ ರಿಂಕಿ ಎಂಬುವವರನ್ನು ಸೊಹೈಲ್ ಮದುವೆ ಆಗಿದ್ದರು. ಆ ನಂತರ ಡಿವೋರ್ಸ್ ಪಡೆದು ಹನ್ಸಿಕಾಕೈ ಹಿಡಿದಿದ್ದಾರೆ. ಇನ್ನು ಹನ್ಸಿಕಾ ಕೂಡ ಸೊಹೈಲ್ ಹಾಗೂ ರಿಂಕಿ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು.

ಸಿಂಬು ಜೊತೆ ಲವ್ವಡವ್ವಿ
ಸೋಹೈಲ್ ಜೊತೆ ಮದುವೆ ಆಗುವುದಕ್ಕು ಮುನ್ನ ಹನ್ಸಿಕಾ ಕೆಲವರ ಜೊತೆ ಡೇಟಿಂಗ್ ನಡೆಸಿದ್ದಾರೆ ಎನ್ನಲಾಗಿತ್ತು. ತಮಿಳು ನಟ ಸಿಂಬು ಜೊತೆ ಹನ್ಸಿಕಾ ಮದುವೆ ನಡೆದೇಬಿಡುತ್ತದೇ ಎನ್ನುವ ಮಟ್ಟಕ್ಕೆ ಸುದ್ದಿಯಾಗಿತ್ತು. ಇಬ್ಬರು ಒಟ್ಟಿಗೆ ಸಿನಿಮಾಗಳಲ್ಲಿ ನಟಿಸಿದ್ದರು. ಅವರಿಬ್ಬರ ಆತ್ಮೀಯ ಒಡನಾಟ ನೋಡಿ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಗುಸುಗುಸು ಶುರುವಾಗಿತ್ತು.
6 ಸಿನಿಮಾಗಳಲ್ಲಿ ಹನ್ಸಿಕಾ ಬ್ಯುಸಿ
ತೆಲುಗಿನ 'ದೇಶಮುದುರು' ಸಿನಿಮಾ ಮೂಲಕ ಹನ್ಸಿಕಾ ಚಿತ್ರರಂಗ ಪ್ರವೇಶಿಸಿದರು. ನಂತರ ತಮಿಳು, ಕನ್ನಡ, ಹಿಂದಿ ಸಿನಿಮಾಗಳಲ್ಲಿ ಮಿಂಚಿದರು. ಸದ್ಯ ತಮಿಳಿನ 'ಪಾರ್ಟ್ನರ್', 'ರೌಡಿ ಬೇಬಿ', 'ಗಾರ್ಡಿಯನ್', 'ಗಾಂಧಾರಿ', 'ಮ್ಯಾನ್' ಎನ್ನುವ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನ 'ಮೈ ನೇಮ್ ಈಸ್ ಶ್ರುತಿ' ಹಾಗೂ '105 ಮಿನೀಟ್ಸ್' ಚಿತ್ರಗಳು ಮುಂಬೈ ಬೆಡಗಿ ಕೈಯಲ್ಲಿವೆ.


Click it and Unblock the Notifications











