Don't Miss!
- News
ಬಿಬಿಎಂಪಿ ವಾರ್ಡ್ ರಚನೆ ವಿವಾದ: ಮೀಸಲು ನಿಗದಿ ಅಂತಿಮಗೊಳಿಸದಂತೆ ಹೈಕೋರ್ಟ್ ತಾಕೀತು
- Lifestyle
Today Rashi Bhavishya: ಗುರುವಾರದ ದಿನ ಭವಿಷ್ಯ: ಮೇಷ, ಮೀನ ರಾಶಿಯವರು ವಾದಗಳಿಂದ ದೂರವಿರಿ
- Sports
ನ್ಯೂಜಿಲೆಂಡ್ ಕೇಂದ್ರೀಯ ಒಪ್ಪಂದದಿಂದ ಹೊರ ನಡೆದ ಟ್ರೆಂಟ್ ಬೌಲ್ಟ್! ಏಕೆ ಈ ನಿರ್ಧಾರ?
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 ಮತ್ತು ಗ್ಯಾಲಕ್ಸಿ Z ಫ್ಲಿಪ್ 4 ಫೋನ್ ಬಿಡುಗಡೆ!
- Automobiles
ನಮ್ಮ ಬೆಂಗಳೂರಿನಲ್ಲಿ ಬ್ಯಾಟರಿ ವಿನಿಮಯ ಕೇಂದ್ರಕ್ಕೆ ಚಾಲನೆ ನೀಡಿದ ಹೋಂಡಾ
- Finance
ಸೆನ್ಸೆಕ್ಸ್ ಕುಸಿತ, ನಿಫ್ಟಿ ಏರಿಕೆ: ಬುಧವಾರ ವಹಿವಾಟಿನ ಅಂತ್ಯ ಹೀಗಿದೆ
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ತಮ್ಮದೇ ಮದುವೆ ಸುದ್ದಿ ಕೇಳಿ ಶಾಕ್ ಆದ ನಟಿ ಹನ್ಸಿಕಾ ಮೊಟ್ವಾನಿ
ನಟಿ ಹನ್ಸಿಕಾ ಮೋಟ್ವಾನಿ ದಕ್ಷಿಣ ಭಾರತ ಹಾಗೂ ಬಾಲಿವುಡ್ನಲ್ಲೂ ಹೆಸರು ಮಾಡಿರುವ ನಟಿ. ಇವರು ಕನ್ನಡದಲ್ಲೂ ನಟಿಸಿದ್ದಾರೆ.
ನಟಿ ಹನ್ಸಿಕಾ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಯೊಂದು ಇತ್ತೀಚೆಗೆ ಹರಿದಾಡಿತ್ತು. ಈ ರೀತಿಯ ಸುದ್ದಿಗಳು ಹನ್ಸಿಕಾ ಬಗ್ಗೆ ಆಗಾಗ್ಗೆ ಹರಿದಾಡುತ್ತಲೇ ಇರುತ್ತವೆ.
ಈಗ ಮತ್ತೆ ಅದೇ ಮಾದರಿ ಸುದ್ದಿ ಹರಿದಾಡಿದ್ದು, ಸುದ್ದಿ ಕೇಳಿ ಸ್ವತಃ ಹನ್ಸಿಕಾ ಮೋಟ್ವಾನಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಪ್ರೈವೇಟ್
ಫೋಟೋಗಳು
ಲೀಕ್
ಆದ್ಮೇಲೆ
ಎಲ್ಲರೂ
ಹೇಳೋದು
ಇದೆ.!
ಅಂತರ್ಜಾಲ ಪತ್ರಿಕೆಯೊಂದು ಹನ್ಸಿಕಾ ಮೋಟ್ವಾನಿ ಮದುವೆ ಆಗುತ್ತಿರುವುದಾಗಿ ತಮ್ಮ ಪೋರ್ಟಲ್ನಲ್ಲಿ ಪ್ರಕಟಿಸಿತ್ತು. ಸುದ್ದಿಯ ಲಿಂಕ್ ಅನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿತ್ತು.

ಯಾರು ಆ ಹುಡುಗ ಎಂದು ಪ್ರಶ್ನೆ
ಆ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಹನ್ಸಿಕಾ, 'ಯಾರು ಆ ಹುಡುಗಾ?' ಎಂದು ಪ್ರಶ್ನೆ ಮಾಡಿದ್ದಾರೆ. ಅದರ ಜೊತೆಗೆ 'ರಬ್ಬಿಶ್' ಎಂದು ಇದೊಂದು ಕಳಪೆ ಮತ್ತು ಸುಳ್ಳು ಸುದ್ದಿ ಎಂದಿದ್ದಾರೆ.

ಯೂಟ್ಯೂಬ್ ಚಾನೆಲ್ ತೆರೆದಿರುವ ಹನ್ಸಿಕಾ
ಹನ್ಸಿಕಾ ಮೋಟ್ವಾನಿ ಮೊದಲಿನಷ್ಟು ಬ್ಯುಸಿ ನಟಿ ಈಗಲ್ಲದೇ ಇದ್ದರೂ ಸಹ ಆಗಾಗ್ಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಅವರು ಇತ್ತೀಚೆಗೆ ತಮ್ಮದೇ ಯೂಟ್ಯೂಬ್ ಚಾನೆಲ್ ಸಹ ತೆರೆದಿದ್ದು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
'ಬಿಂದಾಸ್'
ಹುಡುಗಿ
ಹನ್ಸಿಕಾ
ಮೇಲೆ
ಕೇಸ್
ದಾಖಲು

ಕನ್ನಡದಲ್ಲಿ ನಟಿಸಿರುವ ಹನ್ಸಿಕಾ
ಬಾಲಿವುಡ್ನಲ್ಲಿ ಬಾಲನಟಿಯಾಗಿ ತಮ್ಮ ಸಿನಿ ಪಯಣ ಆರಂಭಿಸಿದ ಅವರು ತೆಲುಗಿನ ದೇಶಮುದುರು ಸಿನಿಮಾದ ಮೂಲಕ ಮೊದಲ ಬಾರಿಗೆ ನಾಯಕಿಯಾದರು. ಕನ್ನಡದ ಬಿಂದಾಸ್ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಜೊತೆಗೆ ಸಹ ನಟಿಸಿದ್ದಾರೆ.

ಹಲವು ಸಿನಿಮಾಗಳು ಹನ್ಸಿಕಾ ಕೈಯಲ್ಲಿ
ಹನ್ಸಿಕಾ ಮೋಟ್ವಾನಿ ಪ್ರಸ್ತುತ ತಮಿಳಿನ ವೇಟ್ಟೈ ಮನ್ನನ್ ಮತ್ತು ಪಾರ್ಟನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಸೀನ್ ದಿಲ್ರುಬಾ ಸಿನಿಮಾದಲ್ಲಿಯೂ ಹನ್ಸಿಕಾ ನಟಿಸುತ್ತಿದ್ದು ಇದರಲ್ಲಿ ತಾಪ್ಸಿ ಪನ್ನು ಸಹ ಇದ್ದಾರೆ.