ಮದುವೆ ಫೋಟೊಗಳು ಡಿಲೀಟ್; ಡಿವೋರ್ಸ್ ಸುಳಿವು ಕೊಟ್ರಾ ಪುನೀತ್ ಚಿತ್ರ ನಟಿ?
ಸಿನಿಮಾ ತಾರೆಯರ ಡೇಟಿಂಗ್, ಮದುವೆ, ಡಿವೋರ್ಸ್ ವಿಚಾರಗಳು ಭಾರೀ ಸದ್ದು ಮಾಡುತ್ತವೆ. ಅದೇ ಕಾರಣಕ್ಕೆ ಸುಖಾಸುಮ್ಮನೆ ವದಂತಿಗಳು ಹರಿದಾಡುವುದನ್ನು ನೋಡುತ್ತಿರುತ್ತೇವೆ. ಎಷ್ಟೇ ಸ್ಪಷ್ಟನೆ ಕೊಟ್ಟರೂ ಅದು ಸಣ್ಣಗಾಗುವುದಿಲ್ಲ. ಬಹುಭಾಷಾ ನಟಿ ಹನ್ಸಿಕಾ ಹಾಗೂ ಸೊಹೈಲ್ ಕತುರಿಯಾ ಡಿವೋರ್ಸ್‌ಗೆ ಮುಂದಾಗಿದ್ದಾರೆ ಎನ್ನುವ ಗುಸುಗುಸು ಕೇಳಿ ಬಂದಿತ್ತು. ಬಳಿಕ ಅದು ಸುಳ್ಳು ಎಂದು ಗೊತ್ತಾಗಿತ್ತು.
ನಟಿ ಹನ್ಸಿಕಾ ಮೊಟ್ವಾನಿ ದಿಢೀರನೆ ತಮ್ಮ ಮದುವೆ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ತೆಗೆದು ಹಾಕಿದ್ದಾರೆ. ಇದು ಸಹಜವಾಗಿಯೇ ಡಿವೋರ್ಸ್ ಊಹಾಪೋಹಗಳಿಗೆ ಇಂಬು ನೀಡಿದೆ. ಇತ್ತೀಚಿನ ವರ್ಷಗಳಲ್ಲಿ ತಾರೆಯರು ಡಿವೋರ್ಸ್ ನೀಡುವ ಮುನ್ನ ಇದೇ ಹಾದಿ ಅನುಸರಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಗಂಡ- ಹೆಂಡತಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡುವುದು. ತಮ್ಮಿಬ್ಬರ ಫೋಟೊಗಳನ್ನು ಡಿಲೀಟ್ ಮಾಡಿ ಅಚ್ಚರಿ ಮೂಡಿಸುತ್ತಾರೆ.

ಬಹುಭಾಷಾ ನಟಿ ಹನ್ಸಿಕಾ ಈಗ ತಮ್ಮ ಮದುವೆ ಫೋಟೊ, ವೀಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಿಂದ ತೆಗೆದು ಹಾಕಿರುವುದು ಅಭಿಮಾನಿಗಳಿಗೆ ಶಾಕ್ ತಂದಿದೆ. ಹಾಗಂತ ಪತಿ ಜೊತೆಗಿನ ಎಲ್ಲಾ ಪೋಸ್ಟ್‌ಗಳನ್ನು ಆಕೆ ತೆಗೆದುಯ ಹಾಕಿಲ್ಲ. ಇನ್ನು ಕೆಲವು ಉಳಿದುಕೊಂಡಿದೆ. ಆದರೆ ಮುಖ್ಯವಾಗಿ ಮದುವೆ ಫೋಟೊ, ವೀಡಿಯೋ ತೆಗೆದಿರುವುದು ಚರ್ಚೆಗೆ ಕಾರಣವಾಗಿದೆ. 3 ವರ್ಷಗಳ ಹಿಂದೆ ಇಬ್ಬರೂ ಅದ್ಧೂರಿಯಾಗಿ ಮದುವೆ ಆಗಿದ್ದರು.
2022ರಲ್ಲಿ ಪ್ಯಾರಿಸ್ ಐಫೆಲ್ ಎದುರು ಹನ್ಸಿಕಾಗೆ ಸೋಹೈಲ್ ಪ್ರಪೋಸ್ ಮಾಡಿದ್ದರು. ಆಪ್ತ ಸ್ನೇಹಿತೆಯ ಮಾಜಿ ಪತಿಯನ್ನೇ ಹನ್ಸಿಕಾ ಪಟಾಸಿದ್ದರು ಎಂದು ಆಗ ಗುಲ್ಲಾಗಿತ್ತು. ರಾಜಸ್ಥಾನದ ಜೈಪುರದ ಮುಂಡೋಟಾ ಕೋಟೆ ಮತ್ತು ಅರಮನೆಯಲ್ಲಿ ಸಡಗರ ಸಂಭ್ರಮದಿಮದ ಕಣ್ಯಾಣೋತ್ಸವ ನೆರವೇರಿತ್ತು. ಸೋಹೈಲ್ ಸೋಶಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಆಕ್ಟೀವ್ ಆಗಿಲ್ಲ. ಆದರೆ ಹನ್ಸಿಕಾ ಪದೇ ಪದೆ ಪೋಸ್ಟ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಆಕೆ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ.

ಸೋಹೈಲ್‌ಗೆ ರಿಂಕಿ ಎಂಬ ಯುವತಿ ಜೊತೆ ಮದುವೆ ಆಗಿತ್ತು. ಅದಕ್ಕಿಂತ ಮುನ್ನು ಹನ್ಸಿಕಾ ಹಾಗೂ ಸೋಹೈಲ್ ಸ್ನೇಹಿತರಾಗಿದ್ದರು. ಅವರಿಬ್ಬರ ಮದುವೆಗೆ ಕೂಡ ಹನ್ಸಿಕಾ ಹೋಗಿದ್ದರು. ಸಂಭ್ರಮದಿಂದ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ಬಳಿಕ ಸೋಹೈಲ್ ಹಾಗೂ ರಿಂಕಿ ಕೆಲ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದರು. ಆ ಬಳಿಕ ಹನ್ಸಿಕಾಗೆ ಪ್ರಪೋಸ್ ಮಾಡಿ ಸೊಹೈಲ್ ಮದುವೆಗೆ ಒಪ್ಪಿಸಿದ್ದರು.
ಸದ್ಯ ಇಬ್ಬರ ಡಿವೋರ್ಸ್ ಬಗ್ಗೆ ಇಷ್ಟೆಲ್ಲಾ ಗುಸುಗುಸು ಕೇಳಿ ಬಂದರೂ ಇಬ್ಬರೂ ಮೌನಕ್ಕೆ ಜಾರಿದ್ದಾರೆ. ಹಾಗಾಗಿ ವದಂತಿ ಮತ್ತಷ್ಟು ಹೆಚ್ಚಾಗುತ್ತಿದೆ. ಮುಂಬೈ ಮೂಲದ ಹನ್ಸಿಕಾ ಕನ್ನಡ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ತೆಲುಗಿನ 'ದೇಶಮುದುರು' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿ ದಕ್ಷಿಣದ ಭಾರತ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ ತಮಿಳು ಸಿನಿಮಾಗಳಲ್ಲಿ ಕೂಡ ಮಿಂಚಿದ್ದರು.
ತಮಿಳು ನಟ ಸಿಂಬು ಜೊತೆ ಹನ್ಸಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಗುಲ್ಲಾಗಿತ್ತು. ಇಬ್ಬರೂ ಮದುವೆ ಆಗುವ ಮಾತುಗಳು ಕೇಳಿಬಂದಿತ್ತು. ಆದರೆ ಅದು ನಿಜವಾಗಲಿಲ್ಲ. ಪುನೀತ್ ರಾಜ್‌ಕುಮಾರ್ ಜೊತೆ 'ಬಿಂದಾಸ್' ಚಿತ್ರದಲ್ಲಿ ಹನ್ಸಿಕಾ ನಟಿಸಿದ್ದರು. 'ಮೈ ನೇಮ್ ಈಸ್ ಶ್ರುತಿ', '105 ಮೀನಿಟ್ಸ್', 'ಗಾರ್ಡಿಯೆನ್' ಹನ್ಸಿಕಾ ಇತ್ತೀಚೆಗೆ ನಟಿಸಿದ ಕೆಲ ಸಿನಿಮಾಗಳು.
ಸದ್ಯ ನಾಲ್ಕೈದು ಸಿನಿಮಾಗಳು ಹನ್ಸಿಕಾ ಕೈಯಲ್ಲಿದೆ. ಆದರೆ ಯಾವುದು ಕೂಡ ಕ್ರೇಜ್ ಸೃಷ್ಟಿಸಿಲ್ಲ. ಇತ್ತೀಚಿನ ದಿನಗಳಲ್ಲಿ ಹನ್ಸಿಕಾ- ಸೊಹೈಲ್ ಡಿವೋರ್ಸ್ ವಿಚಾರವೇ ಭಾರೀ ಸದ್ದು ಮಾಡ್ತಿದೆ. ಇದೀಗ ಮತ್ತೆ ಅದೇ ವಿಚಾರ ಮುನ್ನೆಲೆ ಬಂದಿದೆ.


Click it and Unblock the Notifications











