ಕೇವಲ ಎರಡೇ ವರ್ಷಕ್ಕೆ ಮುರಿದು ಬಿತ್ತು ಹನ್ಸಿಕಾ ಮೋಟ್ವಾನಿ ದಾಂಪತ್ಯ?ಗೆಳತಿಯ ಗಂಡನನ್ನೇ ಮದುವೆಯಾಗಿದ್ದ 'ಬಿಂದಾಸ್' ನಟಿ

ದುಡ್ಡು ಎಲ್ಲಿ ಹೆಚ್ಚಿರುತ್ತೆ ಅಲ್ಲಿ ಪ್ರೀತಿ ಕಡಿಮೆ ಇರುತ್ತೆ ಎನ್ನುವ ಮಾತನ್ನು ಹಲವರು ಹೇಳುತ್ತಾರೆ. ಕೆಲವರ ಬದುಕಿನಲ್ಲಿ ದುಡ್ಡು..ಆಸ್ತಿ.. ಐಶ್ವರ್ಯ.. ಹೆಚ್ಚಾದಂತೆ ನೆಮ್ಮದಿ ನಿಧಾನವಾಗಿ ಮಾಯವಾಗುತ್ತೆ. ಚಿತ್ರರಂಗದಲ್ಲಿಯಂತೂ ಇದಕ್ಕೆ ಹತ್ತು ಹಲವು ಉದಾಹರಣೆಗಳು ಕೂಡ ಇವೆ. ಇಲ್ಲಿ ಶ್ರೀಮಂತರೆಂದು ಕರೆಸಿಕೊಳ್ಳುವ ಅನೇಕರ ಬದುಕಿನಲ್ಲಿ ಪ್ರೀತಿ ಮರಿಚೀಕೆಯಾಗಿರುತ್ತೆ. ಯಾರು ಯಾವ ಉದ್ದೇಶಕ್ಕೆ ಲವ್ ಮಾಡ್ತಾರೆ.. ಆ ನಂತರ ಯಾಕೆ ಮದುವೆಯಾಗ್ತಾರೆ..

ಎನ್ನುವುದು ಅವರವರಿಗೆ ಗೊತ್ತಾದರೂ ಹಲವರ ದಾಂಪತ್ಯ ಇಲ್ಲಿ ಮುರಿದು ಬಿದ್ದಿವೆ. ಅದರಲ್ಲಿಯೂ ಕಳೆದ ಎರಡು ಮೂರು ವರ್ಷಗಳಲ್ಲಿ ಚಿತ್ರರಂಗದಲ್ಲಿ ಮದುವೆ ಮತ್ತು ಪ್ರೀತಿಗೆ ಅರ್ಥವೇ ಇಲ್ಲದಂತಾಗಿದೆ. ಅನ್ಯೋನ್ಯತೆಯ ಕೊರತೆಯಿಂದ.. ಚಿಕ್ಕ ಚಿಕ್ಕ ಕಾರಣಗಳಿಂದ ಹಲವರು ಸಂಬಂಧ ಮುರಿದುಕೊಂಡು ಎದ್ದು ಬಂದಿದ್ದಾರೆ. ಹನ್ಸಿಕಾ ಮೋಟ್ವಾನಿ ಇದಕ್ಕೆ ಸದ್ಯದ ಉದಾಹರಣೆ.

Hansika Motwani s Fairytale Ends Husband Sohael Khaturiya Addresses Divorce Whispers

ಹೌದು, ಕನ್ನಡದ 'ಬಿಂದಾಸ್' ಸೇರಿ ಉತ್ತರ ಮತ್ತು ದಕ್ಷಿಣದಲ್ಲಿ ಹಲವು ಚಿತ್ರಗಳನ್ನು ಮಾಡಿರುವ ಹನ್ಸಿಕಾ ಮೂರು ವರ್ಷದ ಹಿಂದೆ ಸೊಹೇಲ್ ಖತುರಿಯಾ ಅವರನ್ನು ಮದುವೆಯಾಗಿದ್ದರು.

ಈ ಸೊಹೇಲ್ ಖತುರಿಯಾ ಬೇರೆ ಯಾರು ಅಲ್ಲ ಬದಲಿಗೆ ಹನ್ಸಿಕಾ ಅವರ ಆಪ್ತ ಗೆಳತಿ ರಿಂಕಿಯ ಗಂಡ. ಆ ಕಾಲದಲ್ಲಿ ಈ ವಿಚಾರ ತುಂಬಾ ಸದ್ದು ಮಾಡಿತ್ತು. ಗೆಳತಿಯ ಮನೆಯನ್ನು ಮುರಿದು ಮದುವೆಯಾಗ್ತಿದ್ದಾರೆ ಎಂದು ಹನ್ಸಿಕಾ ಅವರನ್ನು ಟ್ರೋಲ್ ಕೂಡ ಮಾಡಲಾಗಿತ್ತು.

ಆದರು ತಲೆ ಕೆಡಿಸಿಕೊಳ್ಳದ ಹನ್ಸಿಕಾ ಡಿಸೆಂಬರ್‌ 4-2022ರಲ್ಲಿ ರಾಜಸ್ಥಾನದ ಜೈಪುರದಲ್ಲಿರುವ 'Mundota Fort'ನಲ್ಲಿ ಅದ್ದೂರಿಯಾಗಿ ಮದುವೆಯಾದರು. ಹೀಗೆ ಮದುವೆಯಾದ ಹನ್ಸಿಕಾ ಬದುಕಿನಲ್ಲಿ ಸದ್ಯ ಬಿರುಗಾಳಿ ಬೀಸಿದಂತೆ ಇದೆ. ಇದಕ್ಕೆ ಪುರಾವೆ ಎನ್ನುವಂತೆ ತಮ್ಮ ಮದುವೆಯ ಮೊದಲ ಆನಿವರ್ಸರಿ ಫೋಟೊಗಳನ್ನು ಮಾತ್ರ ಹನ್ಸಿಕಾ ಹಂಚಿಕೊಂಡಿದ್ದಾರೆ.

ಆದರೆ.. ಆ ನಂತರ ಎರಡನೇ ವರ್ಷದ ಫೋಟೊವನ್ನು ಹನ್ಸಿಕಾ ಮೋಟ್ವಾನಿ ಹಂಚಿಕೊಂಡಿಲ್ಲ. ಇನ್ನು..ಮದುವೆಯಾದ ಹೊಸತರಲ್ಲಿ ಹನ್ಸಿಕಾ ಆಗಾಗ ತಮ್ಮ ಗಂಡನ ಜೊತೆ ಇರುವ ಫೋಟೊ ಹಂಚಿಕೊಳ್ಳುತ್ತಿದ್ದರು. ಆದರೆ ಕಳೆದ ಒಂದೂವರೆ ವರ್ಷದಿಂದ ಹನ್ಸಿಕಾ ಇನ್‌ಸ್ಟಾಗ್ರಾಮ್‌ದಿಂದ ಅವರ ಗಂಡ ನಾಪತ್ತೆಯಾಗಿದ್ದಾರೆ. ಹನ್ಸಿಕಾ ಅವರ ಈ ನಡೆ ಹಲವರ ಅನುಮಾನಕ್ಕೆ ಈಗ ಕಾರಣವಾಗಿದೆ.

Hansika Motwani s Fairytale Ends Husband Sohael Khaturiya Addresses Divorce Whispers

ಈ ಅನುಮಾನ ಇನ್ನು ಹೆಚ್ಚಿಸುವಂತೆ ಹನ್ಸಿಕಾ ಮತ್ತು ಸೊಹೇಲ್ ಕಳೆದ ಎರಡು ವರ್ಷಗಳಿಂದ ಪ್ರತೈಕವಾಗಿ ವಾಸ ಮಾಡುತ್ತಿದ್ದಾರೆ ಎಂದು ''ಹಿಂದೂಸ್ತಾನ್ ಟೈಮ್ಸ್'' ವರದಿಯನ್ನು ಮಾಡಿದೆ. ಈ ವರದಿಯ ಪ್ರಕಾರ ಸೊಹೇಲ್ ತಮ್ಮ ಕುಟುಂಬದ ಜೊತೆ ವಾಸ ಮಾಡುತ್ತಿದ್ದರೆ ಹನ್ಸಿಕಾ ತಮ್ಮ ತಾಯಿಯ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.

ವಿಶೇಷ ಅಂದರೆ ''ಹಿಂದೂಸ್ತಾನ್ ಟೈಮ್ಸ್‌''ನ ಈ ವರದಿಗೆ ಸೊಹೇಲ್ ಖತುರಿಯಾ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ''ಇದು ಸುಳ್ಳು'' ಎಂದು ಹೇಳಿದ್ದಾರೆ. ಆದರೆ..ವಿಚ್ಛೇದನದ ವದಂತಿ ಸುಳ್ಳಾ ಅಥವಾ ಹೆತ್ತವರ ಜೊತೆ ವಾಸ ಮಾಡುತ್ತಿರುವ ವಿಚಾರ ಸುಳ್ಳಾ ಎನ್ನುವುದನ್ನು ಸೊಹೇಲ್ ಸ್ಪಷ್ಟವಾಗಿ ಹೇಳಿಲ್ಲ. ಹೀಗಾಗಿ ಗೊಂದಲ ಮುಂದುವರೆದಿದೆ. ಇನ್ನು ಹನ್ಸಿಕಾ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆಯನ್ನು ಇಲ್ಲಿಯವರೆಗೆ ನೀಡಿಲ್ಲ.

ಅಂದ್ಹಾಗೇ 2022ರಲ್ಲಿ ಗೆಳತಿಯ ಮನೆ ಮುರಿದಳು ಎಂದು ಹನ್ಸಿಕಾ ಅವರನ್ನು ಅನೇಕರು ನಿಂದಿಸಿದಾಗ ನನಗೆ ಈ ವ್ಯಕ್ತಿ ಗೊತ್ತು ಎಂಬ ಒಂದು ಕಾರಣದಿಂದ ಮದುವೆ ನನ್ನಿಂದ ಮುರಿದು ಬಿದ್ದಿದೆ ಎಂದಲ್ಲ. ಅವರ ಮದುವೆ ಮುರಿದು ಬೀಳುವುದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದರು. ನಾನು ಸೆಲೆಬ್ರಿಟಿಯಾಗಿದ್ದಕ್ಕೆ ಜನ ನನ್ನ ಕಡೆ ಬೆರಳು ಮಾಡುತ್ತಿದ್ದಾರೆ, ನನ್ನ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಹೇಳುತ್ತಿದ್ದಾರೆ. ಸೆಲೆಬ್ರಿಟಿಯಾಗಿದ್ದಕ್ಕೆ ನನಗೆ ಸಿಕ್ಕ ಬಹುದೊಡ್ಡ ಬಹುಮಾನ ಇದು ಎಂದು ಕೂಡ ಹನ್ಸಿಕಾ ಹೇಳಿದ್ದರು.

ತಮ್ಮ ಮದುವೆಯ ವಿಡಿಯೋವನ್ನು ಹಾಟ್‌ಸ್ಟಾರ್‌ಗೆ ದೊಡ್ಡ ಮೊತ್ತಕ್ಕೆ ಮಾರಿದ್ದರು. ಇದೇ ವಿಡಿಯೋದಲ್ಲಿ ಹನ್ಸಿಕಾ ಈ ಮಾತುಗಳನ್ನು ಹೇಳಿದ್ದರು. ಆದರೆ ಈಗ ಇವರ ದಾಂಪತ್ಯವೇ ಮುರಿದು ಬಿದ್ದಿದೆ ಎನ್ನುವ ಸುದ್ದಿ ಸದ್ಯ ಸದ್ದು ಮಾಡುತ್ತಿದೆ. ಈ ಕುರಿತು ಹನ್ಸಿಕಾ ಈಗ ಮಾತನಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Hansika Motwani's marriage under scrutiny. While reports suggest separation just 2 years in, husband Sohael Khaturiya gives an ambiguous "It's not true" response.
Read more about: hansika motwani divorce actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X