ಬಾಕ್ಸಾಫೀಸ್‌ನಲ್ಲಿ 'ಹನುಮಾನ್' ಚಮತ್ಕಾರ: ಅಲ್ಲಿ 'KGF-1', 'ಕಾಂತಾರ' ದಾಖಲೆ ಉಡೀಸ್

ದೇಶ ವಿದೇಶಗಳಲ್ಲಿ ತೆಲುಗಿನ 'ಹನುಮಾನ್' ಸಿನಿಮಾ ಆರ್ಭಟ ಜೋರಾಗಿದೆ. ಚಿತ್ರ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿದೆ. ಉತ್ತರ ಭಾರತ, ಕರ್ನಾಟಕ ಹಾಗೂ ವಿದೇಶಗಳಲ್ಲಿ ಸಿನಿಮಾ ದಿನದಿನಕ್ಕೆ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿದೆ. ಉತ್ತರ ಭಾರತದಲ್ಲಿ ಅಂತೂ ಸಿನಿಮಾ ಹೊಸ ದಾಖಲೆ ಬರೆದಿದೆ.

ಇತ್ತೀಚಿನದ ದಿನಗಳಲ್ಲಿ ಪೌರಾಣಿಕ, ಐತಿಹಾಸಿಕ, ಮೈಥಾಲಜಿ ಸಿನಿಮಾಗಳಲ್ಲಿ ಉತ್ತರ ಭಾರತದಲ್ಲಿ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಅದೇ ಹಾದಿಯಲ್ಲಿ ತೇಜ ಸಜ್ಜಾ ನಟನೆಯ 'ಹನುಮಾನ್' ಸಿನಿಮಾ ಸಹ ಧೂಳೆಬ್ಬಿಸಿದೆ. ಪ್ರೀಮಿಯರ್ ಶೋಗಳಿಂದಲೇ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆರಂಭದಲ್ಲಿ ಸಣ್ಣ ಸಿನಿಮಾ ಎನ್ನುವ ಕಾರಣಕ್ಕೆ ಸರಿಯಾಗಿ ಶೋಗಳು ಕೊಡಲಿಲ್ಲ. ಇದೀಗ ಬೇಡಿಕೆಗೆ ತಕ್ಕಂತೆ ನಿಧಾನವಾಗಿ ಸಿನಿಮಾ ಶೋಗಳು, ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಿಸಿಕೊಂಡು ಸಾಗಿದೆ.

Hanuman Hindi version beats KGF-1 and Kantara boxoffice in day 3

ಕಾಲ್ಪನಿಕ ಕಥೆಯಲ್ಲಿ ಹನುಮಂತು ಎನ್ನುವ ಯುವಕನಿಗೆ ಸೂಪರ್ ಪವರ್ ಸಿಕ್ಕಿ ಆತ ಏನೆಲ್ಲಾ ಮಾಡ್ತಾನೆ ಎನ್ನುವುದನ್ನು ಚಿತ್ರದಲ್ಲಿ ಹೇಳಲಾಗಿದೆ. ಕಥೆಯಲ್ಲಿ ವಿಶೇಷತೆ ಇಲ್ಲದೇ ಇದ್ದರೂ ಬಹಳ ರೋಚಕವಾಗಿ ಅದನ್ನು ಕಟ್ಟಿಕೊಡುವ ಪ್ರಯತ್ನ ನಡೆದಿದೆ. ಗ್ರಾಫಿಕ್ಸ್ ಮಾಯಾಜಾಲದಲ್ಲಿ ಹನುಮಂತು ಕಥೆ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡುತ್ತದೆ. ಇದೇ ಕಾರಣಕ್ಕೆ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಪ್ರೇಕ್ಷಕರು ಫ್ಯಾಮಿಲಿ ಸಮೇತ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ.

ಪ್ರಶಾಂತ್ ವರ್ಮ ನಿರ್ದೇಶನದ ಈ ಸೂಪರ್ ಹೀರೊ ಚಿತ್ರದಲ್ಲಿ ತೇಜ ಸಜ್ಜಾ ಜೊತೆ ಕನ್ನಡ ನಟಿ ಅಮೃತಾ ಅಯ್ಯರ್ ನಟಿಸಿದ್ದಾರೆ. ವರಲಕ್ಷ್ಮಿ ಶರತ್ ಕುಮಾರ್, ಸಮುದ್ರ ಖನಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಫಸ್ಟ್ ವೀಕೆಂಡ್‌ನಲ್ಲೇ ಸಿನಿಮಾ 60 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಹಿಂದಿ ವರ್ಷನ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಗುತ್ತಿದೆ.

ಫಸ್ಟ್ ವೀಕೆಂಡ್‌ನಲ್ಲಿ 'ಹನುಮಾನ್' ಹಿಂದಿ ವರ್ಷನ್ ಭಾರತದಲ್ಲಿ ಬರೋಬ್ಬರಿ 12.26 ಕೋಟಿ ರೂ. ಗಳಿಕೆ ಕಂಡದು ದಾಖಲೆ ಬರೆದಿದೆ. ಈ ಮೂಲಕ 'KGF ಚಾಪ್ಟರ್-1', 'ಕಾಂತಾರ' ಹಾಗೂ 'ಪುಷ್ಪ' ಸಿನಿಮಾಗಳ ದಾಖಲೆಯನ್ನು ಸಣ್ಣ ಸಿನಿಮಾ ಮುರಿದಿದೆ. ಈ ಬಗ್ಗೆ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಶುಕ್ರವಾರ ಕೇವಲ 2.15 ಕೋಟಿ ರೂ. ಗಳಿದಿದ್ದ ಸಿನಿಮಾ ಶನಿವಾರ 4.05 ಕೋಟಿ ರೂ. ಬಾಚಿತ್ತು. ಆದರೆ ಭಾನುವಾರ ದಾಖಲೆಯ 6.06 ಕೋಟಿ ರೂ. ದೋಚಿ ಎಲ್ಲರ ಹುಬ್ಬೇರಿಸಿದೆ.

ದಿನದಿಂದ ದಿನಕ್ಕೆ ಉತ್ತರ ಭಾರತದಲ್ಲಿ 'ಹನುಮಾನ್' ಸಿನಿಮಾ ಶೋಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಬಾಲಿವುಡ್ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಕತ್ರೀನಾ ಕೈಫ್, ವಿಜಯ್ ಸೇತುಪತಿ ನಟನೆಯ 'ಮೇರಿ ಕ್ರಿಸ್‌ಮಸ್' ಸಿನಿಮಾ ಈ ವಾರ ಬಿಡುಗಡೆ ಆಗಿದ್ದರೂ 'ಹನುಮಾನ್' ದರ್ಬಾರ್ ಜೋರಾಗಿದೆ. ಜನವರಿ 25ಕ್ಕೆ ಹೃತಿಕ್ ರೋಷನ್ ನಟನೆಯ 'ಫೈಟರ್' ಸಿನಿಮಾ ಬರಲಿದೆ. ಅಲ್ಲಿಯವರೆಗೂ ಹಿಂದಿ ಬಾಕ್ಸಾಫೀಸ್‌ನಲ್ಲಿ 'ಹನುಮಾನ್' ಆರ್ಭಟಕ್ಕೆ ಬ್ರೇಕ್ ಹಾಕುವವರು ಇರಲ್ಲ.

ದಕ್ಷಿಣ ಭಾರತದ ಸಣ್ಣ ಸಣ್ಣ ಸಿನಿಮಾಗಳು ಹಿಂದಿಗೆ ಡಬ್ ಆಗಿ ಸದ್ದು ಮಾಡ್ತಿವೆ. ಅದರಲ್ಲೂ ನಮ್ಮ ಸಂಸ್ಕೃತಿ, ಧಾರ್ಮಿಕ ವಿಚಾರಗಳನ್ನು ಒಳಗೊಂಡ ಸಿನಿಮಾಗಳಿಗೆ ಉತ್ತರ ಭಾರತದ ಮಂದಿ ಜೈಕಾರ ಹಾಕುತ್ತಿದ್ದಾರೆ. ಕನ್ನಡದ 'ಕಾಂತಾರ', ತೆಲುಗಿನ 'ಕಾರ್ತಿಕೇಯ- 2' ಹೀಗೆ ಹಲವು ಸಿನಿಮಾಗಳು ಇತ್ತೀಚಿಗೆ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಿದ್ದವು. ಅದೇ ಸಾಲಿಗೆ 'ಹನುಮಾನ್' ಸೇರಿಕೊಂಡಿದೆ.

ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕದಲ್ಲೂ 'ಹನುಮಾನ್' ಅಬ್ಬರ ಜೋರಾಗಿದೆ. ಕರ್ನಾಟಕದಲ್ಲಿ ಫಸ್ಟ್ ವೀಕೆಂಡ್ ಸಿನಿಮಾ 2 ಕೋಟಿ ರೂ.ಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಕಂಡಿರುವ ಅಂದಾಜಿದೆ. ವಿದೇಶಗಳಲ್ಲಿ ಕೂಡ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ.

More from Filmibeat

English summary
Teja Sajja' Hanuman Hindi version surpassed KGF-1 and Kantara;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X