Happy Birthday Rekha: ಹಿರಿಯ ನಟಿ ರೇಖಾ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಸಂಗತಿಗಳು ಇಲ್ಲಿವೆ

ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮ ಅಭಿನಯದಿಂದ ಕೋಟ್ಯಾಂತರ ಜನರ ಮನಗೆದ್ದ ನಟಿ ಭಾನುರೇಖಾ ಗಣೇಶನ್ ಅಂದರೆ ಹಿರಿಯ ನಟಿ ರೇಖಾ. ವಯಸ್ಸು ಮಾಗಿದಂತೆ ಮತ್ತಷ್ಟು ಸುಂದರವಾಗಿ ಕಾಣುತ್ತಿರುವ ಅವರಿಗೆ ಫೀಲ್ಮಿಬೀಟ್ ಕನ್ನಡದ ಕಡೆಯಿಂದ ಹುಟ್ಟು ಹುಬ್ಬದ ಶುಭಾಶಯಗಳು. ಅಕ್ಟೋಬರ್ 10 ರಂದು 69 ವರ್ಷಕ್ಕೆ ಕಾಲಿಡುತ್ತಿರುವ ಸೌಂದರ್ಯದ ಗಣಿಯ ಬಗ್ಗೆ ಸಾಮಾನ್ಯವಾಗಿ ತಿಳಿದಿರದ ಹಲವು ಸಂಗತಿಗಳು ಇಲ್ಲಿವೆ.

ಚಿತ್ರೋದ್ಯಮದಲ್ಲಿ ಇದುವರೆಗೆ ಕೆಲಸ ಮಾಡಿದ ಅತ್ಯುತ್ತಮ ನಟಿಯರಲ್ಲಿ ರೇಖಾ ಕೂಡ ಒಬ್ಬರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ತಮ್ಮ ನಟನಾ ಪ್ರತಿಭೆ, ಸೌಂದರ್ಯದಿಂದ ಮತ್ತು ಇತ್ತೀಚೆಗೆ ತಮ್ಮ ಸಾಂಪ್ರದಾಯಿಕ ಉಡುಪಿನಿಂದಲೂ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಕಾಂಜೀವರಂ ಸೀರೆಗಳ ಬಗ್ಗೆ ಅವರಿಗಿರುವ ಸೆಳೆತವನ್ನು ಹಲವು ಬಾರಿ ಅವರೆ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

happy-birthday-rekha

ನಟಿ ರೇಖಾ ಅವರ ಬಗ್ಗೆ ತಿಳಿದಿರಬೇಕಾದ ಸಂಗತಿಗಳು ಇಲ್ಲಿವೆ

* ರೇಖಾ ಎಂದು ಖ್ಯಾತರಾಗಿರುವ ಅವರ ಹುಟ್ಟು ಹೆಸರು ಭಾನುರೇಖಾ ಜೆಮಿನಿ ಗಣೇಶನ್.

* ರೇಖಾ ಅವರ ತಂದೆ ಜೆಮಿನಿ ಅಥವಾ ರಾಮಸಾಮಿ ಗಣೇಶನ್ ತಮಿಳು ಚಿತ್ರರಂಗದಲ್ಲಿ ಪ್ರಸಿದ್ಧ ನಟರು. ಆಕೆಯ ತಾಯಿ ಪುಷ್ಪವಲ್ಲಿ ತೆಲುಗು ಚಲನಚಿತ್ರದ ಖ್ಯಾತ ನಟಿ.

* ನಟಿ ರೇಖಾಗೆ ಒಬ್ಬ ಸಹೋದರಿ, ಐವರು ಮಲ ಸಹೋದರಿಯರು ಮತ್ತು ಒಬ್ಬ ಮಲ ಸಹೋದರ ಇದ್ದಾರೆ.

* ನಟಿ ಬದಲು ಗಗನಸಖಿಯಾಗಲು ಇಷ್ಟಪಟ್ಟಿದ್ದ ನಟಿ ರೇಖಾ

*1966 ರಲ್ಲಿ ತೆಲುಗು ಚಲನಚಿತ್ರ 'ರಂಗುಲ ರತ್ನಂ' ನಲ್ಲಿ ಬಾಲನಟಿನಾಗಿ ಮೊದಲ ಬಾರಿಗೆ ರೇಖಾ ಸಿನಿಪರದೆಯ ಮೇಲೆ ಕಾಣಿಸಿಕೊಂಡರು.

* 1969 ರಲ್ಲಿ ರೇಖಾ ಅವರು ತಮ್ಮ ಮೊದಲ ಹಿಂದಿ ಚಿತ್ರ ಅಂಜನಾ ಸಫರ್‌ನಲ್ಲಿ ಕಾಣಿಸಿಕೊಂಡಿದ್ದರು. ಇದು ಸೆನ್ಸಾರ್ ಕಾರಣಕ್ಕೆ ಹಲವು ತೊಂದರೆಗಳಿಗೆ ಒಳಗಾಯಿತು.

*ಸಾವನ್ ಭಾಡೋನ್ (1970) ಬಿಡುಗಡೆಯಾದ 10 ವರ್ಷಗಳ ನಂತರ 1979 ರಲ್ಲಿ ದೋ ಶಿಕಾರಿ ಸಿನಿಮಾ ಬಿಡುಗಡೆಯಾಯಿತು.

* ಖೂನ್ ಭಾರಿ ಮಾನ್, ಶ್ರೀ ನಟವರ್ಲಾಲ್, ನಾಗಿನ್, ಲಜ್ಜಾ, ಕಾಮ ಸೂತ್ರ: ಎ ಟೇಲ್ ಆಫ್ ಲವ್ ಮತ್ತು ಇನ್ನೂ ಅನೇಕ ಚಲನಚಿತ್ರಗಳಲ್ಲಿ ನಟಿ ರೇಖಾ ನಟಿಸಿದ್ದಾರೆ.

happy-birthday-rekha

* ಉಮ್ರಾವ್ ಜಾನ್‌ನಲ್ಲಿನ ಅದ್ಭುತ ನಟನೆಗಾಗಿ 1981 ರಲ್ಲಿ ರೇಖಾ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು.

* ಬಾಲಿವುಡ್‌ನಲ್ಲಿ ರೇಖಾ ಅವರು ಮೊದಲು ಸೂಪರ್‌ಸ್ಟಾರ್ ಜೀತೇಂದ್ರ ಅವರೊಂದಿಗೆ ಪ್ರೀತಿಯಲ್ಲಿದ್ದರು ಎನ್ನಲಾಗಿದೆ.

* ರೇಖಾ ಅವರನ್ನು ಮನೆ ಮುರುಕಿ ಎಂದು ಹಲವರು ಕರೆದಿದ್ದಾರೆ.

* ಬಾಲಿವುಡ್‌ನ ಕನಸಿನ ರಾಣಿ ಹೇಮಾ ಮಾಲಿನಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ರೇಖಾ.

* ಅಮಿತಾಬ್ ಬಚ್ಚನ್ ಅವರೊಂದಿಗಿನ ರೇಖಾ ಅವರ ಸಂಬಂಧ ಹೆಚ್ಚು ಚರ್ಚೆ ಮತ್ತು ವಿವಾದಕ್ಕೆ ಒಳಗಾಗಿತ್ತು.

* ನಟ ಅಮಿತಾಬ್ ಬಚ್ಚನ್ ಮತ್ತು ರೇಖಾ ಅವರು ರಹಸ್ಯವಾಗಿ ವಿವಾಹವಾಗಿದ್ದಾರೆ ಎಂಬ ವದಂತಿಗಳ ಬಳಿಕ ಇಬ್ಬರು ಒಟ್ಟಿಗೆ ನಟಿಸಲು ಜಯ ಬಚ್ಚನ್ ಬಿಡಲಿಲ್ಲ ಎಂಬ ವರದಿಗಳಿವೆ.

* ರೇಖಾ ಅವರಿಗೆ 2010 ರಲ್ಲಿ ಭಾರತದ 4 ನೇ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು.

* ರೇಖಾ ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡು ಮೇ 2012 ರಲ್ಲಿ ಮೇಲ್ಮನೆ ಸದಸ್ಯರಾದರು.

More from Filmibeat

English summary
Happy Birthday Rekha: Unknown facts about legendary actress Rekha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X