For Quick Alerts
  ALLOW NOTIFICATIONS  
  For Daily Alerts

  ಬರ್ತ್‌ಡೇ ಬ್ಯೂಟಿ ಸನ್ನಿ ಲಿಯೋನಿ ಬಗ್ಗೆ ಈ ಇಂಟ್ರಸ್ಟಿಂಗ್ ವಿಷಯಗಳು ನಿಮಗೆ ಗೊತ್ತಾ?

  |

  ಬಾಲಿವುಡ್‌ನ ಹಾಟ್ ಬ್ಯೂಟಿ ಎಂದೇ ಫೇಮಸ್‌ ಆಗಿರುವ ಸನ್ನಿ ಲಿಯೋನ್‌ ಇಂದು (ಮೇ 13) 41ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೋಲ್ಡ್ ಅಂಡ್ ಹಾಟ್ ಬೆಡಗಿಗೆ ವಿಶ್ವದಾದ್ಯಂತ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

  ಸನ್ನಿ ಲಿಯೋನ್‌ಗೆ ಭಾರತ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲೂ ಅಪಾರ ಅಭಿಮಾನಿಗಳ ಬಳಗವಿದೆ. ಎಂತಹ ಕುಗ್ರಾಮದವರಿಗೂ ಸನ್ನಿ ಲಿಯೋನ್ ಯಾರೆಂದು ತಿಳಿದಿದೆ. ಆ ಮಟ್ಟಿಗೆ ಸನ್ನಿ ಫೇಮಸ್‌ ಆಗಿದ್ದಾರೆ. ಅದರಲ್ಲೂ ಪಡ್ಡೆ ಹುಡುಗರ ಹಾಟ್‌ ಫೇವರಿಟ್‌ ಆಗಿರುವ ಸನ್ನಿಗೆ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ.

  Sunny Leone: ನೀವು ಸನ್ನಿ ಲಿಯೋನಿ ಅಭಿಮಾನಿಯೆ? ನಿಮಗೆ ಸಿಗಲಿದೆ ಭಾರಿ ರಿಯಾಯಿತಿ!Sunny Leone: ನೀವು ಸನ್ನಿ ಲಿಯೋನಿ ಅಭಿಮಾನಿಯೆ? ನಿಮಗೆ ಸಿಗಲಿದೆ ಭಾರಿ ರಿಯಾಯಿತಿ!

  ಸನ್ನಿ ಲಿಯೋನಿ ಮೊದಲ ಬಾರಿಗೆ ಗುರುತಿಸಿಕೊಂಡಿದ್ದು, ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್‌ 5ನೇ ಸೀಸನ್‌ನಲ್ಲಿ ವೈಲ್ಡ್ ಕಾರ್ಡ್ ಮೂಲಕ ಈ ಶೋನಲ್ಲಿ ಭಾಗಿಯಾಗಿದ್ದರು. ಈ ಶೋ ಸನ್ನಿ ಲಿಯೋನಿಗೆ ಸಾಕಷ್ಟು ಖ್ಯಾತಿಯನ್ನು ತಂದುಕೊಟ್ಟಿತ್ತು. ಆದಾದ ಬಳಿಕ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಸನ್ನಿ ಲಿಯೋನಿ ನಟಿಸಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಚ್ಚು ಜನಪ್ರಿಯತೆ ಗಳಿಸಿದ್ದರು.

  2000 ರೂಪಾಯಿ ಸಾಲ ಪಡೆದು ತೀರಿಸಿಲ್ಲ ಸನ್ನಿ ಲಿಯೋನಿ! 2000 ರೂಪಾಯಿ ಸಾಲ ಪಡೆದು ತೀರಿಸಿಲ್ಲ ಸನ್ನಿ ಲಿಯೋನಿ!

  15 ವರ್ಷದಲ್ಲೇ ಕೆಲಸಕ್ಕೆ ಸೇರಿದ್ದ ನಟಿ ಸನ್ನಿ ಲಿಯೋನಿ

  ನಟಿ ಸನ್ನಿ ಲಿಯೋನಿ ಕೆನಡಾದ ಒಂಟಾರಿಯೋದಲ್ಲಿ ಸಿಖ್ ಕುಟುಂಬದಲ್ಲಿ ಜನಿಸಿದರು. ಇವರ ಮೂಲ ಹೆಸರು ಕರಂಜಿತ್ ಕೌರ್ ಎಂದು ಇಡಲಾಗಿತ್ತು. 15 ವರ್ಷದ ಬಾಲಕಿ ಇದ್ದಾಗಲೇ ತಮ್ಮ ವಿದ್ಯಾಭ್ಯಾಸದ ಜೊತೆಗೆ ಜರ್ಮನ್ ಬೇಕರಿಯಲ್ಲಿ ಕೆಲಸ ಮಾಡಲು ಶುರು ಮಾಡಿದ್ದರು. ಕೆಲಸ ಮಾಡುತ್ತಲೇ ನರ್ಸಿಂಗ್ ಓದಲು ಶುರು ಮಾಡಿದ್ದರು. ಈ ಸಂದರ್ಭದಲ್ಲಿ ತಮ್ಮ ಹೆಸರನ್ನು ಸನ್ನಿ ಎಂದು ಬದಲಾಯಿಸಿಕೊಂಡರು. ಸ್ವಲ್ಪ ಕಾಲದ ನಂತರ ಲಿಯೋನಿ ಸೇರಿಸಿಕೊಂಡರು. ನಂತರ ಮಾಡಲಿಂಗ್ ಜಗತ್ತಿಗೆ ಕಾಲಿಟ್ಟ ಸನ್ನಿ ಲಿಯೋನಿ ಪೆನ್ನಥೋಸ್ ಮೆಗಾಸೀನ್‌ನಲ್ಲಿ ಮಾಡೆಲ್‌ ಆಗಿ ಕಾಣಿಸಿಕೊಂಡರು.

   'ಜಿಸ್ಮ್ 2' ಸಿನಿಮಾ ಮೂಲಕ ಸಿನಿ ಜರ್ನಿ ಆರಂಭ

  'ಜಿಸ್ಮ್ 2' ಸಿನಿಮಾ ಮೂಲಕ ಸಿನಿ ಜರ್ನಿ ಆರಂಭ

  ನಟಿ ಸನ್ನಿ ಲಿಯೋನಿ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ನಂತರ ಹಲವು ಮ್ಯಾಗ್‌ಸೀನ್‌ಗಳ ಮುಖಪುಟದಲ್ಲಿ ಕಾಣಿಸಿಕೊಂಡರು. ಬಳಿಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ಸನ್ನಿ ಲಿಯೋನಿ ತಮ್ಮ ಮೊದಲ ಸಿನಿಮಾ 'ಜಿಸ್ಮ್ 2' ನಲ್ಲಿ ನಟಿಸಿ ಸೈ ಎನಿಸಿಕೊಂಡರು. ಇದಾದ ಬಳಿಕ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಸನ್ನಿ ಲಿಯೋನಿ ನಟಿಸಿದ್ದರು. ಕನ್ನಡದಲ್ಲೂ ಕೂಡ ನಿರ್ದೇಶಕ ಪ್ರೇಮ್ ಅಭಿನಯದ 'ಡಿಕೆ' ಸಿನಿಮಾದ ಹಾಡಿನಲ್ಲಿ ಹೆಜ್ಜೆ ಹಾಕಿ ಸೈ ಎನಿಸಿಕೊಂಡಿದ್ದರು. ತಮ್ಮ ಬೋಲ್ಡ್‌ ನಟನೆ ಮೂಲಕವೇ ಅಭಿಮಾನಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಪಾದಿಸಿದರು. 2016 ರಲ್ಲಿ ಬಿಬಿಸಿಯು 100 ಅತ್ಯಂತ ಪ್ರಭಾವು ಮಹಿಳೆಯರ ಪಟ್ಟಿಯನ್ನು ಮಾಡಿತ್ತು. ಆ ಪಟ್ಟಿಯಲ್ಲಿ ಸನ್ನಿ ಲಿಯೋನ್‌ ಕೂಡ ಇದ್ದರು. SEMrush ಅಧ್ಯಯನದ ಪ್ರಕಾರ, ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಎರಡನೇ ಭಾರತೀಯ ಸೆಲೆಬ್ರೆಟಿಯಾಗಿ ಸನ್ನಿ ಗುರುತಿಸಿಕೊಂಡಿದ್ದಾರೆ. ಇನ್ನು ಮೊದಲ ಸ್ಥಾನದಲ್ಲಿ ಪ್ರಿಯಾಂಕಾ ಚೋಪ್ರಾ ಇದ್ದಾರೆ.

   ಲೇಖಕಿಯೂ ಆಗಿದ್ದ ನಟಿ ಸನ್ನಿ ಲಿಯೋನಿ

  ಲೇಖಕಿಯೂ ಆಗಿದ್ದ ನಟಿ ಸನ್ನಿ ಲಿಯೋನಿ

  2016 ರಲ್ಲಿ ತಮ್ಮದೇ ಆದ ಮೊಬೈಕ್ ಆಪ್ಲಿಕೇಶನ್‌ ಅನ್ನು ಪ್ರಾರಂಭಿಸಿದ ಭಾರತೀಯ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ಸನ್ನಿ ಲಿಯೋನಿ ಪಾತ್ರರಾಗಿದ್ದಾರೆ. ಈ ಮೊಬೈಲ್ ಅಪ್ಲಿಕೇಶನ್‌ ಮೂಲಕ ಸನ್ನಿ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಇದಾದ ಬಳಿಕ 2018 ರಲ್ಲಿ ಸೌಂದರ್ಯ ವರ್ಧಕಗಳ ಸ್ಟಾರ್ ಸ್ಟ್ರಕ್ ಕಾಸ್ಮೆಟಿಕ್ಸ್‌ ಅನ್ನು ಪ್ರಾರಂಭಿಸಿದರು. ಸನ್ನಿ ಲಿಯೋನಿ ಪ್ರಾಣಿ ಪ್ರಿಯರಾಗಿದ್ದು, ಪ್ರಾಣಿ ಹಕ್ಕುಗಳ ಬೆಂಬಲಿಗರಾಗಿದ್ದಾರೆ. ಜೊತೆಗೆ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಸನ್ನಿ ತಮ್ಮ ಚಾರಿಟಿ ಮೂಲಕ ಸಹಾಯ ಹಸ್ತ ಚಾಚುತ್ತಿದ್ದಾರೆ. 2015 ರಲ್ಲಿ ಸ್ಥಾಪನೆಯಾದ ಸನ್‌ ಸನ್ ಸಿಟಿ ಮೀಡಿಯಾ ಹಾಗೂ ಎಂಟರ್‌ಟೈನ್‌ಮೆಂಟ್ ಎಂಬ ಪ್ರೊಡೆಕ್ಷನ್ ಹೌಸ್‌ನ್ನು ಕೂಡ ನಡೆಸುತ್ತಿದ್ದಾರೆ. ಸದ್ಯ ನಟಿ, ನಿರ್ಮಾಪಕಿ, ಕಾಸ್ಮೆಟಿಕ್ಸ್ ಬ್ರಾಂಡ್‌ನ ಮಾಲೀಕರಾಗಿರುವ ಸನ್ನಿ ಲಿಯೋನಿ ಅದ್ಬುತ ಲೇಖಕಿ ಕೂಡ ಹೌದು. ಸ್ಟ್ರೀಟ್ಸ್ ಡ್ರೀಮ್ಸ್‌ ರೊಮ್ಯಾಂಟಿಕ್ ಎಂಬ ಸಣ್ಣ ಕಥೆಗಳ ಪುಸ್ತಕವನ್ನುನ ಕೂಡ ಬರೆದಿದ್ದಾರೆ.

  2017ರಲ್ಲಿ ಹೆಣ್ಣು ಮಗುವನ್ನು ದತ್ತು ಪಡೆದ ಸನ್ನಿ

  2011 ರಲ್ಲಿ ನಟಿ ಸನ್ನಿ ಲಿಯೋನಿ ನಟ ಡೇನಿಯಲ್ ವೆಬರ್‌ ಜೊತೆ ಮದುವೆಯಾದರು. ಇದಾದ ಬಳಿಕ 2017 ರಲ್ಲಿ ಹೆಣ್ಣು ಮಗುವನ್ನು ಸನ್ನಿ ದಂಪತಿ ದತ್ತು ಪಡೆದುಕೊಂಡರು. ಆ ಮಗುವಿಗೆ ನಿಶಾ ಕೌರ್ ವೆಬರ್ ಎಂದು ಹೆಸರಿಡಲಾಯಿತು. ನಂತರ ಬಾಡಿಗೆ ತಾಯ್ತತನದ ಮೂಲಕ ಆಶರ್ ಮತ್ತು ನೂರ್‌ ಮಕ್ಕಳನ್ನು ಸನ್ನಿ ದಂಪತಿ ಪಡೆದುಕೊಂಡರು. ಒಟ್ಟು ಮೂವರು ಮಕ್ಕಳ ತಾಯಿಯಾಗಿರುವ ಸನ್ನಿ ಲಿಯೋನಿ ಫ್ಯಾಮಿಲಿ ಜೊತೆ ಸಂತಸದಿದ್ದಾರೆ. ಸದ್ಯ ಈಗ ಆಲ್ಬಂ ಸಾಂಗ್‌ಗಳಲ್ಲಿ ನಟಿಸುತ್ತಿರುವ ಸನ್ನಿ ಲಿಯೋನಿ ಬಾಲಿವುಡ್‌ ಸಿನಿಮಾಗಳಲ್ಲೂ ತಮ್ಮ ನಟನೆಯನ್ನು ಮುಂದುವರೆಸಿದ್ದಾರೆ.

  English summary
  Happy Birthday to Bollywood Actress Sunny Leone: Know Interesting Facts About Sunny Leone.
  Friday, May 13, 2022, 14:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X