400 ಯುವತಿಯರನ್ನ ಹಿಂದಿಕ್ಕಿ ಚಿತ್ರಕ್ಕೆ ಆಯ್ಕೆಯಾಗಿದ್ದ ಆಲಿಯಾ ; ಕ್ಯೂಟ್ ಬೆಡಗಿಯ ಸಂಭಾವನೆ ಎಷ್ಟು..?

ಗ್ಲ್ಯಾಮರ್ ಹಾಗೂ ಗ್ರಾಮರ್ ಎರಡನ್ನೂ ಹೊಂದಿರುವ ನಟಿ ಆಲಿಯಾ ಭಟ್. ತಂದೆಯ ನಾಮಬಲ ಚಿತ್ರರಂಗಕ್ಕೆ ಇವರನ್ನ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿತ್ತಾದರೂ, ಆ ನಂತರ ಆಲಿಯಾ ಬೆಳೆದಿದ್ದು, ನೆಲೆಯೂರಿದ್ದು ತನ್ನ ಪರಿಶ್ರಮದಿಂದ. ಇಂಥ ಆಲಿಯಾಗೆ ಇಂದು ಹುಟ್ಟುಹಬ್ಬದ ಸಂಭ್ರಮ.

12 ವರ್ಷಗಳ ನಟನಾ ವೃತ್ತಿಜೀವನದಲ್ಲಿ, ಆಲಿಯಾ ಸುಮಾರು 16 ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ, ಅದರಲ್ಲಿ 12 ಹಿಟ್, 2 ಫ್ಲಾಪ್ ಮತ್ತು 2 ಎವರೇಜ್ ಸಿನಿಮಾಗಳು.
ಇನ್ನೂ ಆಲಿಯಾ ಪಾಪ್ಯುಲಾರಿಗೆ ಕೈಗನ್ನಡಿಯೆಂಬಂತೆ ಇವರ ಮುಂಬರುವ ನಾಲ್ಕು ಚಿತ್ರಗಳಿಗೆ ಸುಮಾರು 1000 ಕೋಟಿ ರೂಪಾಯಿಯನ್ನ ಬಾಲಿವುಡ್ ಹೂಡಿದೆ. ಈ ಸಾಲಿನಲ್ಲಿ ಜಿಗ್ರಾ, ಲವ್ ಅಂಡ್ ವಾರ್, ಜೀ ಲೆ ಜರಾ ಮತ್ತು ಬ್ರಹ್ಮಾಸ್ತ್ರ 2 ಚಿತ್ರಗಳು ಸೇರಿವೆ.

Happy birthday to Bollywood s beautiful Actress Alia Bhatt

ಆಲಿಯಾ 2012 ರಲ್ಲಿ 'ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರದ ಮೂಲಕ ಬೆಳ್ಳಿ ಪರದೆಗೆ ಲಗ್ಗೆ ಇಟ್ಟರು. ಇನ್ನೂ ವಿಶೇಷ ಅಂದರೆ ಚಿತ್ರಕ್ಕೆ ಆಲಿಯಾ ಸುಲಭವಾಗಿ ಆಯ್ಕೆಯಾಗಿಲ್ಲ. ಯಾಕೆಂದರೆ ಇವರನ್ನು ಹೊರತು ಪಡಿಸಿ ಸುಮಾರು 400 ಯುವತಿಯರು ಆಡಿಷನ್‌ನಲ್ಲಿ ಭಾಗವಹಿಸಿದ್ದರು. ಅವರೆಲ್ಲರನ್ನೂ ಹಿಂದಿಕ್ಕಿ ಆಲಿಯಾ ಈ ಚಿತ್ರಕ್ಕೆ ಆಯ್ಕೆಯಾಗಿದ್ದರು.

ಕರಣ್ ಜೋಹರ್ ಸಲಹೆ ಮೇರೆಗೆ ತೂಕ ಇಳಿಸಿಕೊಂಡಿದ್ದ ನಟಿ..!

ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರಕ್ಕೆ ಆಲಿಯಾ ಆಡಿಷನ್ ಕೊಡಲು ಹೋದಾಗ, ಆಲಿಯಾ ದಪ್ಪಗಿದ್ದರು. ಈ ಕಾರಣಕ್ಕೆ ಚಿತ್ರದ ನಿರ್ಮಾಪಕ ಕರಣ್ ಜೋಹರ್ ತೂಕ ಇಳಿಸಿಕೊಳ್ಳುವಂತೆ ಸಲಹೆಯನ್ನ ನೀಡಿದ್ದರು. ಕರಣ್ ಹೇಳಿದ ಮಾತನ್ನ ಗಂಭೀರವಾಗಿ ತೆಗೆದುಕೊಂಡಿದ್ದ ಆಲಿಯಾ , ಕೇವಲ ಮೂರೇ ತಿಂಗಳಿನಲ್ಲಿ ಹದಿನಾರು ಕೆ.ಜಿ ಇಳಿಸಿಕೊಂಡಿದ್ದರು. ಆಲಿಯಾ ಭಟ್ ಅವರ ಈ Transformation ನೋಡಿ ಖುದ್ದು ಕರಣ್ ಅವಕ್ಕಾಗಿದ್ದರು.

ಸದ್ಯಕ್ಕೆ ಆಲಿಯಾ ಈಗ ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಚಿತ್ರವೊಂದಕ್ಕೆ ಸುಮಾರು 20-25 ಕೋಟಿ ರೂ. ಇದೆ. 'ಗಂಗೂಬಾಯಿ ಕಥಿಯಾವಾಡಿ' ಚಿತ್ರಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು ಆಲಿಯಾ ಭಟ್.

Happy birthday to Bollywood s beautiful Actress Alia Bhatt

ಬೇಡಿಕೆಯಲ್ಲಿದ್ದಾಗಲೇ ದಕ್ಷಿಣಕ್ಕೆ ಬಂದ ಆಲಿಯಾ..!

ಸಾಮಾನ್ಯವಾಗಿ ಬಾಲಿವುಡ್‍ನಲ್ಲಿ ಅವಕಾಶ ಕಡಿಮೆಯಾದ ಮೇಲೆ ಕೆಲವರು ದಕ್ಷಿಣದ ಕಡೆ ಮುಖ ಮಾಡುವುದುಂಟು. ಆದರೆ ಆಲಿಯಾ ಪರಿಸ್ಥಿತಿ ಹಾಗಿಲ್ಲ. ಅವರ ಕಾಲ್‍ಶೀಟ್‍ಗಾಗಿ ಅಲ್ಲಿನ ನಿರ್ಮಾಪಕರು ಕಾಯುತ್ತಿದ್ದಾಗಲೇ, ಆಲಿಯಾ ದಕ್ಷಿಣದ ಕಡೆ ಬಂದಿದ್ದರು. ಆರ್.ಆರ್.ಆರ್. ಚಿತ್ರದ ಮೂಲಕ ಇಲ್ಲಿಯೂ ತಮ್ಮ ಅಭಿಮಾನಿ ಬಳಗವನ್ನ ಸೃಷ್ಟಿಸಿಕೊಂಡರು.

ಒಟ್ಟಿನಲ್ಲಿ ಬಾಲಿವುಡ್ ನ ಯಶಸ್ವಿ ಹಾಗೂ ಬೇಡಿಕೆ ನಟಿಮಣಿಗಳ ಪೈಕಿ ಆಲಿಯಾ ಭಟ್ ಕೂಡ ಒಬ್ಬರು. ಸಾಕಷ್ಟು ಹಿಟ್ ಸಿನಿಮಾಗಳ ಮೂಲಕವೇ ಬಿ ಟೌನ್ ನಲ್ಲಿ ನೆಲೆ ಕಂಡುಕೊಂಡಿರುವ ಆಲಿಯಾ ಹೀಗೆ ತಮ್ಮ ಚಿತ್ರಗಳ ಮೂಲಕ ಅಭಿಮಾನಿಗಳನ್ನ ರಂಜಿಸಲಿ ಅನ್ನುವುದು ಸಿನಿಪ್ರೇಮಿಗಳ ಆಶಯ

More from Filmibeat

English summary
Alia bhatt, who is a living example of beauty with brain celebrates her 31st birthday today i.e. on 15 March. She is considered one of the most successful actors in Indian cinema
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X