ಮದುವೆಗೂ ಮುನ್ನ ತಂದೆಯಾಗುತ್ತಿರುವ ಹಾರ್ದಿಕ್ ಪಾಂಡ್ಯಗೆ ಶುಭಾಶಯಗಳ ಮಹಾಪೂರ
ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 2020ರ ಮೊದಲ ದಿನವೆ ಎಂಗೇಜ್ ಆಗುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಹೊಸ ವರ್ಷದ ದಿನವೇ ಸರ್ಬಿಯಾದ ಬ್ಯೂಟಿ ನಟಿ ನತಾಶಾ ಕೈಗೆ ವಜ್ರದ ಉಂಗುರವನ್ನು ತೊಡಿಸಿ ಹಾರ್ದಿಕ್ ಪಾಂಡ್ಯ ಪ್ರೇಮ ನಿವೇದನೆ ಮಾಡಿಕೊಂಡಿದ್ದರು.
ಎಂಗೇಜ್ ಆಗಿ 6 ತಿಂಗಳಲ್ಲಿಯೆ ಹಾರ್ದಿಕ್ ಮತ್ತು ನತಾಶಾ ಜೋಡಿ ಮತ್ತೊಂದು ಗುಡ್ ನ್ಯೂಸ್ ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಹೌದು, ಹಾರ್ದಿಕ್ ಮತ್ತು ನಾತಾಶಾ ಜೋಡಿ ಮದುವೆಗೂ ಮುನ್ನವೆ ಅಪ್ಪ-ಅಮ್ಮ ಆಗುತ್ತಿದ್ದಾರೆ. ಹಾರ್ದಿಕ್ ಭಾವಿ ಪತ್ನಿ ನತಾಶಾ ತಾಯಿ ಆಗುತ್ತಿದ್ದಾರೆ. ಈ ಸಂತೋಷದ ವಿಷಯವನ್ನು ಹಾರ್ದಿಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಅಪ್ಪನಾಗುತ್ತಿರುವ ಸಂತಸ ಹಂಚಿಕೊಂಡ ಹಾರ್ದಿಕ್
ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಳ್ಳುವ ಸಂತಸದಲ್ಲಿದ್ದಾರೆ. ಈ ಬಗ್ಗೆ ಹಾರ್ದಿಕ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು ಹೀಗೆ, "ನತಾಶಾ ಮತ್ತು ನಾನು ಅದ್ಭುತವಾದ ಪಯಣಹೊಂದಿದ್ದೇವೆ. ನಾವಿಬ್ಬರು ಶೀಘ್ರದಲ್ಲಿಯೆ ಹೊಸ ಜೀವವೊಂದನ್ನು ಸ್ವಾಗತಿಸಲು ಉತ್ಸುಕರಾಗಿದ್ದೀವಿ. ಜೀವನದ ಈ ಹಂತಕ್ಕಾಗಿ ರೋಮಾಂಚನಗೊಂಡಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಶುಭಾಶಯಗಳನ್ನು ಬಯಸುತ್ತೇನೆ" ಎಂದು ಸಂತಸ ಹಂಚಿಕೊಂಡಿದ್ದಾರೆ.

ಇಬ್ಬರಿಗೂ ಶುಭಾಶಯಗಳ ಮಾಹಾಪೂರ
ಮಗುವಿನ ನಿರೀಕ್ಷೆಯಲ್ಲಿರುವ ಹಾರ್ದಿಕ್ ಮತ್ತು ನತಾಶಾ ಜೋಡಿಗೆ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿದೆ. ಅಭಿಮಾನಿಗಳ ಜೊತೆಗೆ ಕ್ರಿಕೆಟ್ ಗಣ್ಯರು ಸಹ ವಿಶ್ ಮಾಡುತ್ತಿದ್ದಾರೆ. ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಮುಖ್ಯ ಕೋಚ್ ರವಿ ಶಾಸ್ತ್ರಿ, ಚಹಲ್, ಶಿಖರ್ ಧವನ್ ಸೇರಿದಂತೆ ಅನೇಕರು ಶುಭಾಶಯ ತಿಳಿಸುತ್ತಿದ್ದಾರೆ.

ಸರ್ಬಿಯಾ ಮೂಲದ ಯುವತಿ ನತಾಶಾ
ನತಾಶಾ ಸ್ಟ್ಯಾಂಕೋವಿಕ್ ಮೂಲತಃ ಸರ್ಬಿಯಾದವರು. ಭಾರತೀಯ ಚಿತ್ರರಂಗದಲ್ಲಿ ನಟಿಯಾಗಿ, ರಿಯಾಲಿಟಿ ಟಿವಿ ಸ್ಟಾರ್ ಆಗಿ ನತಾಶಾ ಸ್ಟ್ಯಾಂಕೋವಿಕ್ ಗುರುತಿಸಿಕೊಂಡಿದ್ದಾರೆ. ಸರ್ಬಿಯಾದಲ್ಲಿ ಹುಟ್ಟಿದ ನತಾಶಾಗಿನ್ನೂ 27 ವರ್ಷ ವಯಸ್ಸು.

ಬಿಗ್ ಬಾಸ್ ನಲ್ಲಿ ನತಾಶಾ
2018 ರಲ್ಲಿ ಬಿಡುಗಡೆ ಆದ ಶಾರುಖ್ ಖಾನ್ ಅಭಿನಯದ 'ಝೀರೋ' ಚಿತ್ರದಲ್ಲಿ ನತಾಶಾ ಸ್ಟ್ಯಾಂಕೋವಿಕ್ ಅಭಿನಯಿಸಿದ್ದರು. ಇದಲ್ಲದೇ ಹಲವು ಸಿನಿಮಾಗಳ ಡ್ಯಾನ್ಸ್ ನಂಬರ್ ಗಳಲ್ಲಿ ನತಾಶಾ ಹೆಜ್ಜೆ ಹಾಕಿದ್ದಾರೆ. ಜೊತೆಗೆ ಹಿಂದಿಯ 'ಬಿಗ್ ಬಾಸ್-8'ರಲ್ಲಿ ನತಾಶಾ ಸ್ಟ್ಯಾಂಕೋವಿಕ್ ಸ್ಪರ್ಧಿಯಾಗಿ ಭಾಗವಹಿಸಿದ್ದರು. 28ನೇ ದಿನಕ್ಕೆ 'ಬಿಗ್ ಬಾಸ್' ಮನೆಯಿಂದ ನತಾಶಾ ಸ್ಟ್ಯಾಂಕೋವಿಕ್ ಹೊರ ಬಂದಿದ್ದರು.

ಕನ್ನಡ ಚಿತ್ರದಲ್ಲಿ ನತಾಶಾ
ಇನ್ನೂ ಯೋಗರಾಜ್ ಭಟ್ ನಿರ್ದೇಶನದ ದುನಿಯಾ ವಿಜಯ್ ಅಭಿನಯದ 'ದನ ಕಾಯೋನು' ಚಿತ್ರದ ಹಾಡೊಂದರಲ್ಲೂ ನತಾಶಾ ಸ್ಟ್ಯಾಂಕೋವಿಕ್ ಡ್ಯಾನ್ಸ್ ಮಾಡಿದ್ದಾರೆ. ಸಿನಿರಂಗದಲ್ಲಿ ಅಷ್ಟೊಂದು ಸದ್ದು ಮಾಡದ ನತಾಶಾ ಸ್ಟ್ಯಾಂಕೋವಿಕ್ ಇದೀಗ ಹಾರ್ದಿಕ್ ಪಾಂಡ್ಯ ಗರ್ಲ್ ಫ್ರೆಂಡ್ ಆಗಿ ಬ್ರೇಕಿಂಗ್ ನ್ಯೂಸ್ ಮಾಡ್ತಿದ್ದಾರೆ.


Click it and Unblock the Notifications











