ತಂದೆಯಾದ ಖುಷಿಯಲ್ಲಿ ಹಾರ್ದಿಕ್ ಪಾಂಡ್ಯ: ಸಂತಸ ಹಂಚಿಕೊಂಡ ದಂಪತಿ

ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಂದೆಯಾದ ಸಂತಸದಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ ಪತ್ನಿ ನಟಿ ನತಾಶಾ ಸ್ಟಾಂಕೋವಿಕ್ ಇಂದು (ಜುಲೈ 30) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸವನ್ನು ಹಾರ್ದಿಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುದ್ದು ಮಗುವಿನ ಕೈ ಫೋಟೋವನ್ನು ಹಂಚಿಕೊಂಡು ಗಂಡು ಮಗು ಆಗಮಿಸಿರುವ ಬಗ್ಗೆ ಹೇಳಿದ್ದಾರೆ.

Recommended Video

ಮದುವೆಗೂ ಮುಂಚೆ ಅಪ್ಪನಾದ ಹಾರ್ದಿಕ್ ಪಾಂಡ್ಯ | Hardik Pandya

ಹಾರ್ದಿಕ್ ಪಾಂಡ್ಯ 2020ರ ಮೊದಲ ದಿನವೇ ಎಂಗೇಜ್ ಆಗುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಹೊಸ ವರ್ಷದ ದಿನವೇ ಸರ್ಬಿಯಾದ ಬ್ಯೂಟಿ ನಟಿ ನತಾಶಾ ಕೈಗೆ ವಜ್ರದ ಉಂಗುರವನ್ನು ತೊಡಿಸಿ ಹಾರ್ದಿಕ್ ಪಾಂಡ್ಯ ಪ್ರೇಮ ನಿವೇದನೆ ಮಾಡಿಕೊಂಡಿದ್ದರು.

ಎಂಗೇಜ್ ಆಗಿ 6 ತಿಂಗಳಲ್ಲಿಯೆ ಹಾರ್ದಿಕ್ ಮತ್ತು ನತಾಶಾ ಜೋಡಿ ಮತ್ತೊಂದು ಗುಡ್ ನ್ಯೂಸ್ ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದರು. ಹಾರ್ದಿಕ್ ಮತ್ತು ನಾತಾಶಾ ಜೋಡಿ ಮದುವೆಗೂ ಮುನ್ನವೆ ಅಪ್ಪ-ಅಮ್ಮ ಆಗುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದರು. ಇದೀಗ ಗಂಡು ಮಗುವಿನ ತಂದೆಯಾದ ಖುಷಿಯನ್ನು ಹಂಚಿಕೊಂಡಿದ್ದಾರೆ.

Hardik Pandya And Natasa Stankovic Blessed With Baby Boy

ಹಾರ್ದಿಕ್ ದಂಪತಿಗೆ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿದೆ. ಅಭಿಮಾನಿಗಳು ಮತ್ತು ಕ್ರಿಕೆಟ್ ಹಾಗೂ ಸಿನಿ ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಶುಭಹಾರೈಸುತ್ತಿದ್ದಾರೆ.

ನತಾಶಾ ಸ್ಟ್ಯಾಂಕೋವಿಕ್ ಮೂಲತಃ ಸರ್ಬಿಯಾದವರು. ಭಾರತೀಯ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ರಿಯಾಲಿಟಿ ಶೋ ಹಾಗೂ ಟಿವಿ ಸ್ಟಾರ್ ಆಗಿ ನತಾಶಾ ಸ್ಟಾಂಕೋವಿಕ್ ಗುರುತಿಸಿಕೊಂಡಿದ್ದಾರೆ. ವಿಶೇಷ ಅಂದರೆ ಕನ್ನಡದ 'ದನಕಾಯೋನು' ಸಿನಿಮಾದಲ್ಲಿ ನತಾಶಾ ನಟಿಸಿದ್ದಾರೆ. 27 ವರ್ಷದ ನತಾಶಾ ಈಗ ತಾಯಿಯಾದ ಖುಷಿಯಲ್ಲಿದ್ದಾರೆ.

More from Filmibeat

English summary
Hardik Pandya and Natasa Stankovic welcomed their first child. natasa stankovic blessed with Baby Boy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X