ಡಿವೋರ್ಸ್ ಆಗಿದ್ದರೇನಂತೆ; ಮಾಜಿ ಪತ್ನಿ ನತಾಶಾ ಮತ್ತು ಮಗನಿಗೆ ₹4 ಕೋಟಿಯ ಕಾರ್ ಗಿಫ್ಟ್ ನೀಡಿದ ಹಾರ್ದಿಕ್ ಪಾಂಡ್ಯ

ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ .. ಪ್ರೀತಿ ಅಂದರೆ ಬದುಕು, ಭವಿಷ್ಯ, ಭಾಷೆ, ಕನಸು, ನಗು, ಇನ್ನೂ ಏನೆಲ್ಲಾ ! ಇಂಥಾ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮಸೆಲೆಯಾಗಿ ಬೆಳೆಸುವ -ಉಳಿಸುವ ವೃತವೇ ದಾಂಪತ್ಯ. ಆದರೆ ಈಗೀಗ ಪ್ರೀತಿ ಮತ್ತು ದಾಂಪತ್ಯದ ಅರ್ಥ ಎರಡು ಬದಲಾಗಿದೆ. ಅದರಲ್ಲಿಯೂ ರಂಗೀನ್ ಲೋಕದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ.

ಇಲ್ಲಿ ದಿನ ಬೆಳಗಾದರೆ ಅನೇಕರು ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳುತ್ತಾರೆ. ಮದುವೆಯ ಬಂಧನದಿಂದ ಹೊರ ಬರುತ್ತಾರೆ. ವಿಚ್ಛೇದನ ಪಡೆಯುತ್ತಾರೆ. ಆದರೆ ಹಿಂದಿನ ಕಾಲದಲ್ಲಿ ಹಿಂದೆ ಎಲ್ಲ ವಿಚ್ಛೇದನ ಅವಮಾನ ಎಂಬಂತೆ ಭಾಸವಾಗುತ್ತಿತ್ತು. ಸಮಾಜ ಅನುಮಾನದ ದೃಷ್ಟಿಯಿಂದ ನೋಡುತ್ತಿತ್ತು. ಪರಸ್ಪರ ಮುಖ ನೋಡಲು ಕೂಡ ಅಸಹ್ಯ ಪಡುವಂತಾಗುತ್ತಿತ್ತು.

Hardik Pandya Gifts Ex-Wife Natasa and Son 4 Crore Land Rover Defender

ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅದರಲ್ಲಿಯೂ ಚಿತ್ರರಂಗ ಮತ್ತು ಹಣವಂತರ ವಿಚಾರದಲ್ಲಿ ವಿಚ್ಛೇದನ ಕೇವಲ ದಾಂಪತ್ಯ ಜೀವನದ ಅಂತ್ಯವೇ ಹೊರತು ಸಂಬಂಧಗಳ ಅಂತ್ಯ ಅಲ್ಲ. ಡಿವೋರ್ಸ್ ನಂತರವೂ ಇಲ್ಲಿ ಹಲವರು ಆಗಾಗ ಭೇಟಿಯಾಗುತ್ತಾರೆ. ತಮ್ಮ ಜೀವನದಲ್ಲೇನೂ ಆಗಿಯೇ ಇಲ್ಲವೆಂಬಂತೆ ಕುಳಿತು ಹರಟೆ ಹೊಡೆಯುತ್ತಾರೆ.

ಇನ್ನೂ ಮಕ್ಕಳಾಗಿದ್ದರೆ ಪರಸ್ಪರ ಗೌರವದಿಂದ ಮಕ್ಕಳ ಜವಾಬ್ಧಾರಿಯನ್ನು ಇಬ್ಬರು ಹೊರುತ್ತಾರೆ. ಮಕ್ಕಳ ಆಸೆ ಅಭಿಲಾಷೆಯನ್ನು ಈಡೇರಿಸುತ್ತಾರೆ. ಉದಾಹರಣೆಗೆ ಹಾರ್ದಿಕ್ ಪಾಂಡ್ಯ.

ಹೌದು, ಅನೇಕರಿಗೆ ಗೊತ್ತಿರುವಂತೆ .. ಹಾರ್ದಿಕ್ ಪಾಂಡ್ಯ ಮತ್ತು ಕನ್ನಡದಲ್ಲಿ ''ದನ ಕಾಯೋನು'' ಚಿತ್ರ ಮಾಡಿದ್ದ ನಟಿ ಮತ್ತು ಮಾಡೆಲ್ ನತಾಶಾ ಈಗ ದೂರವಾಗಿದ್ದಾರೆ. ಮೊದಲ ನೋಟ, ಮೊದಲ ಭೇಟಿ, ಮೊದಲ ಸ್ಪರ್ಶ ಮರೆತು ಅವರ ಅವರ ಬದುಕಿನಲ್ಲಿ ನೆಮ್ಮದಿಯಾಗಿದ್ದಾರೆ. ಎರಡೆರಡು ಬಾರಿ ಮದುವೆಯಾಗಿದ್ದನ್ನೂ ಕೂಡ ಇಬ್ಬರು ಮರೆತು ಖುಷಿಯಾಗಿದ್ದಾರೆ.

ನತಾಶಾ ತಮ್ಮ ಕೆಲಸ, ಪ್ರವಾಸ, ಮಗನ ಲಾಲನೆ-ಪಾಲನೆಯಲ್ಲಿ ಬ್ಯುಸಿಯಾಗಿದ್ದರೆ, ಹಾರ್ದಿಕ್ ಪಾಂಡ್ಯ ಕ್ರಿಕೆಟ್‌ನಲ್ಲಿ ತಲ್ಲೀನರಾಗಿದ್ದಾರೆ. ಹಾಗಂಥ ಹಾರ್ದಿಕ್ ಪಾಂಡ್ಯ ಆಟದಲ್ಲಿ ಸಂಪೂರ್ಣವಾಗಿ ಕಳೆದು ಹೋಗಿಲ್ಲ. ಬ್ಯಾಟ್..ಬಾಲ್ ಮತ್ತು ಮೈದಾನದ ಸುತ್ತ ಸುತ್ತುತ್ತಿಲ್ಲ. ಬದಲಿಗೆ ನತಾಶಾ ಅವರನ್ನು ಮರೆತು 24ರ ಹರೆಯದ ಚಲುವೆ, ನತಾಶಾ ಅವರಂತೆಯೇ ಮಾಡೆಲ್ ಮತ್ತು ನಟಿಯಾಗಿ ಕೂಡ ಗುರುತಿಸಿಕೊಂಡಿರುವ ಮಹೀಕಾ ಶರ್ಮಾ ಹಿಂದೆ ಬಿದ್ದಿದ್ದಾರೆ. ಪ್ರೇಮದ ಅಮಲನ್ನೇರಿಸಿಕೊಂಡು ಕಿಕ್ಕೇರಿಸುವ ಫೋಟೊಗಳನ್ನು ಕೂಡ ಹಂಚಿಕೊಳ್ಳುತ್ತಿದ್ದಾರೆ.

Hardik Pandya Gifts Ex-Wife Natasa and Son 4 Crore Land Rover Defender

ಇಂಥಾ ಹಾರ್ದಿಕ್ ಪಾಂಡ್ಯ ಈಗ ತಮ್ಮ ಮೊದಲ ಪತ್ನಿ ನತಾಶಾ ಮತ್ತು ತಮ್ಮ ಮಗ ಅಗಸ್ತ್ಯಗೆ ನಾಲ್ಕು ಕೋಟಿಯ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಿದ್ಧಾರೆ. ಮಾಜಿ ಪತಿಯ ಈ ಸರ್ ಫ್ರೈಸ್ ಕಂಡು ನತಾಶ ಹಿರಿ ಹಿರಿ ಹಿಗ್ಗಿದ್ಧಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹಲವರು ಹಾರ್ದಿಕ್ ಪಾಂಡ್ಯ ಅವರ ಈ ನಡೆಯನ್ನು ಮೆಚ್ಚಿಕೊಂಡಿದ್ಧಾರೆ. ವಿಚ್ಛೇದನದ ನಂತರವೂ ಇಂತಹ ದುಬಾರಿ ಉಡುಗೊರೆ ನೀಡುವುದು ಕೇವಲ ಶ್ರೀಮಂತಿಕೆಯ ಪ್ರದರ್ಶನವಲ್ಲ. ಬದಲಾಗಿ, ನಾವು ಬೇರೆಯಾಗಿದ್ದರೂ ಕೂಡ ನಮ್ಮ ಮಗನಿಗೆ ತಂದೆ-ತಾಯಿಯ ಪ್ರೀತಿ ಸಿಗಬೇಕು ಮತ್ತು ಮಗನಿಗೆ ಸಿಗಬೇಕಾದ ಸಕಲ ಸೌಲಭ್ಯ ಸಿಗಬೇಕು ಎಂಬ ಹಾರ್ದಿಕ್ ಅವರ ನಿಲುವು ನಿಜಕ್ಕೂ ಮೆಚ್ಚುವಂತಹದ್ದು ಎಂದು ಹೇಳುತ್ತಿದ್ಧಾರೆ. ಸಂಬಂಧಗಳು ಮುರಿದು ಬಿದ್ದರೂ ಕೂಡ ಮಾನವೀಯತೆ ಮತ್ತು ಗೌರವ ಉಳಿಸಿಕೊಳ್ಳುವುದು ಹೇಗೆ ಎಂಬುದಕ್ಕೆ ಹಾರ್ದಿಕ್ ಮತ್ತು ನತಾಶಾ ಅತ್ಯುತ್ತಮ ಉದಾಹರಣೆ ಎಂಬ ಅಭಿಪ್ರಾಯವನ್ನು ಕೂಡ ಹಲವರು ವ್ಯಕ್ತಪಡಿಸುತ್ತಿದ್ಧಾರೆ.

ಅಂದ್ಹಾಗೇ ಬರೋಬ್ಬರಿ ₹4 ಕೋಟಿ ರೂಪಾಯಿ ಬೆಲೆಯ ಸ್ಯಾಂಟೋರಿನಿ ಬ್ಲಾಕ್ ವಿ8 ಮಾದರಿಯ ಈ ಐಶಾರಾಮಿ ''ಲ್ಯಾಂಡ್ ರೋವರ್ ಡಿಫೆಂಡರ್'' ಕಾರಿನ "ಪಾಪಾ ಟು ಅಗಸ್ತ್ಯ" ಎಂಬ ಪ್ರೀತಿಯ ಸಂದೇಶವನ್ನೂ ಕೂಡ ಬರೆಯಲಾಗಿದೆ. ಮಗನ ಹುಟ್ಟುಹಬ್ಬದ ಪ್ರಯುಕ್ತ ಹಾರ್ದಿಕ್ ಪಾಂಡ್ಯ ಈ ಉಡುಗೊರೆಯನ್ನು ನಿಡಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.

More from Filmibeat

English summary
Inside Hardik Pandya’s ₹4 Crore gift: A black Land Rover Defender for Natasa Stankovic and Agastya. Discover the specs of this beastly SUV and why Hardik’s grand gesture is winning the internet today.
Read more about: divorce car cricket
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X