ವಿಚ್ಛೇದನದ ನಂತರ ಮಗನನ್ನು ತಬ್ಬಿಕೊಂಡು ಭಾವುಕಗೊಂಡ ಹಾರ್ದಿಕ್ ಪಾಂಡ್ಯ..!

ಚಿತ್ರರಂಗದ ಧ್ರುವತಾರೆಯರ ಬದುಕಿನಲ್ಲಿ ಸರಸ-ವಿರಸ-ಪ್ರೇಮ-ವಿರಹ-ವೇದನೆ-ವಿಚ್ಛೇದನ ಇವೆಲ್ಲವೂ ಮಾಮೂಲು. ಇಂದು ಜೊತೆ ಜೊತೆಯಲ್ಲಿ ಓಡಾಡಿ, ಮರು ದಿನವೇ ಇಲ್ಲಿ ಅನೇಕರು ಬ್ರೇಕಪ್‌ ಮಾಡಿಕೊಳ್ಳುತ್ತಾರೆ. ಆದರ್ಶ ದಂಪತಿಗಳಂತೆ ಬದುಕುತ್ತೇವೆ ಎಂದು ಹೇಳಿ, ಮದುವೆಯಾದ ಕೆಲವೇ ದಿನ ಅಥವಾ ವರ್ಷಗಳಲ್ಲಿ ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ. ಈ ಸಾಲಿಗೆ ಸೇರಿಕೊಂಡಿರುವ ಭಾರತದ ಕ್ರಿಕೆಟ್ ಪ್ಲೇಯರ್ ಹಾರ್ದಿಕ್ ಪಾಂಡ್ಯ ಮತ್ತು ನಟಿ ನತಾಶಾ ಸ್ಟಾಂಕೋವಿಕ್ ಈಗ ಒಂದೂವರೆ ತಿಂಗಳ ನಂತರ ಮುಖಾಮುಖಿಯಾಗಿದ್ದಾರೆ. ಮಗನನ್ನು ನೋಡಿ ಹಾರ್ದಿಕ್ ಪಾಂಡ್ಯ ಭಾವುಕರಾಗಿದ್ದಾರೆ.

ಹೌದು, ನಾವು ಇಬ್ಬರು ದೂರವಾಗುತ್ತಿದ್ದೇವೆ ಎಂದು ಹೇಳುವ ಮುನ್ನ, ಮಗನ ಜೊತೆ ಸೆರ್ಬಿಯಾಗೆ ತೆರಳಿದ್ದ ನತಾಶಾ ಈಗ ಮರಳಿ ಭಾರತಕ್ಕೆ ಬಂದಿದ್ದಾರೆ. ಮಗನನ್ನು ತಮ್ಮ ತಂದೆಯ ಮನೆಗೆ ಬಿಟ್ಟು ಬಂದಿದ್ದಾರೆ. ಮಗನನ್ನು ನೋಡಿದ ಹಾರ್ದಿಕ್ ಪಾಂಡ್ಯ ಭಾವುಕರಾಗಿದ್ಧಾರೆ. ಸದ್ಯಕ್ಕೆ ತಂದೆ ಮತ್ತು ಮಗನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

Hardik Pandya is thrilled as his son Agastya visits for the first time since his split with Natasa

ಹಾರ್ದಿಕ್ ಸಹೋದರ ಕೃನಾಲ್ ಪಾಂಡ್ಯ ಅವರ ಪತ್ನಿ ಪಂಖೂರಿ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ಅವರ ಮಗ ಅಗಸ್ತ್ಯ ಫೋಟೋಗಳನ್ನು ತಮ್ಮ ಇನ್ಸ್‌ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಉಳಿದಂತೆ ಹಾರ್ದಿಕ್ ಪಾಂಡ್ಯ ಅವರಿಂದ ದೂರವಾದ ನತಾಶಾ ಸದ್ಯಕ್ಕೆ ತಮ್ಮ ವೃತ್ತಿಯ ಕಡೆ ಗಮನ ವಹಿಸಿದ್ದಾರೆ. ಇನ್ನೂ .. ವಿಚ್ಛೇದನದ ನಂತರ ಸಾಮಾಜಿಕ ಜಾಲತಾಣದಲ್ಲಿ ಮೊದಲಿಕ್ಕಿಂತ ತುಸು ಹೆಚ್ಚೇ ಸಕ್ರಿಯರಾಗಿರುವ ನತಾಶಾ, ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಭಿಮಾನಿಗಳ ಕಣ್ಮನ ಸೆಳೆಯುತ್ತಿದ್ದಾರೆ.

ಇನ್ನೂ ಇತ್ತ ನತಾಶಾ ಅವರಿಂದ ದೂರವಾಗಿ ಇನ್ನೂ ಮೂರು ತಿಂಗಳಾಗಿಲ್ಲ. ಆಗಲೇ ಮೂರು ಬೆಡಗಿಯರ ಜೊತೆ ಹಾರ್ದಿಕ್ ಪಾಂಡ್ಯ ಹೆಸರು ಥಳುಕು ಹಾಕಿಕೊಂಡಿದೆ. ಕೆಲವರಿಗೆ ಬಾಲಿವುಡ್ ನಾಯಕಿ ಮತ್ತು ಚಂಕಿ ಪಾಂಡೆಯ ಮಗಳು ಅನನ್ಯಾ ಪಾಂಡೆ ಮತ್ತು ಹಾರ್ದಿಕ್ ಪಾಂಡ್ಯ ಅವರ ನಡುವೆ ಕುಚ್ ಕುಚ್ ನಡೆಯುತ್ತಿದೆ ಎನ್ನುವ ಅನುಮಾನ ಇದ್ದರೆ, ಇನ್ನೂ ಕೆಲವರಿಗೆ ಬ್ರಿಟನ್ ಗಾಯಕಿ ಜಾಸ್ಮಿನ್ ವಾಲಿಯಾ ಜೊತೆ ಹಾರ್ದಿಕ್ ಪಾಂಡ್ಯ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ ಎನ್ನುವ ಅನುಮಾನ ಇದೆ. ಉಳಿದವರಿಗೆ ಪ್ಯಾರ್ ಕಾ ಪಂಚನಾಮ ಚಿತ್ರದ ನಾಯಕಿ ಇಶಿತಾ ರಾಜ್ ಮತ್ತು ಹಾರ್ದಿಕ್ ಪಾಂಡ್ಯ ನಡುವೆ ಪ್ರೇಮಾಂಕುರವಾಗಿರುವ ಅನುಮಾನ ಇದೆ.

Hardik Pandya is thrilled as his son Agastya visits for the first time since his split with Natasa

ಉಳಿದಂತೆ ಕೆಲ ದಿನದ ಹಿಂದೆ ಪ್ರೀತಿ ಅಂದರೆ ತಾಳ್ಮೆ.. ಪ್ರೀತಿ ಅಂದರೆ ದಯೆ.. ಎಂದಿರುವ ನತಾಶಾ, ಪ್ರೀತಿ ಅಸೂಯೆ ಪಡಲ್ಲ, ಪ್ರೀತಿ ಯಾವಾಗಲೈ ಹೆಮ್ಮೆ ಪಡುವುದಿಲ್ಲ. ಅದು ಯಾರನ್ನೂ ಅವಮಾನ ಮಾಡುವುದಿಲ್ಲ. ಯಾವತ್ತೂ ಪ್ರೀತಿ ಹೆಮ್ಮೆಯನ್ನು ಪಡುವುದಿಲ್ಲ, ಸ್ವಾರ್ಥಿಯಂತೂ ಪ್ರೀತಿ ಅಲ್ಲವೇ ಅಲ್ಲ, ಸುಲಭವಾಗಿ ಕೋಪಿಸಿಕೊಳ್ಳುವುದು ಇಲ್ಲ. ಪ್ರೀತಿ ಯಾವತ್ತು ತಪ್ಪುಗಳ ಕುರಿತು ದಾಖಲೆ ಇರಲ್ಲ. ಕೆಡುಕು ಇದ್ದರೆ ಪ್ರೀತಿ ಸಂತೋಷವೂ ಪಡುವುದಿಲ್ಲ. ಬದಲಿಗೆ ಪ್ರೀತಿ ನಮ್ಮನ್ನು ರಕ್ಷಿಸುತ್ತೆ. ನಂಬುತ್ತೆ. ನಮ್ಮ ಬದುಕಿಗೆ ಭರವಸೆಯನ್ನು ಕೂಡ ನೀಡುತ್ತೆ. ಪ್ರೀತಿ ಯಾವತ್ತು ವಿಫಲವಾಗುವುದಿಲ್ಲ ಎಂದು ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಬರೆದುಕೊಂಡಿದ್ದರು.

More from Filmibeat

Read more about: divorce son bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X