ಬ್ರಿಟನ್ ಗಾಯಕಿ ಜಾಸ್ಮಿನ್‌ಗೆ ಕೈ ಕೊಟ್ಟ ಹಾರ್ದಿಕ್ ಪಾಂಡ್ಯ ? ವಿರಹ ವೇದನೆಯಲ್ಲಿ ಆಲ್‌ರೌಂಡರ್ ?

ಪ್ರೀತಿ - ಪ್ರೇಮಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಅದು ಯಾರ ಮೇಲೆ, ಯಾವಾಗಲಾದರೂ, ಹೇಗಾದರು ಹುಟ್ಟಬಹುದು. ಆದರೆ ಹಿಂದೆ ಹೀಗೆ ಹುಟ್ಟಿದ ಪ್ರೀತಿಗೆ ಎಕ್ಸ್‌ಪೈರಿ ಡೇಟ್ ಇರ್ತಿರಲಿಲ್ಲ. ಆದರೆ ಈಗ ಇದೆ. ಬದಲಾದ ಈ ಕಾಲದಲ್ಲಿ ಕೇವಲ ಆಕರ್ಷಣೆಯಾಗದೆ ನಿಜವಾದ ಪ್ರೀತಿ ಆಗಿದ್ದರೆ ಮಾತ್ರ ಅದು ಕೊನೆವರೆಗೆ ಉಳಿಯುತ್ತದೆ. ಇಲ್ಲದಿದ್ದರೆ ಹುಟ್ಟಿದಷ್ಟೇ ಶರವೇಗದಲ್ಲಿ ಗುಡ್ ಬೈ ಹೇಳುತ್ತದೆ.

ಇದಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ಜಾಸ್ಮಿನ್ ವಾಲಿಯಾ ಲವ್ & ಬ್ರೇಕಪ್ ಸ್ಟೋರಿ ಮತ್ತೊಂದು ಉದಾಹರಣೆ. ಹೌದು, ಅನೇಕರಿಗೆ ಗೊತ್ತಿರುವಂತೆ .. ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಕಳೆದ ವರ್ಷ ದೂರವಾದರು. ಮೊದಲ ನೋಟ, ಮೊದಲ ಭೇಟಿ, ಮೊದಲ ಸ್ಪರ್ಶ ಮರೆತು ಅವರ ಅವರ ಬದುಕಿನಲ್ಲಿ ನೆಮ್ಮದಿಯಾಗಿ ಕಾಲ ಕಳೆಯಲು ಶುರು ಮಾಡಿದ್ದರು.

Hardik Pandya amp amp Jasmin Walia Is Their Romance Over Unfollow Sparks Breakup Rumours

ಎರಡೆರಡು ಬಾರಿ ಮದುವೆಯಾಗಿದ್ದನ್ನೂ ಕೂಡ ಇಬ್ಬರು ಮರೆತು ಖುಷಿಯಾಗಿದ್ದರು. ಇದಕ್ಕೆ ಪುರಾವೆ ಎಂಬಂತೆ ನತಾಶಾ ಅವರಿಂದ ದೂರವಾದ ನಂತರ ಹಾರ್ದಿಕ್ ಪಾಂಡ್ಯ ಹೆಸರು ಬ್ರಿಟನ್‌ನ ಬೆಡಗಿ ಜಾಸ್ಮಿನ್ ವಾಲಿಯಾ ಜೊತೆ ತಳುಕು ಹಾಕಿಕೊಂಡಿತ್ತು. ಜಾಸ್ಮಿನ್ ಜಾದೂಗೆ ಹಾರ್ದಿಕ್ ಪಾಂಡ್ಯ ಕ್ಲೀನ್ ಬೋಲ್ಡ್ ಆಗಿದ್ದಾರೆ ಎಂದೇ ಎಲ್ಲೆಡೆ ಸುದ್ದಿಯಾಗಿತ್ತು.

ಜಾಸ್ಮಿನ್ ಮತ್ತು ಹಾರ್ದಿಕ್ ಪಾಂಡ್ಯ ಅವರ ನಡಾವಳಿ ಕೂಡ ಇದಕ್ಕೆ ಪೂರಕವಾಗಿಯೇ ಇತ್ತು. 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಪಂದ್ಯದಲ್ಲಿ ದುಬೈ ಕ್ರೀಡಾಂಗಣದಲ್ಲಿ ಜಾಸ್ಮಿನ್ ವಾಲಿಯಾ ಕಾಣಿಸಿಕೊಂಡಿದ್ದರು. ಪ್ರೇಕ್ಷಕರ ನಡುವೆ ಕುಂತು ಹಾರ್ದಿಕ್ ಪಾಂಡ್ಯಗೆ ಫ್ಲೈಯಿಂಗ್‌ ಕಿಸ್‌ ಮೇಲೆ ಕಿಸ್ ನೀಡಿದ್ದರು. ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಮತ್ತು ಜಾಸ್ಮಿನ್ ಹಲವು ಕಡೆ ಜೊತೆಯಾಗಿ ಪ್ರವಾಸವನ್ನು ಕೂಡ ಮಾಡಿದ್ದರು. ಜೊತೆಯಾಗಿ ಕಾಲವನ್ನು ಕೂಡ ಕಳೆದಿದ್ದರು.

ಇವರ ಈ ಅನ್ಯೋನ್ಯತೆ- ಪ್ರೀತಿಯನ್ನು ನೋಡಿ ಅನೇಕರು ಇಬ್ಬರು ಮದುವೆಯಾಗುತ್ತಾರೆ ಎಂದೇ ಅಂದುಕೊಂಡಿದ್ದರು. ಆದರೆ ಈಗ ಹಾರ್ದಿಕ್ ಪಾಂಡ್ಯ ಮತ್ತು ಜಾಸ್ಮಿನ್ ಸಂಬಂಧ ಹಳಸಿದೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಇಬ್ಬರು ಅನ್‌ಫಾಲೋ ಮಾಡುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾ ಪ್ರವೀಣರು ಪತ್ತೆ ಹಚ್ಚಿದ್ದಾರೆ.

ಸದ್ಯ ಈ ವಿಚಾರದ ಕುರಿತು ಹಾರ್ದಿಕ್ ಪಾಂಡ್ಯ ಆಗಲಿ ಜಾಸ್ಮಿನ್ ಆಗಲಿ ಯಾವುದು ಪ್ರತಿಕ್ರಿಯೆಯನ್ನು ನೀಡಿಲ್ಲ. ಬಹುಶಃ ನೀಡುವುದು ಇಲ್ಲ. ಯಾಕೆಂದರೆ ತಮ್ಮ ನಡುವೆ ಪ್ರೇಮಾಂಕುರವಾದ ಸುದ್ದಿಯನ್ನು ಇಬ್ಬರು ಈ ಹಿಂದೆ ಒಪ್ಪಿಕೊಂಡಿಲ್ಲ. ಅಧಿಕೃತವಾಗಿ ತಮ್ಮ ಸಂಬಂಧದ ಕುರಿತು ಎಲ್ಲಿಯೂ ಮಾತನಾಡಿಲ್ಲ. ಹೀಗಿರುವಾಗ ಬ್ರೇಕಪ್ ಕಥೆಯನ್ನು ಒಪ್ಪಲು, ಸಾರ್ವಜನಿಕವಾಗಿ ಹೇಳಲು ಹೇಗೆ ಸಾಧ್ಯ ?

Hardik Pandya amp amp Jasmin Walia Is Their Romance Over Unfollow Sparks Breakup Rumours

ಅಂದ್ಹಾಗೇ ಜಾಸ್ಮಿನ್ ವಾಲಿಯಾ ಇಂಗ್ಲೆಂಡ್‌ನ ಎಸ್ಸೆಕ್ಸ್‌ ನಗರದಲ್ಲಿರುವವರು. ಇವರನ್ನು ಹೆತ್ತ ತಂದೆ ತಾಯಿ ಭಾರತೀಯ ಮೂಲದವರು. ಇನ್ನು, ಜಾಸ್ಮಿನ್ ಪ್ರಖ್ಯಾತ ಗಾಯಕಿ.2017ರಲ್ಲಿ ಬಿಡುಗಡೆಯಾಗಿದ್ದ ಇವರ "ಬೊಮ್ ಡಿಗ್ಗಿ" ಹಾಡನ್ನು ಕೇಳಿ ಅನೇಕ ಸಂಗೀತಪ್ರಿಯರು ಹುಚ್ಚೆದ್ದಿದ್ದರು. ಇದಕ್ಕೂ ಮುನ್ನ ಜಾಸ್ಮಿನ್ ವಾಲಿಯಾ ಬ್ರಿಟಿಷ್ ಟಿವಿ ರಿಯಾಲಿಟಿ ಸೀರಿಸ್ 'ದಿ ಒನ್ಲಿ ವೇ ಎಸ್ಸೆಕ್ಸ್' ನಲ್ಲಿ ಕಾಣಿಸಿಕೊಂಡಿದ್ದರು. ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾದರು. ಇಷ್ಟೇ ಅಲ್ಲ ಟಿವಿ ಕಾರ್ಯಕ್ರಮಗಳ ನಿರೂಪಕಿ ಕೂಡ ಹೌದು ಜಾಸ್ಮಿನ್ ವಾಲಿಯಾ.

ಇಂಥಾ ಜಾಸ್ಮಿನ್ ವಾಲಿಯಾ ಜೊತೆ ಹಾರ್ದಿಕ್ ಪಾಂಡ್ಯ ಸದ್ಯ ಬ್ರೇಕಪ್ ಮಾಡಿಕೊಂಡಿದ್ಧಾರೆ ಎನ್ನುವ ಸುದ್ದಿ ಹಬ್ಬಿದೆ. ಇಬ್ಬರ ನಡುವೆ ಅರಳಿದ್ದ ಪ್ರೇಮ ನಿಜಕ್ಕೂ ಕಮರಿ ಹೋಗಿದ್ಯಾ ಅಥವಾ ಇದೆಲ್ಲ ಗಮನ ಸೆಳೆಯಲು ಜೋಡಿ ಮಾಡುತ್ತಿರುವ ಗಿಮ್ಮಿಕ್ಕಾ ? ಎನ್ನುವುದಕ್ಕೆ ಉತ್ತರ ಯಾರು ಕೊಡ್ತಾರೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ. ಇಬ್ಬರು ಕ್ಯಾಮರಾದಲ್ಲಿ ಮತ್ತೆ ಸೆರೆಯಾಗುತ್ತಾರಾ ? ಎನ್ನುವ ಕೂತುಹಲ ಕೂಡ ಈಗ ಹಲವರಲ್ಲಿದೆ.

More from Filmibeat

English summary
Did Hardik Pandya and Jasmin Walia call it quits? Their recent Instagram unfollows fuel separation speculation. Uncover the details now
Read more about: cricket breakup
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X