ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ನತಾಶಾಗೆ ಸೀರೆ ಉಡಿಸಿದ ಬಾಯ್‌ಫ್ರೆಂಡ್ ; ವಿಡಿಯೋ ವೈರಲ್..!

ಮೊದಲೆಲ್ಲ ಪ್ರೀತಿಯಲ್ಲಿ ವಿರಹ ವೇದನೆ ಕಾಡಿದಾಗ ಆ ನೋವು ಅನೇಕರಿಗೆ ವರ್ಷಾನುವರ್ಷ ಕಾಡುತ್ತಿತ್ತು. ಇನ್ನೂ ಕೆಲವರಿಗೆ ಮಾನಸಿಕ ಖಿನ್ನತೆಗೆ ಕೂಡ ಆ ನೋವು ದೂಡುತ್ತಿತ್ತು. ಈ ನೋವು ತಾಳಲಾರದೆ.. ಪ್ರೀತಿ ಮರೆಯಲಾಗದೆ.. ಅನೇಕರು ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು ಇದೆ. ಆದರೆ ಈಗ ಕಾಲ ಬದಲಾಗಿದೆ. ಪ್ರೀತಿಯನ್ನೂ ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ. ಇವತ್ತು ದೂರವಾದಷ್ಟೇ ಬೇಗ ಬೇರೆಯವರಿಗೆ ಅನೇಕರು ಹತ್ತಿರವಾಗುತ್ತಾರೆ. ದಾಂಪತ್ಯ ಮುರಿದು ಬಿದ್ದ ನೋವಾಗಲಿ.. ಪ್ರೀತಿಯಲ್ಲಿ ಅನುಭವಿಸಿದ ನೋವಾಗಲಿ.. ಮುಖದಲ್ಲಿ ಈ ಯಾವ ಲವಲೇಶವೂ ಕಾಣಿಸುವುದಿಲ್ಲ. ಇದಕ್ಕೆ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಮತ್ತೊಂದು ಉದಾಹರಣೆ.

ಹೌದು, ನಿಮಗೆ ಗೊತ್ತು .. ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಈಗ ದೂರವಾಗಿದ್ದಾರೆ. ಮೊದಲ ನೋಟ, ಮೊದಲ ಭೇಟಿ, ಮೊದಲ ಸ್ಪರ್ಶ ಮರೆತು ಅವರ ಅವರ ಬದುಕಿನಲ್ಲಿ ನೆಮ್ಮದಿಯಾಗಿದ್ದಾರೆ. ಎರಡೆರಡು ಬಾರಿ ಮದುವೆಯಾಗಿದ್ದನ್ನೂ ಕೂಡ ಇಬ್ಬರು ಮರೆತು ಖುಷಿಯಾಗಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ನತಾಶಾ ಅವರ ವಿಡಿಯೋವೊಂದು ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರ ಆಕ್ರೋಶಕ್ಕೆ ಕೂಡ ಈ ವಿಡಿಯೋ ಗುರಿಯಾಗಿದೆ.

Hardik Pandya s ex-wife Natasa Stankovic was trolled after Aleksandar Alex Ilic draped her saree

ಹೌದು, ಅಸಲಿಗೆ ಹಾರ್ದಿಕ್ ಪಾಂಡ್ಯ ಅವರಿಂದ ನತಾಶಾ ದೂರವಾದ ನಂತರ ನತಾಶಾ ಹೆಸರು ಒಂದ್ಕಾಲದಲ್ಲಿ ಬಾಲಿವುಡ್ ನಾಯಕಿ ದಿಶಾ ಪಠಾಣಿ ಜೊತೆ ಸುತ್ತಾಡಿದ್ದ ಅಲೆಕ್ಸಾಂಡರ್ ಅಲೆಕ್ಸ್ ಜೊತೆ ಥಳುಕು ಹಾಕಿಕೊಂಡಿತ್ತು. ಇದಕ್ಕೆ ಪೂರಕವಾಗಿ ಇಬ್ಬರು ಜೊತೆ ಜೊತೆಯಾಗಿ ಓಡಾಡುವ ದೃಶ್ಯಗಳು ಕೂಡ ವೈರಲ್ ಆಗಿದ್ದವು. ಈಗ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ನತಾಶಾ ಇದೇ ಅಲೆಕ್ಸಾಂಡರ್ ಕೈಗೆ ಸೂಜಿ ದಾರ ನೀಡಿ ತಮ್ಮ ಸೀರೆಯನ್ನು ಹೊಲಿಸಿಕೊಂಡಿದ್ದಾರೆ. ತಮ್ಮ ಅಮೃತ ಹಸ್ತದಿಂದ ಅಲೆಕ್ಸಾಂಡರ್ ನತಾಶಾ ಅವರಿಗೆ ಸೀರೆಯನ್ನು ಕೂಡ ಉಡಿಸಿದ್ದಾರೆ.

ಇನ್ನೂ ಆ ಕಡೆ ಅಲೆಕ್ಸಾಂಡರ್ ಸೀರೆಯನ್ನು ಉಡಿಸುತ್ತಿದ್ದರೆ ಈ ಕಡೆ ನತಾಶಾ, ಅಲೆಕ್ಸಾಂಡರ್ ಅವರನ್ನು ಬಾಯ್ತುಂಬ ಹೊಗಳಿದ್ದಾರೆ. ನಾನು ಬಟ್ಟೆ ಮಾರುವ ಡೀಲರ್ ಆಗಬೇಕಿತ್ತು ಮತ್ತು ಟೇಲರ್ ಆಗಬೇಕಿತ್ತು ಎಂದು ಅಲೆಕ್ಸಾಂಡರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಬರೆದುಕೊಂಡಿದ್ದಾರೆ. ಸದ್ಯಕ್ಕೆ ಈ ವಿಡಿಯೋಗೆ ಹಲವಾರು ಅಭಿಪ್ರಾಯ ವ್ಯಕ್ತವಾಗುತ್ತಿವೆ. ನತಾಶಾ ಅವರನ್ನು ಟ್ರೋಲ್ ಕೂಡ ಮಾಡಲಾಗುತ್ತಿದೆ.

Hardik Pandya s ex-wife Natasa Stankovic was trolled after Aleksandar Alex Ilic draped her saree

ಕೆಲವರು ಈ ಕಾರಣಕ್ಕೆ ಹಾರ್ದಿಕ್ ಪಾಂಡ್ಯ ಅವರಿಂದ ವಿಚ್ಛೇದನ ಪಡೆದರಾ ಎಂದು ಪ್ರಶ್ನೆ ಮಾಡಿದರೆ, ಕೆಲವರು ಹೊಲಸು ಪದಗಳಿಂದ ನತಾಶಾ ಅವರನ್ನು ನಿಂದಿಸುತ್ತಿದ್ದಾರೆ. ಏನ್ ಕರ್ಮ ಗುರು ಇದು ನಮಗೆ, ಇನ್ನೂ ಈ ಕಣ್ಣಲ್ಲಿ ಏನೇನು ನೋಡಬೇಕೋ ಎನ್ನುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಅವರಿಗೆ ಮೋಸ ಮಾಡಲು ನಿಮಗೆ ಮನಸಾದರೂ ಹೇಗೆ ಬಂತು ಎಂದು ಕಾಮೆಂಟ್ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಅವರಿಗೆ ಇನ್ನೂ ಕೆಲವರು ಸಾಂತ್ವಾನದ ಮಾತುಗಳನ್ನು ಹೇಳಿ ಧೈರ್ಯವನ್ನು ತುಂಬಿದ್ದಾರೆ.

ಅಂದ್ಹಾಗೇ ಅಲೆಕ್ಸಾಂಡರ್ ಅಲೆಕ್ಸ್ ಮೂಲ ಕೂಡ ಸೆರ್ಬಿಯಾದಲ್ಲಿದೆ. ಇನ್ನೂ ಈ ವ್ಯಕ್ತಿ ನತಾಶಾ ಅವರ ಜಿಮ್ ಟ್ರೇನರ್ ಕೂಡ ಹೌದು. ಈ ಹಿನ್ನೆಲೆ ನತಾಶಾ ಅನೇಕ ಬಾರಿ ಅಲೆಕ್ಸಾಂಡರ್ ನನ್ನ ಸಹೋದರನಂತೆ ಎಂದು ಈ ಹಿಂದೆ ಹೇಳಿದ್ದಾರೆ. ಹೀಗಾಗಿ ನತಾಶಾ ಪರವಾಗಿ ಕೂಡ ಬೆಂಬಲದ ಧ್ವಜವನ್ನು ಹಾರಿಸಿರುವ ಕೆಲವರು ಅವರ ಇಬ್ಬರ ನಡುವೆ ಇರುವುದು ಅಕ್ಕ-ತಮ್ಮನ ಸಂಬಂಧ ಸುಖಾ ಸುಮ್ಮನೆ ವಿಷಯ ಗೊತ್ತಿಲ್ಲದೇ ಬಾಯಿಗೆ ಬಂದಂತೆ ಮಾತನಾಡಬೇಡಿ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X