ಕೂಗಾಡಿದೆ, ಕಣ್ಣೀರು ಹಾಕಿದೆ ; ಖ್ಯಾತ ನಟಿ ಜೊತೆ ಮದುವೆ, 6 ವರ್ಷಕ್ಕೆ ದಾಂಪತ್ಯ ಅಂತ್ಯ.. ಮದುವೆಯ ಕಹಿ ನೆನಪು ಹಂಚಿಕೊಂಡ ಖ್ಯಾತ ನಟ

ಪ್ರೀತಿ ಅನ್ನೋದು ಸುಂದರ ಆರಂಭ. ಮದುವೆ ಅನ್ನೋದು ಸಾಮಾಜಿಕ ವ್ಯವಸ್ಥೆ. ಆದರೆ ವಿಚ್ಛೇದನ ? ವಿಚ್ಛೇದನ ಬದುಕಿನ ಅಂತ್ಯ ಎಂದೇ ಈ ಹಿಂದೆ ನೋಡಲಾಗುತ್ತಿತ್ತು. ದಾಂಪತ್ಯ ಜೀವನ ಮುರಿದು ಬಿದ್ದರೆ ಸಮಾಜ ನೋಡುವ ದೃಷ್ಟಿಯೇ ಬೇರೆ ಇರುತ್ತಿತ್ತು. ವಿಚ್ಛೇದನವನ್ನು ದೊಡ್ಡ ಅಪಚಾರ ಎಂದು ಪರಿಗಣಿಸಲಾಗುತ್ತಿತ್ತು. ಮದುವೆ ಮುರಿದುಕೊಂಡು ಹೊರ ಬಂದರೆ ಸಾಮಾಜಿಕ ಬಹಿಷ್ಕಾರ,ನಿಂದನೆ ಮತ್ತು ತೀವ್ರ ಅವಮಾನವನ್ನು ಎದುರಿಸಬೇಕಾಗುತ್ತಿತ್ತು.

ಹೀಗಾಗಿ ಮದುವೆಯ ಬಂಧ ಎಷ್ಟೇ ವಿಷಪೂರಿತವಾಗಿದ್ದರೂ.. ಟೊಳ್ಳಾಗಿದ್ದರೂ.. ಉಸಿರುಗಟ್ಟಿಸುವಂತಿದ್ದರೂ.. ಇಷ್ಟೇ ಅಲ್ಲ ಸತ್ತರೂ ಜೊತೆಯಾಗಿಯೇ ಇರಬೇಕೆಂಬ ಒತ್ತಡದಲ್ಲಿಯೇ ಹಲವರು ಇರುತ್ತಿದ್ದರು. ಪ್ರೀತಿಯ ಪ್ರತಿಜ್ಞೆ ಮಾಡಿದ ತಪ್ಪಿಗೆ ಜೀವಮಾನವೀಡಿ ಪಾಪ ಪ್ರಜ್ಞೆಯಿಂದ ನರಳುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಸಮಾಜ ಬೆಳೆದಂತೆ ಚಿಂತನೆಗಳೂ ಬದಲಾಗಿವೆ.

Harsh Chhaya s Brutally Honest Confession On His Divorce From Shefali Shah

ಇಂದು, ಮದುವೆಯ ಅರ್ಥವೇ ಬದಲಾಗಿದೆ. ಮದುವೆ ಇಂದು ಭಾವನಾತ್ಮಕ ಸಂಬಂಧವಾಗಿ ಉಳಿದಿಲ್ಲ. ಬದಲಿಗೆ ಪರಸ್ಪರ ಗೌರವ, ಮಾನಸಿಕ ನೆಮ್ಮದಿ ಮತ್ತು ಆಧಾರದ ಮೇಲೆ ನಿಂತಿರುವ ಪಾಲುದಾರಿಕೆಯಂತೆ ಆಗಿದೆ. ವಿಚ್ಛೇದನದ ಕುರಿತು ದೃಷ್ಟಿಕೋನವೂ ಬದಲಾಗಿದೆ. ಬದಲಾದ ಈ ಕಾಲದಲ್ಲಿ ವಿಚ್ಚೇದನ ಬದುಕಿನ ಅಂತ್ಯ ಅಲ್ಲ. ಬದಲಿಗೆ ಹೊಸ ಅಧ್ಯಾಯದ ಪ್ರಾರಂಭ. ಇದಕ್ಕೆ ''ಹರ್ಷ್ ಛಾಯಾ'' ಆಡಿದ ಮಾತುಗಳೇ ಸದ್ಯದ ಉದಾಹರಣೆ.

ಹೌದು, ಹರ್ಷ್ ಛಾಯಾ.. 90ರ ದಶಕದ ಖ್ಯಾತ ಕಿರುತೆರೆ ನಟ. ''ತಾರಾ'' ಧಾರಾವಾಹಿಯ ಮೂಲಕ ವೃತ್ತಿ ಬದುಕು ಶುರು ಮಾಡಿದ ಹರ್ಷ್ಅವರಿಗೆ ''ಆರೋಹಣ್'' ಮತ್ತು ಮಹೇಶ್ ಭಟ್ ನಿರ್ದೇಶನದ ''ಸ್ವಾಭಿಮಾನ್'' ಧಾರಾವಾಹಿಗಳು ಅಪಾರವಾದ ಜನಪ್ರಿಯತೆಯನ್ನು ನೀಡಿದವು.

''ಹಸ್ರತೇನ್''ಇವರ ಮತ್ತೊಂದು ಖ್ಯಾತ ಧಾರಾವಾಹಿ.ಈ ಧಾರಾವಾಹಿಯಲ್ಲಿ ಖ್ಯಾತ ನಟಿ ಶೆಫಾಲಿ ಶಾ ಇವರಿಗೆ ನಾಯಕಿಯಾಗಿದ್ದರು. ಧಾರಾವಾಹಿಯಲ್ಲಿ ಅಭಿನಯಿಸುತ್ತಲೇ ಪ್ರೀತಿಯಲ್ಲಿ ಬಿದ್ದ ಇಬ್ಬರು ಆ ನಂತರ ಮದುವೆಯೂ ಆದರು.

ಆದರೆ ಈ ಸಂಬಂಧ ಬಹುಕಾಲ ಉಳಿಯಲಿಲ್ಲ. ಕೇವಲ ಆರೇ ವರ್ಷಕ್ಕೆ ಪ್ರೀತಿ ಸತ್ತು ಹೋಯ್ತು. ದಾಂಪತ್ಯ ಜೀವನ ಮುರಿದು ಬಿತ್ತು. ಇನ್ನು ಹರ್ಷ ಕೇವಲ ಕಿರುತೆರೆಗೆ ಸೀಮಿತರಾದವರಲ್ಲ. ''ಭೇಜಾ ಫ್ರೈ''.. ''ಫ್ಯಾಷನ್''.. ''ಕಿಲ್''.. ಸೇರಿ ಹಲವಾರು ಚಿತ್ರಗಳನ್ನು ಮಾಡಿದ್ದಾರೆ. ವೆಬ್ ಸರಣಿಗಳನ್ನು ಕೂಡ ಮಾಡಿದ್ದಾರೆ. ''ಕಜೂರ್ ಪೇ ಅಟ್ಕೆ'' ಎಂಬ ಚಿತ್ರವನ್ನು ಕೂಡ ನಿರ್ದೇಶಿಸಿದ್ದಾರೆ.

Harsh Chhaya s Brutally Honest Confession On His Divorce From Shefali Shah

ಇಂಥಾ ಹರ್ಷ್ ಛಾಯಾ ತಮ್ಮ ಮೊದಲ ಮದುವೆ ಕುರಿತು ಮಾತನಾಡಿದ್ದಾರೆ. ಕೂಗಾಡಿದ್ದೇ, ಕಣ್ಣೀರು ಹಾಕಿದ್ದೇ, ಆ ನಂತರ ಬೇರೆ ಯುವತಿಯರ ಜೊತೆ ಊಟಕ್ಕೆ ಹೋದೆ ಎಂದಿದ್ದಾರೆ.

ಈ ಕುರಿತು ''ಲಲ್ಲನ್‌ಟಾಪ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಹರ್ಷ್ ಛಾಯಾ, ವಿಚ್ಛೇದನವನ್ನು ನಾವು ನಿಷಿದ್ದ ಎಂದು ಪರಿಗಣಿಸಬಾರದು ಎಂದು ಹೇಳಿದ್ದಾರೆ. ಹೀಗೆ ಮಾಡುವುದರಿಂದ ದಾಂಪತ್ಯ ಬದುಕಿನಲ್ಲಿ ನಾವು ಸುಖವಾಗಿರಲು ಸಾಧ್ಯ ಇಲ್ಲ, ದಾಂಪತ್ಯದಲ್ಲಿ ಅತೃಪ್ತಿ ಹೆಚ್ಚಾಗುತ್ತೆ ಎಂದಿದ್ದಾರೆ.

ಇನ್ನು ಶೆಫಾಲಿ ಶಾ ಜೊತೆ ಸಂಬಂಧ ಮುರಿದು ಬಿದ್ದಿರುವುದರ ಕುರಿತು ಮಾತನಾಡಿರುವ ಹರ್ಷ್ ಛಾಯಾ, ನಮ್ಮ ಸಂಸಾರ ಹಳಿ ತಪ್ಪಿರುವ ವಿಚಾರ ನನಗೆ ನಮ್ಮ ಡಿವೋರ್ಸ್ ಆಗುವ ಮೊದಲೇ ಗೊತ್ತಿತ್ತು ಎಂದು ಹೇಳಿದ್ದಾರೆ. 8-9 ತಿಂಗಳ ಮುಂಚೆಯೇ ಇನ್ನು ನಿನ್ನ ಜೊತೆ ಇರಲು ಸಾಧ್ಯ ಇಲ್ಲ ಎಂದು ಹೇಳುತ್ತಾರೆ ಎಂದುಕೊಂಡಿದ್ದೇ, ಹೀಗಾಗಿ ನಾನು ಮಾನಸಿಕವಾಗಿ ಸಿದ್ದನಾಗಿದ್ದೆ ಎಂದಿದ್ದಾರೆ.

ದಾಂಪತ್ಯದಲ್ಲಿ ಏನಾಗುತ್ತಿದೆ ಎನ್ನುವುದು ನನಗೆ ಗೊತ್ತಿದ್ದರೂ, ಆ ಸಮಯದಲ್ಲಿ ನಾನು ಆ ವಿಚಾರ ನನ್ನ ಮೇಲೆ ಮಾನಸಿಕ ಪರಿಣಾಮ ಬೀರಲು ನಾನು ಬಿಡಲಿಲ್ಲ ಎಂದು ಹೇಳಿರುವ ಹರ್ಷ್ ಛಾಯಾ, ನಾನು ನನ್ನ ಕೆಲಸದ ಕಡೆ ಗಮನ ವಹಿಸಿದೆ, ಬೇಕು ಅಂತಲೇ ದೆಹಲಿಯಿಂದ ಮುಂಬೈಗೆ ಬಂದೆ ಎಂದು ಹೇಳಿದ್ದಾರೆ. ಅವರು ವೈಯಕ್ತಿಕವಾಗಿ ಅದನ್ನು ಹೇಗೆ ನಿಭಾಯಿಸುತ್ತಿದ್ದರೋ ಗೊತ್ತಿಲ್ಲ, ನಾನು ಸುಲಭವಾಗಿ ವಿಚಲಿತನಾಗಲಿಲ್ಲ ಎಂದಿದ್ದಾರೆ.

ಇನ್ನು ಡಿವೋರ್ಸ್ ನಂತರ ತಮ್ಮ ಮಾನಸಿಕ ಸ್ಥಿತಿ ಹೇಗಿತ್ತು ಎನ್ನುವುದನ್ನು ಕೂಡ ವಿವರಿಸಿರುವ ಹರ್ಷ್ ಛಾಯಾ, ಬದುಕಿನಲ್ಲಿ ಇಂತಹ ಏರಿಳಿತ ಬಂದಾಗ ಮಾನಸಿಕವಾಗಿ ಸ್ಥಿರವಾಗಿರಲು ನಾವು ಪ್ರಯತ್ನ ಮಾಡಬೇಕು ಎಂದಿದ್ದಾರೆ. ನೋವನ್ನು ಸಹಿಸಿಕೊಂಡು ಬದುಕಿ, ಅದರ ಬದಲು ನಿಮ್ಮನ್ನು ನೀವು ಬಲಶಾಲಿ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡಬೇಡಿ ಎಂದು ಕಿವಿ ಮಾತು ಹೇಳಿರುವ ಹರ್ಷ್ ಛಾಯಾ ಆ ಸಮಯದಲ್ಲಿ ನಾನು 5-6 ತಿಂಗಳುಗಳ ಕಾಲ ಸಹಿಸಿಕೊಂಡೆ, ಪಶ್ಚಾತ್ತಾಪ ಪಟ್ಟೆ, ಕೂಗಾಡಿದೆ ಎಂದು ಹೇಳಿದ್ದಾರೆ.

ಹೀಗೆ ಪಶ್ಚಾತಾಪದ ಬೇಗೆಯಲ್ಲಿ ಬೇಯುತ್ತಿದ್ದಾಗ, ಇನ್ನೂ ಈ ಒತ್ತಡ ಸಹಿಸಿಕೊಳ್ಳಲು ಸಾಧ್ಯವಾಗಲ್ಲ ಎನ್ನುವ ವಿಚಾರ ನನಗೆ ಮನವರಿಕೆಯಾಯ್ತು ನಮ್ಮ ಕಥೆ ಕೇಳಲು, ತಮ್ಮ ಅಭಿಪ್ರಾಯ ಹಂಚಿಕೊಳ್ಳಲು, ಸುತ್ತ ಮುತ್ತ ಹಲವರು ಇದ್ದಾರೆ ಎಂದು ಜ್ಞಾನೋದಯವಾಯ್ತು ಎಂದು ಹೇಳಿರುವ ಹರ್ಷ್ ಛಾಯಾ ಒಮ್ಮೆ ನಾನು ಒಬ್ಬ ಯುವತಿಯ ಜೊತೆ ಮಾತನಾಡಿದೆ, ಆಗ ನಾವು ಪರಸ್ಪರ ಸಮಸ್ಯೆಗಳನ್ನು ಚರ್ಚೆ ಮಾಡಿದ್ವಿ, ಆ ನಂತರ ಡೇಟಿಂಗ್‌ಗೆ ಹೋದ್ವಿ ಎಂದಿದ್ದಾರೆ.

ಇದೊಂದೆ ಬಾರಿ ಅಲ್ಲ, ಹಲವು ಬಾರಿ ಆಯ್ತು. ನನ್ನ ಪಾಲಿಗೆ ನೋವು ಮರೆಯುವ ಸೂತ್ರವಾಯ್ತು.ನಾನು 2-3 ತಿಂಗಳುಗಳಲ್ಲಿ ಅನೇಕ ಡೇಟ್‌ಗಳಿಗೆ ಹೋದೆ ಎಂದು ಹೇಳಿರುವ ಹರ್ಷ್ ಛಾಯಾ, ನೋವು ಮರೆಯಲು ಅದರಿಂದ ಹೊರ ಬರಲು ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ. ಧೈರ್ಯ ಪ್ರದರ್ಶನದಿಂದ ಏನೂ ಆಗುವುದಿಲ್ಲ, ಅದರ ಬದಲು ನಿಮಗೆ ಏನು ಅನಿಸುತ್ತೋ ಅದನ್ನು ಮಾಡಿ ಎಂದು ಹರ್ಷ ಛಾಯಾ ಹೇಳಿದ್ದಾರೆ.

ಮುಂದುವರೆದು 24/7 ಇಬ್ಬರು ಒಂದೇ ಸೂರಿನಡಿ ಬದುಕಲು ಸಾಧ್ಯ ಇಲ್ಲ ಎಂದು ಹೇಳಿರುವ ಹರ್ಷ್ ಛಾಯಾ ನಾನು ನನ್ನದೇ ಕ್ಲೋನ್‌ನೊಂದಿಗೆ 365 ದಿನ ಬದುಕಲು ಸಾಧ್ಯವಿಲ್ಲ ಎಂದಿದ್ದಾರೆ. ಅದು ಆಗಲೇಬೇಕು ಅಂತಿದ್ದರೆ ಸಂಬಂಧವನ್ನು ರಬ್ಬರ್ ನಂತೆ ಎಳೆಯುವ ಬದಲು ಅದಕ್ಕೆ ಬೇಗನೇ ಎಳ್ಳು-ನೀರು ಬಿಡುವುದು ವಾಸಿ ಎಂದಿದ್ದಾರೆ.

ಅಂದ್ಹಾಗೇ ಹರ್ಷ್ ಛಾಯಾ ಅವರಿಂದ ದೂರ ಆದ ನಂತರ 2000ನೇ ಇಸ್ವಿಯಲ್ಲಿ ಬಾಲಿವುಡ್‌ನ ಪ್ರಖ್ಯಾತ ನಿರ್ಮಾಪಕ ನಿರ್ದೇಶಕ ವಿಫುಲ್ ಶಾ ಜೊತೆ ಶೆಫಾಲಿ ಎರಡನೇ ಮದುವೆಯಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಇನ್ನು ಹರ್ಷ ಛಾಯಾ 2003ರಲ್ಲಿ ಸುನಿತಾ ಸೇನ್‌ಗುಪ್ತಾ ಅವರನ್ನು ಮದುವೆಯಾದರು. ಸದ್ಯಕ್ಕೆ ಇವರಿಬ್ಬರು ಸುಖಿ ಸಂಸಾರಿ.

English summary
Harsh Chhaya gets incredibly candid about his divorce from Shefali Shah, his months of deep regret, and why he chose to go on rebound dates.
Read more about: divorce ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X