32 ವರ್ಷದ ವಜ್ರದ ವ್ಯಾಪಾರಿ, 31ರ ಹರೆಯದ ಸುರಸುಂದರ ; 52 ವರ್ಷದ ಮಲೈಕಾ ಅರೋರಾ ಕೈ ಹಿಡಿಯುವ ಮನ್ಮಥ ಯಾರು ?

ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ಚೆಲುವೆಯರಲ್ಲಿ ಬಾಲಿವುಡ್ ನ ಮಲೈಕಾ ಅರೋರಾ ಕೂಡ ಪ್ರಮುಖರು. ವಯಸ್ಸು ಐವತ್ತಾದರೂ ಹದಿ ಹರೆಯದ ಯುವತಿಯರು ನಾಚುವಂತಹ ದೇಹ ಸಿರಿ ಇವರದ್ದು. ಇಂಥಾ ಮಲೈಕಾ ಅರೋರಾ ಹಿಂದೊಮ್ಮೆ ಅರ್ಬಾಜ್ ಖಾನ್ ಅವರ ಪತ್ನಿಯಾಗಿದ್ದರು. ಆಗ ಎಲ್ಲವೂ ಚೆನ್ನಾಗಿತ್ತು. ಇವರ ಖಾಸಗಿ ಬದುಕು ಕೂಡ ಖಾಸಗಿಯಾಗಿಯೇ ಇರುತ್ತಿತ್ತು.

ಆದರೆ, ಅರ್ಬಾಜ್ ಖಾನ್ ಅವರಿಂದ ಮಲೈಕಾ ದೂರವಾಗಿದ್ದೇ ತಡ. ಇವರ ವೈಯಕ್ತಿಕ ಜೀವನ ಮಾಧ್ಯಮದವರಿಗೆ ಟಿಆರ್​ಪಿ ಸರಕಾಯ್ತು. ಟ್ರೋಲ್‌ ಪೇಜ್‌ಗಳಿಗೆ ಆಹಾರವಾಯ್ತು. ಇದಕ್ಕೆ ಕೈಗನ್ನಡಿ ಎಂಬಂತೆ ಮಲೈಕಾ ಅರೋರಾ ಯಾವುದಾದರು ಹುಡುಗರ ಜೊತೆ ಕಾಣಿಸಿಕೊಂಡರೆ ಸಾಕು, ಆ ಸುದ್ದಿ ದಿನವೀಡಿ ಪ್ರಸಾರವಾಗಿದ್ದು ಇದೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದ್ದು ಇದೆ.

Harsh Mehta vs Sorab Bedi Diamond Tycoon or Handsome Hunk Who is Malaika s Manmatha

ಉದಾಹರಣೆಗೆ ಕೆಲ ದಿನಗಳ ಹಿಂದೆಯಷ್ಟೇ 33 ವರ್ಷದ ವಜ್ರದ ವ್ಯಾಪಾರಿಯಾದ ಹರ್ಷ್ ಮೆಹ್ತಾಗೆ 52 ವರ್ಷದ ಮಲೈಕಾ ಅರೋರಾ ಮನ ಸೋತಿದ್ದಾರೆ ಎಂಬ ಸುದ್ದಿ ಸದ್ದು ಮಾಡಿತ್ತು. ರೋಮ್‌ನಲ್ಲಿನ ಇವರಿಬ್ಬರ ಕೆಲ ರೊಮ್ಯಾಂಟಿಕ್ ಫೋಟೊಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದ್ದವು. ಇದಕ್ಕೂ ಮುನ್ನ ಕೂಡ ಹಲವು ಬಾರಿ ಇಬ್ಬರು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದರು.

ಈ ಹಿನ್ನೆಲೆ ಮನಮೋಹಕ ಚೆಲುವೆ ಮಲೈಕಾ ವಜ್ರದ ವ್ಯಾಪಾರಿಯ ಪಾಲಾದರು ಎಂದು ಹಲವರು ಅಂದುಕೊಂಡಿದ್ದರು. ಇಬ್ಬರ ನಡುವೆ ಇರುವ ಏಜ್ ಗ್ಯಾಪ್‌ನ ಪ್ರಶ್ನೆ ಮಾಡಿ ಹಲವರು ಕೆಂಡ ಕೂಡ ಕಾರಿದ್ದರು. ಹೀಗಿರುವಾಗ ಇದೀಗ ಮಲೈಕಾ ಅರೋರಾ ಹೆಸರು ಮತ್ತೊಬ್ಬ ವ್ಯಕ್ತಿಯ ಜೊತೆ ತಳುಕು ಹಾಕಿಕೊಂಡಿದೆ. ಆ ವ್ಯಕ್ತಿಯ ಹೆಸರು ಸೋರಬ್ ಬೇಡಿ.

ಹೌದು, ಸೋರಬ್ ಬೇಡಿ.. ''MTV ಸ್ಪ್ಲಿಟ್ಸ್‌ವಿಲ್ಲಾ'' ಸೀಸನ್ 16ರ ಮೂಲಕ ಬೆಳಕಿಗೆ ಬಂದ ಪ್ರತಿಭೆ. ಇದಕ್ಕೂ ಮುನ್ನ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚು ಹರಿಸಿದವರು ಇವರು. ''ಚಾಂದ್ ಜಲ್ನೆ ಲಗಾ''.. ''ದಿಲ್ವಾಲಿ ದುಲ್ಹಾ ಲೇ ಜಾಯೇಗಿ''.. ಇವರು ಅಭಿನಯಿಸಿರುವ ಪ್ರಮುಖ ಧಾರಾವಾಹಿಗಳು. ಫಿಟ್ನೆಸ್ ಬಗ್ಗೆ ಅಪಾರವಾದ ಕಾಳಜಿ ಹೊಂದಿರುವ ಸೋರಬ್ ವರ್ಕೌಟ್ ವಿಡಿಯೋಗಳನ್ನುಕೂಡ ಆಗಾಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಇವರಿಗೆ 31 ವರ್ಷ.

ಇಂಥಾ ಸೋರಬ್ ಮೊನ್ನೆ ಮೊನ್ನೆ ಮಲೈಕಾ ಅವರ ಜೊತೆ ತೀರಾ ಆತ್ಮೀಯವಾಗಿ ವರ್ತಿಸಿದ್ದರು. ಮಲೈಕಾ ಕೂಡ ತಮ್ಮ ಸುತ್ತ ಮುತ್ತ ಇದ್ದವರನ್ನೆಲ್ಲಾ ಮರೆತು ಸೋರಬ್ ಅವರ ತೋಳಿನಲ್ಲಿ ಬಂಧಿಯಾಗಿದ್ದರು. ಇಬ್ಬರು ಕುಣಿದು ಕುಪ್ಪಳಿಸಿದ್ದರು. ಪಾಪರಾಜಿಗಳಿಗೆ ತಮ್ಮ ವ್ಯೂವ್ಸ್ ಹೆಚ್ಚಿಸಿಕೊಳ್ಳಲು ಮತ್ತು ಕಾಸು ಮಾಡಲು ಇಷ್ಟೇ ಸಾಕಿತ್ತು.

Harsh Mehta vs Sorab Bedi Diamond Tycoon or Handsome Hunk Who is Malaika s Manmatha

ನೋಡ, ನೋಡುತ್ತಾ ಈ ಫೋಟೊಗಳು ವೈರಲ್ ಆದವು. ವಜ್ರದ ವ್ಯಾಪಾರಿ ಹರ್ಷ್ ಮೆಹ್ತಾ ಅವರಿಂದ ಬಹುಬೇಗನೇ ಬೋರಾದ ಮಲೈಕಾ ಅರೋರಾ ಈಗ ಸೋರಬ್ ಬೇಡಿ ತೆಕ್ಕೆಗೆ ಬಿದ್ದಿದ್ದಾರೆ ಎನ್ನುವ ಸುದ್ದಿ ಹರಿದಾಡಲು ಶುರುವಾಯ್ತು. ಮಲೈಕಾ ಅವರನ್ನು ಟ್ರೋಲ್ ಕೂಡ ಮಾಡಲಾಯ್ತು. ಸದ್ಯ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸೋರಬ್ ಬೇಡಿ ಮೌನ ಮುರಿದಿದ್ದಾರೆ. ಮಾತನಾಡಿದ್ದಾರೆ. ಸುಖಾ ಸುಮ್ಮನೆ ಇಲ್ಲ ಸಲ್ಲದ ಮಾತುಗಳನ್ನು ಮಾತನಾಡುವವರ ವಿರುದ್ಧ ಕೆರಳಿ ಕೆಂಡವಾಗಿದ್ದಾರೆ.

ಈ ಕುರಿತು ''ಝೂಮ್'' ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸೋರಬ್ ನಮ್ಮ ನಡುವೆ ನೀವು ಅಂದುಕೊಂಡಂತಹ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಮಹಿಳೆಯರ ಬಗ್ಗೆ ಮಾತನಾಡುವ ಮೊದಲು ಒಂದಲ್ಲ ನೂರು ಬಾರಿ ಯೋಚನೆ ಮಾಡುವುದನ್ನು ಕಲಿಯಬೇಕು ಎಂದು ಹೇಳಿರುವ ಸೋರಬ್ ನಿಮ್ಮೆಲ್ಲರ ಮಾತುಗಳಿಂದ, ಈ ಊಹಾಪೋಹಗಳಿಂದ ಅವರ ಮಾನಸಿಕ ಸ್ಥಿತಿ ಹಾಳಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮುಂದುವರೆದು ಮಲೈಕಾ ಅರೋರಾ ಅವರ ಪರಿಚಯ ನನಗೆ ಇಂದು ನಿನ್ನೆಯದ್ದಲ್ಲ, ನಾನು ಮಾಡೆಲಿಂಗ್‌ ಮಾಡುತ್ತಿದ್ದ ದಿನಗಳಿಂದ ಅವರು ನನಗೆ ಚಿರಪರಿಚಿತ ಎಂದು ಹೇಳಿರುವ ಸೋರಬ್ ದೆಲ್ನಾಜ್ ದಾರುವಾಲಾ ಮತ್ತು ವಹ್ಬಿಜ್ ಮೆಹ್ತಾ ಅವರ ಮೂಲಕ ನನಗೆ ಮಾಡೆಲಿಂಗ್ ದಿನಗಳಲ್ಲಿ ಮಲೈಕಾ ಅರೋರಾ ಅವರ ಪರಿಚಯ ಆಗಿತ್ತು ಎಂದಿದ್ದಾರೆ.

ಅಂದಿನಿಂದ ನಾವು ಇಬ್ಬರು ಸ್ನೇಹಿತರು ಎಂದು ಹೇಳಿರುವ ಸೋರಬ್ ನಾವು ಪಾರ್ಟಿ ಮಾಡುತ್ತಿರುವುದು ಇದು ಮೊದಲೇನಲ್ಲ, ಈ ಹಿಂದೆಯೂ ಕೂಡ ನಾವು ಪಾರ್ಟಿಗಳನ್ನು ಮಾಡಿದ್ಧೇವೆ ಎಂದಿದ್ದಾರೆ. ಆಗಲೂ ಕೂಡ ನಾನು ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದೆ, ಆದರೆ ಆಗ ನಾನು ಯಾರೆಂದರೆ ಯಾರಿಗೂ ಗೊತ್ತಿರಲಿಲ್ಲ, ಹೀಗಾಗಿ ಯಾರು ತಲೆ ಕೆಡಿಸಿಕೊಂಡಿರಲಿಲ್ಲ ಎಂದು ಹೇಳಿರುವ ಸೋರಬ್ ಈಗ ನನಗೆ ಚೂರು ಪಾರು ಹೆಸರು ಬಂದಿದೆ ಈ ಹಿನ್ನೆಲೆ ನಮ್ಮ ಸಂಬಂಧ ಎಲ್ಲರಿಗೂ ಆಹಾರವಾಗಿದೆ ಎಂದು ಕಿಡಿ ಕಾರಿದ್ದಾರೆ.

ಈ ಮೂಲಕ ನಮ್ಮ ನಡುವೆ ಏನಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಅಂದ್ಹಾಗೇ ಸೋರಬ್ ಜೊತೆ ಮಲೈಕಾ ಅರೋರಾ ಅವರ ಫೋಟೊ ವೈರಲ್ ಆದ ಹಿನ್ನೆಲೆ ಹಲವರು ಹರ್ಷ ಮೆಹ್ತಾ ಕುರಿತು ಯೋಚನೆ ಮಾಡುತ್ತಿದ್ದರು. ಹರ್ಷ ಮೆಹ್ತಾಗೆ ಕೈ ಕೊಟ್ಟು ಸೋರಬ್ ಹಿಂದ ಮಲೈಕಾ ಹೋಗುತ್ತಾರೆ ಎಂದುಕೊಂಡಿದ್ದರು.

ಆದರೆ ಈಗ ಸೋರಬ್ ನಾವು ಕೇವಲ ಸ್ನೇಹಿತರಷ್ಟೇ ಎಂದು ಹೇಳಿದ್ದಾರೆ. ಹೀಗಾಗಿ ಹರ್ಷ ಮೆಹ್ತಾ ಜೊತೆ ಮಲೈಕಾ ಅರೋರಾ ಮದುವೆ ಮಾಡಿಸಲು ತುದಿಗಾಲಿನಲ್ಲಿ ನಿಂತ ಕೆಲವರು ಸದ್ಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮಲೈಕಾ ಅರೋರಾ ಅವರ ಕೈ ಹಿಡಿಯುವ ಮನ್ಮಥ ನಿಜಕ್ಕೂ ಹರ್ಷ ಮೆಹ್ತಾ ಅವರೇನಾ ಅಥವಾ ಮುಂದೆ ಬೇರೆ ಯಾರ ಜೊತೆಯಾದರು ಮಲೈಕಾ ಹೆಸರು ಕೇಳಿ ಬರುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Who is Malaika Arora dating? From the 32-year-old Harsh Mehta to the 31-year-old Sorab Bedi, we break down the rumors and the official statements. Read more!
Read more about: malaika arora affair
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X