For Quick Alerts
  ALLOW NOTIFICATIONS  
  For Daily Alerts

  ವಿಕ್ಕಿ ಕೌಶಲ್-ಕತ್ರಿನಾ ಸಂಬಂಧ ಖಚಿತಪಡಿಸಿದ ಸ್ಟಾರ್ ನಟನ ಪುತ್ರ

  |

  ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ 'ಉರಿ' ಚಿತ್ರದ ನಾಯಕನಟ ವಿಕ್ಕಿ ಕೌಶಲ್ ಜೊತೆ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದಲೂ ಚರ್ಚೆಯಲ್ಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ತಾರೆ, ಒಟ್ಟಿಗೆ ಪಾರ್ಟಿಗಳಲ್ಲಿ ಭಾಗವಹಿಸುತ್ತಾರೆ, ಒಟ್ಟಾಗಿ ಹಾಲಿಡೇ ಎಂಜಾಯ್ ಮಾಡ್ತಾರೆ ಹಾಗು ಸಿನಿಮಾದಲ್ಲು ಅಭಿನಯಿಸಿದ್ದಾರೆ. ಈ ಇಬ್ಬರ ಸಂಬಂಧದ ಬಗ್ಗೆ ಯಾರೊಬ್ಬರು ಖಚಿತಪಡಿಸಿಲ್ಲ.

  ಕತ್ರಿನಾ ಮತ್ತು ವಿಕ್ಕಿ ಪ್ರೀತಿ ಸದ್ಯದಲ್ಲಿ ಅಧಿಕೃತವಾಗಬಹುದು, ಇಬ್ಬರು ಮದುವೆ ಆಗುವ ಯೋಚನೆಯೂ ಇರಬಹುದು ಎಂಬ ನಿರೀಕ್ಷೆ ಅಭಿಮಾನಿಗಳನ್ನು ಕಾಡ್ತಿದೆ. ಇದೀಗ, ಬಿಟೌನ್ ಸೂಪರ್ ಸ್ಟಾರ್ ನಟನ ಪುತ್ರ ಹರ್ಷವರ್ಧನ್ ಕಪೂರ್, ವಿಕ್ಕಿ ಮತ್ತು ಕತ್ರಿನಾ ಸಂಬಂಧವನ್ನು ಖಚಿತಪಡಿಸಿದ್ದಾರೆ. ಮುಂದೆ ಓದಿ...

  ಬಾಯ್ ಫ್ರೆಂಡ್ ನನ್ನು ತಬ್ಬಿಕೊಂಡಿದ್ದಾರಾ ಕತ್ರಿನಾ ಕೈಫ್; ಇದು ಆ ಸ್ಟಾರ್ ನಟನೇ ಎನ್ನುತ್ತಿದ್ದಾರೆ ನೆಟ್ಟಿಗರುಬಾಯ್ ಫ್ರೆಂಡ್ ನನ್ನು ತಬ್ಬಿಕೊಂಡಿದ್ದಾರಾ ಕತ್ರಿನಾ ಕೈಫ್; ಇದು ಆ ಸ್ಟಾರ್ ನಟನೇ ಎನ್ನುತ್ತಿದ್ದಾರೆ ನೆಟ್ಟಿಗರು

  ಒಬ್ಬರು ಒಟ್ಟಿಗೆ ಇರೋದು ನಿಜಾ

  ಒಬ್ಬರು ಒಟ್ಟಿಗೆ ಇರೋದು ನಿಜಾ

  ಬಾಲಿವುಡ್ ಅನಿಲ್ ಕಪೂರ್ ಮಗ ಹರ್ಷವರ್ಧನ್ ಕಪೂರ್ ಬಿಟೌನ್ ಲವ್‌ಬರ್ಡ್ಸ್‌ಗಳ ಸಂಬಂಧದ ಬಗ್ಗೆ ಟಿವಿ ಚಾಟ್ ಶೋನಲ್ಲಿ ಮಾತನಾಡಿದ್ದಾರೆ. ''ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಒಟ್ಟಿರುವುದು ನಿಜಾ, ಬಹುಶಃ ನನ್ನ ಹೇಳಿಕೆ ಅವರಿಗೆ ತೊಂದರೆ ಉಂಟು ಮಾಡುವುದು'' ಎಂದಿದ್ದಾರೆ. ಈ ಮೂಲಕ ಕ್ಯಾಟ್ ಮತ್ತು ವಿಕ್ಕಿ ಡೇಟ್ ಮಾಡ್ತಿರುವ ವಿಚಾರ ಬಾಲಿವುಡ್‌ನಲ್ಲಿ ಗೌಪ್ಯವಾಗಿ ಉಳಿದಿಲ್ಲ ಎನ್ನುವುದು ಖಾತ್ರಿಯಾಗಿದೆ.

  ಬಾಯ್‌ಫ್ರೆಂಡ್‌ ಬಳಿಕ ಕತ್ರಿನಾ ಕೈಫ್‌ಗೂ ಕೊರೊನಾ ಪಾಸಿಟಿವ್ಬಾಯ್‌ಫ್ರೆಂಡ್‌ ಬಳಿಕ ಕತ್ರಿನಾ ಕೈಫ್‌ಗೂ ಕೊರೊನಾ ಪಾಸಿಟಿವ್

  6 ಗಂಟೆ ಸಮಯ ಕಳೆದ ವಿಕ್ಕಿ

  6 ಗಂಟೆ ಸಮಯ ಕಳೆದ ವಿಕ್ಕಿ

  ಇ-ಟೈಮ್ಸ್ ವರದಿ ಮಾಡಿರುವ ಪ್ರಕಾರ, ಸೋಮವಾರ ಮಧ್ಯಾಹ ವಿಕ್ಕಿ ಕೌಶಲ್ ನಟಿ ಕತ್ರಿನಾ ಮನೆಗೆ ಭೇಟಿ ನೀಡಿದ್ದರು. ಸುಮಾರು 6 ಗಂಟೆಗಳ ಕಾಲ ಕತ್ರಿನಾ ಮನೆಯಲ್ಲಿ ವಿಕ್ಕಿ ಇದ್ದರು ಎಂದು ಹೇಳಿದೆ. ಕತ್ರಿನಾ ಮನೆಯ ಪಾರ್ಕಿಂಗ್‌ನಲ್ಲಿ ವಿಕ್ಕಿ ಕಾರು ಪಾರ್ಕಿಂಗ್ ಮಾಡಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

  ಇಬ್ಬರಿಗೂ ಕೊರೊನಾ ಪಾಸಿಟಿವ್

  ಇಬ್ಬರಿಗೂ ಕೊರೊನಾ ಪಾಸಿಟಿವ್

  ಕೊರೊನಾ ವೈರಸ್ ಎರಡನೇ ಅಲೆ ವೇಳೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಇಬ್ಬರಿಗೂ ಸೋಂಕು ತಗುಲಿತ್ತು. ಮೊದಲು ವಿಕ್ಕಿ ಸೋಂಕು ತಗುಲಿರುವುದನ್ನು ಖಚಿತಪಡಿಸಿದರು. ನಂತರ ಕತ್ರಿನಾ ತನಗೂ ಸೋಂಕು ತಗುಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು. ಆಗಲೂ ಕತ್ರಿನಾ ಮತ್ತು ವಿಕ್ಕಿ ಭೇಟಿಯಾಗಿದ್ದರು. ಅದರ ಪರಿಣಾಮ ಸೋಂಕು ಇಬ್ಬರಿಗೂ ಒಟ್ಟಿಗೆ ತಗುಲಿದೆ ಎಂದು ವರದಿಗಳು ಆದವು.

  ತಿಯೊಬ್ಬ ರಾಜಕಾರಣಿಗೂ ಚಪ್ಪಲಿಯಲ್ಲಿ ಹೊಡಿಬೇಕು ಅಂದ್ರು ಗುರುಪ್ರಸಾದ್
  ಹೊಸ ವರ್ಷದ ಆಚರಣೆ ವೇಳೆ ಫೋಟೋ ಲೀಕ್

  ಹೊಸ ವರ್ಷದ ಆಚರಣೆ ವೇಳೆ ಫೋಟೋ ಲೀಕ್

  ಈ ಹಿಂದೆ ಹೊಸ ವರ್ಷ ಆಚರಿಸುವ ವೇಳೆಯೂ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಒಟ್ಟಿಗೆ ರೆಸಾರ್ಟ್‌ವೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ಇಬ್ಬರು ಒಂದೇ ರೆಸಾರ್ಟ್‌ನಲ್ಲಿದ್ದರು ಎನ್ನುವಂತಹ ಫೋಟೋಗಳು ವೈರಲ್ ಆಗಿದ್ದವು.

  English summary
  Anil Kapoor son Harshvardhan Kapoor confirms the Relationship between katrina kaif and vicky kaushal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X