ವಿಚ್ಛೇದನ ಪಡೆದ ಅರ್ಜುನ್ ರಾಂಪಾಲ್ ಬಗ್ಗೆ ಕೇಳಿಬರ್ತಿದೆ ಹೊಸ ಗಾಸಿಪ್.!

By Harshitha

ಇಪ್ಪತ್ತು ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಹಾಗೂ ಮೆಹರ್ ಎಳ್ಳು ನೀರು ಬಿಟ್ಟಿದ್ದಾಗಿದೆ. ನಟ ಅರ್ಜುನ್ ರಾಂಪಾಲ್ ವಿಚ್ಛೇದನ ಪಡೆದು ಸರಿಯಾಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ. ಅಷ್ಟು ಬೇಗ ಅವರ ಬಗ್ಗೆ ಹೊಸ ಗಾಳಿಸುದ್ದಿಯೊಂದು ಕೇಳಿಬರುತ್ತಿದೆ.

ಹಾಗ್ನೋಡಿದ್ರೆ, ಅರ್ಜುನ್ ರಾಂಪಾಲ್ ಹಾಗೂ ಮೆಹರ್ ದಾಂಪತ್ಯದಲ್ಲಿ ಬಿರುಗಾಳಿ ಬೀಸಲು ನಟ ಹೃತಿಕ್ ರೋಷನ್ ಮಾಜಿ ಪತ್ನಿ ಸುಸೇನ್ ಕಾರಣ ಎನ್ನಲಾಗುತ್ತಿತ್ತು. ಆದ್ರೀಗ, ನಟಿ ನತಾಶಾ ಹಾಗೂ ಅರ್ಜುನ್ ರಾಂಪಾಲ್ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಸುದ್ದಿ ಬಿಟೌನ್ ಗಲ್ಲಿಗಳಲ್ಲಿ ಹರಿದಾಡುತ್ತಿದೆ.

has-arjun-kapoor-found-love-in-natasha

2017 ರಲ್ಲಿ ಬಿಡುಗಡೆ ಆದ 'ಡ್ಯಾಡಿ' ಚಿತ್ರದಲ್ಲಿ ನತಾಶಾ ಕಾಣಿಸಿಕೊಂಡಿದ್ದರು. 'ಡ್ಯಾಡಿ' ಸಿನಿಮಾ ಸೆಟ್ ಗಳಲ್ಲಿ ಅರ್ಜುನ್ ರಾಂಪಾಲ್ ಹಾಗೂ ನತಾಶಾ ನಡುವೆ ಸ್ನೇಹ ಮೂಡಿದೆ. ಈಗ ಇಬ್ಬರ ನಡುವಿನ ಗೆಳೆತನ ಎಕ್ಸ್ ಟ್ರಾ ಸ್ಪೆಷಲ್ ಆಗಿದ್ಯಂತೆ.

ಈ ಅಂತೆ-ಕಂತೆ ಅರ್ಜುನ್ ರಾಂಪಾಲ್ ಕಿವಿಗೂ ಬಿದ್ದಿದೆ. ಹೀಗಾಗಿ, ಲಿಂಕಪ್ ರೂಮರ್ಸ್ ಗೆ ಇನ್ಸ್ಟಾಗ್ರಾಮ್ ನಲ್ಲಿ ಪೂರ್ಣ ವಿರಾಮ ಇಟ್ಟಿದ್ದಾರೆ ನಟ ಅರ್ಜುನ್ ರಾಂಪಾಲ್.

has-arjun-kapoor-found-love-in-natasha

ಅಂದ್ಹಾಗೆ, 1998 ರಲ್ಲಿ ಮಾಡೆಲ್ ಮೆಹರ್ ಜೆಸಿಯಾ ರನ್ನ ಅರ್ಜುನ್ ರಾಂಪಾಲ್ ಮದುವೆ ಆಗಿದ್ದರು. ಇಪ್ಪತ್ತು ವರ್ಷಗಳ ಕಾಲ ದಾಂಪತ್ಯ ನಡೆಸಿದ ಈ ದಂಪತಿ ಮೊನ್ನೆಯಷ್ಟೇ ವಿಚ್ಛೇದನ ಪಡೆದು ದೂರಾದರು.

More from Filmibeat

English summary
Has Bollywood Actor Arjun Kapoor found Love in Actress Natasha.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X