ಹತ್ರಾಸ್ ಅತ್ಯಾಚಾರ: 'ಹೈದರಾಬಾದ್ ಎನ್‌ಕೌಂಟರ್' ನೆನಪಿಸಿದ ಕಂಗನಾ
ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಘಟನೆಗೆ ರಾಷ್ಟ್ರ ಮಟ್ಟದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. 19 ವರ್ಷದ ಹುಡುಗಿಯ ಮೇಲೆ ದುಷ್ಕರ್ಮಿಗಳ ಅತ್ಯಾಚಾರ ಎಸೆಗಿ ನಾಲಿಗೆ ಕತ್ತರಿಸಿದ್ದಾರೆ ಎಂದು ವರದಿಯಾಗಿದೆ.
ಇಂತಹ ಕ್ರೂರ ಕೃತ್ಯ ಎಸೆಗಿದ ಅತ್ಯಾಚಾರಿಗಳನ್ನು ತಕ್ಷಣ ಗಲ್ಲಿಗೇರಿಸಬೇಕು ಎಂಬ ಕೂಗು ಜೋರಾಗಿದೆ. ಈ ಘಟನೆ ಸಂಬಂಧ ಅಕ್ಷಯ್ ಕುಮಾರ್, ರಮ್ಯಾ, ಸಿಂಪಲ್ ಸುನಿ ಸೇರಿದಂತೆ ಚಿತ್ರರಂಗದ ಹಲವು ಕಲಾವಿದರು ಆಕ್ರೋಶ ಹೊರಹಾಕಿದ್ದಾರೆ. ಇದೀಗ, ಕಂಗನಾ ರಣಾವತ್ ಈ ಅತ್ಯಾಚಾರವನ್ನು ಖಂಡಿಸಿದ್ದು, ತಪ್ಪಿತಸ್ಥರಿಗೆ ಹೈದರಾಬಾದ್ ಎನ್‌ಕೌಂಟರ್ ಮಾದರಿಯಲ್ಲಿ ಶಿಕ್ಷೆಯಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮುಂದೆ ಓದಿ...

ಹೈದರಾಬಾದ್ ರೀತಿ ಶಿಕ್ಷೆ ಆಗಬೇಕು
ಈ ಘಟನೆ ಕುರಿತು ಟ್ವೀಟ್ ಮಾಡಿರುವ ಕಂಗನಾ ''ಯೋಗಿ ಆದಿತ್ಯನಾಥ್ ಅವರ ಮೇಲೆ ನನಗೆ ಅಪಾರ ನಂಬಿಕೆ ಇದೆ. ಹೈದರಾಬಾದ್‌ನಲ್ಲಿ ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಅವಳನ್ನು ಜೀವಂತವಾಗಿ ಸುಟ್ಟುಹಾಕಿದ ವೇಳೆ ಅದೇ ಸ್ಥಳದಲ್ಲಿ ಆ ಅತ್ಯಾಚಾರಿಗಳನ್ನು ಹೇಗೆ ಗುಂಡಿಕ್ಕಿ ಕೊಂದರೋ, ಅಂತಹ ನ್ಯಾಯವನ್ನು ನಾವು ಬಯಸುತ್ತೇವೆ. ಇದು ಬೇಗ ಆಗಬೇಕು'' ಎಂದಿದ್ದಾರೆ.

ನವೆಂಬರ್ 26, 2019 ರಂದು...
ನವೆಂಬರ್ 26 ರಂದು ರಾತ್ರಿ ಬೈಕಿನಲ್ಲಿ ತೆರಳುತ್ತಿದ್ದ ಪಶುವೈದ್ಯೆಯನ್ನು ಅಪಹರಣ ಮಾಡಿದ ನಾಲ್ಕು ಜನ ದುಷ್ಕರ್ಮಿಗಳ ತಂಡ ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿ ಜೀವಂತವಾಗಿ ಸುಟ್ಟು ಹಾಕಿದ್ದರು. ಈ ಘಟನೆ ಇಡೀ ರಾಷ್ಟ್ರದಲ್ಲಿ ಆತಂಕ ಸೃಷ್ಟಿಸಿತ್ತು. ಆರೋಪಿಗಳಿಗೆ ಗಲ್ಲಿಗೇರಿಸಿ ಎಂದು ಪ್ರತಿಭಟನೆ ಆರಂಭವಾಗಿತ್ತು.

ಅಚ್ಚರಿ ಎಂಬಂತೆ ಎನ್‌ಕೌಂಟರ್
ಅತ್ಯಾಚಾರ ಘಟನೆ ಬೆಳಕಿಗೆ ಬರುತ್ತಿದ್ದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದರು. ಡಿಸೆಂಬರ್ 6 ರಂದು ಬೆಳಗ್ಗಿನ ಜಾವ ಆರೋಪಿಗಳನ್ನು ಸ್ಥಳ ಮಹಜರಿಗೆ ಎಂದು ಘಟನೆ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಲಾಯಿತು. ಈ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದರು ಎಂಬ ಹಿನ್ನೆಲೆ ಪೊಲೀಸರು ನಾಲ್ವರನ್ನು ಎನ್‌ಕೌಂಟರ್ ಮಾಡಿದರು.
Recommended Video

ಪೊಲೀಸರ ಕ್ರಮಕ್ಕೆ ಮೆಚ್ಚುಗೆ
ಅತ್ಯಾಚಾರಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲೇ ಹೈದರಾಬಾದ್ ಪೊಲೀಸರು, ಆರೋಪಿಗಳನ್ನು ಎನ್‌ಕೌಂಟರ್ ಮಾಡಿಬಿಟ್ಟರು. ಈ ಎನ್‌ಕೌಂಟರ್ ಕಾನೂನಾತ್ಮಕವಾಗಿ ಅನುಮಾನ ಮೂಡಿಸಿದರು, ದೇಶದ ಜನತೆಯಿಂದ ಮೆಚ್ಚುಗೆ ಪಡೆದುಕೊಂಡಿತು. ಅತ್ಯಾಚಾರಿಗಳಿಗೆ ಇಂತಹ ಶಿಕ್ಷೆ ಆಗಬೇಕು ಎಂದು ಇಡೀ ದೇಶ ಕೂಗಿ ಹೇಳಿತ್ತು. ಇದೀಗ, ಕಂಗನಾ ರಣಾವತ್ ಸಹ ಇಂತಹ ಶಿಕ್ಷೆ ನೀಡಲಿ ಎಂದು ಒತ್ತಾಯಿಸಿದ್ದಾರೆ.


Click it and Unblock the Notifications











