ಗರ್ಭಪಾತ, ನನ್ನದೇ ಮಗು ಎಂದು ಒಪ್ಪಿಕೊಳ್ಳಲಿಲ್ಲ ; ನನ್ನ ತಂಗಿ ಬದುಕು ಹಾಳು ಮಾಡಿದ್ದೇ ಓಂಪುರಿ- ಅನ್ನು ಕಪೂರ್ ಧಗಧಗ

ಮದುವೆ ಕೇವಲ ಎರಡು ಜೀವಗಳ ಬೆಸುಗೆಯಲ್ಲ‌. ನಂಬಿಕೆಯ ಅಡಿಪಾಯದ ಮೇಲೆ ನಿಂತ ಸಂಬಂಧ.ಸುಖ- ದುಃಖದಲ್ಲಿ ಒಬ್ಬರಿಗೊಬ್ಬರು ಆಗಬಹುದಾದ ಆಸರೆಯೇ ಈ ಸಂಬಂಧದ ಜೀವಾಳ. ಆದರೆ ಕೆಲ ಒಮ್ಮೆ ಈ ಸಂಬಂಧದ ಬುಡ ಅಲ್ಲಾಡುತ್ತೆ. ನಂಬಿ ಕೈ ಹಿಡಿದವರೇ ಬೆನ್ನಿಗೆ ಚೂರಿ ಹಾಕುತ್ತಾರೆ‌.

ಇಂತಹ ಸನ್ನಿವೇಶಗಳಲ್ಲಿ ಬಹುತೇಕ ಪ್ರಕರಣದಲ್ಲಿ ಮಹಿಳೆಯೇ ಸಂತ್ರಸ್ತೆಯಾಗಿರುತ್ತಾಳೆ. ಉದಾಹರಣೆಗೆ ಬಾಲಿವುಡ್ ನ ಹಿರಿಯ‌ ನಟ ಅನ್ನು ಕಪೂರ್ (ಅಣ್ಣು ಕಪೂರ್) ಹಂಚಿಕೊಂಡ ತಮ್ಮ ಬದುಕಿನ ಸತ್ಯಕಥೆ. ತಾವು ಕಣ್ಣಾರೆ ಕಂಡ ತಮ್ಮ ಸಹೋದರಿ ಸೀಮಾ ಅವರ ಬದುಕಿನ ವ್ಯಥೆ.

He Betrayed a Pregnant Woman Annu Kapoor Rips Into Om Puri for Ruining His Sister s Life

ಹೌದು. , ಅನ್ನು ಕಪೂರ್.. ಬಾಲಿವುಡ್‌ನ ಹಿರಿಯ ನಟ. ''ಮಿಸ್ಟರ್ ಇಂಡಿಯಾ''.. ''ಘಾಯಲ್''.. ''ಡರ್''.. ''ಕಾಲಾಪಾನಿ''.. ''ರೇನ್‌ಕೋಟ್''.. ''ಐತರಾಜ್''.. ''7 ಖೂನ್ ಮಾಫ್''.. ''ವಿಕ್ಕಿ ಡೋನರ್''.. ''ದಿ ಶೌಕಿನ್ಸ್‌''.. ''ಜಾಲಿ ಎಲ್‌ಎಲ್‌ಬಿ-2'' ಹೀಗೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರತಿಭಾವಂತ ಕಲಾವಿದ.

ಇಂಥಾ ಅನು ಕಪೂರ್ ಅವರ ಸಹೋದರಿಯ ಹೆಸರು ಸೀಮಾ ಕಪೂರ್. ಅನ್ನು ಕಪೂರ್ ಸಹೋದರಿಯ ಹೊರತಾಗಿ ಈ ಸೀಮಾ ಕಪೂರ್ ಬೇರೆ ಯಾರು ಅಲ್ಲ, ಬದಲಿಗೆ ಬಾಲಿವುಡ್ ನ ದಿಗ್ಗಜ ಓಂ ಪುರಿಯ ಪತ್ನಿಯೂ ಹೌದು.

ಸದ್ಯ ತಮ್ಮ ಸಹೋದರಿಗೆ ಓಂಪುರಿ ಹೇಗೆಲ್ಲಾ ಮೋಸ ಮಾಡಿದರು.. ಓಂಪುರಿಯಿಂದ ತಮ್ಮ ಸಹೋದರಿ ಹೇಗೆಲ್ಲಾ ನರಳಿದರು ಎನ್ನುವ ವಿಚಾರವನ್ನು ಅನ್ನು ಕಪೂರ್ ಹಂಚಿಕೊಂಡಿದ್ದಾರೆ. ನಂಬಿಕೆ ದ್ರೋಹದ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಈ ಕುರಿತು ''ಸಿದ್ದಾರ್ಥ್ ಕಣ್ಣನ್'' ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅನ್ನು ಕಪೂರ್, ಓಂ ಪುರಿ ದಿಗ್ಗಜ ಕಲಾವಿದ, ಅವರಂತಹ ಮಹಾನ್ ನಟ ಬೇರೆಯವರು ಇಲ್ಲ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದ್ದಾರೆ. ಆದರೆ ನನ್ನ ಸಹೋದರಿಗೆ ಮಾಡಿದ ದ್ರೋಹ ಮರೆಯಲು ಸಾಧ್ಯ ಇಲ್ಲ ಎಂದಿದ್ದಾರೆ.

he-betrayed-a-pregnant-woman-annu-kapoor-rips-into-om-puri-for-ruining-his-sister-s-life

ಮದುವೆಯಾದ ನಂತರ ದಾಂಪತ್ಯ ದ್ರೋಹವನ್ನು ಓಂ ಪುರಿ ಎಸಗಿದರು ಎಂದು ಹೇಳಿರುವ ಅನ್ನು ಕಪೂರ್ ಅವರಿಂದ ದೌರ್ಜನ್ಯಕ್ಕೊಳಗಾದ ಆ ಮಹಿಳೆ ಬೇರೆ ಯಾರು ಅಲ್ಲ ಬದಲಿಗೆ ನನ್ನ ತಂಗಿ ಎಂದು ಹೇಳಿದ್ದಾರೆ.

ನನ್ನ ತಂಗಿ ಆಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು, ಆ ಸಮಯದಲ್ಲಿ ಆ ಮಗು ತನ್ನದೇ ಎಂದು ಕೂಡ ಓಂಪುರಿ ಒಪ್ಪಿಕೊಳ್ಳಲಿಲ್ಲ ಎಂದು ಹೇಳಿರುವ ಅನ್ನು ಕಪೂರ್ ಪರಿಸ್ಥಿತಿ ಎಷ್ಟು ಹಾಳಾಗಿತ್ತು ಅಂದರೆ, ಗರ್ಭಪಾತದ ನಂತರ ಕೇವಲ ₹2500 ಪರಿಹಾರ ನೀಡಲು ಅವರು ಮುಂದಾಗಿದ್ದರು ಎಂದು ಹೇಳಿದ್ದಾರೆ. ಆ ಪರಿಹಾರದ ಹಣವನ್ನು ಸೀಮಾ ತಿರಸ್ಕರಿಸಿದ್ದಳು ಎಂದು ನೆನಪು ಮಾಡಿಕೊಂಡಿದ್ದಾರೆ.

ಈಗ ನಾನು ಇಲ್ಲಿ ಕುಳಿತು ಆ ಹಳೆಯ ದಿನಗಳನ್ನು ಮೆಲುಕು ಹಾಕಿದರೆ ನನ್ನ ಮನದ ಗಾಯಗಳನ್ನು ನಾನು ಕೆದಕಿದಂತೆ ಆಗುತ್ತೆ ಎಂದು ಹೇಳಿರುವ ಅನ್ನು ಕಪೂರ್ ಆ ವಿಚಾರ ಮಾತನಾಡಲು ಶುರು ಮಾಡಿದರೆ ನನ್ನಲ್ಲಿರುವ ಅಣ್ಣ ರೊಚ್ಚಿಗೇಳುತ್ತಾನೆ ಎಂದಿದ್ದಾರೆ.

ಮುಂದುವರೆದು ನಾನು ನೇರವಾಗಿ‌‌ ಮಾತನಾಡುತ್ತೇನೆ, ಮುಖಕ್ಕೆ ಹೊಡೆದಂತೆ ಹೇಳುತ್ತೇನೆ, ನನಗೆ ಯಾರ ಭಯವೂ ಇಲ್ಲ ಎಂದು ಹೇಳಿರುವ ಅನ್ನು ಕಪೂರ್ ಈ ಕಾರಣಕ್ಕೆ ಓಂಪುರಿ ನನ್ನ ಕಂಡರೆ ಹೆದರುತ್ತಿದ್ದರು ಎಂದಿದ್ದಾರೆ. ನನ್ನ ತಂಗಿಯ ಬದುಕು ಹಳಿ ತಪ್ಪಿದಾಗ ನಾನೇನೂ‌ ಮಾಡಲಾಗದ ಅಸಹಾಯಕ ಪರಿಸ್ಥಿತಿಯಲ್ಲಿದ್ದೆ ಎಂದು ಭಾವುಕರಾಗಿದ್ದಾರೆ.

ಅವರು ಅನಾರೋಗ್ಯಕ್ಕೀಡಾದಾಗ ನನ್ನ ಸಹೋದರಿ ಸೀಮಾ ಬಳಿ ಅವರು ಮರಳಿ ಬರದಿದ್ದರೆ, ಸೀಮಾ ಅವರ ಆರೈಕೆ ಮಾಡದೇ ಇದ್ದರೆ, ಅವರು ಸಾಯುವ ಹತ್ತು ವರ್ಷ ಮೊದಲೇ ಅವರು ಸತ್ತು ಹೋಗುತ್ತಿದ್ದರು ಎಂದು ಹೇಳಿರುವ ಅನ್ನು ಕಪೂರ್, ಆ ಸಮಯದಲ್ಲಿ ಸೀಮಾ ಮೇಲೆ ನಾನು ಕೂಗಾಡಿದ್ದೆ, ಕೋಪ ಮಾಡ್ಕೊಂಡಿದ್ದೆ, ಆದರೂ ಅವಳು ಪತ್ನಿಯ ಜವಾಬ್ದಾರಿಯನ್ನು ಪೂರೈಸಿದಳು ಎಂದಿದ್ದಾರೆ.

ಹಾಗಂಥ ನನಗೆ ಓಂಪುರಿ ಅವರ ಮೇಲಾಗಲಿ, ಅವರ ಕುಟಿಂಬದ ಮೇಲಾಗಲಿ, ಈ ಕ್ಷಣಕ್ಕೆ ಅಥವಾ ಈಗಲೂ ದ್ವೇಷ ಇದೆ ಎಂದಲ್ಲ ಎಂದು ಹೇಳಿರುವ ಅನ್ನು ಕಪೂರ್ ನಾನು ಅವರ ಮಗ ಮತ್ತು ಅವರ ಪತ್ನಿ ನಂದಿತಾಗೆ ಒಳ್ಳೆಯದಾಗಲಿ ಎಂದೇ ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತಿರುತ್ತೇನೆ ಎಂದಿದ್ದಾರೆ.

ನನಗೆ ಯಾರ ಮೇಲೂ ದ್ವೇಷ ಇಲ್ಲ ಆದರೆ ನನ್ನ ಸಹೋದರಿ ಸೀಮಾ ಜೀವನ ಹಾಳಾಗೋಯ್ತು, ಆಕೆಯ ಬೆಂಬಲಕ್ಕೆ ಆ ಕ್ಷಣದಲ್ಲಿ.. ಆ ದಿನಗಳಲ್ಲಿ ಯಾರು ನಿಲ್ಲಲಿಲ್ಲ ಎಂದು ಭಾವುಕರಾಗಿರುವ ಅನ್ನು ಕಪೂರ್ ಇದೆಲ್ಲದರಿಂದ ಸೀಮಾ ಮಾನಸಿಕವಾಗಿ ಸಂಪೂರ್ಣವಾಗಿ ಕುಗ್ಗಿ ಹೋದಳು ಎಂದು ಕಣ್ಣೀರಾಗಿದ್ದಾರೆ.

ಅಂದ್ಹಾಗೇ 1991ರಲ್ಲಿ ಓಂಪುರಿ ಅವರನ್ನು ಸೀಮಾ ಕಪೂರ್ ಮದುವೆಯಾಗಿದ್ದರು. ಆದರೆ ಈ ಸಂಬಂಧ ಕೇವಲ ಒಂದೇ ವರ್ಷಕ್ಕೆ ಮುರಿದು ಬಿತ್ತು. ಓಂ ಪುರಿ ಅವರ ಅಕ್ರಮ ಸಂಬಂಧ ಈ ಸಂಬಂಧಕ್ಕೆ ಮುಳುವಾಗಿತ್ತು. ಆ ನಂತರ 1993 ರಲ್ಲಿ ''ಸಿಟಿ ಆಫ್ ಜಾಯ್'' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಓಂಪುರಿ ಪತ್ರಕರ್ತೆ ನಂದಿತಾ ಪುರಿ ಅವರನ್ನು ಭೇಟಿಯಾಗಿದ್ದರು. ನಂದಿತಾಗೆ ಮನ ಸೋತಿದ್ದರು. ಆ ನಂತರ ಇಬ್ಬರು ಮದುವೆಯಾದರು. ಆದರೆ ಇಲ್ಲಿಯೂ ಕೂಡ ಭಿನ್ನಾಭಿಪ್ರಾಯಗಳು ಮೂಡಲಾರಂಭಿಸಿದವು. ಇಬ್ಬರ ಆಲೋಚನೆ ಮತ್ತು ಸ್ವಭಾವ ತದ್ವಿರುದ್ದವಾಗಿದ್ದರೂ ಕೂಡ ಇಬ್ಬರು ಮಗ ಇಶಾನ್ ಲಾಲನೆ ಪಾಲನೆಗಾಗಿ ಒಂದೇ ಸೂರಿನಡಿ ಬದುಕು ತಳ್ಳಿದರು.

English summary
"He ruined her life." Annu Kapoor breaks his silence on the "ultimate betrayal" his sister Seema Kapoor faced during her marriage to Om Puri. From shocking claims about being abandoned while 4 months pregnant to the emotional scars that remain, get the full, unfiltered story here.
Read more about: om puri affair
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X