ಬಾಯ್‌ಫ್ರೆಂಡ್‌ ಎದುರೇ ಆ ಸ್ಟಾರ್ ಡೈರೆಕ್ಟರ್‌ ನನಗೆ ಲಿಪ್ ಕಿಸ್ ಮಾಡಿದ-ಕರಾಳ ದಿನ ನೆನೆದು ಕಣ್ಣೀರಾದ ನಟಿ

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಮಾತು ಇದೆ. ಈ ಮಾತು ಚಿತ್ರರಂಗಕ್ಕೆ ಹೆಚ್ಚು ಸೂಕ್ತವಾಗುತ್ತೆ. ಯಾಕೆಂದರೆ.. ಹೊರಗಡೆಯಿಂದ ತುಂಬಾನೇ ಕಲರ್ ಫುಲ್ ಆಗಿ ಕಾಣುವ ಈ ಬಣ್ಣದ ಲೋಕದಲ್ಲಿ ನಾನಾ ಬಗೆಯ ವೇಷಭೂಷಣ ಹಾಕಿಕೊಂಡ ಹಲವಾರು ಜನ ಇದ್ದಾರೆ. ಅದರಲ್ಲಿಯೂ ನಾಯಕಿಯಾಗಿ ನೆಲೆಯೂರಬೇಕೆಂದು ಕನಸೊತ್ತು ಬರುವ ಹಲವರ ಪಾಲಿಗೆ ಚಿತ್ರರಂಗ ಕಲ್ಲು ಮುಳ್ಳಿನ ಹಾದಿಯೇ.

ಅಡಿಗಡಿಗೂ ಈ ಚಿತ್ರರಂಗದಲ್ಲಿ ಸವಾಲುಗಳಿಗೆ ಎದೆಯೊಡ್ಡಬೇಕಾಗುತ್ತದೆ. ಪಾತ್ರಕ್ಕೆ ಪಲ್ಲಂಗವೇರಬೇಕು ಎಂಬ ಷರತ್ತನ್ನು ಒಪ್ಪಿಕೊಂಡರೆ ಮಾತ್ರ ಇಲ್ಲಿ ಅವಕಾಶ ಎಂದು ದುಷ್ಟ ವ್ಯವಸ್ಥೆಯೊಂದು ಇವರಿಗೆ ಮಾನಸಿಕ ಕಿರಿಕಿರಿ ನೀಡುತ್ತದೆ.

He Forcibly Kissed Me While Drunk Nehal Vadoliya Accuses Subhash Ghai of Misconduct

ಇನ್ನೂ ನಾಯಕಿಯರಿಗೆ ಇಲ್ಲಿ ಕೇವಲ ನಿನ್ನೆ-ಮೊನ್ನೆ ಬಂದ ನಿರ್ದೇಶಕರು-ನಿರ್ಮಾಪಕರು ಅಥವಾ ನಾಯಕರು ಮಾತ್ರ ಕಾಡುವುದಿಲ್ಲ. ಬದಲಿಗೆ ಇಲ್ಲಿ ಖ್ಯಾತಿಯ ಉತ್ತುಂಗಕ್ಕೇರಿದ ಹಿರಿಯರು ಎಂದು ಕರೆಸಿಕೊಂಡವರು ಕೂಡ ಕಾಡುತ್ತಾರೆ.

ಇದಕ್ಕೆ ಕೈಗನ್ನಡಿ ಎಂಬಂತೆ ಆ ಭಾಷೆ ಈ ಭಾಷೆ ಎನ್ನದೇ ಚಿತ್ರರಂಗದಲ್ಲಿ ಈ ಹಿರಿಯರಲ್ಲಿಯೇ ಬಹುತೇಕರು ಚಪಲ ಚನ್ನಿಗರಾಯರು ಇರುತ್ತಾರೆ ಎನ್ನುವ ಮಾತುಗಳನ್ನು ಹಲವರು ಹೇಳುತ್ತಾರೆ. ತಮ್ಮ ಅನುಭವವನ್ನೇ ಅಸ್ತ್ರವನ್ನಾಗಿಸಿಕೊಳ್ಳುವ ಇವರು ಕನಸೊತ್ತು ಬರುವ ಹಲವು ನಾಯಕಿಯರ ಪಾಲಿನ ದುಸ್ವಪ್ನ ಕೂಡ ಹೌದು ಎಂದು ಹೇಳುತ್ತಾರೆ.

ಇದಕ್ಕೆ ಒಂದು ಉದಾಹರಣೆ ಎನ್ನುವಂತೆ ಸದ್ಯ ಎರಡೆರಡು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಭಾರತೀಯ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ ''ಸುಭಾಷ್ ಘಾಯ್'' ಅವರ ಕಾಮಪುರಾಣದ ಕಥೆಯೊಂದನ್ನು ಪ್ರಖ್ಯಾತ ನಾಯಕಿ ಹಂಚಿಕೊಂಡಿದ್ದಾರೆ. ಗಂಭೀರವಾದ ಆರೋಫವನ್ನು ಮಾಡಿದ್ದಾರೆ. ಈ ಮೂಲಕ ಹಲವರನ್ನು ಆಘಾತಕ್ಕೀಡು ಮಾಡಿದ್ದಲ್ಲದೇ ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದ್ದಾರೆ.

ಹೌದು, ''ನೇಹಲ್ ವಡೋಲಿಯಾ''.. ಗುಜರಾತಿನ ಗೋರಿ. ''ಗುಜರಾತಿ ವೆಡ್ಡಿಂಗ್ ಇನ್ ಗೋವಾ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ನೇಹಲ್ ಚಿತ್ರರಂಗದಲ್ಲಿ ''ಸಾಫ್ಟ್ ಪೋರ್ನ್ ಸ್ಟಾರ್" ಎಂದೇ ಜನಜನಿತರಾಗಿದ್ದಾರೆ. ಇವರ ಇನ್‌ಸ್ಟಾಗ್ರಾಮ್ ತೆರೆದರೆ ಸಾಕು ಅಲ್ಲಿ ಇವರ ಸಂಪೂರ್ಣ ಬ್ರಹ್ಮಾಂಡ ದರ್ಶನವೇ ಆಗುತ್ತೆ. ''ಗಂದಿ ಬಾತ್''.. ''ಜೂಲಿ'' ಅಂತಹ ವೆಬ್ ಸರಣಿಗಳಲ್ಲಿ ಮೈ ಚಳಿ ಬಿಟ್ಟು ಆಕ್ಟ್ ಮಾಡಿರುವ ಇವರನ್ನು 632,431 ಜನ ಇನ್‌ಸ್ಟಾದಲ್ಲಿ ಫಾಲೋ ಮಾಡ್ತಾರೆ.

he-forcibly-kissed-me-while-intoxicated-nehal-vadoliya-accuses-subhash-ghai-of-misconduct

ಇಂಥಾ ನೇಹಲ್ ಸದ್ಯ'' ಗಲಾಟಾ ಇಂಡಿಯಾ'' ಯೂಟ್ಯೂಬ್‌ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಮಾತನಾಡಿರುವ ನೇಹಲ್ ವಡೋಲಿಯಾ ಅದೊಂದು ದಿನ ಭಾರತದ ಪ್ರಖ್ಯಾತ ನಿರ್ದೇಶಕ ಸುಭಾಷ್ ಘಾಯ್ ನನ್ನ ಬಾಯ್‌ಫ್ರೆಂಡ್ ಸಮ್ಮುಖದಲ್ಲಿಯೇ ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದರು ಎಂದು ಹೇಳಿದ್ದಾರೆ. ಈ ಮೂಲಕ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.

''ಗಲಾಟಾ ಇಂಡಿಯಾ''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ನೇಹಲ್,ಅದೊಂದು ದಿನ ಸುಭಾಷ್ ಘಾಯ್ ತಮ್ಮ ಮನೆಯಲ್ಲಿ ನನ್ನ ಪಾರ್ಟಿಗೆ ಕರೆದಿದ್ದರು. ಆ ದಿನಗಳಲ್ಲಿ ನಾನು ಎಣ್ಣೆ ಹೊಡೆಯುತ್ತಿದ್ದೆ, ಈ ಹಿನ್ನೆಲೆ ನಾನು ಹೋಗಿದ್ದೇ ಎಂದು ಹೇಳಿದ್ದಾರೆ. ನಾನು ಹೋದ ನಂತರ ನನಗೆ ''ರೆಡ್‌ ವೈನ್‌'' ಕುಡಿಯಲು ನೀಡಿದರು ಎಂದು ಹೇಳಿದ್ದಾರೆ.

ಮುಂದುವರೆದು, ಹೀಗೆ ಕುಡಿಯುತ್ತಾ ಹರಟೆ ಹೊಡೆಯುತ್ತಾ ಕುಂತ ಸಮಯದಲ್ಲಿ ಇದ್ದಕ್ಕಿದ್ದಂತೆಯೇ ಸುಭಾಷ್ ಘಾಯ್‌, ನನ್ನನ್ನೂ ಹೊಗಳು ಶುರು ಮಾಡಿದರು. ನಕ್ಕಾಗ ನೀವು ತುಂಬಾ ಮುದ್ದಾಗಿ ಕಾಣುತ್ತೀರಾ.. ನೋಡಲು ಸೆ*ಕ್ಸಿಯಾಗಿದ್ದೀರಾ.. ಚಿತ್ರರಂಗದಲ್ಲಿ ನಿಮಗೆ ಒಳ್ಳೆಯ ಭವಿಷ್ಯ ಇದೆ ಎಂದೆಲ್ಲಾ ಹೇಳಲು ಶುರು ಮಾಡಿದರು ಎಂದು ಹೇಳಿರುವ ನೇಹಲ್ ಆ ಸಮಯದಲ್ಲಿ ಅವರು ನನ್ನ ಹೊಗಳುತ್ತಿದ್ದ ಹಿನ್ನೆಲೆ ನಾನು ಖುಷಿಯಾಗಿದ್ದೆ, ಇಷ್ಟು ದೊಡ್ಡ ನಿರ್ದೇಶಕ ನನ್ನ ಗುಣಗಾನ ಮಾಡುತ್ತಿದ್ದಾರೆ, ಚಿತ್ರರಂಗದಲ್ಲಿ ಭವಿಷ್ಯ ಇದೆ ಎಂದು ಹೇಳುತ್ತಿದ್ದಾರೆ ಎಂದು ನಾನು ಮನದೊಳಗೆ ಸಂಭ್ರಮ ಪಟ್ಟಿದ್ದೇ ಎಂದು ಹೇಳಿದ್ದಾರೆ.

ಆದರೆ .. ಆ ನಂತರ ಅದ್ಯಾಕೋ ಅವರ ವರ್ತನೆ ತುಂಬಾ ಬದಲಾಯ್ತು, ಇದರಿಂದ ನನಗೆ ಇರಿಸು ಮುರಿಸಾಗಲು ಶುರುವಾಯ್ತು ಎಂದು ಹೇಳಿರುವ ನೇಹಲ್ ಆ ನಂತರ ನಮ್ಮ ಮನೆ ಬಾಲ್ಕನಿಯಿಂದ ಮುಂಬೈ ತುಂಬಾ ಚೆನ್ನಾಗಿ ಕಾಣಿಸುತ್ತೆ ಬನ್ನಿ ನೀವು ನೋಡಿ ಎಂದು ನನಗೆ ಹೇಳಿದರು ಆಗ ನನಗೆ ಅನುಮಾನ ಬಂತು ಹೀಗಾಗಿ ನಾನು ವಾಶ್ ರೂಮ್‌ಗೆ ಹೋಗುವ ನೆಪದಲ್ಲಿ ನಾನು ಅಲ್ಲಿಂದ ಎದ್ದು ಬಂದೆ, ಆದರೆ.. ಅವರು ನನ್ನ ಹಿಂದೆಯೇ ರೂಮ್‌ಗೆ ಬಂದರು ಆಗ ಆಶ್ಚರ್ಯವಾಯ್ತು ಎಂದು ಹೇಳಿದ್ದಾರೆ. ಹೀಗೆ ರೂಮ್‌ಗೆ ಬಂದ ಸುಭಾಷ್ ಘಾಯ್ ನೇರವಾಗಿ ನನ್ನ ಬಳಿ ಬಂದರು ಆಗ ನನ್ನ ಕಣ್ಣುಗಳು ತಾನಾಗಿಯೇ ಮುಚ್ಚಿಕೊಂಡವು ಆ ಕ್ಷಣಕ್ಕೆ ಏನಾಗ್ತಿದೆ ಎನ್ನುವುದೇ ನನಗೆ ಗೊತ್ತಾಗಲಿಲ್ಲ, ನಾನು ದೂರ ಸರಿಯುವ ಪ್ರಯತ್ನ ಮಾಡಿದಾಗ ಅವರು ನನ್ನ ತುಟಿಯನ್ನು ಚುಂಬಿಸಿದರು ಎಂದು ಹೇಳಿದ್ದಾರೆ. ಅವರ ಉಗುಳು ನನ್ನ ತುಟಿಯ ಮೇಲೆ ಎಲ್ಲಾ ಇತ್ತು ಎಂದು ಹೇಳಿದ್ದಾರೆ.

ಇನ್ನೂ ವಿಚಿತ್ರ ಅಂದರೆ ಆ ಸಮಯದಲ್ಲಿ ನನಗೆ ಒಬ್ಬ ಬಾಯ್‌ಫ್ರೆಂಡ್ ಇದ್ದ. ವಿಶೇಷ ಅಂದರೆ ಆತ ಇದೆ ಸುಭಾಷ್ ಘಾಯ್ ಅವರ ಮ್ಯಾನೇಜರ್ ಆಗಿದ್ದ, ಆತನೇ ಈ ಪಾರ್ಟಿಗೆ ನನ್ನ ಕರೆದೊಯ್ದಿದ್ದ ಆದರೆ ಆಗ ನನಗೆ ಈತ ಸುಭಾ‍ಷ್ ಘಾಯ್ ಮ್ಯಾನೇಜರ್ ಎನ್ನುವುದು ಗೊತ್ತಿರಲಿಲ್ಲ. ಬದಲಿಗೆ ನನಗೆ ಈ ವಿಚಾರ ಸುಭಾಷ್ ಘಾಯ್‌ ನನಗೆ ಬಲವಂತದಿಂದ ಲಿಪ್ ಕಿಸ್ ಮಾಡಿದ ನಂತರ ಗೊತ್ತಾಯ್ತು ಎಂದು ಹೇಳಿರುವ ನೇಹಲ್ ಆಗ ನಾನು ನನ್ನ ಬಾಯ್‌ಫ್ರೆಂಡ್‌ ಮೇಲೆ ಕೋಪ ಮಾಡಿಕೊಂಡಿದ್ದೇ, ಈ ಕುರಿತು ಪ್ರಶ್ನೆ ಮಾಡಿದ್ದೇ, ಸುಭಾಷ್ ಘಾಯ್ ಎಂತಹ ವ್ಯಕ್ತಿ ಎನ್ನುವುದು ನಿನಗೆ ಗೊತ್ತಿದ್ದರೂ ಕೂಡ ನೀನು ನನ್ನ ಇಲ್ಲಿಗೆ ಬರುವಂತೆ ಹೇಳಿದೆ ಅಂದರೆ ನಿನ್ನ ಉದ್ದೇಶವೇ ಸರಿ ಇಲ್ಲ ಎನ್ನುವುದು ನನಗೆ ಗೊತ್ತಾಯ್ತು ಎಂದು ಕಿಡಿ ಕಾರಿದ್ದೇ ಎಂದು ಹೇಳಿದ್ದಾರೆ. ಈ ಘಟನೆ ನಂತರ ಅವನ ಜೊತೆ ಸಂಬಂಧವನ್ನೇ ನಾನು ಕಡಿದುಕೊಂಡೆ ಎಂದು ಕೂಡ ನೇಹಲ್ ವಡೋಲಿಯಾ ಹೇಳಿದ್ದಾರೆ.

ಸದ್ಯ ನೇಹಲ್ ಅವರ ಈ ಮಾತು ಮಂಥನ ಬಾಲಿವುಡ್‌ನ ಬೆಚ್ಚಿ ಬೀಳಿಸಿದೆ. ಸುಭಾಷ್ ಘಾಯ್ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಗಿತ್ತಿದೆ. ಇನ್ನು ಸುಭಾಷ್ ಘಾಯ್ ಅವರ ಮೇಲೆ ಆರೋಪ ಮಾಡಿದವರಲ್ಲಿ ನೇಹಲ್ ಮೊದಲಿಗರನೇಲ್ಲ. ಈ ಹಿಂದೆ ಕೂಡ ಹಲವರು ಸುಭಾಷ್ ಘಾಯ್ ಅವರ ಕಾಮಪುರಾಣ ಕಥೆ ಹೇಳಿ ಬಿಕ್ಕಿದ್ದಾರೆ. ಈ ಹಿನ್ನೆಲೆ ಆಕ್ರೋಶ ಇನ್ನೂ ಹೆಚ್ಚಾಗಿದ್ದು ಸುಭಾಷ್ ಘಾಯ್ ಸದ್ಯ ಹೊಸ ಮುಖಗಳಿಗೆ ಅಪರಿಚಿತರಿಗೆ ಸಲಹೆ ಎಲ್ಲ ಕೊಡಲು ಹೋಗಬೇಡಿ ಪ್ರಚಾರಕ್ಕೆ ಅವರು ಯಾವಾಗ ಬೇಕಾದರೂ ಅವರ ಬಣ್ಣ ಬದಲಿಸಬಹುದು ಎಂಬರ್ಥದಲ್ಲಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಸ್ಟ್ ಹಂಚಿಕೊಂಡಿದ್ಧಾರೆ.

More from Filmibeat

English summary
In a shocking revelation, actress Nehal Vadoliya details her experience with filmmaker Subhash Ghai, alleging misconduct and indecent behavior that occurred while he was intoxicated.
Read more about: casting couch me too subhash ghai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X