ಅಮೆರಿಕಾ ರ್ಯಾಪರ್ ಜೊತೆ ಭಾರತದ ಪ್ರಖ್ಯಾತ ಗಾಯಕನ ಅಕ್ರಮ ಸಂಬಂಧ ; ಮದುವೆಯಾದ ವಿಷಯ ಮರೆಮಾಚಿ ರೊಮ್ಯಾನ್ಸ್
ಅರೆಂಜ್ ಮ್ಯಾರೇಜ್ ಆಗಿರಲಿ.. ಲವ್ ಮ್ಯಾರೇಜ್ ಆಗಿರಲಿ.. ಮದುವೆಯಾದ ನಂತರ ಒಬ್ಬರ ಮೇಲೊಬ್ಬರಿಗೆ ನಂಬಿಕೆ ಇರಬೇಕು. ಸಂಬಂಧ ಆಳವಾಗಿ ಬೇರೂರಬೇಕು. ಆಗಲೇ ದಾಂಪತ್ಯ ಜೀವನ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ. ಆದರೆ.. ಬದಲಾದ ಈ ಕಾಲದಲ್ಲಿ. ಬದುಕಲು ದೊರೆತ ಅಸಂಖ್ಯ ಅವಕಾಶಗಳು, ವ್ಯಕ್ತಿ ಸ್ವಾತಂತ್ರ್ಯ..ಹೊಂದಾಣಿಕೆ ಕೊರತೆ.. ದೈಹಿಕ ಅತೃಪ್ತಿ.. ಪ್ರೀತಿಯ ಕೊರತೆ.. ಹೀಗೆ ಮುಂತಾದ ಕಾರಣಗಳಿಂದ ಹಲವರು..
ಮದುವೆಯ ನಂತರ ಅನೈತಿಕ ಸಂಬಂಧಕ್ಕೆ ಹಾತೊರೆಯುತ್ತಿದ್ದಾರೆ. ವೈವಾಹಿಕ ಸಂಬಂಧದಲ್ಲಿ ಸಿಗದಿದ್ದನ್ನು ಹೊರಗಡೆ ಹುಡುಕುವ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾರೆ. ಒಂದರ್ಥದಲ್ಲಿ ಇಂದು ವೈವಾಹಿಕ ಸಂಬಂಧ ಪವಿತ್ರವಾದ ಅನುಬಂಧ ಎನ್ನುವ ಮಾತಿಗೆ ಬೆಲೆ ಕೊಡುವವರು ತೀರಾ ಕಡಿಮೆಯಾಗಿದ್ದಾರೆ. ಈ ಸಾಲಿನಲ್ಲಿ ಜನಪ್ರಿಯ ಗಾಯಕ ಕರಣ್ ಔಜ್ಲಾ ಕೂಡ ಇದ್ದಾರೆ ಎನ್ನುವುದೇ ಈ ಕ್ಷಣದ ಬ್ರೇಕಿಂಗ್ ನ್ಯೂಸ್.

ಹೌದು, ಕರಣ್ ಔಜ್ಲಾ.. ಪಂಜಾಬ್‌ನ ಖ್ಯಾತ ಗಾಯಕ. ''ಚಿತ್ತಿಯಾನ್''.. ''ರೆಡ್ ಐಸ್''.. ''ಮೆಕ್ಸಿಕೋ''.. ''ಕ್ಯಾ ಬಾತ್ ಆ''.. ''ಝಂಜರ್'' .. ''ಶೇಕ್''.. ''ವೈಟ್ ಬ್ರೌನ್ ಬ್ಲ್ಯಾಕ್''.. ಇವರ ಕೆಲ ಜನಪ್ರಿಯ ಗೀತೆಗಳು. ಇನ್ನೂ ಎರಡು ವರ್ಷದ ಹಿಂದೆ ಯುವ ಜನಾಂಗವನ್ನು ಹುಚ್ಚೆಬ್ಬಿಸಿದ್ದ ವಿಕ್ಕಿ ಕೌಶಲ್ ಅಭಿನಯದ ''ಬ್ಯಾಡ್ ನ್ಯೂಸ್'' ಚಿತ್ರದ ತೌಬಾ ತೌಬಾ ಹಾಡನ್ನು ಹಾಡಿದ್ದವರು ಬೇರೆ ಯಾರು ಅಲ್ಲ ಬದಲಿಗೆ ಇವರೇ.
ಜಸ್‌ಕರನ್ ಸಿಂಗ್ ಔಜ್ಲಾ ಇವರ ಮೂಲ ಹೆಸರು. ಅತ್ಯಂತ ಕಡಿಮೆ ಅವಧಿಯಲ್ಲಿ ಹಾಡು ಬರೆದು ಸಂಗೀತವನ್ನು ಸಂಯೋಜನೆ ಮಾಡುವದರಲ್ಲಿ ಇವರು ಸಿದ್ದ ಹಸ್ತರು. ಈ ಹಿನ್ನೆಲೆ ಇವರ ಅಭಿಮಾನಿಗಳು ಇವರನ್ನು ''ಗೀತನ್ ದಿ ಮಷೀನ್'' ಎಂಬ ಬಿರುದನ್ನು ಕೂಡ ನೀಡಿದ್ದಾರೆ.
ತಮ್ಮ ಯವ್ವನದ ದಿನಗಳಲ್ಲಿಯೇ ಪಲಕ್ ಅವರಿಗೆ ಮನ ಸೋತ ಕರಣ್ ಔಜ್ಲಾ ಹತ್ತು ವರ್ಷಗಳ ಕಾಲ ಪಲಕ್ ಜೊತೆ ವ್ಯೆಯಕ್ತಿಕ ಬದುಕಿನಲ್ಲಿ ಪ್ರೇಮ ಗೀತೆ ಹಾಡಿದರು. ಎರಡು ವರ್ಷದ ಹಿಂದೆ ಅಂದರೆ 2023ರಲ್ಲಿ ಮೆಕ್ಸಿಕೋದಲ್ಲಿ ಮದುವೆಯಾದರು. ಪಲಕ್ ವೃತ್ತಿಯಲ್ಲಿ ಮೇಕಪ್ ಕಲಾವಿದೆ ಮತ್ತು ಉದ್ಯಮಿ. ಪತಿಯ ನೆರಳಿನಾಚೆ ಕೆನಡಾದಲ್ಲಿ ಬದುಕು ರೂಪಿಸಿಕೊಂಡಿರುವ ಪಲಕ್ ತಮ್ಮದೇ ಆದ ''ಮೈಸನ್ ಪಾಲ್ಕೆ'' ಎಂಬ ಬ್ಯೂಟಿ ಪಾರ್ಲರ್ ಕೂಡ ಹೊಂದಿದ್ದಾರೆ. 2.33ಲಕ್ಷಕ್ಕೂ ಅಧಿಕ ಜನ ಪಲಕ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಿಂಬಾಲಿಸುತ್ತಿದ್ಧಾರೆ.
ಇಂಥಾ ಪಲಕ್ ಮತ್ತು ಕರಣ್ ಅವರ ದಾಂಪತ್ಯ ಜೀವನಕ್ಕೆ ಚಂಡಮಾರುತವೊಂದು ಬಂದು ಅಪ್ಪಳಿಸಿದೆ. ಆ ಚಂಡ ಮಾರುತದ ಹೆಸರು ಎಂಎಸ್ ಗೌರಿ. ಅಮೆರಿಕ ಮೂಲದ ರ್ಯಾಪರ್ ಇವರು. ಟ್ವಿನ್ ರಾಪ್ ಡ್ಯುಯೊ Nyx & Nym ತಂಡದ ಭಾಗವಾಗಿರುವ ಎಂಎಸ್ ಗೌರಿ ಸದ್ಯ ಕರಣ್ ಔಜ್ಲಾ ವಿರುದ್ಧ ಅನೈತಿಕ ಸಂಬಂಧದ ಆರೋಪ ಮಾಡಿದ್ದಾರೆ. ಮದುವೆಯಾದ ವಿಚಾರವನ್ನು ಹೇಳದೇ ನನಗೆ ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಎಂಎಸ್ ಗೌರಿ, ಕರಣ್ ಔಜ್ಲಾ ನನ್ನ ಜೊತೆ ದೀರ್ಘಕಾಲದಿಂದ ರಹಸ್ಯವಾದ ಸಂಬಂಧ ಹೊಂದಿದ್ದರು ಎಂದು ಹೇಳಿದ್ದಾರೆ. ಕರಣ್‌ಗೆ ಮದುವೆಯಾಗಿದೆ ಎನ್ನುವ ವಿಚಾರ ನನಗೆ ಗೊತ್ತಿರಲಿಲ್ಲ ಎಂದು ಹೇಳಿರುವ ಗೌರಿ ಉದ್ದೇಶಪೂರ್ವಕವಾಗಿಯೇ ಕರಣ್ ನನ್ನಿಂದ ಈ ಸತ್ಯವನ್ನು ಮರೆ ಮಾಚಿದ್ದರು ಎಂದು ಹೇಳಿದ್ದಾರೆ.
ಕರಣ್‌ಗೆ ಈಗಾಗಲೇ ಮದುವೆಯಾಗಿದೆ ಎನ್ನುವ ವಿಚಾರ ನನಗೆ ಗೊತ್ತಾದ ನಂತರ ನನ್ನ ಬಾಯಿ ಮುಚ್ಚಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ, ನನ್ನ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿರುವ ಗೌರಿ ನಿಷ್ಠವಂತ ಗಂಡ ಎಂಬ ಇಮೇಜ್ ಕಾಪಾಡಿಕೊಳ್ಳಲು ನನ್ನ ಇಮೇಜ್‌ನ ಡ್ಯಾಮೇಜ್ ಮಾಡುವ ಪ್ರಯತ್ನವನ್ನು ಕರಣ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಭಾರತಕ್ಕೆ ನನ್ನ ಈ ಸತ್ಯ ತಲುಪದಂತೆ ಮಾಡುತ್ತಿದ್ದಾರೆ ಎಂದಿದ್ಧಾರೆ.

ಮುಂದುವರೆದು ಅಮೆರಿಕಾದಲ್ಲಿನ ಪ್ರತಿಷ್ಠಿತ ಮಾಧ್ಯಮ ನನ್ನ ಜೊತೆ ಸಂದರ್ಶನಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದು ನಾನು ಸಂದರ್ಶನದ ಮೂಲಕ ಕರಣ್ ಔಜ್ಲಾ ಮುಖವಾಡ ಕಳಚುತ್ತೇನೆ ಎಂದು ಹೇಳಿರುವ ಎಂಎಸ್ ಗೌರಿ ನಮ್ಮ ಅನೈತಿಕ ಸಂಬಂಧಕ್ಕೆ ನನ್ನ ಬಳಿ ಅನೇಕ ಸಾಕ್ಷಿಗಳಿವೆ ಎಂದು ಹೇಳಿದ್ದಾರೆ. ಇಬ್ಬರ ನಡುವೆ ನಡೆದ ಮಾತುಕತೆಯ ಕೆಲ ಸ್ಕ್ರೀನ್ ಶಾಟ್‌ಗಳನ್ನು ಕೂಡ ಹಂಚಿಕೊಂಡಿದ್ದಾರೆ.
ಅಂದ್ಹಾಗೇ ಕರಣ್ ಔಜ್ಲಾ ತಮ್ಮ ಹಾಡುಗಳಲ್ಲಿ ನಿಷ್ಠೆ.. ನಂಬಿಕೆ.. ಪ್ರೀತಿಯ ಕುರಿತು ಮಾತನಾಡುತ್ತಿರುತ್ತಾರೆ. ಅದರಲ್ಲಿಯೂ '' ವಿನ್ನಿಂಗ್ ಸ್ಪೀಚ್'' ಹಾಡಿನಲ್ಲಿ "ಏಕ ಪತ್ನಿವೃತಸ್ತ" ಎಂಬರ್ಥದ ಸಾಲುಗಳನ್ನೆಲ್ಲ ಪೋಣಿಸಿದ್ದಾರೆ. ಆದರೆ ಈಗ ನೋಡಿದರೆ ಕರಣ್ ಔಜ್ಲಾ ಅವರ ಮೇಲೆ ನಂಬಿಕೆ ದ್ರೋಹದ ಆರೋಪವನ್ನು ಅಮೆರಿಕಾದ ರ್ಯಾಪರ್ ಮಾಡಿದ್ದಾರೆ.

ಈ ಹಿನ್ನೆಲೆ ಇವರ ಅಭಿಮಾನಿಗಳಲ್ಲಿ ಈಗ ಅಸಮಾಧಾನ ಮನೆ ಮಾಡಿದೆ. ಕರಣ್ ಔಜ್ಲಾ ವಿರುದ್ಧ ಆಕ್ರೋಶವೂ ವ್ಯಕ್ತವಾಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕರಣ್ ಔಜ್ಲಾ ಅವರಾಗಲಿ ಅವರ ಪತ್ನಿ ಪಲಕ್ ಅವರಾಗಲಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಿಗೆ ಗೌರಿ ಆರೋಪ ಮಾಡಿದ ನಂತರ ತಮ್ಮ ಪತಿ ಜೊತೆ ಇರುವ ಫೋಟೊವನ್ನು ಪಲಕ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರಷ್ಟೇ.


Click it and Unblock the Notifications











