ಬಲವಂತದಿಂದ ಆ ವ್ಯಕ್ತಿ ನನ್ನ ಮುಖ ಹಿಡಿದ, ಆಮೇಲೆ.. ; ಕೆಜಿಎಫ್ ಚೆಲುವೆಗೆ ಕಾಡಿದ ಆ ನಿರ್ದೇಶಕ ಯಾರು ?

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಮಾತು ಇದೆ. ಈ ಮಾತು ಚಿತ್ರರಂಗಕ್ಕೆ ಹೆಚ್ಚು ಸೂಕ್ತವಾಗುತ್ತೆ. ಯಾಕೆಂದರೆ.. ಹೊರಗಡೆಯಿಂದ ತುಂಬಾನೇ ಕಲರ್ ಫುಲ್ ಆಗಿ ಕಾಣುವ ಈ ಬಣ್ಣದ ಲೋಕದಲ್ಲಿ ನಾನಾ ಬಗೆಯ ವೇಷಭೂಷಣ ಹಾಕಿಕೊಂಡ ಹಲವಾರು ಜನ ಇದ್ದಾರೆ. ಅದರಲ್ಲಿಯೂ ನಾಯಕಿಯಾಗಿ ನೆಲೆಯೂರಬೇಕೆಂದು ಕನಸೊತ್ತು ಬರುವ ಹಲವರ ಪಾಲಿಗೆ ಚಿತ್ರರಂಗ ಕಲ್ಲು ಮುಳ್ಳಿನ ಹಾದಿಯೇ.

ಅಡಿಗಡಿಗೂ ಈ ಚಿತ್ರರಂಗದಲ್ಲಿ ಸವಾಲುಗಳಿಗೆ ಎದೆಯೊಡ್ಡಬೇಕಾಗುತ್ತದೆ. ಪಾತ್ರಕ್ಕೆ ಪಲ್ಲಂಗವೇರಬೇಕು ಎಂಬ ಷರತ್ತನ್ನು ಒಪ್ಪಿಕೊಂಡರೆ ಮಾತ್ರ ಇಲ್ಲಿ ಅವಕಾಶ ಎಂದು ದುಷ್ಟ ವ್ಯವಸ್ಥೆಯೊಂದು ಇವರಿಗೆ ಮಾನಸಿಕ ಕಿರಿಕಿರಿ ನೀಡುತ್ತದೆ. ಕೆಲವರು ಇಲ್ಲಿ ನೇರವಾಗಿಯೇ ತಮ್ಮ ಜೊತೆ ಮಲಗಬೇಕೆಂಬ ಬೇಡಿಕೆಯನ್ನು ಮುಂದಿಡುತ್ತಾರೆ. ಇನ್ನೂ ಕೆಲವರು ಅವಕಾಶ ನೀಡುವ ನೆಪದಲ್ಲಿ ಹತ್ತಿರವಾಗುವ ಪ್ರಯತ್ನ ಮಾಡುತ್ತಾರೆ. ಚೂರು ಯಾಮಾರಿದರೂ ಕೂಡ ಸ್ಥಳ ಯಾವುದೇ ಇರಲಿ, ಅಲ್ಲಿಯೇ ಬಲವಂತದಿಂದ ತಮ್ಮ ಕಾ*ಮದಾಹ ತೀರಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ.

He Literally Held My Face Mouni Roy Recalls Inappropriate Behaviour at 21 in Bollywood

ಒಟ್ನಲ್ಲಿ ಚಿತ್ರರಂಗದಲ್ಲಿ ಇಂದು ಹೆಸರು ಮಾಡಿರುವವರು.. ಹೆಸರು ಮಾಡಲಾಗದೇ ಮನೆ ಸೇರಿದವರು.. ಒಂದಿಲ್ಲೊಂದು ದಿನ.. ಒಂದಿಲ್ಲೊಂದು ರೀತಿಯಲ್ಲಿ.. ಈ ಝಗಮಗ ಲೋಕದಲ್ಲಿನ ವಿಕೃತ ಲೋಕವನ್ನು ಕಂಡು ಬೆಚ್ಚಿ ಬಿದ್ದಿಯೇ ಬಿದ್ದಿರುತ್ತಾರೆ. ಉದಾಹರಣೆಗೆ ಮೌನಿ ರಾಯ್.

ಹೌದು, ಮೌನಿ ರಾಯ್.. ''ಕೆ.ಜಿ.ಎಫ್'' ಚಿತ್ರದ ಹಿಂದಿ ವರ್ಷನ್‌ನಲ್ಲಿ ಹೆಜ್ಜೆ ಹಾಕಿದ್ದ ಮದನಾರಿ. ನೋಡಲು ಶಿಲಾಬಾಲಿಕೆಯಂತೆ ಇರುವ ಮೌನಿ ತಮ್ಮ ಕನಸಿನ ಈ ಪ್ರಯಾಣವನ್ನ ಆರಂಭ ಮಾಡಿದ್ದು ಕಿರುತೆರೆಯ ಮೂಲಕ. ''ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ'' ಧಾರಾವಾಹಿ ಇವರ ಮೊದಲ ಹೆಜ್ಜೆ.

ಆ ನಂತರ ''ಕಸ್ತೂರಿ''.. ''ದೇವೊಂಕೇ ದೇವ್ ಮಹಾದೇವ್'' ಸೇರಿ ಕೆಲ ಧಾರಾವಾಹಿ ಮಾಡಿದ್ದ ಮೌನಿ ರಾಯ್ ಅದೃಷ್ಟ ಏಕ್ತಾ ಕಪೂರ್ ಕಚೇರಿಯಲ್ಲಿತ್ತು. ಏಕ್ತಾ ನಿರ್ಮಾಣದ ''ನಾಗಿನ್'' ಬೇಕಿದ್ದ ಹೆಸರನ್ನ ಇವರಿಗೆ ತಂದು ಕೊಡ್ತು. ಅಲ್ಲಿಂದಾಚೆ.. ಮೌನಿ ಒಂದಾದ ಮೇಲೊಂದು ಅವಕಾಶ ಪಡೆದರು. ಐಟಂ ಹಾಡುಗಳಿಗೆ ಹೆಜ್ಜೆ ಹಾಕ್ತಾನೇ, ನಾಯಕಿಯಾಗುವ ''ಗೋಲ್ಡ್‌''ನ ಅವಕಾಶ ಪಡೆದರು. ''ಬ್ರಹ್ಮಾಸ್ತ್ರ'' ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದರು. ಎರಡು ವರ್ಷದ ಹಿಂದೆ ಸೂರಜ್ ನಂಬಿಯಾರ್ ಅವರನ್ನ ಮದುವೆಯೂ ಆದರು. ಸದ್ಯಕ್ಕೆ ಮೌನಿ ಸುಖಿ ಸಂಸಾರಿ.

ಇಂಥಾ ಮೌನಿ ರಾಯ್ ಅವಕಾಶಗಳನ್ನು ಅರಸುತ್ತಾ ತಾವು ಮುಂಬೈಗೆ ಬಂದಾಗ ತಮಗೆ ಆದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಅಪೂರ್ವ ಮಖೀಜಾ ಅಲಿಯಾಸ್ ರೆಬಲ್ ಕಿಡ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮೌನಿ ರಾಯ್ ನನಗೆ ಆಗಿನ್ನೂ 21 ವರ್ಷ, ಅವಕಾಶಕ್ಕಾಗಿ ಅಲೆಯುತ್ತಿದ್ದ ದಿನಗಳವು ಎಂದು ಹೇಳಿದ್ದಾರೆ. ಆ ಸಮಯದಲ್ಲಿ ನಿರ್ದೇಶಕರೊಬ್ಬರು ಕಥೆ ಹೇಳಲು ನನಗೆ ತಮ್ಮ ಕಛೇರಿಗೆ ಕರೆಸಿಕೊಂಡಿದ್ದರು ಎಂದು ಹೇಳಿರುವ ಮೌನಿ ರಾಯ್ ನಾನು ಅಲ್ಲಿ ಹೋದಾಗ ಹಲವರು ಇದ್ದರು ಎಂದು ಹೇಳಿದ್ದಾರೆ.

He Literally Held My Face Mouni Roy Recalls Inappropriate Behaviour at 21 in Bollywood

ಮುಂದುವರೆದು ಅವರು ತಮ್ಮ ಕಥೆಯನ್ನು ನನಗೆ ಹೇಳಲು ಶುರು ಮಾಡಿದರು. ಆ ಕಥೆ ತುಂಬಾನೇ ಆಸಕ್ತಿದಾಯಕವಾಗಿತ್ತು ಎಂದು ಹೇಳಿರುವ ಮೌನಿ ರಾಯ್ ಚಿತ್ರದ ಒಂದು ದೃಶ್ಯದಲ್ಲಿ ನಾಯಕಿ ಸ್ವಿಮಿಂಗ್ ಪೂಲ್‌ಗೆ ಬೀಳುತ್ತಾಳೆ. ಪ್ರಜ್ಞೆ ಕಳೆದುಕೊಳ್ಳುತ್ತಾಳೆ. ಆಗ ನಾಯಕಿಗೆ ನಾಯಕ ಮೌತ್-ಟು-ಮೌತ್ ರೆಸ್ಪಿರೇಷನ್ ಮೂಲಕ ಆಕೆಯನ್ನು ಎಬ್ಬಿಸುವ ಸನ್ನಿವೇಶ ಅದು ಎಂದು ನೆನಪು ಮಾಡಿಕೊಂಡಿದ್ದಾರೆ.

ಈ ಸನ್ನಿವೇಶವನ್ನು ನನಗೆ ಹೇಳುತ್ತಿದ್ದ ಆ ವ್ಯಕ್ತಿ ಇದೇ ಸಮಯದಲ್ಲಿ ಏಕಾಏಕಿ ನನ್ನ ಬಳಿ ಬಂದು ನನ್ನ ಮುಖವನ್ನು ಗಟ್ಟಿಯಾಗಿ ಹಿಡಿದ, ಆ ನಂತರ ಬಲವಂತದಿಂದ ಮೌತ್-ಟು-ಮೌತ್ ರೆಸ್ಪಿರೇಷನ್ ಮಾಡುವುದು ಹೇಗೆ ಎನ್ನುವುದನ್ನು ತೋರಿಸಿಯೇ ಬಿಟ್ಟರು ಎಂದು ಹೇಳಿರುವ ಮೌನಿ ರಾಯ್ ಆ ಸಮಯದಲ್ಲಿ ನನಗೇನು ಮಾಡಬೇಕು ಎನ್ನುವುದೇ ಅರ್ಥವಾಗಲಿಲ್ಲ, ನನ್ನ ಮೈಯೆಲ್ಲ ನಡುಗಲು ಶುರುವಾಗಿತ್ತು, ಅಲ್ಲಿಂದ ನಾನು ಎದ್ನೋ ಬಿದ್ನೋ ಎಂದು ಓಡಿ ಬಂದೆ ಎಂದು ಹೇಳಿದ್ದಾರೆ. ಈ ಕಹಿ ಅನುಭವ ನನಗೆ ಬಹುಕಾಲದವರೆಗೆ ಕಾಡುತ್ತಿತ್ತು ಎಂದು ಕೂಡ ಹೇಳಿದ್ದಾರೆ.

ಆದರೆ, ಎಲ್ಲಿಯೂ ಆ ವ್ಯಕ್ತಿ ಯಾರು..? ಆ ಚಿತ್ರ ಯಾವುದು..? ಎನ್ನುವುದನ್ನು ಮೌನಿ ರಾಯ್ ಹೇಳಿಲ್ಲ. ಸದ್ಯ ಮೌನಿ ರಾಯ್ ಅವರ ಈ ಮಾತು ಬಾಲಿವುಡ್‌ನಲ್ಲಿ ಚರ್ಚೆಗೆ ನಾಂದಿ ಹಾಡಿದೆ.

More from Filmibeat

English summary
Bollywood star Mouni Roy reveals the traumatic incident she faced at 21, describing how a man 'literally held my face.' Read the full, powerful story here.
Read more about: casting couch mouni roy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X