ತನ್ನ ಅಕ್ಕನ ಜೊತೆ ನನ್ನ ಗಂಡ ಮಲಗೇಳುತ್ತಿದ್ದ ; ಮೆಲೋಡಿ ಕಿಂಗ್ 'ಕುಮಾರ್ ಸಾನು' ವಿರುದ್ಧ ಮಾಜಿ ಪತ್ನಿಯ ಗಂಭೀರ ಆರೋಪ

ಮದುವೆಯಾದ ಹೊಸತರಲ್ಲಿ ಹಲವರು ಎರಡು ಹೆಸರು ಒಂದೇ ಉಸಿರು ಎನ್ನುವಂತೆ ಇರುತ್ತಾರೆ. ಆದರೆ.. ಕಾಲ ಕ್ರಮೇಣ ದಾಂಪತ್ಯದಲ್ಲಿನ ಈ ಪ್ರೀತಿ-ಪ್ರಣಯ ನಿಧಾನಕ್ಕೆ ನೇಪಥ್ಯಕ್ಕೆ ಸರಿಯಲು ಶುರು ಮಾಡುತ್ತೆ. ಅಲ್ಲಿಯವರೆಗೆ ಕಾಣದ ಭಿನ್ನಾಭಿಪ್ರಾಯಗಳು ಕಾಣುತ್ತವೆ. ನೋಡ ನೋಡುತ್ತಲೇ ಸಂಬಂಧ ಮುರಿದು ಬೀಳುತ್ತೆ. ಆ ನಂತರ ಶುರುವಾಗುವುದೇ ಆರೋಪ- ಪ್ರತ್ಯಾರೋಪಗಳ ಸುರಿಮಳೆ.

ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಂಡವರ ಬದುಕು ಮೊದಲಿಂದ ಮನರಂಜನೆಯ ಸರಕು. ಇವರ ಬದುಕಿನ ಮೇಲೆ ಹಲವರಲ್ಲಿ ಕುತೂಹಲ ಇರುತ್ತೆ. ಆಸಕ್ತಿ ಇರುತ್ತೆ.

He Slept with His Sister Kumar Sanu s Ex-Wife Rita Bhattacharya Makes Shocking Allegations

ಅದರಲ್ಲಿಯೂ ಗಂಡ -ಹೆಂಡತಿ ವಿಚ್ಛೇದನ ಪಡೆದರೆ ಮುಗೀತು. ಹಲವರು ಅವರದ್ದೇ ಆದ ಥಿಯರಿಗಳನ್ನು ಮಂಡಿಸಲು ಶುರು ಮಾಡುತ್ತಾರೆ. ಹಲವರು ಈ ಸತ್ಯಾಸತ್ಯತೆ ತಿಳಿಯುವ ಗೋಜಿಗೆ ಹೋಗದೆ ಕೇಳಿದ ಸುದ್ದಿಯನ್ನೇ ನಿಜಾ ಎಂದುಕೊಳ್ಳುತ್ತಾರೆ. ಆದರೆ ವಾಸ್ತವ ಸಂಬಂಧ ಮುರಿದು ಬೀಳಲು ಕಾರಣವೇನು..? ಎನ್ನುವ ಪ್ರಶ್ನೆಗೆ ಉತ್ತರ ಅನುಭವಿಸಿದವರಿಗಷ್ಟೇ ಗೊತ್ತಿರುತ್ತೆ. ಉದಾಹರಣೆಗೆ ಕುಮಾರ್ ಸಾನು ಅವರ ಪತ್ನಿ ರೀಟಾ ಭಟ್ಟಾಚಾರ್ಯ.

ಹೌದು. ಕುಮಾರ್ ಸಾನು.. ಅಂದಕಾಲತ್ತಿಲ್‌ನ ಜಗದ್ವಿಖ್ಯಾತ ಗಾಯಕ. 90ರ ದಶಕದಲ್ಲಿ ಇವರ ಕಂಠ ಕುಣಿಯುತ್ತಿದ್ದರೆ ಹಲವರ ಮನದಲ್ಲಿ ಪ್ರೀತಿ ಚಿಗುರೊಡೆಯುತ್ತಿತ್ತು. ಪ್ರೀತಿಯಲ್ಲಿ ಬೀಳಲು ಹಲವರ ಮನ ಹಾತೊರೆಯುತ್ತಿತ್ತು. ''ಮೆಲೋಡಿ ಕಿಂಗ್'' ಎಂಬ ಬಿರುದು ಇವರಿಗೆ ಹಾಗೇ ಬಂದಿದ್ದಲ್ಲ.

ಇಂಥಾ ಕುಮಾರ್ ಸಾನು ಅವರ ಮೊದಲ ಪತ್ನಿ ಸದ್ಯ ಹಲವು ಆಘಾತಕಾರಿ ವಿಚಾರಗಳನ್ನು ಬಹಿರಂಗಗೊಳಿಸಿದ್ದಾರೆ. ತಮ್ಮ ಮಾಜಿ ಪತಿ ಕುಮಾರ್ ಸಾನು ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಕುರಿತು ಇತ್ತೀಚಿಗೆ ''ಫಿಲ್ಮ್ ವಿಂಡೋ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರೀಟಾ ಭಟ್ಟಾಚಾರ್ಯ

ಕುಮಾರ್ ಸಾನು ಅವರ ಮನೆಯಲ್ಲಿ ''ಬಹುಪತ್ನಿತ್ವ'' ತುಂಬಾನೇ ಮಾಮೂಲಿ, ಅವರ ಇಡೀ ವಂಶದಲ್ಲಿಯೇ ಎಲ್ಲರೂ ಈ ಸಂಪ್ರದಾಯ ಮೈಗೂಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಕುಮಾರ್ ಸಾನುಗೆ ಐದು ಜನ ಒಡ ಹುಟ್ಟಿದವರು ಇವರೆಲ್ಲರ ಮನೆ ದೋಸೆ ತೂತು ಎಂದು ಹೇಳಿರುವ ರೀಟಾ ಅವರ ತಂದೆ ಕೂಡ ಸಾಯುವ ವಯಸ್ಸಿನಲ್ಲಿ ಕೂಡ ಮದುವೆಯಾಗಿದ್ದರು ಎಂದು ಹೇಳಿದ್ದಾರೆ.

He Slept with His Sister Kumar Sanu s Ex-Wife Rita Bhattacharya Makes Shocking Allegations

ಅವರ ಇಡೀ ಮನೆತನದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ವಿಚ್ಚೇದನ ಪಡೆದ ಮೊದಲ ಮಹಿಳೆ ನಾನೇ ಎಂದು ಹೇಳಿರುವ ರೀಟಾ ಇವತ್ತು ಕೂಡ ಅವರ ಮನೆಯಲ್ಲಿ ಹಲವರಿಗೆ ಅಕ್ರಮ ಅನೈತಿಕ ಸಂಬಂಧಗಳಿವೆ. ಆದರೂ ಕೂಡ ಅವರ ಪತ್ನಿಯರು ವಿಚ್ಛೇದನ ನೀಡಿಲ್ಲ ಬದಲಿಗೆ ಒಟ್ಟಿಗೆ ಎಲ್ಲ ವಾಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಮುಂದುವರೆದು ಇದೇ ಸಂದರ್ಶನದಲ್ಲಿ ಮತ್ತೊಂದು ಆಘಾತಕಾರಿ ಆರೋಪ ಮಾಡಿರುವ ರೀಟಾ ಭಟ್ಟಾಚಾರ್ಯ, ನನ್ನ ಮತ್ತು ಕುಮಾರ್ ಸಾನು ಸಂಬಂಧ ಒಂದು ಹಂತದಲ್ಲಿ ಚೆನ್ನಾಗಿಯೇ ಇತ್ತು. ಆದರೆ.. ಅದ್ಯಾವ ಘಳಿಗೆಯಲ್ಲಿ ಕುಮಾರ್ ಸಾನುನ ಸಹೋದರಿ ತನ್ನ ಗಂಡನ ಮನೆ ತೊರೆದು ತವರು ಮನೆ ಸೇರಿದಳು ಅಲ್ಲಿಂದ ನಮ್ಮ ಸಂಬಂಧ ದಿನದಿಂದ ದಿನಕ್ಕೆ ಹಾಳಾಗಲು ಶುರುವಾಯ್ತು ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ರೀಟಾ ಭಟ್ಟಾಚಾರ್ಯ ಗಂಡನನ್ನು ಬಿಟ್ಟು ತವರು ಮನೆ ಸೇರಿದ ಅವನ ಸಹೋದರಿ, ದಿನಾ ನನ್ನ ಕೋಣೆಯಲ್ಲಿ ನನ್ನ ಗಂಡನ ಜೊತೆ ಮಲಗೇಳುತ್ತಿದ್ದಳು ಎಂದು ಹೇಳಿದ್ದಾರೆ. ನಾನು ನನ್ನ ಮಕ್ಕಳನನ್ನು ಕರೆದುಕೊಂಡು ಬೇರೆ ಕೋಣೆಯಲ್ಲಿ ಪ್ರತ್ಯೇಕವಾಗಿ ಮಲಗುತ್ತಿದ್ದರೆ ಆಕೆ ನನ್ನ ಗಂಡನ ಕೋಣೆಯಲ್ಲಿ ಹೋಗಿ ಅವನ ಪಕ್ಕ ಮಲಗುತ್ತಿದ್ದಳು ಎಂದು ಹೇಳಿರುವ ರೀಟಾ ಆ ಮನೆಯಲ್ಲಿ ನನಗೆ ಎಷ್ಟು ಚಿತ್ರಹಿಂಸೆ ನೀಡಲಾಗಿತ್ತು ಅಂದರೆ ಅವರೆಲ್ಲರೂ ಎಲ್ಲಾದರೂ ಹೊರಗಡೆ ಹೋದರೆ ನಾನೇನು ಅಡುಗೆ ಮಾಡಿಕೊಂಡು ತಿನ್ನಬಾರದು ಎನ್ನುವ ಉದ್ದೇಶದಿಂದ ಅಡುಗೆ ಮನೆಗೆ ಬೀಗ ಹಾಕಿಕೊಂಡು ಹೋಗುತ್ತಿದ್ದರು ಎಂದು ಹೇಳಿದ್ದಾರೆ.

ಈ ಎಲ್ಲಾ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಕುಮಾರ್ ಸಾನು ಅವರಲ್ಲಿ ಪರಿಪರಿಯಾಗಿ ಬೇಡಿಕೊಂಡೆ. ನಮ್ಮ ಮಕ್ಕಳ ಜೀವನ ಹಾಳು ಮಾಡಬೇಡಿ ಎಂದು ಗೋಗರೆದೆ ಆದರೆ ಆ ವ್ಯಕ್ತಿ ಮಾತ್ರ ಯಾವದಕ್ಕೂ ಸೊಪ್ಪು ಹಾಕಲಿಲ್ಲ. ಬದಲಿಗೆ ತನ್ನ ಸ್ವಂತ ಸಹೋದರಿಯ ಜೊತೆ ಮೋಜು ಮಸ್ತಿ ಮಾಡುತ್ತಾ ಕಾಲ ಕಳೆದ ಎಂದು ಕೂಡ ರೀಟಾ ಭಟ್ಟಾಚಾರ್ಯ ಹೇಳಿದ್ದಾರೆ. ಕುಮಾರ್ ಸಾನು ಮತ್ತು ಅವರ ಮನೆಯ ಸದಸ್ಯರ ಮೇಲೆ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ.

ಸದ್ಯ ಕುಮಾರ್ ಸಾನು ಅವರ ಮಾಜಿ ಪತ್ನಿಯ ಈ ಹೇಳಿಕೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಮಾತ್ರವಲ್ಲದೇ ಬಾಲಿವುಡ್‌ನಲ್ಲಿ ಕೂಡ ಸೃಷ್ಟಿಯಾಗಿದೆ. ಮಾಜಿ ಪತ್ನಿಯ ಈ ಆರೋಪಕ್ಕೆ ಕುಮಾರ್ ಸಾನು ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲವಾದರೂ ಕೇವಲ 24 ಗಂಟೆಯಲ್ಲಿ ಕುಮಾರ್ ಸಾನು ಅವರ ಮಾಜಿ ಪತ್ನಿಯ ಸಂದರ್ಶನದ ವಿಡಿಯೋ 115,416 ವೀಕ್ಷಣೆಯನ್ನು ಕಂಡಿದೆ.

ಅಂದ್ಹಾಗೇ ಕುಮಾರ್ ಸಾನು ಮತ್ತು ರೀಟಾ ಭಟ್ಟಾಚಾರ್ಯ ಅವರದ್ದು ಅರೆಂಜ್ ಮ್ಯಾರೇಜ್ ಅಲ್ಲ ಬದಲಿಗೆ ಲವ್ ಮ್ಯಾರೇಜ್. ಕೋಲ್ಕತ್ತಾದಲ್ಲಿ ಪರಿಚಯವಾದ ಇಬ್ಬರು ಆ ನಂತರ ಪ್ರೀತಿಯಲ್ಲಿ ಬಿದ್ದರು. 1986ರಲ್ಲಿ ಮನೆಯವರ ವಿರೋಧದ ನಡುವೆ ಮದುವೆ ಕೂಡ ಆದರು. 1990ರಲ್ಲಿ ಕುಮಾರ್ ಸಾನು ಅದೃಷ್ಟ ಖುಲಾಯಿಸಿತು. ಇಲ್ಲಿಂದ ಅವರಲ್ಲಿನ ವರ್ತನೆ ಕೂಡ ಬದಲಾಯ್ತು ಎನ್ನುವ ಆರೋಪವನ್ನು ಕೂಡ ಮಾಡಿರುವ ರೀಟಾ 1994ರಲ್ಲಿ ಕುಮಾರ್ ಸಾನು ಅವರಿಂದ ವಿಚ್ಛೇದನ ಪಡೆದರು. ಇವರಿಬ್ಬರ ಪ್ರೀತಿಯ ಸಂಕೇತವಾಗಿ ಇವರಿಬ್ಬರಿಗೆ ''ಜೀಕೋ''.. ''ಜೆಸ್ಸಿ'' ಮತ್ತು ''ಜಾನ್'' ಎಂಬ ಮೂವರು ಮಕ್ಕಳಿದ್ದಾರೆ.

.

More from Filmibeat

English summary
Read about the shocking allegations by Kumar Sanu's first wife, Rita Bhattacharya, who claims the singer's family starved her and that he had multiple affairs.
Read more about: singer affair divorce
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X