ಅವರು ನನಗೆ ತಂದೆಯಂತೆ ಇದ್ದರು, ಆದರೆ ಅವರೇ ನನಗೆ - ಕಹಿ ಅನುಭವ ನೆನೆದು ಬಿಕ್ಕಿದ ಭಾರತದ ಸ್ಟಾರ್ ಕ್ರಿಕೆಟಿಗನ ಅಕ್ಕ

ಪುರುಷ ಪ್ರಧಾನ ಚಿತ್ರರಂಗದಲ್ಲಿ ಅನೇಕ ಹೆಣ್ಣು ಮಕ್ಕಳು ನಾನಾ ರೀತಿಯಲ್ಲಿ ನರಳಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ.. ಬಣ್ಣದ ಬಣ್ಣದ ಈ ಪ್ರಪಂಚದಲ್ಲಿ ನಡೆದ ಬಗೆ ಬಗೆಯ ಲೈಂ*ಗಿಕ ಪ್ರಕರಣ, ಕಿರುಕುಳ, ದೌರ್ಜನ್ಯ ಕುರಿತ ಸುದ್ದಿಗಳನ್ನೂ ನಾವೆಲ್ಲರೂ ಕೇಳುತ್ತಲೇ ಇರುತ್ತೇವೆ. ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ ಹೀಗೆ ನಡೆದ ಸಾಕಷ್ಟು ಲೈಂ*ಗಿಕ ಪ್ರಕರಣಗಳು ಹೇಳ ಹೆಸರಿಲ್ಲದೇ ಕಾಣದಂತಾಗುತ್ತವೆ.

ಇನ್ನೂ ಕೆಲವೊಮ್ಮೆ ಪ್ರಜ್ಞಾವಂತ ನಾಯಕಿಯರು ತಮ್ಮ ಛಲದಿಂದ ತೆರೆಮರೆಯ ಕಳ್ಳಾಟ ಬಹಿರಂಗ ಪಡಿಸಿದ್ದಾರೆ. ಕಾಮುಕರ ಮುಖವಾಡ ಕಳಚಿದ್ದಾರೆ. ಒಂದರ್ಥದಲ್ಲಿ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಬಟ್ಟೆ ಬದಲಿಸಿದಷ್ಟೇ ಸಾಮಾನ್ಯವಾಗಿದೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ.

He Tried to Kiss Me Malti Chahar s Brave Revelation About Her Casting Couch Nightmare

ಇನ್ನು ಮಲಯಾಳಂ ಚಿತ್ರರಂಗದಲ್ಲಿನ ಕಾ*ಮಕಾಂಡದ ಕುರಿತು ಕಳೆದ ವರ್ಷ ಹೇಮಾ ಆಯೋಗ ವರದಿ ನೀಡಿದ ಬೆನ್ನಲ್ಲಿ ಇನ್ನೊಮ್ಮೆ ಈ ಪಾತ್ರಕ್ಕಾಗಿ ಪಲ್ಲಂಗದ ಬಿರುಗಾಳಿ ಎದ್ದಿದೆ. ಕೇವಲ ಮಲಯಾಳಂನಲ್ಲಿ ಅಷ್ಟೇ ಅಲ್ಲ ಭಾರತದ ಬೇರೆ ಬೇರೆ ಭಾ‍ಷೆಯಲ್ಲಿ ಕೂಡ ಕಾ*ಮುಕರು ತುಂಬಿ ತುಳುಕುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಬೇರೆ ಬೇರೆ ಭಾಷೆಯಲ್ಲಿನ ನಟಿಯರು ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಬಿಕ್ಕಿದ್ದಾರೆ. ಪಾತ್ರದ ಹೆಸರಿನಲ್ಲಿ ತಮ್ಮನ್ನು ಮಂಚಕ್ಕೆ ಕರೆದ ವ್ಯಕ್ತಿಗಳ ಜನ್ಮವನ್ನೂ ಜಾಲಾಡಿದ್ದಾರೆ. ಈ ಸಾಲಿನಲ್ಲಿ ಮಾಲ್ತಿ ಚಹಾರ್ ಕೂಡ ಇದ್ದಾರೆ ಎನ್ನುವುದೇ ಈ ಕ್ಷಣದ ಬ್ರೇಕಿಂಗ್ ನ್ಯೂಸ್.


ಹೌದು, ಮಾಲ್ತಿ ಚಹಾರ್.. ಭಾರತದ ಸ್ಟಾರ್ ಕ್ರಿಕೆಟ್ ಪ್ಲೇಯರ್ ಮತ್ತು ಖ್ಯಾತ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯ ಶಿಷ್ಯ ದೀಪಕ್ ಚಹಾರ್‌ ಅವರ ಅಕ್ಕ. ಮಾಡೆಲ್ ಮತ್ತು ನಟಿ ಕೂಡ ಹೌದು.

ಆಗ್ರಾದ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ಮಾಲ್ತಿ ಲಕ್ನೋದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಪದವಿಯನ್ನು ಪಡೆದರು. ''ಬಾಲಿವುಡ್ ಶಾದಿ'' ವರದಿಯ ಪ್ರಕಾರ 2209ರಲ್ಲಿ ಮಿಸ್ ಇಂಡಿಯಾ ಅರ್ಥ್ ಪ್ರಶಸ್ತಿ ಪಡೆದ ಮಾಲ್ತಿ 2014ರಲ್ಲಿ ದೆಹಲಿಯ ಫೆಮಿನಾ ಮಿಸ್ ಇಂಡಿಯಾದ ಮಿಸ್ ಫೋಟೋಜೆನಿಕ್ ಪ್ರಶಸ್ತಿ ಪಡೆದರು. ಇಷ್ಟೇ ಅಲ್ಲ ಫೈನಲಿಸ್ಟ್ ಕೂಡ ಆಗಿದ್ದರು.

ಕಿರುಚಿತ್ರ ''ಮ್ಯಾನಿಕ್ಯೂರ್'' ಮೂಲಕ ಬಣ್ಣದ ಲೋಕಕ್ಕೆ ಬಂದ ಮಾಲ್ತಿ ''ಗದರ್'' ಖ್ಯಾತಿಯ ನಿರ್ದೇಶಕ ಅನಿಲ್ ಶರ್ಮಾ ನಿರ್ದೇಶನದ ''ಜೀನಿಯಸ್'' ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಇವರದ್ದು ರಾ ಏಜೆಂಟ್ ಪಾತ್ರವಾಗಿತ್ತು.

He Tried to Kiss Me Malti Chahar s Brave Revelation About Her Casting Couch Nightmare

ಆ ನಂತರ 2022ರಲ್ಲಿ ಅರವಿಂದ್ ಪಾಂಡೆ ನಿರ್ದೇಶನದ ''ಇಷ್ಕ್ ಪಶ್ಮಿನಾ'' ಚಿತ್ರದ ಮೂಲಕ ನಾಯಕಿಯಾಗಿ ಕೂಡ ಮಾಲ್ತಿ ಬಡ್ತಿ ಪಡೆದರು. ''ಓ ಮೇರಿ'' ಎಂಬ ಕಿರುಚಿತ್ರವನ್ನು ಕೂಡ ಬರೆದು ನಿರ್ದೇಶಿಸಿದರು. ಇಷ್ಟೇ ಅಲ್ಲ ಈ ವರ್ಷದ ಹಿಂದಿಯ ''ಬಿಗ್ ಬಾಸ್'' ಸೀಸನ್ 19ರಲ್ಲಿ ಕೂಡ ಭಾಗವಹಿಸಿದ್ದರು. ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಿ ಕೊನೆಯ ಹಂತದವರೆಗೆ ಬಂದಿದ್ದರು.

ಇಂಥಾ ಮಾಲ್ತಿ ಚಹಾರ್ ಸದ್ಯ ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ. ತಂದೆಯ ವಯಸ್ಸಿನ ನಿರ್ದೇಶಕ ಮಾಡಿದ್ದ ಕೃತ್ಯ ನೆನೆದು ಬಿಕ್ಕಿದ್ದಾರೆ ಸಿದ್ಧಾರ್ಥ್ ಕಣ್ಣನ್ ಅವರಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಮಾಲ್ತಿ ಚಹಾರ್, ಒಬ್ಬ ನಿರ್ದೇಶಕರನ್ನು ಕೆಲಸದ ಪ್ರಯುಕ್ತ ನಾನು ಆಗಾಗ ಭೇಟಿಯಾಗುತ್ತಿದ್ದೆ, ಚರ್ಚೆ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

He Tried to Kiss Me Malti Chahar s Brave Revelation About Her Casting Couch Nightmare

ಮುಂದುವರೆದು ಅದೊಂದು ದಿನ ಹೀಗೆ ಚರ್ಚೆ ಮುಕ್ತಾಯವಾದ ನಂತರ ಅವರು ನನ್ನನ್ನು ಅಪ್ಪಿಕೊಂಡರು ಎಂದು ಹೇಳಿರುವ ಮಾಲ್ತಿ ಚಹಾರ್, ನನ್ನ ಅನುಮತಿಯನ್ನು ಕೇಳದೇ ಅವರು ನನಗೆ ಲಿಪ್ ಕಿಸ್ ಮಾಡಲು ಪ್ರಯತ್ನ ಮಾಡಿದರು ಎಂದು ಹೇಳಿದ್ದಾರೆ.

ಅವರ ಈ ಸಡನ್ ನಡೆಯಿಂದ ನಾನು ಗಾಬರಿ ಬಿದ್ದೆ ಎಂದು ಹೇಳಿರುವ ಮಾಲ್ತಿ ಚಹಾರ್, ಆಗ ನನ್ನ ಕೈಕಾಲು ಆಡುತ್ತಿರಲಿಲ್ಲ.ದಿಕ್ಕೇ ತೋಚದಂತಾಗಿತ್ತು ಎಂದು ಹೇಳಿರುವ ಮಾಲ್ತಿ ಚಹಾರ್, ಆದರೂ ನಾನು ನನ್ನನ್ನು ಸಂಭಾಳಿಸಿಕೊಂಡು ಅವರನ್ನು ಕೂಡಲೇ ತಡೆದೆ ಎಂದು ಹೇಳಿದ್ದಾರೆ. ಅದೇ ಕೊನೆ ಆ ನಂತರ ಆ ವ್ಯಕ್ತಿಯ ಮುಖವನ್ನು ನಾನು ಯಾವತ್ತು ನೋಡಿಲ್ಲ ಎಂದು ಹೇಳಿರುವ ಮಾಲ್ತಿ ಅವರು ನನ್ನ ತಂದೆಯ ವಯಸ್ಸಿನವರು, ಅವರಲ್ಲಿ ನಾನು ನನ್ನ ತಂದೆಯನ್ನು ನೋಡಿದ್ದೇ ಎಂದು ಹೇಳಿದ್ದಾರೆ. ನನ್ನ ತಂದೆಯ ವಯಸ್ಸಿನ ವ್ಯಕ್ತಿ ನನ್ನೊಂದಿಗೆ ಈ ರೀತಿಯಾಗಿ ವರ್ತಿಸಿದಾಗ ನಾನು ಮಾನಸಿಕವಾಗಿ ಕುಗ್ಗಿ ಹೋದೆ ಎಂದು ಬಿಕ್ಕಿದ್ದಾರೆ.

ಈ ಘಟನೆಯಿಂದ ನಾನು ತುಂಬಾ ಕಲಿತೆ ಎಂದು ಹೇಳಿರುವ ಮಾಲ್ತಿ ಯಾತನ್ನು ಸುಲಭವಾಗಿ ನಂಬಬೇಡಿ, ಪ್ರತಿಯೊಬ್ಬರ ಕುರಿತು ಎಚ್ಚರಿಕೆ ವಹಿಸಿ ಎಂದು ಚಿತ್ರರಂಗಕ್ಕೆ ಬರುವ ನಾಯಕಿಯರಿಗೆ ಕಿವಿ ಮಾತು ಹೇಳಿದ್ದಾರೆ. ಆ ವ್ಯಕ್ತಿ ನನ್ನೊಂದಿಗೆ ಆ ರೀತಿ ವರ್ತಿಸುತ್ತಾರೆ ಎಂದು ನಾನು ಕನಸು ಮನಸಿನಲ್ಲಿಯೂ ಕೂಡ ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.

ಇದೊಂದೇ ಘಟನೆ ಅಲ್ಲ ಚಿತ್ರರಂಗದಲ್ಲಿ ಈಗೀಗ ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕ್ರತಿ ತುಂಬಾ ಮಾಮೂಲಿ ಆಗಿದೆ ಎಂದು ಹೇಳಿರುವ ಮಾಲ್ತಿ ಚಹಾರ್, ಇಲ್ಲಿ ತುಂಬಾ ಜನ ಜಾಣರಿದ್ದಾರೆ. ನಿಮ್ಮ ಸ್ವಭಾವ, ನಿಮ್ಮ ಹಾವ ಭಾವ ನೋಡಿ ಅತಿರೇಕವಾಗಿ ವರ್ತಿಸುವವರು ತುಂಬಾ ಜನ ಇದ್ದಾರೆ, ಅನುಚಿತವಾಗಿ ವರ್ತಿಸುತ್ತಾರೆ ಎಂದು ಕೂಡ ಮಾಲ್ತಿ ಇದೇ ಸಂದರ್ಶನದಲ್ಲಿ ಹೇಳಿದ್ದಾರೆ.

More from Filmibeat

English summary
Malti Chahar casting couch revelation: The Bigg Boss 19 contestant recalls a disturbing incident where a director tried to kiss her on the lips. Discover the full story behind her shocking exposure of the entertainment industry's dark side.
Read more about: casting couch me too
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X