ಸಮಾಜ ಸೇವೆ ಮಾಡಿ: ಪರಿಣಿತಿ ಚೋಪ್ರಾ ಜೊತೆ ಕಾಫಿ ಕುಡಿಯುತ್ತಾ ಹರಟೆ ಹೊಡೆಯಿರಿ
ಬಾಲಿವುಡ್ ಖ್ಯಾತ ನಟಿ ಪರಿಣಿತಿ ಚೋಪ್ರಾ ಜೊತೆಗೆ ಕಾಫಿ ಕುಡಿಯುತ್ತಾ ಹರಟೆ ಹೊಡೆಯಬೇಕೆ ಹಾಗಿದ್ದರೆ ಸಮಾಜ ಸೇವೆ ಮಾಡಿ!
Recommended Video
ಹೌದು, ಕೊರೊನಾ ಸಂಕಷ್ಟದ ಸಮಯದಲ್ಲಿ ನಟಿ ಪರಿಣಿತಿ ಚೋತ್ರಾ ಹೀಗೊಂದು ಅವಕಾಶ ಒದಗಿಸಿದ್ದಾರೆ. ಯಾರು ಬಡವರಿಗೆ, ದಿನಗೂಲಿ ನೌಕರರಿಗೆ ಉಚಿತವಾಗಿ ದಿನಸಿ ಕಿಟ್ ವಿತರಣೆ ಸೇರಿ ಯಾವುದೇ ಸಹಾಯ ಮಾಡಿದರೆ ಅವರೊಂದಿಗೆ ಪರಿಣಿತಿ ಚೋಪ್ರಾ ಕಾಫಿ ಕುಡಿಯುತ್ತಾರೆ.
ಈ ಕೊರೊನಾ ಸಮಯದಲ್ಲಿ ಪರಿಣಿತಿ ಅವರೊಂದಿಗೆ ಕಾಫಿ ಕುಡಿಯುವುದು ಹೇಗೆ? ಎಲ್ಲಾ ಹೋಟೆಲ್‌ಗಳು ಬಂದ್ ಆಗಿವೆಯಲ್ಲಾ? ಎಂದು ಚಿಂತಿಸಬೇಡಿ, ಅದಕ್ಕೂ ಅವರೇ ಪರಿಹಾರ ನೀಡಿದ್ದಾರೆ.

ಟ್ವಿಟ್ಟರ್ ನಲ್ಲಿ ಪರಿಣಿತಿ ಪೋಸ್ಟ್
ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಪರಿಣಿತಿ ಚೋಪ್ರಾ, ವೆಬ್‌ಲಿಂಕ್ ಒಂದನ್ನು ನೀಡಿ ಅದಕ್ಕೆ ಲಾಗಿನ್ ಆಗಿ ದಿನಗೂಲಿ ನೌಕರರಿಗೆ ಸಹಾಯ ಮಾಡಿ ನನ್ನೊಂದಿಗೆ ಕಾಫಿ ಡೇಟ್ ನಲ್ಲಿ ಭಾಗವಹಿಸಿ ಎಂದು ಆಹ್ವಾನ ನೀಡಿದ್ದಾರೆ.

ವರ್ಚ್ಯುಲ್ ಡೇಟ್ ಆಗಿರಲಿದೆ
ಪರಿಣಿತಿ ಜೊತೆ ಕಾಫಿ ಡೇಟ್ ವರ್ಚ್ಯುಲ್ ಆಗಿರಲಿದೆ. ಅಂದರೆ ಪರಿಣಿತಿ ಮತ್ತು ಸಹಾಯ ಮಾಡಿದ ವ್ಯಕ್ತಿ ಅಂತರ್ಜಾಲ ಮುಖೇನ ಜೊತೆಯಾಗಿ ಕಾಫಿ ಹೀರುತ್ತಾ ಹರಟಲಿದ್ದಾರೆ. ಇದೊಂದು ಭಿನ್ನ ಅನುಭವ ಆಗಲಿದೆ.

ಪರಿಣಿತಿಯಿಂದ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ
ಪರಿಣಿತ ಚೋಪ್ರಾ ಕೊರೊನಾ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ. ಅದಕ್ಕೆಂದೇ ಅವರು ಈ ಕಾಫಿ ಡೇಟ್ ಐಡಿಯಾ ಮುಂದೆ ತಂದಿದ್ದಾರೆ. ಸಹಾಯ ಮಾಡಿದವರು ಪರಿಣಿತಿ ಜೊತೆ ವರ್ಚ್ಯುಲ್ ಕಾಫಿ ಕುಡಿಯಬಹುದಾಗಿದೆ.

ಹಲವು ಸಿನಿಮಾಗಳು ಬಿಡುಗಡೆಗೆ ತಯಾರು
ಪರಿಣಿತಿ ಚೋಪ್ರಾ ಅವರ ಸಂದೀಪ್-ಪಿಂಕಿ ಫರಾರ್, ಸೈನಾ, ಲೂಡೋ, ಇಂದೂ ಕಿ ಜವಾನಿ, ಶಕುಂತಲಾ ದೇವಿ, ಕೋಡ್ ನೇಮ್ ಅಬ್ದುಲ್ ಸಿನಿಮಾಗಳು ಬಿಡುಗಡೆಗೆ ಕಾದಿವೆ. ಸಂದೀಪ್ ಔರ್ ಪಿಂಕಿ ಫರಾರ್ ಸಿನಿಮಾ ನೇರವಾಗಿ ಓಟಿಟಿಗೆ ಬಿಡುಗಡೆ ಆಗಲಿದೆ.


Click it and Unblock the Notifications











