twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾ ಮತ್ತು ಕೊರೊನಾ ರೋಗಿಗಳು: ಚಿನ್ನದಂತಾ ಮಾತು ಹೇಳಿದ ಸೋನು ಸೂದ್

    |

    ಕಳೆದ ವರ್ಷ ಭಾರತದಲ್ಲಿ ಕೊರೊನಾ ಸಮಸ್ಯೆ ಕಾಣಿಸಿಕೊಂಡಾಗ ಕಾರ್ಮಿಕರಿಗೆ ಸಹಾಯ ಹಸ್ತ ಚಾಚುವ ಮೂಲಕ ಸಮಾಜ ಸೇವೆ ಆರಂಭಿಸಿದ ಸೋನು ಸೂದ್‌ ದಣಿವರಿಯದೆ ಸಹಾಯ ಮಾಡುತ್ತಲೇ ಇದ್ದಾರೆ.

    ಇದೀಗ ಭಾರತದ ವೈದ್ಯಕೀಯ ವ್ಯವಸ್ಥೆಯ ಹುಳುಕಿನಿಂದಾಗಿ ಕೋವಿಡ್‌ ರೋಗಿಗಳು ಆಸ್ಪತ್ರೆ ಬೆಡ್‌ ಸಿಗದೆ ಆಮ್ಲಜನಕ ಸಿಗದೆ ಕಷ್ಟಪಡುತ್ತಿರುವ ಹೊತ್ತಿನಲ್ಲಿ ತಮ್ಮ ಕೈಲಾದ ಮಟ್ಟಿಗೆ ಆಸ್ಪತ್ರೆ ಬೆಡ್‌ಗಳು, ಆಮ್ಲಜನಕ ಪೂರೈಸುವ ಕಾರ್ಯವನ್ನು ಗೆಳೆಯರೊಟ್ಟಿಗೆ ಸೇರಿ ಸೋನು ಸೂದ್ ಮಾಡುತ್ತಿದ್ದಾರೆ.

    ಮಧ್ಯರಾತ್ರಿ 12 ಗಂಟೆಗೆ ಟ್ವೀಟ್ ಮಾಡಿರುವ ಸೋನು ಸೂದ್, 'ಮಧ್ಯ ರಾತ್ರಿ ಹಲವಾರು ಕರೆಗಳನ್ನು ಮಾಡಿ ಅಗತ್ಯವಿರುವ ರೋಗಿಗಳಿಗೆ ಬೆಡ್ ಕೊಡಿಸವುದು, ಅಗತ್ಯವಿರರುವವರಿಗೆ ಆಮ್ಲಜಕನ ಕೊಡಿಸುವುದರಲ್ಲಿ ಇರುವ ನೆಮ್ಮದಿ 100 ಕೋಟಿ ಬಜೆಟ್‌ನ ಸಿನಿಮಾದಲ್ಲಿ ನಟಿಸುವುದರಲ್ಲಿಯೂ ಇಲ್ಲ. ರೋಗಿಗಳು ಆಸ್ಪತ್ರೆ ಮುಂದೆ ಸಾಲುಗಟ್ಟಿ ನಿಂತಿರುವಾಗ ನಾವು ಮಲಗಿ ನಿದ್ರಿಸಲು ಸಾಧ್ಯವಿಲ್ಲ' ಎಂದಿದ್ದಾರೆ ಸೋನು ಸೂದ್.

     Helping People Is Most Satisfying Than Acting In 100cr Movie: Sonu Sood

    ಕಳೆದ ವರ್ಷದಿಂದಲೂ ಸೋನು ಸೂದ್ ಕೊರೊನಾ ಸಂಕಷ್ಟದಲ್ಲಿ ಸಹಾಯ ಮಾಡುತ್ತಲೇ ಬರುತ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ದೇಶದ ವಿವಿಧ ಮೂಲೆಗಳಲ್ಲಿ ಸಿಲುಕಿದ್ದ ಕಾರ್ಮಿಕರನ್ನು ತಮ್ಮ ಹುಟ್ಟೂರಿಗೆ ತಲುಪಿಸುವ ಕಾರ್ಯ ಆರಂಭಿಸಿದ ಸೋನು ಸೂದ್, ಬಸ್ಸು, ವಿಶೇಷ ರೈಲು, ವಿಮಾನಗಳ ಮೂಲಕ ಸ್ವಗೃಹಗಳಿಗೆ ತಲುಪಿಸುವ ಕಾರ್ಯ ಮಾಡಿ ಮಸೀಯಾ (ದೇವರು) ಎಂದು ಕಾರ್ಮಿಕರಿಂದ ಕರೆಸಿಕೊಂಡರು.

    ಕೊರೊನಾ ಕಡಿಮೆ ಆದಾಗಲೂ ಸಹ ಸೋನು ಸೂದ್ ತಮ್ಮ ಒಳ್ಳೆಯ ಕಾರ್ಯವನ್ನು ನಿಲ್ಲಿಸಲಿಲ್ಲ. ಯಾವುದೇ ರೀತಿ ಸಹಾಯ ಕೋರಿ ತಮಗೆ ಟ್ವೀಟ್ ಮಾಡಿದವರಿಗೆ ಪತ್ರ ಬರೆದವರಿಗೆ ಕೂಡಲೇ ಸಹಾಯ ಮಾಡಿದರು ಸೋನು ಸೂದ್.

    Recommended Video

    ಮುಂಬೈ ಏರ್ ಪೋರ್ಟ್ ನಲ್ಲಿ ಊರ್ವಶಿಯ ಡ್ರೆಸ್ ಗೆ ಗಾಳಿ ಕೊಟ್ಟ ಕಾಟ ಅಷ್ಟಿಷ್ಟಲ್ಲ | Filmibeat Kannada

    ಇದೀಗ ಆಸ್ಪತ್ರೆ ಬೆಡ್‌ ಹಾಗೂ ಆಮ್ಲಜನಕಗಳನ್ನು ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಪಂಜಾಬ್‌ ರಾಜ್ಯದ ಕೊರೊನಾ ಲಸಿಕೆ ಅಭಿಯಾನದ ರಾಯಭಾರಿಯೂ ಆಗಿದ್ದಾರೆ ಸೋನು ಸೂದ್.

    English summary
    Actor Sonu Sood said helping needy people is most satisfying than acting in 100cr movie.
    Wednesday, April 28, 2021, 15:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X