For Quick Alerts
  ALLOW NOTIFICATIONS  
  For Daily Alerts

  ಅವಳಿ ಮಕ್ಕಳಿಗೆ ಜನ್ಮ ನೀಡಿದ ಹೇಮಾ ಮಾಲಿನಿ ಪುತ್ರಿ ಅಹನಾ

  |

  ಹಿರಿಯ ನಟಿ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ದಂಪತಿಯ ಕಿರಿಯ ಪುತ್ರಿ ಅಹನಾ ಡಿಯೋಲ್ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದು ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ನವೆಂಬರ್ 26ರಂದು ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದು, ಇನ್ನು ಆಸ್ಪತ್ರೆಯಲ್ಲೆ ಇದ್ದಾರೆ ಎಂದು ಹೇಳಲಾಗುತ್ತಿದೆ.

  ಆ ಒಬ್ಬಾಕೆಗಾಗಿ 25 ಸಲ ಆ ಸಿನಿಮಾ ನೋಡಿದ್ದರಂತೆ ವಾಜಪೇಯಿಆ ಒಬ್ಬಾಕೆಗಾಗಿ 25 ಸಲ ಆ ಸಿನಿಮಾ ನೋಡಿದ್ದರಂತೆ ವಾಜಪೇಯಿ

  ಮುದ್ದಾದ ಮಕ್ಕಳಿಗೆ ಜನ್ಮ ನೀಡಿರುವ ಅಹನಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ನವೆಂಬರ್ 26ರಂದು ಇಬ್ಬರು ಮುದ್ದಾದ ಹೆಣ್ಣುಮಕ್ಕಳು ಆಗಮಿಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಮತ್ತೊಮ್ಮೆ ಅಜ್ಜಿಯಾಗಿರುವ ನಟಿ ಹೇಮಾ ಮಾಲಿನಿ ಹಾಗೂ ತಾತ ಆಗಿರುವ ಧರ್ಮೇಂದ್ರ ಸಂತೋಷವಾಗಿದ್ದಾರೆ ಎಂದು ತಿಳಿಸಿದ್ದಾರೆ.

  Sudeep, Vivek Oberoi ಕೈ ತಪ್ಪಿದ Muttappa Rai ಸಿನಿಮಾ | MR | Filmibeat Kannada

  ಈ ಬಗ್ಗೆ ಮಾತನಾಡಿರುವ ನಟಿ ಹೇಮಾ ಮಾಲಿನಿ, 'ಸಾಂಕ್ರಾಮಿಕ ಕೊರೊನಾ ಸಮಯದಲ್ಲಿ ನನ್ನ ಏಕೈಕ ಪ್ರವಾಸ ಎಂದರೆ ಅಹನಾ ಮನೆಗೆ ಓಡಾಡಿರುವುದು. ಈಗ ಮೂರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದೇನೆ. ನಾನು ಸಾಧ್ಯವಾದಷ್ಟು ಅವರೊಂದಿಗೆ ಸಮಯ ಕಳೆಯುತ್ತಿದ್ದೇನೆ' ಎಂದು ಹೇಳಿದ್ದಾರೆ.

  English summary
  Actress Hema Malini daughter Ahana Deol welcomes twin girls.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X