For Quick Alerts
  ALLOW NOTIFICATIONS  
  For Daily Alerts

  ಹೋಮ ಮಾಡಲು ಹೇಳಿ ಪೇಚಿಗೆ ಸಿಲುಕಿದ ನಟಿ ಹೇಮಾ

  |

  ನಟಿ, ಬಿಜೆಪಿ ಸಂಸದೆ ಹೇಮಾ ಮಾಲಿನಿ ಪೇಚಿಗೆ ಸಿಲುಕಿದ್ದಾರೆ. ಕೊರೊನಾ ಹೋಗಲಾಡಿಸಲು 'ಐಡಿಯಾ' ಕೊಟ್ಟು ನೆಟ್ಟಿಗರಿಂದ ನಿಂದನೆಗೆ ಒಳಗಾಗಿದ್ದಾರೆ.

  ಕೊರೊನಾ ಹೋಗಲಾಡಿಸಲು ಮನೆಯಲ್ಲಿಯೇ ಸರಳವಾದ ಹೋಮ, ಹವನ ಮಾಡಿರೆಂದು 'ಕರೆ' ನೀಡಿದ್ದಾರೆ ಸಂಸದೆ ಹೇಮಾ ಮಾಲಿನಿ. ಅವರ ಈ ಹೇಳಿಕೆಗೆ ನೆಟ್ಟಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

  ಪರಿಸರ ದಿನಾಚರಣೆಯಂದು ಈ ಬಗ್ಗೆ ಮಾತನಾಡಿರುವ ಹೇಮಾ ಮಾಲಿನಿ, 'ಪರಿಸರ ಸ್ವಚ್ಛವಾಗಿರಿಸಿಕೊಳ್ಳಲು ಮನೆಯಲ್ಲಿಯೇ ಸರಳ ಹವನ ಮಾಡಬೇಕು. ಇದರಿಂದ ಕೊರೊನಾ ಸೇರಿದಂತೆ ಹಲವು ರೋಗಗಳಿಂದ ನಾವು ರಕ್ಷಿಸಿಕೊಳ್ಳಬಹುದು' ಎಂದಿದ್ದರು.

  ಅಷ್ಟೇ ಅಲ್ಲದೆ, ತಾವು ಮಾಡಿದ ಹೋಮಕ್ಕೆ ಬೇವು, ತುಪ್ಪ, ಉಪ್ಪು, ಸಾಸಿವೆ ಇನ್ನೂ ಕೆಲವು ವಸ್ತುಗಳನ್ನು ಹಾಕಿದ್ದಾಗಿ ಹೇಳಿದ್ದಾರೆ. ಈ ರೀತಿಯ ಹವನವನ್ನು ಹಲವು ವರ್ಷಗಳಿಂದಲೂ ಹೇಮಾ ಮಾಲಿನಿ ಮಾಡುತ್ತಾ ಬಂದಿದ್ದಾರಂತೆ.

  'ಕೋವಿಡ್‌ ಬಂದ ಮೇಲೆ ಈ ಸರಳ ಹೋಮವನ್ನು ದಿನಕ್ಕೆ ಎರಡು ಬಾರಿ ಮಾಡುತ್ತೇನೆ. ಇದರಿಂದ ಪರಿಸರ ಸ್ವಚ್ಛವಾಗುತ್ತದೆ ಮತ್ತು ಕೊರೊನಾ ಸೇರಿ ಇತರ ರೋಗಗಳು ದೂರವಾಗುತ್ತವೆ' ಎಂದಿದ್ದಾರೆ.

  ಮತ್ತೊಂದು ಪ್ರತ್ಯೇಕ ವಿಡಿಯೋದಲ್ಲಿ ಮಾತನಾಡಿರುವ ಹೇಮಾ ಮಾಲಿನಿ, 'ಇಡೀಯ ವಿಶ್ವ ಕೊರೊನಾ ಮಹಾಮಾರಿ ಹಾಗೂ ಪರಿಸರ ಹಾನಿಯಿಂದ ತತ್ತರಿಸಿದೆ. ಹಾಗಾಗಿ ಭಾರತದ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಹವನ ಮಾಡಿರೆಂದು ನಾನು ಕೋರಿಕೊಳ್ಳುತ್ತೇನೆ. ಕೊರೊನಾ ಹೋಗುವವರೆಗೂ ಪ್ರತಿಯೊಬ್ಬರೂ ಪ್ರತಿದಿನ ಮನೆಗಳಲ್ಲಿ ಹೋಮ ಮಾಡಿರಿ' ಎಂದಿದ್ದಾರೆ.

  'ಜಾತಿ, ಧರ್ಮದ ಭೇದವಿಲ್ಲದೆ ಪ್ರತಿಯೊಬ್ಬರ ಮನೆಯಲ್ಲಿಯೂ ಹೋಮ ಮಾಡಿ ಎಂದಿರುವ ಹೇಮಾಮಾಲಿನಿ, ಮಥುರಾದ ಆರ್‌ಎಸ್‌ಎಸ್‌ ಘಟಕವು ವಿಶ್ವ ಪರಿಸರ ದಿನಕ್ಕೆ ಎಲ್ಲ ಮನೆಗಳಲ್ಲಿ ಹೋಮ ಮಾಡಿಸುವ ಅಭಿಯಾನ ನಡೆಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

  Sanchari Vijay ಬ್ರೈನ್ ಫೆಲ್ಯೂರ್ ಆಗಿದೆ ಡೆಡ್ ಆಗಿಲ್ಲ ಎಂದು ಡಾಕ್ಟರ್ ಸ್ಪಷ್ಟನೆ | Filmibeat Kannada

  ಆದರೆ ಹೇಮಾಮಾಲಿನಿ ಹೇಳಿಕೆಯನ್ನು ನೆಟ್ಟಿಗರು ತೀವ್ರವಾಗಿ ಖಂಡಿಸಿದ್ದಾರೆ. 'ಎಂಥಹಾ ಬುದ್ಧಿಹೀನ ಸಂಸದೆಯನ್ನು ಆಯ್ಕೆ ಮಾಡಿದ್ದೇವೆ' ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

  English summary
  Actress, MP Hema Malini told people to do Hawan or Homa in their homes to get rid of COVID 19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X